ದುಬೈನಲ್ಲಿ ಸಿದ್ದವಾಗುತ್ತಿದೆ ವಿಶ್ವದಲ್ಲೇ ಅತಿದೊಡ್ಡ ಏರ್​ಪೋರ್ಟ್; 400 ಗೇಟ್, 5 ರನ್​ವೇ ಇರುವ ಟರ್ಮಿನಲ್​ನ ವಿಶೇಷತೆಗಳು ಹಲವು

Dubai's Al Maktoum International Airport to have world's largest terminal: ದುಬೈನ ಅಲ್​ಮಕ್ತೂಮ್ ಇಂಟರ್ನ್ಯಾಷನಲ್ ಏರ್​ಪೋರ್ಟ್​ನಲ್ಲಿ ವಿಶ್ವದ ಅತಿದೊಡ್ಡ ಟರ್ಮಿನಲ್ ನಿರ್ಮಾಣವಾಗುತ್ತಿದೆ. ಈಗಿರುವ ದುಬೈ ಏರ್ಪೋರ್ಟ್​ನಿಂದ 45 ಕಿಮೀ ದಕ್ಷಿಣದಲ್ಲಿರುವ ಅಲ್​ಮಕ್ತೂಂ ವಿಮಾನ ನಿಲ್ದಾಣ ವಿಶ್ವದಲ್ಲೇ ಅತಿ ಬೃಹತ್ ಎನಿಸಲಿದೆ. ಇದರಲ್ಲಿ ಬರೋಬ್ಬರಿ 400 ಏರ್​ಕ್ರಾಫ್ಟ್ ಗೇಟ್​ ಮತ್ತು 5 ಪ್ಯಾರಲಲ್ ರನ್​ವೇಗಳಿರುತ್ತವೆ. ಸುಮಾರು ಮೂರು ಲಕ್ಷ ಕೋಟಿ ರೂ ವೆಚ್ಚದಲ್ಲಿ ಈ ಏರ್​ಪೋರ್ಟ್ ಸಿದ್ಧವಾಗಲಿದೆ. ಹಿಂದೆಂದೂ ಕಾಣದ ಏವಿಯೇಶನ್ ತಂತ್ರಜ್ಞಾನವನ್ನು ಈ ನಿರ್ಮಾಣ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿಯನ್ನು ಯುಎಇ ದೊರೆ ನೀಡಿದ್ದಾರೆ.

ದುಬೈನಲ್ಲಿ ಸಿದ್ದವಾಗುತ್ತಿದೆ ವಿಶ್ವದಲ್ಲೇ ಅತಿದೊಡ್ಡ ಏರ್​ಪೋರ್ಟ್; 400 ಗೇಟ್, 5 ರನ್​ವೇ ಇರುವ ಟರ್ಮಿನಲ್​ನ ವಿಶೇಷತೆಗಳು ಹಲವು
ಅಲ್​ಮಖ್ತೂಮ್ ಇಂಟರ್ನ್ಯಾಷನಲ್ ಏರ್ಪೋರ್ಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 29, 2024 | 2:41 PM

ಯುಎಇ ನಾಡಿನ ದುಬೈನಲ್ಲಿರುವ ಅಲ್​ಮಖ್ತೂಮ್ ಇಂಟರ್ನ್ಯಾಷನಲ್ ಏರ್ಪೋರ್ಟ್ (Al Maktoum International Airport) ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣವಾಗಿ ರೂಪುಗೊಳ್ಳಲಿದೆ. ದುಬೈನ ಈ ಎರಡನೇ ಏರ್​ಪೋರ್ಟ್​ನಲ್ಲಿ ಹೊಸ ಟರ್ಮಿನಲ್ ಸಿದ್ಧವಾಗುತ್ತಿದೆ. 35 ಬಿಲಿಯನ್ ಡಾಲರ್ ಅಂದಾಜು ವೆಚ್ಚದಲ್ಲಿ ಸಿದ್ದಗೊಳ್ಳಲಿರುವ ಇದು ವಿಶ್ವದಲ್ಲೇ ಅತಿದೊಡ್ಡ ಟರ್ಮಿನಲ್ ಆಗಿದೆ. ದುಬೈನ ದಕ್ಷಿಣ ಭಾಗದಲ್ಲಿರುವ ಮರುಭೂಮಿಯಲ್ಲಿ ಮುಂದಿನ 10 ವರ್ಷದಲ್ಲಿ ಈ ಏರ್ಪೊರ್ಟ್ ಸಿದ್ಧಗೊಳ್ಳಲಿದೆ. ವಿಶ್ವದ ಅತ್ಯಂತ ಬ್ಯುಸಿ ಏರ್ಪೋರ್ಟ್​ಗಳಲ್ಲಿ ಒಂದಾಗಿರುವ ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ತನ್ನ ಇಡೀ ಕಾರ್ಯಾಚರಣೆಗಳನ್ನು ಈ ಏರ್ಪೋರ್ಟ್​ಗೆ ವರ್ಗಾಯಿಸಲಿದೆ.

‘ಭವಿಷ್ಯದ ತಲೆಮಾರುಗಳಿಗಾಗಿ ಹೊಸ ಏರ್ಪೋರ್ಟ್ ನಿರ್ಮಿಸುತ್ತಿದ್ದೇವೆ. ನಮ್ಮ ಮಕ್ಕಳು ಮತ್ತು ಅವರ ಮಕ್ಕಳಿಗೆ ನಿರಂತರ ಮತ್ತು ಸ್ಥಿರ ಅಭಿವೃದ್ಧಿ ಖಾತ್ರಿ ಪಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಯುಎಇ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಷೀದ್ ಅಲ್ ಮಖ್ತೂಮ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿ ತೆರಿಗೆಯಿಂದ ಕಪ್ಪುಹಣ ಹೆಚ್ಚಾಗುತ್ತೆ: ಹಿರಿಯ ವಕೀಲ ಆರ್ಯಮ ಸುಂದರಂ

400 ಗೇಟ್​ಗಳಿರುವ ಬೃಹತ್ ಟರ್ಮಿನಲ್

ದುಬೈನಲ್ಲಿ ಎರಡು ಏರ್ಪೋರ್ಟ್​ಗಳಿವೆ. ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ (ಡಿಎಕ್ಸ್​ಬಿ) ಮತ್ತು ಅಲ್​ಮಖ್ತೂಮ್ ಏರ್ಪೋರ್ಟ್ ಇವೆ. ವಿಶ್ವದ ಅತ್ಯಂತ ಬ್ಯುಸಿ ಏರ್ಪೋರ್ಟ್​ಗಳಲ್ಲಿ ದುಬೈ ವಿಮಾನ ನಿಲ್ದಾಣ ಒಂದು. ಇಲ್ಲಿ ಸುಮಾರು 9 ಕೋಟಿ ಜನರು ವರ್ಷದಲ್ಲಿ ಬಂದು ಹೋಗುತ್ತಾರೆ. ಈ ಏರ್ಪೋರ್ಟ್​ನಿಂದ 45 ಕಿಮೀ ದಕ್ಷಿಣಕ್ಕೆ ಅಲ್​ಮಖ್ತೂನ್ ಏರ್ಪೋರ್ಟ್ ಇದೆ. 2010ಕ್ಕೆ ಆರಂಭವಾದ ಇದರಲ್ಲಿ ಸದ್ಯ ಒಂದು ಟರ್ಮಿನಲ್ ಮತ್ತು ಎರಡು ರನ್​ವೇಗಳಿವೆ.

ಈಗ ಇರುವ ಯೋಜನೆಯಲ್ಲಿ ಅಲ್​ಮಖ್ತೂನ್ ಏರ್ಪೋರ್ಟ್​ನಲ್ಲಿ ಹೊಸ ಟರ್ಮಿನಲ್ ಸಿದ್ಧಗೊಳಿಸಲಾಗುತ್ತಿದೆ. ಇದು ವಿಶ್ವದಲ್ಲೇ ಅತಿದೊಡ್ಡ ಟರ್ಮಿನಲ್ ಆಗುತ್ತದೆ. 400 ವಿಮಾನ ಗೇಟ್​ಗಳು ಇರಲಿವೆ. ಐದು ಪರ್ಯಾಯ ರನ್​ವೇಗಳನ್ನು ನಿರ್ಮಿಸಲಾಗುತ್ತಿದೆ. ಇದು ಪೂರ್ಣವಾಗಿ ಸಿದ್ಧಗೊಂಡರೆ ದುಬೈ ಇಂಟರ್ನ್ಯಾಷನಲ್ ಏರ್​ಪೋರ್ಟ್ ಏನಿದೆ ಅದಕ್ಕಿಂತ ಐದು ಪಟ್ಟು ಬೃಹತ್ತಾಗಿರಲಿದೆ ಹೊಸ ಎರ್ಪೋರ್ಟ್. ಎರಡೂವರೆ ಕೋಟಿಗಿಂತಲೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡುವಷ್ಟು ಬೃಹತ್ತಾಗಿರಲಿದೆ ಇದು.

ಇದನ್ನೂ ಓದಿ: ಭಾರತೀಯನಾಗದಿದ್ದರೆ ಅಮೆರಿಕದಲ್ಲಿ ಸಿಇಒ ಆಗೋಕ್ಕಾಗಲ್ಲ: ಬದಲಾದ ವಾಸ್ತವ ಬಿಚ್ಚಿಟ್ಟಿದ್ದಾರೆ ಅಮೆರಿಕದ ರಾಯಭಾರಿ

ಈ ಏರ್ಪೋರ್ಟ್ ನಿರ್ಮಾಣದಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಪ್ರಯೋಗವಾಗಲಿರುವ ಹೊಸ ಏವಿಯೇಶನ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆಯಂತೆ. ಏರ್ಪೋರ್ಟ್ ಸುತ್ತಲೂ ನಗರವನ್ನೂ ನಿರ್ಮಿಸಲಾಗುತ್ತಿದೆ. ಲಕ್ಷಾಂತರ ಮನೆಗಳೂ ಸುತ್ತಲೂ ನಿರ್ಮಾಣವಾಗಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ