Smartphone Tips: ನಿಮಗೆ ಸ್ಮಾರ್ಟ್​ಫೋನ್​ನಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡುವ ಟ್ರಿಕ್ ಗೊತ್ತೇ?: ಇಲ್ಲಿದೆ ನೋಡಿ

ಆಂಡ್ರಾಯ್ಡ್ ನಲ್ಲಿ ನಿಮ್ಮ ಫೋನಿನ ಸ್ಕ್ರೀನ್ ರೆಕಾರ್ಡಿಂಗ್ (Screen recording) ಮಾಡಲು ಬೆಸ್ಟ್ ಆಗಿರುವ ಆ್ಯಪ್ ಗಳು ಯಾವುದು ಎಂಬುದನ್ನು ತಿಳಿಸಲಿದ್ದೇವೆ.

Smartphone Tips: ನಿಮಗೆ ಸ್ಮಾರ್ಟ್​ಫೋನ್​ನಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡುವ ಟ್ರಿಕ್ ಗೊತ್ತೇ?: ಇಲ್ಲಿದೆ ನೋಡಿ
mobile screen recording
Follow us
| Updated By: Vinay Bhat

Updated on: Dec 19, 2021 | 2:57 PM

ನಿಮ್ಮ ಸ್ಮಾರ್ಟ್​ಫೋನ್ (Smartphone)​ ಸ್ಕ್ರೀನ್​ನಲ್ಲಿ ನಿಮಗೆ ಅಗತ್ಯವಿರುವ ವಿಚಾರಗಳು ರೆಕಾರ್ಡ್ ಆಗಬೇಕಾ? ಅದು ನೀವು ಆಟವಾಡುತ್ತಿರುವ ಗೇಮ್ ಹೇಗೆ ಅನ್ನೋದನ್ನು ಸ್ನೇಹಿತರಿಗೆ ತೋರಿಸಲು ಇರಬಹುದು, ಅಥವಾ ಯಾವುದೋ ಹೊಸ ಆ್ಯಪ್​ನ ಬಗ್ಗೆ ಇತರರಿಗೆ ತೋರಿಸಲು ಇರಬಹುದು ಇಲ್ಲವೇ ನಿಮ್ಮ ಫೋಷಕರಿಗೆ ಯಾವುದೋ ಸೆಟ್ಟಿಂಗ್ಸ್ ಬದಲಾಯಿಸುವುದು ಹೇಗೆ ಎಂದು ತಿಳಿಸಲು ಇರಬಹುದು ಈ ಕೆಲಸವನ್ನು ನಿಮ್ಮ ಆಂಡ್ರಾಯ್ಡ್ (Android) ಫೋನಿನಲ್ಲಿ ಮಾಡಲು ಸಾಧ್ಯವಿದೆ. ಇದಕ್ಕೆ ನೀವು ಗೂಗಲ್ ಪ್ಲೇ ಸ್ಟೋರ್ (Goolge Play store) ಮೂಲಕ ಥರ್ಡ್ ಪಾರ್ಟಿ ಅಪ್ಲಿಕೇಷನ್ ಒಂದರ ಸಹಾಯ ಪಡೆದು ಮಾಡಬೇಕಾಗುತ್ತದೆ. ಹಾಗಾಗಿ ನಾವಿಲ್ಲಿ ಇವತ್ತು, ಯಾವ ಆ್ಯಪ್ ಬಳಸಿ ನೀವು ಈ ಕೆಲಸವನ್ನು ಸುಲಭದಲ್ಲಿ ಮಾಡಬಹುದು, ಆಂಡ್ರಾಯ್ಡ್ ನಲ್ಲಿ ನಿಮ್ಮ ಫೋನಿನ ಸ್ಕ್ರೀನ್ ರೆಕಾರ್ಡಿಂಗ್ (Screen recording) ಮಾಡಲು ಬೆಸ್ಟ್ ಆಗಿರುವ ಆ್ಯಪ್ ಗಳು ಯಾವುದು ಎಂಬುದನ್ನು ತಿಳಿಸಲಿದ್ದೇವೆ.

ಡಿಯು ರೆಕಾರ್ಡರ್: ಮೊದಲ ದಿ ಬೆಸ್ಟ್ ಆ್ಯಪ್ ಅಂದರೆ ಅದು ಡಿಯು ರೆಕಾರ್ಡರ್. ಇದು ತುಂಬಾ ಸರಳವಾಗಿದೆ ಮತ್ತು ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಎರಡು ರೀತಿಯಲ್ಲಿ ನೀವು ಇದರ ರೆಕಾರ್ಡಿಂಗ್ ನ್ನು ಕಂಟ್ರೋಲ್ ಮಾಡಬಹುದು. ಒಂದು ಪಾಪ್ ಅಪ್ ವಿಂಡೋ ಮೂಲಕ ಮತ್ತು ನೋಟಿಫಿಕೇಷನ್ ಬಾರ್ ಮೂಲಕ. ಇದರ ಸೆಟ್ಟಿಂಗ್ ನಲ್ಲಿ ವೀಡಿಯೋ ರೆಸೊಲ್ಯೂಷನ್ ಅನ್ನು ಕೂಡ ಬದಲಾಯಿಸಬಹುದು.

ಎಝಡ್ ಸ್ಕ್ರೀನ್ ರೆಕಾರ್ಡರ್: ಎಝಡ್ ಸ್ಕ್ರೀನ್ ರೆಕಾರ್ಡರ್ ಕೂಡ ಫ್ರೀ ಆ್ಯಪ್ ಆಗಿದೆ. ಪಾಪ್ ಅಪ್ ವಿಂಡೋ ಬರಲು ನೀವು ಪರ್ಮಿಷನ್ ನೀಡಬೇಕಾಗುತ್ತೆ. ಮತ್ತು ಆ್ಯಪ್ ನಿಮ್ಮ ಸ್ಕ್ರೀನಿನಲ್ಲಿ ಕಂಟ್ರೋಲ್ ಗಳನ್ನು ನೀಡುತ್ತೆ. ನೀವು ಅವುಗಳನ್ನು ಆಕ್ಸಿಸ್ ಮಾಡಿ ರೆಕಾರ್ಡಿಂಗ್ , ರೆಕಾರ್ಡ್ ಆದ ವೀಡಿಯೋ ಸೆಂಡ್ ಮಾಡುವ ಕೆಲಸ ಅಥವಾ ಎಡಿಟ್ ಮಾಡುವ ಕೆಲಸವನ್ನು ಏಕಮಾತ್ರ ಇಂಟರ್ ಫೇಸ್ ನಲ್ಲಿ ಮಾಡಬಹುದಾಗಿದೆ.

ಸ್ಕ್ರೀನ್ ರೆಕಾರ್ಡರ್: ಸ್ಕ್ರೀನ್ ರೆಕಾರ್ಡರ್ ಅನ್ನು ಇನ್ ಸ್ಟಾಲ್ ಮಾಡಿದರೆ ಲಾಭದಾಯಕ ಅಂತ ಹೇಳಬಹುದು. ಯಾಕಂದ್ರೆ ಇದರಲ್ಲಿ ಯಾವುದೇ ಜಾಹಿರಾತುಗಳಿರುವುದಿಲ್ಲ ಮತ್ತು ಆ್ಯಪ್ ಪರ್ಚೇಸ್ ಗಳೂ ಇರುವುದಿಲ್ಲ. ಬೇರೆ ಆ್ಯಪ್ ಗಳಂತೆ ಇದರಲ್ಲೂ ಪಾಪ್ ಅಪ್ ವಿಂಡೋ ಪರ್ಮಿಷನ್ ಬೇಕಾಗುತ್ತೆ ಅದನ್ನು ಹೊರತು ಪಡಿಸಿದರೆ ತೀರ ನೇರವಾಗಿರುವ ಆ್ಯಪ್ ಇದು. ಇದನ್ನು ಇನ್​ಸ್ಟಾಲ್ ಮಾಡಿದರೆ ಚಿಕ್ಕದೊಂದು ಟೂಲ್ ಬ್ರ್ ನಿಮ್ಮ ಸ್ಕ್ರೀನ್ ಕೆಳಭಾಗದಲ್ಲಿ ಕಾಣಿಸುತ್ತೆ. ನೀವು ಎಷ್ಟು ಹೊತ್ತು ರೆಕಾರ್ಡ್ ಮಾಡಬೇಕು ಎಂಬುದನ್ನು ಸೆಟ್ ಮಾಡಬಹುದು.

Mi Fan Sale 2021: ಶುರುವಾಗಿದೆ ಕ್ರಿಸ್ಮಸ್ ಸೇಲ್: ರೆಡ್ಮಿ ಸ್ಮಾರ್ಟ್​ಫೋನ್​ಗಳ ಮೇಲೆ ಊಹಿಸಲಾಗದಷ್ಟು ಡಿಸ್ಕೌಂಟ್

Vivo Y32: ಒಮ್ಮೆ ಚಾರ್ಜ್ ಮಾಡಿದ್ರೆ 27 ದಿನಗಳ ಸ್ಟ್ಯಾಂಡ್‌ಬೈ ಟೈಂ: ವಿವೋ ರಿಲೀಸ್ ಮಾಡಿದೆ ಹೊಸ ಸ್ಮಾರ್ಟ್​ಫೋನ್

(Smartphone Tricks How to screen record on an Android phone Here is the steps)