ಕೇರಳದಲ್ಲಿ ರಾಜಕೀಯ ನಾಯಕರ ಹತ್ಯೆ ಖಂಡಿಸಿದ ಸಿಎಂ ಪಿಣರಾಯಿ ವಿಜಯನ್​; 2 ಪಕ್ಷಗಳ ನಾಯಕರ ನಡುವೆ ಆರೋಪ-ಪ್ರತ್ಯಾರೋಪ

| Updated By: Lakshmi Hegde

Updated on: Dec 19, 2021 | 3:10 PM

ಇಬ್ಬರು ನಾಯಕರ ಹತ್ಯೆ ಬೆನ್ನಲ್ಲೇ ಬಿಜೆಪಿ ಮತ್ತು ಎಸ್​ಡಿಪಿಐ ಪಕ್ಷಗಳ ನಾಯಕರು ಪರಸ್ಪರರ ಮೇಲೆ ಆರೋಪ ಹೊರೆಸುತ್ತಿದ್ದಾರೆ.  ಎಸ್​ಡಿಪಿಐ ನಾಯಕ ಕೆ.ಎಸ್​.ಶಾನ್​ರನ್ನು ಹತ್ಯೆ ಮಾಡಿದ್ದು, ರಾಷ್ಟ್ರೀಯ ಸ್ವಯಂ ಸೇವಕ (RSS)ದ ಕಾರ್ಯಕರ್ತರು ಎಂದು ಆರೋಪಿಸಿದೆ.

ಕೇರಳದಲ್ಲಿ ರಾಜಕೀಯ ನಾಯಕರ ಹತ್ಯೆ ಖಂಡಿಸಿದ ಸಿಎಂ ಪಿಣರಾಯಿ ವಿಜಯನ್​; 2 ಪಕ್ಷಗಳ ನಾಯಕರ ನಡುವೆ ಆರೋಪ-ಪ್ರತ್ಯಾರೋಪ
ಪಿಣರಾಯಿ ವಿಜಯನ್
Follow us on

ಕೇರಳದಲ್ಲಿ 24 ಗಂಟೆಯಲ್ಲಿ ಇಬ್ಬರು ರಾಜಕೀಯ ಮುಖಂಡರ ಹತ್ಯೆ ನಡೆದಿದ್ದನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ( Kerala Chief Minister Pinarayi Vijayan)​ ಖಂಡಿಸಿದ್ದಾರೆ. ಶನಿವಾರ ಸೋಷಿಯಲ್​ ಡೆಮಾಕ್ರಟಿಕ್​ ಪಕ್ಷ (SDPI)ದ ನಾಯಕ ಕೆ.ಎಸ್​.ಶಾನ್​ ಅವರನ್ನು ಕೊಲೆ ಮಾಡಲಾಗಿತ್ತು. ಅದರ ಬೆನ್ನಲ್ಲೇ ಇಂದು ಬೆಳಗ್ಗೆ ಅಲಪ್ಪುಳದ ಬಿಜೆಪಿ ನಾಯಕ ರಂಜಿತ್​ ಶ್ರೀನಿವಾಸ್​ ಹತ್ಯೆಗೀಡಾಗಿದ್ದಾರೆ. ಈ ಎರಡೂ ನಾಯಕರ ಹತ್ಯೆಯ ಆರೋಪಿಗಳನ್ನು ಸುಮ್ಮನೆ ಬಿಡುವುದಿಲ್ಲ. ಕೃತ್ಯದ ಹಿಂದೆ ಯಾರಿದ್ದಾರೆ ಎಂದು ಪತ್ತೆಹಚ್ಚಿ, ರಾಜ್ಯಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪಿಣರಾಯಿ ವಿಜಯನ್​ ಹೇಳಿದ್ದಾರೆ. ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿರುವ ಅವರು, ಇಂಥ ಸಂಕುಚಿತ ಮನೋಭಾವ ಮತ್ತು ಅಮಾನವೀಯ ಕೃತ್ಯ ಎಸಗುವ ಜನರು ರಾಜ್ಯಕ್ಕೆ ಮಾರಕ. ಕೊಲೆ ಮಾಡುವವರ ಗುಂಪು, ದ್ವೇಷ ಸಾಧಿಸುವವರ ಗುಂಪುಗಳನ್ನೆಲ್ಲ ನಾಗರಿಕ ಸಮಾಜದಿಂದ ಬಹಿಷ್ಕರಿಸಿ, ದೂರವೇ ಇಡಬೇಕು ಎಂದಿದ್ದಾರೆ.  

ಎಸ್​ಡಿಪಿಐ ನಾಯಕ ಕೆ.ಎಸ್​.ಶಾನ್ ಅವರು ಆ ಪಕ್ಷದ ರಾಜ್ಯಕಾರ್ಯದರ್ಶಿಯಾಗಿದ್ದರು. ಇವರ ಮೇಲೆ ಕೇರಳದ ಕೊಚ್ಚಿಯಲ್ಲಿ ಅಪರಿಚಿತ ಗ್ಯಾಂಗ್​ ಹಲ್ಲೆ ಮಾಡಿತ್ತು. ಅದಾದ ಬೆನ್ನಲ್ಲೇ ಬಿಜೆಪಿಯ ಒಬಿಸಿ ಮೋರ್ಚಾದ ಕಾರ್ಯದರ್ಶಿ ರಂಜಿತ್​ ಶ್ರೀನಿವಾಸ್​ರನ್ನು ಆಲಪ್ಪುಳಂನ ಅವರ ಮನೆಯ ಸಮೀಪವೇ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಸದ್ಯ ಆಲಪ್ಪುಳ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸೆಕ್ಷನ್​ 144 ಹೇರಲಾಗಿದೆ.

ಈಗ ಪರಸ್ಪರರ ಮೇಲೆ ಆರೋಪ
ಇಬ್ಬರು ನಾಯಕರ ಹತ್ಯೆ ಬೆನ್ನಲ್ಲೇ ಬಿಜೆಪಿ ಮತ್ತು ಎಸ್​ಡಿಪಿಐ ಪಕ್ಷಗಳ ನಾಯಕರು ಪರಸ್ಪರರ ಮೇಲೆ ಆರೋಪ ಹೊರೆಸುತ್ತಿದ್ದಾರೆ.  ಎಸ್​ಡಿಪಿಐ ನಾಯಕ ಕೆ.ಎಸ್​.ಶಾನ್​ರನ್ನು ಹತ್ಯೆ ಮಾಡಿದ್ದು, ರಾಷ್ಟ್ರೀಯ ಸ್ವಯಂ ಸೇವಕ (RSS)ದ ಕಾರ್ಯಕರ್ತರು. ಈ ಆರ್​ಎಸ್​ಎಸ್​ ಎಂಬುದು ಬಿಜೆಪಿ ಪೋಷಕ ಸಂಸ್ಥೆ ಎಂದು ಹೇಳಿದ್ದಾರೆ.  ಇನ್ನು ಬಿಜೆಪಿ ನಾಯಕ ರಂಜಿತ್​ ಶ್ರೀನಿವಾಸ್​ ಹತ್ಯೆ ಮಾಡಿದ್ದು, ನಿಷೇಧಿತ ಪಿಎಫ್​ಐ ಸಂಘಟನೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್​ ಆರೋಪಿಸಿದ್ದಾರೆ. ಅಂದಹಾಗೆ ಈ ಪಿಎಫ್​ಐ ಎಂಬುದು ಎಸ್​ಡಿಪಿಐನ ಮೂಲ ಸಂಘಟನೆಯಾಗಿದೆ.

ಇದನ್ನೂ ಓದಿ: Smartphone Tips: ನಿಮಗೆ ಸ್ಮಾರ್ಟ್​ಫೋನ್​ನಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡುವ ಟ್ರಿಕ್ ಗೊತ್ತೇ?: ಇಲ್ಲಿದೆ ನೋಡಿ

Published On - 3:08 pm, Sun, 19 December 21