ತಿರುವನಂತಪುರಂ: ‘ದೇವರ ಸ್ವಂತ ನಾಡು’ ಆಗಿದ್ದ ಕೇರಳ ಈಗ ಮೂಲಭೂತವಾದಿಗಳ ನಾಡಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದಲ್ಲಿ ನಡೆಯುತ್ತಿರುವ ವಿಜಯಯಾತ್ರೆಯ ಅಂಗವಾಗಿ ತ್ರಿಪ್ಪೂಣಿತ್ತುರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾ, 1921ರಲ್ಲಿ ಮಾಪ್ಪಿಳ್ಳ ದಂಗೆಯ ಘೋಷಣೆ ಹಿಂದೂ ಹತ್ಯಾಕಾಂಡ ಆಗಿತ್ತು. ಅದು ಮತ್ತೆ ಇಲ್ಲಿ ಪುನರಾರ್ತನೆ ಆಗುತ್ತಿದೆ. ಸಿಪಿಎಂ ಎಸ್ ಡಿಪಿಐ ಜತೆ ಪರೋಕ್ಷ ಮೈತ್ರಿ ಹೊಂದಿದ್ದರೂ ಎಲ್ಡಿಎಫ್ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
1921ರಲ್ಲಿ ನಡೆದ ಹಿಂದೂ ಹತ್ಯಾಕಾಂಡದ ವರ್ಷಾಚರಣೆ ನಡೆಸಲು ಪ್ರಯತ್ನಗಳು ಇಲ್ಲಿ ನಡೆಯುತ್ತಿವೆ. ಸಿಪಿಐ(ಎಂ) ಅಲ್ಪ ಸಂಖ್ಯಾತರ ಪರ ಮಾತ್ರವಲ್ಲ ಮೂಲವಾದಿಗಳ ಪರವೂ ಆಗಿದೆ. ಕೇರಳ ಈ ರೀತಿಯ ಕೆಲಸಗಳನ್ನು ಮುಂದುವರಿಸುತ್ತಲೇ ಇರುತ್ತದೆ. ಇಲ್ಲಿ ರಾಜಕೀಯ ಗಲಭೆಗಳು ತಾಂಡವವಾಡುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ವಾಳಯಾರ್ ಅತ್ಯಾಚಾರ ಪ್ರಕರಣ, ಶರತ್ ಲಾಲ್ ಮತ್ತು ಕೃಪೇಶ್ನ ಹತ್ಯೆ, ಆರ್ಎಸ್ಎಸ್ ನಾಯಕ ನಂದ ಕೃಷ್ಣನ ಕೊಲೆ ಇವೆಲ್ಲವೂ ಕೇರಳದಲ್ಲಿನ ರಾಜಕೀಯ ವಿದ್ವೇಷದ ಉದಾಹಣೆಗಳು. ಸಿಪಿಎಂ ಪಶ್ಚಿಮ ಬಂಗಾಳದಲ್ಲಿ ಮಾಡಿದಂತೆ ಕೇರಳದಲ್ಲಿಯೂ ರಾಜಕೀಯ ಹಿಂಸಾಚಾರ ಮಾಡಲು ಪ್ರಯತ್ನಿಸುತ್ತಿದೆ. ರಾಜ್ಯ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿದೆ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.
Smt @nsitharaman addresses the audience at the #KeralaVijayaYatra pic.twitter.com/oOEa5quah7
— NSitharamanOffice (@nsitharamanoffc) February 28, 2021
Smt @nsitharaman inaugurates and takes part in the #KeralaVijayaYatra in Ernakulam, Kerala. Shri @surendranbjp, President @BJP4Keralam and Shri @kummanam, Former Governor of Mizoram and Former President @BJP4Keralam are also present. pic.twitter.com/liHS4NZbjN
— NSitharamanOffice (@nsitharamanoffc) February 28, 2021
ಮೋದಿಜೀ ಕೇರಳವನ್ನು ನಿರ್ಲಕ್ಷಿಸಿಲ್ಲ
ಬಿಜೆಪಿಗೆ ಕೇರಳದಲ್ಲಿ ಸಂಸದರಿಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ಕೇರಳವನ್ನು ನಿರ್ಲಕ್ಷಿಸಿಲ್ಲ. ಕೇರಳಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಕಾರ್ಯಗಳನ್ನು ಮಾಡಿದೆ. ಎಲ್ಲ ರಾಜ್ಯಗಳೂ ಅಭಿವೃದ್ಧಿಯಾಗಬೇಕು ಎಂಬುದು ಮೋದಿಯವರ ಆಶಯ ಎಂದು ನಿರ್ಮಲಾ ಹೇಳಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.
ಕೇರಳದ ರಾಷ್ಟ್ರೀಯ ಹೆದ್ದಾರಿಗಾಗಿ ಕೇಂದ್ರ ಸರ್ಕಾರ 65000ಕೋಟಿ ಅನುದಾನ ನೀಡಿದೆ. ಕೊಚ್ಚಿ ಮೆಟ್ರೊಗೆ 1957 ಕೋಟಿ ಮೊತ್ತ ಅನುದಾನ ನೀಡಿದೆ. ಪುಗಲ್ಲೂರ್ – ತ್ರಿಶ್ಶೂರ್ ಟ್ರಾನ್ಸ್ಮಿಷನ್ ಯೋಜನೆಗಾಗಿ 5070 ಕೋಟಿ ನೀಡಲಾಗಿದೆ. ಕಾಸರಗೋಡು ಸೋಲಾರ್ ಪವರ್ ಪ್ರಾಜೆಕ್ಟ್, ಅರುವಿಕ್ಕರ್ ವಾಟರ್ ಟ್ರೀಟ್ಮೆಂಟ್ ಎಲ್ಲ ಯೋಜನೆಗಳು ಇದರಡಿಯಲ್ಲಿದೆ. 47ವರ್ಷಗಳ ಹಿಂದೆ ನಿರ್ಮಾಣ ಆರಂಭಿಸಿದ್ದ ಆಲಪ್ಪುಳ ಬೈಪಾಸ್ ಈಗ ಪೂರ್ಣಗೊಂಡಿದೆ. 47 ವರ್ಷಗಳಾಗಿದ್ದರೂ ಎಲ್ಡಿಎಫ್ ಅಥವಾ ಯುಡಿಎಫ್ಗಾಗಲಿ ಈ ಯೋಜನೆ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ ನಿರ್ಮಲಾ ಸೀತಾರಾಮನ್.
ಇದನ್ನೂ ಓದಿ: Rahul Gandhi at Kerala: ಕೇರಳದಲ್ಲಿ ರಾಹುಲ್ ಗಾಂಧಿ; ಮೀನುಗಾರರ ಒಡನಾಟ, ಮತಬೇಟೆಯ ಉತ್ಸಾಹ
Published On - 7:38 pm, Sun, 28 February 21