Mi Fan Sale 2021: ಶುರುವಾಗಿದೆ ಕ್ರಿಸ್ಮಸ್ ಸೇಲ್: ರೆಡ್ಮಿ ಸ್ಮಾರ್ಟ್​ಫೋನ್​ಗಳ ಮೇಲೆ ಊಹಿಸಲಾಗದಷ್ಟು ಡಿಸ್ಕೌಂಟ್

Christmas online deals: ರೆಡ್ಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇಯರ್‌ಬಡ್ಸ್‌ ಮೇಲೆ ಭಾರಿ ಬೆಲೆ ಇಳಿಕೆಯನ್ನು ಘೋಷಿಸಿದೆ. ಶವೋಮಿಯ Mi.com ಅಧಿಕೃತ ವೆಬ್​ಸೈಟ್​ನಲ್ಲಿ ನೀವು ಹೆಚ್ಚಿನ ಆಫರ್ಸ್‌ ಮಾಹಿತಿ ಪಡೆಯಬಹದು.

Mi Fan Sale 2021: ಶುರುವಾಗಿದೆ ಕ್ರಿಸ್ಮಸ್ ಸೇಲ್: ರೆಡ್ಮಿ ಸ್ಮಾರ್ಟ್​ಫೋನ್​ಗಳ ಮೇಲೆ ಊಹಿಸಲಾಗದಷ್ಟು ಡಿಸ್ಕೌಂಟ್
Redmi Christmas Sale
Follow us
TV9 Web
| Updated By: Vinay Bhat

Updated on: Dec 19, 2021 | 1:50 PM

ಶವೋಮಿ (Xiaomi) ಕಂಪನಿ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಲ ವಿಭಾಗಕ್ಕೂ ವಿಸ್ತರಿಸುತ್ತಿದೆ. ಸ್ಮಾರ್ಟ್​ಫೋನ್ (Smartphone), ಸ್ಮಾರ್ಟ್​ ಚಾವ್, ಸ್ಮಾರ್ಟ್​ ಟಿವಿ (Smart TV), ಪವರ್ ಬ್ಯಾಂಕ್ ಮೂಲಕ ಗ್ರಾಹಕರಿಗೆ ಹತ್ತಿರವಾಗಿದ್ದ ಕಂಪನಿ ಇದೀಗ ತನ್ನದೇ ರೀತಿಯಲ್ಲಿ ಮಾರುಕಟ್ಟೆಯನ್ನು ಆಳುತ್ತಿದೆ. ಅಲ್ಲದೆ ಒಂದು ಹೆಜ್ಜೆ ಮುಂದಿಟ್ಟಿರುವ ಶವೋಮಿ ಕಾರು ಉತ್ಪಾದನೆಯತ್ತ ಕೂಡ ಕಣ್ಣುಹಾಯಿಸಿದೆ. ಇದರ ನಡುವೆ ಗ್ರಾಹಕರಿಗೆ ಸದಾ ಒಂದಲ್ಲ ಒಂದು ಆಫರ್​ಗಳನ್ನು ಪರಿಚಯಿಸಿ ಮೋಡಿ ಮಾಡುತ್ತಿರುವ ಕಂಪನಿ ಈಗ ಹೊಸ ವರ್ಷ ಹಾಗೂ ಕ್ರಿಸ್ಮಸ್ (Redmi Christmas Sale) ಪ್ರಯುಕ್ತ ಶವೋಮಿ ರೆಡ್ಮಿ ಕಂಪೆನಿ ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ನೀಡುತ್ತಿದೆ. ರೆಡ್ಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇಯರ್‌ಬಡ್ಸ್‌ ಮೇಲೆ ಭಾರಿ ಬೆಲೆ ಇಳಿಕೆಯನ್ನು ಘೋಷಿಸಿದೆ. ಶವೋಮಿಯ Mi.com ಅಧಿಕೃತ ವೆಬ್​ಸೈಟ್​ನಲ್ಲಿ ನೀವು ಹೆಚ್ಚಿನ ಆಫರ್ಸ್‌ ಮಾಹಿತಿ ಪಡೆಯಬಹದು. ಇವುಗಳನ್ನು ನೀವೂ ಖರೀದಿಸಬಹುದು ಅಥಹಾ ನಿಮ್ಮ ಪ್ರೀತಿಪಾತ್ರರಿಗೆ ಉಡುಗರೆಯಾಗಿ ಕೂಡ ನೀಡಬಹುದು. ಈಗಾಗಲೇ ಇದು ಲೈವ್ ಆಗಿದ್ದು ಡಿಸೆಂಬರ್ 21 ರಂದು ಖರೀದಿಸಬಹುದಾಗಿದೆ.

ರೆಡ್ಮಿ ನೋಟ್ 11T 5G ಇದು ಬಜೆಟ್ 5G ಸ್ಮಾರ್ಟ್‌ಫೋನ್. 6nm MediaTek Dimensity 810 ಪ್ರೊಸೆಸರ್‌ನಿಂದ ಡ್ಯುಯಲ್ 5G ಸ್ಟ್ಯಾಂಡ್‌ಬೈ ಬೆಂಬಲ, ಹೈಬ್ರಿಡ್ ಸಿಮ್ ಸ್ಲಾಟ್ ಒಳಗೊಂಡಿದೆ. Redmi Note 11T 5G 5000mAh ಬ್ಯಾಟರಿ ಮತ್ತು 33W ವೇಗದ ಚಾರ್ಜರ್‌ನೊಂದಿಗೆ ಬರುತ್ತದೆ. ಅದರ ಕ್ಯಾಮೆರಾದ ಕಡೆ ಗಮನಿಹರಿಸಿದರೆ, ಇದು 50MP ಪ್ರಾಥಮಿಕ ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್‌ನ  ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಜತೆಗೆ 16MP ಸೆಲ್ಫಿ ಕ್ಯಾಮ್‌ನೊಂದಿಗೆ ಒಳಗೊಂಡಿದೆ.  ನೀವು ಡಿಸೆಂಬರ್ 21 ರಂದು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕೇವಲ 15,999 ರೂ. ರಿಯಾಯಿತಿ ಬೆಲೆಯಲ್ಲಿ ಡೀಲ್ ಅನ್ನು ಪಡೆದುಕೊಳ್ಳಬಹುದು.

ಅಂತೆಯೆ ರೆಡ್ಮಿ 9i ಸ್ಮಾರ್ಟ್‌ಫೋನ್ ಕ್ರಿಸ್‌ಮಸ್‌ ಹಬ್ಬದ ಸೇಲ್‌ 8499 ರೂ. ಬೆಲೆಗೆ ಮಾರಾಟವಾಗುತ್ತಿದೆ. ಈ ಆಫರ್ ಡಿಸೆಂಬರ್ 21 ರವರೆಗೆ ಮಾನ್ಯವಾಗಿರುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.53-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೊ G25 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 10 ಓಎಸ್ ಬೆಂಬಲವನ್ನು ಪಡೆದುಕೊಂಡಿದೆ. ಈ ಫೋನ್‌ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಪಡೆದುಕೊಂಡಿದೆ.

ರೆಡ್ಮಿ 9A ಸ್ಮಾರ್ಟ್‌ಫೋನ್ ಕೂಡ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ 6,999 ರೂ. ಬೆಲೆಗೆ ಲಭ್ಯವಾಗಲಿದೆ. ಈ ಆಫರ್‌ ಕೂಡ ಡಿಸೆಂಬರ್ 21 ರವರೆಗೆ ಮಾನ್ಯವಾಗಿರುತ್ತದೆ. ಇದು 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೊ G25 ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು, ಅದಕ್ಕೆ ಪೂಕರವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಈ ಸ್ಮಾರ್ಟ್‌ಫೋನ್‌ 13ಎಂಪಿ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದು 5000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ.

ಕ್ರಿಸ್‌ಮಸ್‌ ಹಬ್ಬದ ಸೇಲ್‌ನಲ್ಲಿ ರೆಡ್ಮಿ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವಲ್ಲ, ರೆಡ್ಮಿ ಲ್ಯಾಪ್‌ಟಾಪ್‌ಗಳ ಮೇಲೂ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಇದರಲ್ಲಿ RedmiBook 15 ಸರಣಿಯ ಲ್ಯಾಪ್‌ಟಾಪ್‌ಗಳು ಹೆಚ್ಚಿನ ಡಿಸ್ಕೌಂಟ್‌ ಪಡೆದುಕೊಂಡಿವೆ. ಈ ಪೈಕಿ ರೆಡ್ಮಿ ಬುಕ್‌ 15 ಪ್ರೊ 47,999ರೂ. ಬೆಲೆ ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್‌ ಇತ್ತೀಚಿನ 11 ನೇ ಜನ್ ಇಂಟೆಲ್ ಟೈಗರ್‌ಲೇಕ್ ಕೋರ್ i5-11300H ಪ್ರೊಸೆಸರ್ ಹೊಂದಿರುವುದು ವಿಶೇಷ. ಇದಲ್ಲದೆ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ನಿಮ್ಮ ಸ್ನೆಹಿತರಿಗೆ ಆಡಿಯೋ ಪ್ರಾಡಕ್ಟ್‌ಗಳನ್ನ ಉಡುಗೊರೆ ನೀಡಬಹುದು. ಇದಕ್ಕಾಗಿ ತನ್ನ ಇಯರ್‌ಬಡ್ಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಘೋಷಿಸಿದೆ. ರೆಡ್‌ಮಿ ಇಯರ್‌ಬಡ್ಸ್‌ 3 Pro ಅನ್ನು ಕೇವಲ 2,499 ರೂ.ಗಳಿಗೆ ಖರೀದಿಸಬಹುದಾಗಿದೆ.

Vivo Y32: ಒಮ್ಮೆ ಚಾರ್ಜ್ ಮಾಡಿದ್ರೆ 27 ದಿನಗಳ ಸ್ಟ್ಯಾಂಡ್‌ಬೈ ಟೈಂ: ವಿವೋ ರಿಲೀಸ್ ಮಾಡಿದೆ ಹೊಸ ಸ್ಮಾರ್ಟ್​ಫೋನ್

BSNL: ಜಿಯೋ ಏರ್ಟೆಲ್ ಯಾವುದರಲ್ಲೂ ಇಲ್ಲ: ಬಿಎಸ್​ಎನ್​ಎಲ್​ನಿಂದ ಹೊಸ ಬಂಪರ್ ಪ್ಲಾನ್ ಘೋಷಣೆ

(Redmi Christmas Sale Redmi announced a huge price drop on smartphones to laptops and earbuds)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ