ಮತ್ತೊಂದು ಹೊಸ ಸೋಂಕು: ಕೇರಳದಲ್ಲಿ ಪತ್ತೆಯಾಯ್ತು ‘ಆಫ್ರಿಕಾ’ ಮಲೇರಿಯಾ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 11, 2020 | 7:28 PM

ಸಾಧಾರಣವಾಗಿ ಆಫ್ರಿಕಾ ಪ್ರಾಂತ್ಯದಲ್ಲಿ ಕಂಡು ಬರುವ ಪ್ಲಾಸ್ಮೋಡಿಯಂ ಓವಲ್ ಕೇರಳದಲ್ಲಿ ಪತ್ತೆಯಾಗಿರುವುದು ಸಾಮಾನ್ಯ ಜನರಲ್ಲಿ ಭಯ ಮೂಡಿಸಿದೆ.

ಮತ್ತೊಂದು ಹೊಸ ಸೋಂಕು: ಕೇರಳದಲ್ಲಿ ಪತ್ತೆಯಾಯ್ತು ‘ಆಫ್ರಿಕಾ’ ಮಲೇರಿಯಾ
ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ
Follow us on

ಕೊಚ್ಚಿ: ಕೊವಿಡ್​ ಹೊಡೆತದಿಂದ ತತ್ತರಿಸಿ ಕೊಂಚ ಚೇತರಿಸಿಕೊಳ್ಳುತ್ತಿರುವ ಕೇರಳದಲ್ಲಿ ಮತ್ತೊಂದು ಹೊಸ ಸೋಂಕು ಪತ್ತೆಯಾಗಿದೆ. ಮಲೇರಿಯಾಕ್ಕೆ ಕಾರಣವಾಗಿರುವ ಪರಾವಲಂಬಿ ಪ್ಲಾಸ್ಮೋಡಿಯಂನ ರೂಪಾಂತರ ‘ಪ್ಲಾಸ್ಮೋಡಿಯಂ ಓವಲ್​’ (Plasmodium ovale) ಕಂಡುಬಂದಿದೆ ಎಂದು ಕೇರಳದ ಆರೋಗ್ಯ ಸಚಿವೆ ಕೆ.ಕೆ.ಸೈಲಜಾ ಟ್ವೀಟ್ ಮಾಡಿದ್ದಾರೆ.

ಅತ್ಯಂತ ಅಪರೂಪದ ಸೋಂಕು ಇದಾಗಿದ್ದು ಸುಡಾನ್​ನಿಂದ ಆಗಮಿಸಿದ ಒಬ್ಬ ಸೈನಿಕನಲ್ಲಿ ಕಂಡುಬಂದಿದೆ. ಸದ್ಯ ಆತನನ್ನು ಕಣ್ಣೂರಿನ ಜಿಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಧಾರಣವಾಗಿ ಆಫ್ರಿಕಾ ಪ್ರಾಂತ್ಯದಲ್ಲಿ ಕಂಡು ಬರುವ ಪ್ಲಾಸ್ಮೋಡಿಯಂ ಓವಲ್ ಕೇರಳದಲ್ಲಿ ಪತ್ತೆಯಾಗಿರುವುದು ಸಾಮಾನ್ಯ ಜನರಲ್ಲಿ ಭಯ ಮೂಡಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಆರೋಗ್ಯ ಸಚಿವರು ರೋಗಕ್ಕೆ ಭಯಪಡುವ ಅಗತ್ಯವಿಲ್ಲ. ಸೂಕ್ತ ವೈದ್ಯಕೀಯ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಎಲ್ಲದಕ್ಕೂ ಮುನ್ನ ಇದು ಹರಡದಂತೆ ಎಚ್ಚರಿಕೆ ವಹಿಸುವತ್ತ ಗಮನ ಹರಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ.

ಈ ಹಿಂದೆ ಕೊರೊನಾ ಹಾಗೂ ನಿಫಾ ವೈರಸ್​ನ ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಮಲೇರಿಯಾ ವಿರುದ್ಧ ಭಾರತದ ಪ್ರಬಲ ಹೋರಾಟ; ಸಾವಿನ ಸಂಖ್ಯೆ ಇಳಿಮುಖ