- Kannada News Photo gallery WhatsApp Here is a tips on how you can use WhatsApp View Once feature Android or iOS device
WhatsApp Tips: ವಾಟ್ಸ್ಆ್ಯಪ್ನಲ್ಲಿರುವ ಈ ಅಚ್ಚರಿಯ ಫೀಚರ್ ಅನ್ನು ನೀವು ಬಳಸಿದ್ದೀರಾ?: ಇಲ್ಲವಾದರೆ ಒಮ್ಮೆ ಟ್ರೈ ಮಾಡಿ
WhatsApp New Feature: ವಾಟ್ಸ್ಆ್ಯಪ್ನಲ್ಲಿ View Once Feature ಎಂಬ ಸೌಲಭ್ಯ ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಎರಡೂ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಇದರಲ್ಲಿ ಫೋಟೋ ಅಥವಾ ವಿಡಿಯೋವನ್ನು ಓಪನ್ ಮಾಡಿ ನೋಡಿದ ತಕ್ಷಣ ಅದು ಮಾಯವಾಗುವುದು ಮಾತ್ರವಲ್ಲದೆ, ಇವು ಫೋನ್ ಮೆಮೊರಿಯಲ್ಲಿ ಎಲ್ಲಿಯೂ ಸ್ಟೋರ್ ಕೂಡ ಆಗದಿರುವುದು ವಿಶೇಷವಾಗಿದೆ.
Updated on: Dec 20, 2021 | 2:55 PM

ವಿಶ್ವದಲ್ಲಿ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಮೆಟಾ (Facebook) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಹೊಸ ಹೊಸ ಅಪ್ಡೇಟ್ ಅನ್ನು ನೀಡುತ್ತಲೇ ಇದೆ. ಇತ್ತೀಚೆಗಷ್ಟೆ ನೀವು ಒಬ್ಬರಿಗೆ ಫೋಟೋ ಅಥವಾ ವಿಡಿಯೋವೊಂದನ್ನು ಕಳುಹಿಸಿದಾಗ, ಅದನ್ನು ಅವರು ಓಪನ್ ಮಾಡಿ ನೋಡಿದ ತಕ್ಷಣ ಡಿಲೀಟ್ ಆಗಿ ಬಿಡುವ ಆಯ್ಕೆ ವಾಟ್ಸ್ಆ್ಯಪ್ ನೀಡಿದೆ. ಆದರೆ, ಅನೇಕರಿಗೆ ಈ ಫೀಚರ್ ಬಗ್ಗೆ ಮಾಹಿತಿ ಇಲ್ಲ. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತರ.

ವಾಟ್ಸ್ಆ್ಯಪ್ನಲ್ಲಿ View Once Feature ಎಂಬ ಸೌಲಭ್ಯ ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಎರಡೂ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಇದರಲ್ಲಿ ಫೋಟೋ ಅಥವಾ ವಿಡಿಯೋವನ್ನು ಓಪನ್ ಮಾಡಿ ನೋಡಿದ ತಕ್ಷಣ ಅದು ಮಾಯವಾಗುವುದು ಮಾತ್ರವಲ್ಲದೆ, ಇವು ಫೋನ್ ಮೆಮೊರಿಯಲ್ಲಿ ಎಲ್ಲಿಯೂ ಸ್ಟೋರ್ ಕೂಡ ಆಗದಿರುವುದು ವಿಶೇಷವಾಗಿದೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ಉದಾಹರಣೆಗೆ ನೀವು ನಿಮ್ಮ ಸ್ನೇಹಿತರ ಚಾಟ್ ಬಾಕ್ಸ್ ಓಪನ್ ಮಾಡಿ ಫೋಟೋ ಅಥವಾ ವಿಡಿಯೋ ಕಳುಹಿಸ ಬೇಕೆಂದಿದ್ದರೆ, ಐಕಾನ್ ಮೇಲೆ ಕ್ಲಿಕ್ ಮಾಡುತ್ತೀರಿ. ಆಗ ಫೋಟೊ ಅಥವಾ ವಿಡಿಯೋ ಸೆಲಕ್ಟ್ ಮಾಡಿ ಸೆಂಡ್ ಬಟನ್ ಪ್ರೆಸ್ ಮಾಡುವ ಪಕ್ಕದಲ್ಲೇ ವೀವ್ ಒನ್ಸ್ ಮೋಡ್ ಆಯ್ಕೆ ಇರುತ್ತದೆ. ಅದನ್ನು ಪ್ರೆಸ್ ಮಾಡಿ ಕಳುಹಿಸಿದರೆ, ನೀವು ಸೆಂಡ್ ಮಾಡಿದ ಫೈಲ್ ಅನ್ನು ಅವರಿಗೆ ಒಮ್ಮೆಗೆ ಮಾತ್ರ ಓಪನ್ ಮಾಡಲು ಸಾಧ್ಯವಾಗುತ್ತಿದೆ.

ಈ View Once Feature ತನ್ನದೇ ಆದ ಕೆಲ ಅನುಕೂಲತೆಗಳೊಂದಿಗೆ ಕೆಲ ಅನಾನುಕೂಲಗಳನ್ನು ಸಹ ಹೊಂದಿದೆ. ಚಾಟ್ ಒಂದನ್ನು ಓಪನ್ ಮಾಡಿದ ತಕ್ಷಣ ಅದು ಚಾಟ್ ಬಾಕ್ಸ್ ನಿಂದ ಮಾಯವಾಗುವುದು ಹೊಸ ಫೀಚರ್ನ ಅತ್ಯಂತ ಕುತೂಹಲಕಾರಿ ವಿಷಯವಾಗಿದೆ.

ಆದರೆ, ಈ ಚಾಟ್ ಅಥವಾ ಇದರಲ್ಲಿನ ಫೋಟೊ, ವಿಡಿಯೋ ಫೋನಿನಲ್ಲಿ ಎಲ್ಲಿಯೂ ಸೇವ್ ಆಗಿರುವುದಿಲ್ಲ ಹಾಗೂ ಇದನ್ನು ನೀವು ಮತ್ತೊಬ್ಬರಿಗೆ ಫಾರ್ವರ್ಡ್ ಕೂಡ ಮಾಡಲಾಗುವುದಿಲ್ಲ ಎಂಬುದು ಬೇಸರದ ಸಂಗತಿ.

ಇನ್ನು ವಾಟ್ಸ್ಆ್ಯಪ್ನಲ್ಲಿ ಮುಂದೆ ಸಾಲು ಸಾಲು ಅಪ್ಡೇಟ್ಗಳು ಬರಲು ತಯಾರಾಗಿದೆ. ಶೀಘ್ರದಲ್ಲೇ ಫೇಸ್ಬುಕ್ನಲ್ಲಿರುವಂತೆಯೆ ಮೆಸೇಜ್ ರಿಯಾಕ್ಷನ್ ಫೀಚರ್ಸ್ ಅನ್ನು ಪರಿಚಯಿಸಲಿದೆ. ಇದರ ಜೊತೆಗೆ ಫೋನ್ನಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ವಾಟ್ಸ್ಆ್ಯಪ್ ವೆಬ್ ಬಳಸುವ ಆಯ್ಕೆ ಸದ್ಯದಲ್ಲೇ ಬರಲಿದೆಯಂತೆ.

ಅಂತೆಯೆ ಲಾಸ್ಟ್ ಸೀನ್, ಪ್ರೊಫೈಲ್ ಫೋಟೋ ಗಳಲ್ಲಿ ಹೊಸ ಆಯ್ಕೆ ಬರಲಿದೆ. ಈ ಹೊಸ ಫೀಚರ್ ವಾಟ್ಸ್ಆ್ಯಪ್ನಲ್ಲಿ ಬಳಕೆದಾರರು ತಮ್ಮ ಲಾಸ್ಟ್ ಸೀನ್, ಸ್ಟೇಟಸ್, ಪ್ರೊಫೈಲ್ ಫೋಟೋ ವಿವರಣೆಯನ್ನು ಯಾರು ನೋಡಬಹುದು ಎಂಬುದನ್ನು ನಿಯಂತ್ರಿಸಲು ಅನುಮತಿಸುತ್ತದೆ.



















