Video: ಕಿರಿದಾದ ರಸ್ತೆಯಲ್ಲಿ ಚಾಲಕರ ಆಲೋಚನೆ ದೊಡ್ಡದಿರಲಿ
ರಸ್ತೆ ಸಣ್ಣದಾಗಿರುವಾಗ ನಿಮ್ಮ ಆಲೋಚನೆ ಸ್ವಲ್ಪ ದೊಡ್ಡದಾಗಿರಬೇಕು, ಜತೆಗೆ ಶಾಂತಿಯಿಂದ ವರ್ತಿಸಿದರೆ ಸಮಸ್ಯೆ ಬಹುಬೇಗ ಬಗೆಹರಿಯುತ್ತದೆ. ಅಲ್ಲೂ ನಿಮ್ಮ ಮನಸ್ಸಿಗೆ ತೋಚಿದಂತೆ ನಡೆದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗೆಯೇ ವಿಡಿಯೋವೊಂದು ವೈರಲ್ ಆಗಿದ್ದು, ಯಾವ ಪ್ರದೇಶದಲ್ಲಿ ನಡೆದಿದೆ ಎನ್ನುವ ಮಾಹಿತಿ ಇಲ್ಲ. ಕಿರಿದಾದ ದಾರಿಯಲ್ಲಿಕಾರು ಚಾಲಕ ಹೋಗುವಾಗ ಎದುರಿನಿಂದಲೂ ಕಾರೊಂದು ಅಡ್ಡ ಬಂದಿದೆ. ಹೇಗೋ ನಿಧಾನವಾಗಿ ಎರಡೂ ವಾಹನವು ಒಂದಕ್ಕೊಂದು ಡಿಕ್ಕಿ ಹೊಡೆಯದೆ ಹೋಗಬೇಕು ಎನ್ನುವವಷ್ಟರಲ್ಲಿ ಎದುರಿನಿಂದ ಮತ್ತೊಂದು ಕಾರು ವೇಗವಾಗಿ ಬಂದು ಬೈಕ್ ಚಾಲಕ ಹಾಗೂ ಎದುರಿನ ಕಾರಿಗೆ ಡಿಕ್ಕಿ ಹೊಡೆದಿದೆ.
ರಸ್ತೆ ಸಣ್ಣದಾಗಿರುವಾಗ ನಿಮ್ಮ ಆಲೋಚನೆ ಸ್ವಲ್ಪ ದೊಡ್ಡದಾಗಿರಬೇಕು, ಜತೆಗೆ ಶಾಂತಿಯಿಂದ ವರ್ತಿಸಿದರೆ ಸಮಸ್ಯೆ ಬಹುಬೇಗ ಬಗೆಹರಿಯುತ್ತದೆ. ಅಲ್ಲೂ ನಿಮ್ಮ ಮನಸ್ಸಿಗೆ ತೋಚಿದಂತೆ ನಡೆದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗೆಯೇ ವಿಡಿಯೋವೊಂದು ವೈರಲ್ ಆಗಿದ್ದು, ಯಾವ ಪ್ರದೇಶದಲ್ಲಿ ನಡೆದಿದೆ ಎನ್ನುವ ಮಾಹಿತಿ ಇಲ್ಲ. ಕಿರಿದಾದ ದಾರಿಯಲ್ಲಿ ಕಾರು ಚಾಲಕ ಹೋಗುವಾಗ ಎದುರಿನಿಂದಲೂ ಕಾರೊಂದು ಅಡ್ಡ ಬಂದಿದೆ. ಹೇಗೋ ನಿಧಾನವಾಗಿ ಎರಡೂ ವಾಹನವು ಒಂದಕ್ಕೊಂದು ಡಿಕ್ಕಿ ಹೊಡೆಯದೆ ಹೋಗಬೇಕು ಎನ್ನುವವಷ್ಟರಲ್ಲಿ ಎದುರಿನಿಂದ ಮತ್ತೊಂದು ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಕಾರಿನ ಜತೆಗೆ ಬೈಕ್ ಚಾಲಕನಿಗೂ ಹಾನಿಯಾಗಿದೆ. ಕೇವಲ ಒಂದೇ ಒಂದು ನಿಮಿಷ ತಡೆದಿದ್ದರೂ ಈ ಅಪಘಾತ ತಡೆಯಬಹುದಿತ್ತು. ಹಾಗೆಯೇ ಬೈಕ್ ಚಾಲಕನಿಗೂ ತನ್ನ ತಪ್ಪಿನ ಅರಿವಾಗಿದೆ. ಹಾಗಾಗಿ ಪರಿಸ್ಥಿತಿ ನಮ್ಮ ಕೈಯಲ್ಲಿಲ್ಲ ಎಂದಾದಾಗ ಅವಸರ ಮಾಡಿ ಅಪಘಾತ ತಂದುಕೊಳ್ಳಬಾರದು ಎಂಬುದು ಆಶಯ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ