AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Online Payments: ಆನ್​ಲೈನ್ ಪೇಮೆಂಟ್ ಮಾಡುವಾಗ ತಪ್ಪಿಯೂ ಈರೀತಿ ಮಾಡಬೇಡಿ: ಎಚ್ಚರ ವಹಿಸಿ

ಈಗೀಗ ಸೈಬರ್‌ ಕ್ರೈಂ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಹೀಗಾಗಿ ಆನ್‌ಲೈನ್ ಪೇಮೆಂಟ್ (online payments) ಮಾಡುವಾಗ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ಹಾಗಾದ್ರೆ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಪಾವತಿಸಲು ಇರುವಂತಹ ಮುನ್ನೆಚ್ಚರಿಕೆ ಕ್ರಮ ಏನು?.

Online Payments: ಆನ್​ಲೈನ್ ಪೇಮೆಂಟ್ ಮಾಡುವಾಗ ತಪ್ಪಿಯೂ ಈರೀತಿ ಮಾಡಬೇಡಿ: ಎಚ್ಚರ ವಹಿಸಿ
Online Payment Tips
TV9 Web
| Updated By: Vinay Bhat|

Updated on: Dec 20, 2021 | 12:45 PM

Share

ಭಾರತದ ಇ-ಕಾಮರ್ಸ್ ವಲಯ ನಿರಂತರವಾಗಿ ಬೆಳವಣಿಗೆ ಹೊಂದುತ್ತಿದೆ. ಹಲವಾರು ಸ್ವಾಧೀನತೆಗಳಿಗೆ ಸಾಕ್ಷಿಯಾಗುತ್ತಿದೆ. ಡಿಜಿಟಲ್‌ (Digital) ಯುಗ ಬೆಳೆದಂತೆಲ್ಲ ಹಣದ ವ್ಯವಹಾರವು ಸಹ ಡಿಜಿಟಲ್ ಆಗಿದೆ. ಡಿಡಿ, ಚೆಕ್‌ ವ್ಯವಸ್ಥೆ ಹೋಗಿ ಮೊಬೈಲ್‌ ಬ್ಯಾಂಕಿಂಗ್‌, ಯುಪಿಐ ಪೇಮೆಂಟ್ (UPI Payment), ಇಂಟರ್‌ನೆಟ್‌ ಬ್ಯಾಂಕಿಂಗ್‌ (Internet Banking), ಎಸ್‌ಎಂಎಸ್‌ ಬ್ಯಾಂಕಿಂಗ್‌ ವ್ಯವಸ್ಥೆ ಈಗಾಗಲೇ ಚಾಲ್ತಿಯಲ್ಲಿದೆ. ಭಾರತ ಈಗ ಡಿಜಿಟಲ್ ಮತ್ತು ಕ್ಯಾಶ್‌ಲೆಸ್‌ ಆಗುತ್ತಿದೆ. ಈ ಸಮಯದಲ್ಲಿ ನಾವು ಎಚ್ಚರದಿಂದಿರಬೇಕಾಗಿರುವುದು ಅವಶ್ಯ. ಏಕೆಂದರೆ ಈಗೀಗ ಸೈಬರ್‌ ಕ್ರೈಂ (Cyber Crime) ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಇಮೇಲ್‌, ಎಸ್‌ಎಂಎಸ್‌ನಲ್ಲಿ ಬಂದ ಮೇಲ್‌ ಮತ್ತು ಮೇಸೆಜ್‌ಗಳಿಂದ ಹಣ ಕಳೆದುಕೊಂಡ ವರದಿಗಳು ದಿನಕ್ಕೊಂದರಂತೆ ಕೇಳುತ್ತಿದ್ದೇವೆ. ಅದರಂತೆ ಹ್ಯಾಕಿಂಗ್‌ ಪ್ರಭಲವಾಗುತ್ತಿದ್ದು, ಹ್ಯಾಕಿಂಗ್‌ ಜಗತ್ತಿನಲ್ಲಿ ನಿಮ್ಮ ಹಣ ಸೇಫ್‌ ಆಗಿರಬೇಕೆಂದರೆ ನೀವು ಕೂಡ ವ್ಯವಹಾರ ಮಾಡುವಾಗ ಎಚ್ಚರದಿಂದಿರಬೇಕು. ಹೀಗಾಗಿ ಆನ್‌ಲೈನ್ ಪೇಮೆಂಟ್ (online payments) ಮಾಡುವಾಗ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ಹಾಗಾದ್ರೆ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಪಾವತಿಸಲು ಇರುವಂತಹ ಮುನ್ನೆಚ್ಚರಿಕೆ ಕ್ರಮ ಏನು?.

ನೀವು ಹಣಕಾಸು ವ್ಯವಹಾರವನ್ನು ಇಂಟರ್‌ನೆಟ್‌ನಲ್ಲಿ ಮಾಡುತ್ತೀರಿ ಎಂದರೆ ಪಬ್ಲಿಕ್‌ ವೈ ಫೈ ಅಥವಾ ಅಸುರಕ್ಷಿತ ವೈ ಫೈ ಅಥವಾ ಇಂಟರ್‌ನೆಟ್‌ ಬಳಸಲೆಬೇಡಿ. ಸ್ಮಾರ್ಟ್‌ಫೋನ್‌ನಲ್ಲಿ ಪಬ್ಲಿಕ್ ವೈ ಫೈ ಸಂಪರ್ಕ ಪಡೆದುಕೊಂಡು ನಿಮ್ಮ ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ ಮಾಹಿತಿಯನ್ನು ನಮೂದಿಸಿದ್ದೀರಿ ಎಂದರೆ ಹ್ಯಾಕರ್‌ಗಳ ಕೈಯಲ್ಲಿ ಸಿಲುಕಿದಂತೆ. ಅದಕ್ಕೆ ಪಬ್ಲಿಕ್‌ ವೈ ಫೈನಲ್ಲಿ ಹಣಕಾಸು ವ್ಯವಹಾರ ಬೇಡ.

ವಂಚಕರು ಯುಪಿಐನಲ್ಲಿರುವ ರಿಕ್ವೆಸ್ಟ್‌ ಫೀಚರ್‌ ಅನ್ನು ದುರ್ಬಳಕೆ ಮಾಡುವುದು ಜಾಸ್ತಿ. ನಿಮ್ಮ ಯುಪಿಐ ಪಿನ್‌ ಕೋಡ್‌ ನಮೂದಿಸಿ, ಹಣ ಪಡೆಯಿರಿ ಎಂಬಂಥ ನಕಲಿ ರಿಕ್ವೆಸ್ಟ್‌ಗಳನ್ನು ಕಳಿಸಿ ಯಾಮಾರಿಸುತ್ತಾರೆ. ಯುಪಿಐ ಪಿನ್‌ ತಿಳಿದು ವಂಚಿಸುವುದೇ ಅವರ ಗುರಿ. ಯುಪಿಐ ವರ್ಗಾವಣೆಗಳಲ್ಲಿ ಹಣವನ್ನು ಕಳಿಸಲು ಮಾತ್ರ ಪಿನ್‌ ಅಗತ್ಯ. ಪಡೆಯಲು ಅಗತ್ಯ ಇಲ್ಲ.

ಆನ್‌ಲೈನ್‌ ಪಾವತಿ ಮಾಡುವ ಮುನ್ನ ಆ ವೆಬ್‌ಸೈಟ್‌ ಲಿಂಕ್‌ URL https:// ಚೆಕ್ ಮಾಡಿ. ಇದರಲ್ಲಿ ‘s’ ಇದ್ದರೆ ಆ ವೆಬ್‌ಸೈಟ್‌ ಸುರಕ್ಷಿತ ಎಂದು ನೀವು ಭಾವಿಸಬಹುದು. ಗೂಗಲ್‌ನಿಂದ ಗುರುತಿಸಲ್ಪಟ್ಟಿರುವಂತಹ ಒಂದು ಸುರಕ್ಷಿತ ವೆಬ್‌ಸೈಟ್ ಇದಾಗಿದೆ ಎಂದು ನೀವು ಭಾವಿಸಬಹುದು. ಆದರೂ, ಇವುಗಳ ಮೂಲಕ ಯುಪಿಐ ಮೂಲಕ ವ್ಯವಹರಿಸಿದರೆ ಉತ್ತಮ ಎನ್ನಬಹುದು.

ಇ-ಮೇಲ್‌ಗಳಲ್ಲಿ ಶೇ. 80ಕ್ಕೂ ಹೆಚ್ಚು ಸ್ಪ್ಯಾಮ್ ಆಗಿರುವುದರಿಂದ ನಿಮ್ಮ ಇ-ಮೇಲ್ ಮೂಲಕ ನೆಟ್ ಬ್ಯಾಂಕಿಂಗ್ ಸೈನ್‌ಇನ್ ಆಗುವುದನ್ನು ತಡೆಗಟ್ಟಿ. ನೀವಿರದ ಸಮಯದಲ್ಲಿ ನಿಮ್ಮ ಮನೆಯ ಸುರಕ್ಷತೆಗಾಗಿ ಬೀಗ ಜಡಿಯುವಂತೆ ಇ-ಬ್ಯಾಂಕಿಂಗ್ ವ್ಯವಹಾರ ಮುಗಿದ ಕೂಡಲೇ ಮರೆಯದೇ ಲಾಗ್‌ಔಟ್ ಮಾಡಿ. ಜೊತೆಗೆ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ನೀವು ಖಾತೆ ಹೊಂದಿರುವ ಬ್ಯಾಂಕ್‌ನ ಅಧಿಕೃತ ಆ್ಯಪ್ ಬಳಸಿದರೆ ಹೆಚ್ಚು ಸುರಕ್ಷಿತ.

ಅತಿ ಸರಳ ಭದ್ರತಾ ವಿಧಾನವೆಂದರೆ ನಿಯಮಿತವಾಗಿ ಪಾಸ್‌ವರ್ಡ್‌ ಬದಲಾಯಿಸುವುದು. ಇಂಟರ್‌ನೆಟ್‌ ಬ್ಯಾಂಕಿಂಗ್‌ ಅಥವಾ ಯುಪಿಐ ಪಾಸ್‌ವರ್ಡ್‌, ಪಿನ್‌ ನಂಬರ್‌ನ್ನು ಸ್ಟ್ರಾಂಗ್‌ ಆಗಿ ತಯಾರಿಸಿ. ನಿಮ್ಮ ಹೆಸರು ಅಥವಾ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಪಾಸ್‌ವರ್ಡ್‌ ಆಗಿ ನಮೂದಿಸಬೇಡಿ. ಪಾಸ್‌ವರ್ಡ್‌ನಲ್ಲಿ ಸಂಖ್ಯೆ, ಅಕ್ಷರ ಮತ್ತು ಚಿಹ್ನೆಗಳನ್ನು ಬಳಸಿ ಪಾಸ್‌ವರ್ಡ್‌ ರಚಿಸಿ.

ನೀವು ಬಳಸುವ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಆಂಟಿ ವೈರಸ್ ಮತ್ತು ಫೈರ್‌ವಾಲ್ ಅಪ್ಡೇಟ್‌ ಆಗಿರುವಂತೆ ನೋಡಿಕೊಳ್ಳಬೇಕು. ಇತ್ತಿಚಿನ ದಿನಗಳಲ್ಲಿ ಇದು ಹೆಚ್ಚು ಅಗತ್ಯವಾದ ವಿಷಯವೇನಲ್ಲ. ಆದರೂ, ನಿಮ್ಮ ಸುರಕ್ಷತೆಯನ್ನು ಎರಡು ಪಟ್ಟು ಹೆಚ್ಚಿಸಿಕೊಳ್ಳಲು ಈ ಮನವಿಯನ್ನು ಪರಿಗಣಿಸಿ.

ಮೊಬೈಲ್‌ ಬ್ಯಾಂಕಿಂಗ್‌ ವ್ಯವಹಾರವನ್ನು ಬ್ಯಾಂಕ್‌ನ ಅಧಿಕೃತ ಅಥವಾ ಪ್ಲೇ ಸ್ಟೋರ್‌ನ ಸೆಕ್ಯೂರ್‌ ಆ್ಯಪ್‌ಗಳಲ್ಲಿಯೇ ಮಾಡಿ. ಯಾಕೆಂದರೆ ಇಲ್ಲಿ ನಿಮ್ಮ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಮಾಹಿತಿ ಸೋರಿಕೆಯಾದರೂ ಬ್ಯಾಂಕ್‌ಗಳ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬಹುದು.

Smartphone Tips: ನಿಮಗೆ ಸ್ಮಾರ್ಟ್​ಫೋನ್​ನಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡುವ ಟ್ರಿಕ್ ಗೊತ್ತೇ?: ಇಲ್ಲಿದೆ ನೋಡಿ

(online payments Tips Here is the some tips that can ensure safe online payments)

ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ದಿನ ಭವಿಷ್ಯ: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ
ದಿನ ಭವಿಷ್ಯ: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್