Video: ಆಂಧ್ರಪ್ರದೇಶ: ಶ್ರೀಶೈಲಂ ದೇವಸ್ಥಾನದ ಪ್ರಸಾದದಲ್ಲಿ ಜಿರಳೆ ಪತ್ತೆ
ಆಂಧ್ರಪ್ರದೇಶದ ಶೀಶ್ರೈಲಂ ದೇವಸ್ಥಾನದಲ್ಲಿ ಭಾನುವಾರ ಭಕ್ತರೊಬ್ಬರು ಪಡೆದ ಪ್ರಸಾದದಲ್ಲಿ ಜಿರಳೆ ಕಂಡುಬಂದಿತ್ತು, ಆತಂಕ ನಿರ್ಮಾಣವಾಗಿದೆ. ಶರಶ್ಚಂದ್ರ ಕೆ ಎಂಬ ವ್ಯಕ್ತಿ ಪಡೆದ ಲಡ್ಡುವಿನ ಮಧ್ಯದಲ್ಲಿ ಜಿರಳೆ ಇರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಕೂಡಲೇ ಶರಶ್ಚಂದ್ರ ಅವರು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದಾರೆ. ಸಿಬ್ಬಂದಿ ಸ್ವಚ್ಛತೆ ಕಡೆ ಗಮನವಹಿಸದೆ ನಿರ್ಲಕ್ಷ್ಯದಿಂದ ಲಡ್ಡು ತಯಾರಿಸಲಾಗಿದೆ ಎಂದು ಆರೋಪಿಸಲಾಗಿದೆ.ಆದರೆ ದೇವಸ್ಥಾನದ ಆಡಳಿತವು ಶರಶ್ಚಂದ್ರ ಅವರ ಹೇಳಿಕೆಯನ್ನು ನಿರಾಕರಿಸಿದೆ.
ಶ್ರೀಶೈಲಂ, ಜೂನ್ 30: ಆಂಧ್ರಪ್ರದೇಶದ ಶೀಶ್ರೈಲಂ ದೇವಸ್ಥಾನದಲ್ಲಿ ಭಾನುವಾರ ಭಕ್ತರೊಬ್ಬರು ಪಡೆದ ಪ್ರಸಾದದಲ್ಲಿ ಜಿರಳೆ ಕಂಡುಬಂದಿದ್ದು, ಆತಂಕ ನಿರ್ಮಾಣವಾಗಿದೆ. ಶರಶ್ಚಂದ್ರ ಕೆ ಎಂಬ ವ್ಯಕ್ತಿ ಪಡೆದ ಲಡ್ಡುವಿನ ಮಧ್ಯದಲ್ಲಿ ಜಿರಳೆ ಇರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ.
ಕೂಡಲೇ ಶರಶ್ಚಂದ್ರ ಅವರು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದಾರೆ. ಸಿಬ್ಬಂದಿ ಸ್ವಚ್ಛತೆ ಕಡೆ ಗಮನವಹಿಸದೆ ನಿರ್ಲಕ್ಷ್ಯದಿಂದ ಲಡ್ಡು ತಯಾರಿಸಲಾಗಿದೆ ಎಂದು ಆರೋಪಿಸಲಾಗಿದೆ.ಆದರೆ ದೇವಸ್ಥಾನದ ಆಡಳಿತವು ಶರಶ್ಚಂದ್ರ ಅವರ ಹೇಳಿಕೆಯನ್ನು ನಿರಾಕರಿಸಿದೆ.
ಶ್ರೀಶೈಲಂ ದೇವಸ್ಥಾನದ ಕಾರ್ಯ ನಿರ್ವಹಣಾ ಅಧಿಕಾರಿ ಶ್ರೀನಿವಾಸ ರಾವ್ ಪ್ರಕಾರ, ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಂಡು ಲಡ್ಡು ತಯಾರಿಸುತ್ತಾರೆ. ಜಿರಳೆ ಸಿಗುವ ಸಾಧ್ಯತೆಯೇ ಇಲ್ಲ, ಭಕ್ತರು ಚಿಂತಿಸಲೇಬೇಡಿ ಎಂದು ಮನವಿ ಮಾಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ