ಕೇರಳ: ಹುಟ್ಟಿದ ಮರುಕ್ಷಣವೇ ಶಿಶುಗಳನ್ನು ಕೊಂದು ಹೂತು ಹಾಕಿದ್ದ ಲಿವ್-ಇನ್ ಜೋಡಿ

ತಮ್ಮ ಪ್ರೀತಿಯ ಪ್ರತೀಕವಾಗಿ ಜನಿಸಿದ್ದ ಎರಡು ಶಿಶುಗಳನ್ನು ಲಿವ್-ಇನ್ ಜೋಡಿ ಕೊಂದು ಹೂತು ಹಾಕಿದ್ದ ವಿಚಾರ ಇದೀಗ ಬಹಿರಂಗಗೊಂಡಿದೆ. ಘಟನೆ ಕೇರಳದಲ್ಲಿ ನಡೆದಿದೆ. ಒಂದು ವರ್ಷದ ಬಳಿಕ ಪೊಲೀಸರು ಎರಡು ಶಿಶುಗಳ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ.  25 ವರ್ಷದ ಭವಿನ್ ಎಂಬಾತ ತನ್ನ ನವಜಾತ ಶಿಶುಗಳ ಅವಶೇಷಗಳನ್ನು ಹೊತ್ತುಕೊಂಡು ಪುತ್ತುಕ್ಕಾಡ್ ಪೊಲೀಸ್ ಠಾಣೆಗೆ ಬಂದಿದ್ದರು.

ಕೇರಳ: ಹುಟ್ಟಿದ ಮರುಕ್ಷಣವೇ ಶಿಶುಗಳನ್ನು ಕೊಂದು ಹೂತು ಹಾಕಿದ್ದ ಲಿವ್-ಇನ್ ಜೋಡಿ
ಸಾಂದರ್ಭಿಕ ಚಿತ್ರ
Image Credit source: Babysparks

Updated on: Jun 30, 2025 | 7:51 AM

ತಿರುವನಂತಪುರಂ, ಜೂನ್ 30: ಲಿವ್-ಇನ್ ಜೋಡಿ(Live-in Couple)ಯೊಂದು ಹುಟ್ಟಿದ ಮರುಕ್ಷಣವೇ ತಮ್ಮ ಶಿಶುಗಳನ್ನು ಕೊಂದು, ಹೂತು ಹಾಕಿರುವುದಾಗಿ ಒಪ್ಪಿಕೊಂಡಿದ್ದು, ಒಂದು ವರ್ಷದ ಬಳಿಕ ಪೊಲೀಸರು ಎರಡು ಶಿಶುಗಳ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ.  25 ವರ್ಷದ ಭವಿನ್ ಎಂಬಾತ ತನ್ನ ನವಜಾತ ಶಿಶುಗಳ ಅವಶೇಷಗಳನ್ನು ಹೊತ್ತುಕೊಂಡು ಪುತ್ತುಕ್ಕಾಡ್ ಪೊಲೀಸ್ ಠಾಣೆಗೆ ಬಂದಿದ್ದ.

ತಾನು ಮತ್ತು ತನ್ನ ಲಿವ್ ಇನ್ ಸಂಗಾತಿ ಅನಿಶಾಗೆ ಬೇರೆಬೇರೆ ವರ್ಷದಲ್ಲಿ ಇಬ್ಬರು ಗಂಡು ಶಿಶುಗಳು ಜನಿಸಿದ್ದು, ಹುಟ್ಟಿದ ಕೂಡಲೇ ಕೊಂದು ಸಮಾಧಿ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಭವಿನ್ ಸುಮಾರು 12.30ರ ಸುಮಾರಿಗೆ ಪೊಲೀಸ್ ಠಾಣೆಗೆ ಬಂದು ಶಿಶುಗಳ ಅವಶೇಷಗಳೆಂದು ಹೇಳಿಕೊಂಡ ಪ್ಯಾಕೆಟ್ ಅನ್ನು ಹಸ್ತಾಂತರಿಸಿದ್ದಾನೆ. ಘಟನೆಗಳ ವಿವರಗಳನ್ನು ಸ್ಟೇಷನ್ ಹೌಸ್ ಅಧಿಕಾರಿ ಮಹೇಂದ್ರ ಸಿಂಹನ್ ಅವರೊಂದಿಗೆ ಹಂಚಿಕೊಂಡರು. ಅವರ ಹೇಳಿಕೆಯ ಆಧಾರದ ಮೇಲೆ, ಅಧಿಕಾರಿಗಳು ಅನಿಶಾ ಅವರನ್ನು ಸಹ ಬಂಧಿಸಿದರು.

ವಿಚಾರಣೆಯ ಸಂದರ್ಭದಲ್ಲಿ ಈ ಜೋಡಿ ಫೇಸ್​ಬುಕ್​ನಲ್ಲಿ ಭೇಟಿಯಾಗಿತ್ತು. 2020ರಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಭವಿನ್ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದರೆ, ಅನಿಶಾ ಲ್ಯಾಬ್ ಟೆಕ್ನೀಶಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.

ಮತ್ತಷ್ಟು ಓದಿ: ಮರ್ಯಾದಾ ಹತ್ಯೆ: ಲಿವ್-ಇನ್ ಸಂಬಂಧದಲ್ಲಿದ್ದ ಮಗಳು, ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ತಂದೆ

ಇಬ್ಬರ ತಪ್ಪೊಪ್ಪಿಗೆ ಪ್ರಕಾರ, ಅನಿಶಾ 2021ರಲ್ಲಿ ತನ್ನ ಮನೆಯ ಸ್ನಾನಗೃಹದಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಳು.ಹೆರಿಗೆಯ ಸಮಯದಲ್ಲಿ ಶಿಶುವಿನ ಕುತ್ತಿಗೆಗೆ ಹೊಕ್ಕುಳಬಳ್ಳಿ ಸುತ್ತಿಕೊಂಡಿದ್ದರಿಂದ ಮಗು ಸಾವನ್ನಪ್ಪಿತ್ತು ಎಂದು ಹೇಳಿಕೊಂಡಿದ್ದಾಳೆ. ಮಗುವನ್ನು ತನ್ನ ಜಮೀನಿನಲ್ಲಿ ರಹಸ್ಯವಾಗಿ ಹೂತುಹಾಕಿದ್ದಳು.

ಎಂಟು ತಿಂಗಳ ನಂತರ, ಭವಿನ್ ಕೋರಿಕೆಯ ಮೇರೆಗೆ, ಅವಳು ಅವಶೇಷಗಳನ್ನು ಅವನಿಗೆ ಕೊಟ್ಟಿದ್ದಳು. ಭವಿನ್ ತಮ್ಮ ಸಂಬಂಧದ ಸಂಕೇತವಾಗಿ ಮೂಳೆಗಳನ್ನು ಇಟ್ಟುಕೊಂಡಿದ್ದಾಗಿ ಮತ್ತು ಮಗುವಿಗೆ ಅಂತ್ಯಕ್ರಿಯೆ ನಡೆಸಲು ಯೋಜಿಸಿರುವುದಾಗಿ ಸ್ನೇಹಿತರಿಗೆ ತಿಳಿಸಿದ್ದಾಗಿ ಹೇಳಿದ್ದಾಳೆ.

ಎರಡನೇ ಘಟನೆಯಲ್ಲಿ, 2024 ರಲ್ಲಿ ಅನಿಶಾ ಮತ್ತೆ ಮಗುವಿಗೆ ಜನ್ಮ ನೀಡಿದಳು. ಪೊಲೀಸರ ಹೇಳಿಕೆಯ ಪ್ರಕಾರ, ಮಗುವಿನ ಅಳುವನ್ನು ನಿಗ್ರಹಿಸಲು ಮತ್ತು ನೆರೆಹೊರೆಯವರು ಕೇಳದಂತೆ ತಡೆಯಲು ಬಲವಂತವಾಗಿ ಬಾಯಿ ಮುಚ್ಚಿದ ನಂತರ ಮಗು ಸಾವನ್ನಪ್ಪಿತು. ನಂತರ ಭವಿನ್ ಅಂಬಳ್ಳೂರಿನ ತನ್ನ ನಿವಾಸದ ಹಿಂದೆ ಶವವನ್ನು ಹೂತುಹಾಕಿದ್ದರು.

ಭವಿನ್ ತನ್ನೊಂದಿಗೆ ಪೊಲೀಸ್ ಠಾಣೆಗೆ ತಂದದ್ದು ಎರಡೂ ಶಿಶುಗಳ ಅವಶೇಷಗಳನ್ನು ವಿಧಿವಿಜ್ಞಾನ ಶಸ್ತ್ರಚಿಕಿತ್ಸಕರು ಕೊಂಡೊಯ್ದಿದ್ದು, ಮೂಳೆಗಳನ್ನು ಪರೀಕ್ಷಿಸಿ ಅವು ಶಿಶುಗಳ ಅವಶೇಷಗಳು ಹೌದೆಂದು ದೃಢಪಡಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

 

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ