Supreme Court: ಬೀದಿನಾಯಿಗಳನ್ನು ಕೊಲ್ಲಲು ಸುಪ್ರೀಂ ಮೊರೆ ಹೋದ ಕೇರಳ ಸರ್ಕಾರ

ಕೇರಳ ಸರ್ಕಾರವು ಸೋಮವಾರ ಇಂತಹ ನಾಯಿಗಳನ್ನು ಕೊಲ್ಲಲು ಅನುಮತಿ ಕೋರಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಇದನ್ನು ನಿಯಂತ್ರಿಸಲು ಒಂದು ತಿಂಗಳ ಅವಧಿಯ ಕಾರ್ಯಾಚರಣೆಯನ್ನು ಘೋಷಿಸಿದೆ.

Supreme Court: ಬೀದಿನಾಯಿಗಳನ್ನು ಕೊಲ್ಲಲು ಸುಪ್ರೀಂ ಮೊರೆ ಹೋದ ಕೇರಳ ಸರ್ಕಾರ
Updated By: ಅಕ್ಷಯ್​ ಪಲ್ಲಮಜಲು​​

Updated on: Sep 13, 2022 | 7:04 PM

ಕೇರಳ; ಕೇರಳದಲ್ಲಿ ಬೀದಿನಾಯಿಗಳ ಹೆಚ್ಚಾಗಿದ್ದು ಈ ನಾಯಿಗಳು ಕಚ್ಚುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇರಳ ಸರ್ಕಾರವು ಸೋಮವಾರ ಇಂತಹ ನಾಯಿಗಳನ್ನು ಕೊಲ್ಲಲು ಅನುಮತಿ ಕೋರಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಇದನ್ನು ನಿಯಂತ್ರಿಸಲು ಒಂದು ತಿಂಗಳ ಅವಧಿಯ ಕಾರ್ಯಾಚರಣೆಯನ್ನು ಘೋಷಿಸಿದೆ. ಕೇರಳದ ಈ ಬಗ್ಗೆ ಪರಿಸ್ಥಿತಿ ನಿಜವಾಗಿಯೂ ಗಂಭೀರವಾಗಿದೆ. ಕಚ್ಚಲು ಬರುತ್ತಿರುವ ಬೀದಿ ನಾಯಿಗಳಿಂದ ಮುಕ್ತಿ ನೀಡಲು ನಾವು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಸಂಬಂಧಿಸಿದ ಇಲಾಖೆಗಳು ಮತ್ತು ಏಜೆನ್ಸಿಗಳೊಂದಿಗಿನ ಸಭೆಯ ನಂತರ ಸ್ಥಳೀಯ ಸ್ವ-ಸರ್ಕಾರದ ಸಚಿವ ಎಂ.ಬಿ.ರಾಜೇಶ್ ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿರುವುದರಿಂದ, ಹಿಂಸಾತ್ಮಕ ಮತ್ತು ರೇಬಿಸ್​ ನಾಯಿಗಳನ್ನು ಕೊಲ್ಲಲು ಅನುಮತಿಗಾಗಿ ಸರ್ಕಾರವು ಸುಪ್ರೀಂಗೆ ಅರ್ಜಿ ಸಲ್ಲಿಸಿದೆ.

ರಾಜ್ಯ ಸ್ಥಳೀಯ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಕುಟುಂಬಶ್ರೀಯಂತಹ ಮಹಿಳಾ ಸ್ವಸಹಾಯ ಸಂಘಗಳ ನೆರವಿನೊಂದಿಗೆ ಸೆಪ್ಟೆಂಬರ್ 20 ರಿಂದ ಒಂದು ತಿಂಗಳ ಕಾಲ ಅಭಿಯಾನ ನಡೆಸಲಾಗುವುದು ಎಂದು ಸಚಿವರು ಹೇಳಿದರು. ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ಕ್ರಮಗಳನ್ನು ಹೆಚ್ಚಿಸುತ್ತೇವೆ. ಹಾಟ್ ಸ್ಪಾಟ್‌ಗಳನ್ನು ಗುರುತಿಸುತ್ತೇವೆ ಮತ್ತು ನಾಯಿಗಳ ಶೆಲ್ಟರ್‌ಗಳನ್ನು ನಿರ್ಮಿಸುತ್ತೇವೆ. ಸಾಕಷ್ಟು ಲಸಿಕೆಗಳನ್ನು ಸಂಗ್ರಹಿಸಲಾಗಿದೆ ಎಂದು ಸಚಿವರು ಹೇಳಿದರು.

ಕಳೆದ ಕೆಲವು ತಿಂಗಳುಗಳಲ್ಲಿ ರೇಬೀಸ್ ಲಸಿಕೆಯನ್ನು ತೆಗೆದುಕೊಂಡರೂ ಮತ್ತೆ ಅದೇ ಪ್ರಕರಣಗಳು ಮುಂದುವರಿಯುತ್ತಿದೆ. ಇದರಿಂದ ಐದು ಸಾವುಗಳು ವರದಿಯಾಗಿ. ಇದೀಗ ಇವುಗಳನ್ನು ಕೊಲ್ಲುವಂತೆ ಸಾರ್ವಜನಿಕವಾಗಿ ಒತ್ತಾಯ ಹೆಚ್ಚಾಗುತ್ತಿದೆ. ಪ್ರಾಣಿ ಪ್ರೇಮಿಗಳು ಸರ್ಕಾರದ ಈ ಕ್ರಮವನ್ನು ಭಾಗಶಃ ಸ್ವಾಗತಿಸಿದರು ಆದರೆ ಇದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದರು. ನಾಯಿಯು 24X7 ಕಚ್ಚುವುದಿಲ್ಲ. ಇದನ್ನು ಕೊಲ್ಲುವೊಂದೇ ಪರಿಹಾರವಲ್ಲ ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಹಾಗೂ ಲೇಖಕಿ ಶ್ರೀದೇವಿ ಕರ್ತಾ ಹೇಳಿದ್ದಾರೆ. ಸೆಪ್ಟೆಂಬರ್ 9 ರಂದು ರಾಜ್ಯದ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ವಿವರವಾಗಿ ಆಲಿಸಿತ್ತು ಸೆಪ್ಟೆಂಬರ್ ಮೂರನೇ ವಾರಕ್ಕೆ ತನ್ನ ತೀರ್ಪನ್ನು ಕಾಯ್ದಿರಿಸಿದೆ.