ಕೊಚ್ಚಿ: ಹವಾಮಾನ ವೈಪರೀತ್ಯದಿಂದಾಗಿ ದಿನೇದಿನೇ ತಾಪಮಾನ ವ್ಯತ್ಯಾಸ ಉಂಟಾಗುತ್ತಿದೆ. ಇದರಿಂದ ಸಮುದ್ರಗಳಲ್ಲಿ ಕಂಡುಬರುತ್ತಿದ್ದ ಶಾರ್ಕ್ ಮೀನಿನ ಪ್ರಭೇದಗಳು ಅಲ್ಲೋ ಇಲ್ಲೋ ಎಂಬಂತಾಗಿದೆ. ಮೀನುಗಾರರ ಬಲೆಗೆ ಸಿಕ್ಕಿ ಅನೇಕ ಶಾರ್ಕ್ ಮೀನು ಬಲಿಯಾಗಿವೆ.
ಕೇರಳದ ಶಂಖುಮುಖಂ ಕಡಲ ಕಿನಾರೆಯಲ್ಲಿ ಮೀನುಗಾರರ ಬಲೆಗೆ ಸಿಕ್ಕಿ ಬಿದ್ದಿದ್ದ ಶಾರ್ಕ್ವೊಂದನ್ನು ರಕ್ಷಿಸಿ ಪ್ರಾಣ ಉಳಿಸಿದ ಘಟನೆ ಡಿಸೆಂಬರ್ 4ರಂದು ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋ ಒಂದೂವರೆ ನಿಮಿಷದಷ್ಟಿದೆ. ಬಲೆಯಿಂದ ಶಾರ್ಕ್ ಮೀನನ್ನು ಹೊರತೆಗೆದು ಸಮುದ್ರಕ್ಕೆ ಮರಳಿಸಿದ ಘಟನೆಯನ್ನು ವಿಡಿಯೋದಲ್ಲಿ ನೋಡಬಹುದು.
ಮೀನುಗಾರರ ಗುಂಪಿನಲ್ಲಿ ಸುಮಾರು 60 ಜನರು ಸೇರಿದ್ದಾರೆ. ಬಲೆಯಿಂದ ಶಾರ್ಕ್ ಮೀನು ಹೊರತೆಗೆದು ಹಗ್ಗದ ಸಹಾಯದಿಂದ ಮರಳಿ ತನ್ನ ವಾಸಸ್ಥಾನಕ್ಕೆ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು ಮೀನುಗಾರರು ಪ್ರಶಂಸೆಗಿಟ್ಟಿಸಿಕೊಂಡಿದ್ದಾರೆ.
ಮೀನುಗಾರರ ಪರಿಶ್ರಮವನ್ನು ಅಭಿನಂದಿಸಿರುವ ವನ್ಯಜೀವಿ ಸಂರಕ್ಷಣೆಗಾಗಿ ದುಡಿಯುತ್ತಿರುವ ವೈಲ್ಡ್ಲೈಫ್ ಟ್ರಸ್ಟ್ ಇಂಡಿಯಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕ್ ಮೆನನ್ ಈ ಮೀನುಗಾರರಿಗೆ ವಿಶೇಷ ಪ್ರಶಸ್ತಿ ಘೋಷಿಸಿದ್ದಾರೆ.
ಕೇರಳದ ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.
Beginning the morning with good news from the #Kerala. A #whaleshark caught in the nets was freed by fishers. Third instance in this state following the start of @wti_org_india project here. I have announced a special award for them. pic.twitter.com/dH2Q45ZlrQ
— Vivek Menon (@vivek4wild) December 5, 2020
Published On - 2:23 pm, Sun, 6 December 20