Schoking News: 64 ಪ್ರಯಾಣಿಕರನ್ನು ಊಟಕ್ಕೆಂದು ಕೆಳಗಿಳಿಸಿ ಬಹುದೊಡ್ಡ ಶಾಕ್​ ಕೊಟ್ಟ ಕೇರಳ ಖಾಸಗಿ ಬಸ್​ ಡ್ರೈವರ್​; ಪೊಲೀಸರಿಂದ ತನಿಖೆ

| Updated By: Lakshmi Hegde

Updated on: Nov 06, 2021 | 9:25 AM

ಶುಕ್ರವಾರ ರಾತ್ರಿಯೇ ಘಟನೆ ನಡೆದಿದೆ. ಒಟ್ಟು 64 ಪ್ರಯಾಣಿಕರಲ್ಲಿ 59 ಮಂದಿ ಅಸ್ಸಾಂಗೆ ಹೋಗುವವರು ಆಗಿದ್ದರೆ, 5 ಮಂದಿ ಬಿಹಾರಕ್ಕೆ ಪ್ರಯಾಣ ಮಾಡುವವರಿದ್ದರು. ಭಾನುವಾರದ ಹೊತ್ತಿಗೆ ಅಸ್ಸಾಂ ತಲುಪಬೇಕಿತ್ತು. 

Schoking News: 64 ಪ್ರಯಾಣಿಕರನ್ನು ಊಟಕ್ಕೆಂದು ಕೆಳಗಿಳಿಸಿ ಬಹುದೊಡ್ಡ ಶಾಕ್​ ಕೊಟ್ಟ ಕೇರಳ ಖಾಸಗಿ ಬಸ್​ ಡ್ರೈವರ್​; ಪೊಲೀಸರಿಂದ ತನಿಖೆ
ಬಸ್​​ ಮತ್ತು ಅದರಲ್ಲಿದ್ದ ಪ್ರಯಾಣಿಕರು (ಫೋಟೋ ಕೃಪೆ-ಟಿವಿ 9 ತೆಲುಗು)
Follow us on

ಕೇರಳದಿಂದ ಅಸ್ಸಾಂಗೆ ಹೊರಟಿದ್ದ ಖಾಸಗಿ ಬಸ್​​ನ ಚಾಲಕ ಮತ್ತು ಕ್ಲೀನರ್​ ಸೇರಿ ಪ್ರಯಾಣಿಕರಿಗೆ ಬಹುದೊಡ್ಡ ಶಾಕ್​ ಕೊಟ್ಟಿದ್ದಾರೆ. ಬಹುಶ್ಯಃ ಆ ಪ್ರಯಾಣಿಕರು ಯಾರೂ ಹೀಗೊಂದು ಕೆಟ್ಟ ಸನ್ನಿವೇಶ ಎದುರಾಗಬಹುದು ಎಂದು ನಿರೀಕ್ಷೆ ಮಾಡಿರಲು ಸಾಧ್ಯವೇ ಇಲ್ಲ. ಇದೊಂದು ಕೇರಳ ಮೂಲದ ಖಾಸಗಿ ಬಸ್​ ಆಗಿದ್ದು, 64 ಪ್ರಯಾಣಿಕರನ್ನು ಹೊತ್ತು ಅಸ್ಸಾಂಗೆ ಸಾಗುತ್ತಿತ್ತು. ಹೀಗೆ ಹೋಗುವಾಗ ತೆಲಂಗಾಣದ ನಲ್ಗೊಂಡ ಬಳಿ ಊಟಕ್ಕೆ ಇಳಿದಿದ್ದರು. ಸಹಜವಾಗಿ ಪ್ರಯಾಣಿಕರೆಲ್ಲ ತಮ್ಮ ಲಗೇಜ್​ಗಳನ್ನೆಲ್ಲ ಬಸ್​​ನಲ್ಲೇ ಇಟ್ಟು ಊಟಕ್ಕೆಂದು ಬಸ್​ ಇಳಿದಿದ್ದರು. ಆದರೆ ಅವರೆಲ್ಲ ಇತ್ತ ಊಟ ಮಾಡುತ್ತಿದ್ದರೆ, ಅತ್ತ ಚಾಲಕ ಎಲ್ಲ ಪ್ರಯಾಣಿಕರ ಲಗೇಜ್​, ಬ್ಯಾಗ್​​ಗಳನ್ನೆಲ್ಲ ಕಳವು ಮಾಡಿದ್ದಾನೆ. ಅಂದರೆ ಬಸ್​​ನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಈ ಬ್ಯಾಗ್​​ಗಳಲ್ಲಿ ಪ್ರಯಾಣಿಕರ ಬಟ್ಟೆ, ಹಣ, ಮತ್ತಿತರ ಬೆಲೆಬಾಳುವ ವಸ್ತುಗಳೂ ಇದ್ದವು. 

ಇನ್ನು ನಲ್ಗೊಂಡ ಬಳಿಯ ನರ್ಕತ್​ಪಲ್ಲಿ ಬಳಿ ಬರುತ್ತಿದ್ದಂತೆ ಚಾಲಕ ಮತ್ತು ಕ್ಲೀನರ್​ ಇಬ್ಬರೂ ಸೇರಿ ಪ್ರಯಾಣಿಕರ ಬಳಿ, ನೀವೆಲ್ಲ ಇಲ್ಲೇ ಇಳಿದು ಊಟ ಮಾಡುತ್ತಿರಿ. ಬಸ್​ ಯಾಕೋ ಸ್ವಲ್ಪ ಸಮಸ್ಯೆ ಕೊಡುತ್ತಿದೆ. ಇಲ್ಲೇ ಸಮೀಪ ಹೋಗಿ ರಿಪೇರಿ ಮಾಡಿಸಿಕೊಂಡು ಬರುತ್ತೇವೆ ಎಂದಿದ್ದಾರೆ. ಅದನ್ನು ನಂಬಿದ ಜನರು ಕೆಳಗೆ ಇಳಿದು ಹೋಗಿದ್ದರು. ಆದರೆ ಅವರೆಲ್ಲ ಊಟ ಮಾಡಿ ಬಂದು ಕಾದಿದ್ದೇ ಬಂತು. ಆದರೆ ಬಸ್​ ಮಾತ್ರ ವಾಪಸ್​ ಬರಲಿಲ್ಲ.

ಶುಕ್ರವಾರ ರಾತ್ರಿಯೇ ಘಟನೆ ನಡೆದಿದೆ. ಒಟ್ಟು 64 ಪ್ರಯಾಣಿಕರಲ್ಲಿ 59 ಮಂದಿ ಅಸ್ಸಾಂಗೆ ಹೋಗುವವರು ಆಗಿದ್ದರೆ, 5 ಮಂದಿ ಬಿಹಾರಕ್ಕೆ ಪ್ರಯಾಣ ಮಾಡುವವರಿದ್ದರು. ಭಾನುವಾರದ ಹೊತ್ತಿಗೆ ಅಸ್ಸಾಂ ತಲುಪಬೇಕಿತ್ತು.  ನರ್ಕತ್​ಪಲ್ಲಿ ಖಾಸಗಿ ಹೋಟೆಲ್​ವೊಂದರ ಬಳಿ ಡ್ರೈವರ್ ಬಸ್​ ನಿಲ್ಲಿಸಿ ಹೋಗಿದ್ದ. ತುಂಬ ಹೊತ್ತು ಕಾದ ಪ್ರಯಾಣಿಕರು 100ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರೇ ಪ್ರಯಾಣಿಕರಿಗೆ ರಾತ್ರಿ ಊಟ ನೀಡಿದ್ದಾರೆ. ಹಾಗೇ, ಸ್ಥಳೀಯವಾಗಿ ವಾಸವಾಗಿರಲೂ ಅನುವು ಮಾಡಿಕೊಟ್ಟಿದ್ದಾರೆ. ಇನ್ನು ಬಸ್​ನವರು ಪ್ರಯಾಣಿಕರಿಗೆ ನೀಡಿರುವ ಫೋನ್​ ನಂಬರ್​ ಆಧರಿಸಿ ಪೊಲೀಸರು ತನಿಖೆಯನ್ನೂ ಶುರು ಮಾಡಿದ್ದಾರೆ. ತಮ್ಮ ಹಣ, ಬಟ್ಟೆ ಸಿಕ್ಕರೆ ಸಾಕು ಎನ್ನುತ್ತಿದ್ದಾರೆ ಪ್ರಯಾಣಿಕರು.

ಇದನ್ನೂ ಓದಿ: New Play : ‘ಕಾಂತ ಮತ್ತು ಕಾಂತ’ ರಂಗದ ಮೇಲೆ ಮೊಟ್ಟಮೊದಲ ಬಾರಿಗೆ ಒಟ್ಟಿಗೇ ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು