ವಿಜಯದಶಮಿಯಂದು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ ಕೇರಳ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್

|

Updated on: Oct 24, 2023 | 3:19 PM

ಕೇರಳದ ರಾಜ್ಯಪಾಲ ರಾಜ್ಯಪಾಲ ಆರಿಫ್ ರಾಜ್ಯಭವನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ. ಇದು ಹಿಂದೂಗಳ ಸಂಪ್ರದಾಯವಾಗಿದ್ದರು. ವಿದ್ಯಾರಂಭಂ ಆಚರಣೆಯು ಹಲವಾರು ವರ್ಷಗಳಿಂದ ಕೇರಳದಲ್ಲಿ ಜಾತ್ಯತೀತ ಸ್ವರೂಪವನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ವಿಜಯದಶಮಿಯಂದು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ ಕೇರಳ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್
ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ ಕೇರಳ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್
Follow us on

ಕೇರಳ, ಅ.24: ಇಂದು ಭಾರತದದ್ಯಾಂತ ವಿಜಯದಶಮಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಕೇರಳದಲ್ಲೂ ಇದಕ್ಕೆ ಬಹಳ ಮಹತ್ವ ಇದೆ. ಈ ದಿನದಂದು ಕೇರಳದಲ್ಲಿ “ಎಝುತಿನಿರುತ್ತು” ದೀಕ್ಷಾ ಆಚರಣೆ ಮಾಡಲಾಗುತ್ತದೆ. ಇದನ್ನು “ವಿದ್ಯಾರಂಭಂ” ಎಂದು ಕೂಡ ಕರೆಯುತ್ತಾರೆ. ಕೇರಳದ ಬೇರೆ ಬೇರೆ ಭಾಗದ ಮಕ್ಕಳಿಗೆ ಈ ಮೂಲಕ ವಿದ್ಯಾಭ್ಯಾಸ ನೀಡಲಾಗುವುದು. ಅಕ್ಷರಾಭ್ಯಾಸದ ಮೂಲಕ ಮಕ್ಕಳ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡುವುದು ಇದರ ಮುಖ್ಯ ಕೆಲಸವಾಗಿದೆ. ಈ ಹಬ್ಬವನ್ನು ವಿಜಯದಶಮಿಯಂದು ಆಚರಣೆ ಮಾಡಲಾಗುವುದು. ಇಂದು ಕೇರಳದ ಅನೇಕ ಶಾಲೆಗಳಲ್ಲಿ, ದೇವಸ್ಥಾನಗಳಲ್ಲಿ ಇದನ್ನು ಆಚರಣೆ ಮಾಡುತ್ತಾರೆ. ಇದು ಹಿಂದೂ ಧರ್ಮ ಪೂಜಾ ಕಲಿಕೆಯ ಒಂದು ಪದ್ಧತಿಯಾಗಿದೆ. ಕೇರಳ ರಾಜಭವನದಲ್ಲೂ ವಿದ್ಯಾರಂಭಂ ಸಮಾರಂಭವನ್ನು ಆಯೋಜಿಸಿತ್ತು, ಅಲ್ಲಿ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಅವರು ಅಕ್ಕಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ.

ಇನ್ನು ವಿದ್ಯಾರಂಭಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್​​ ನಾಯಕ ಶಶಿ ತರೂರ್ ಕೂಡ ಭಾಗವಹಿಸಿದರು​​. ಜತೆಗೆ ಮಕ್ಕಳಿಗೆ ಅಕ್ಕಿಯಲ್ಲಿ ಅಕ್ಷರಾಭ್ಯಾಸವನ್ನು ಮಾಡಿಸಿದ್ದಾರೆ. ದೇಶದಲ್ಲಿ ವಿಭಿನ್ನ ರೀತಿಯಲ್ಲಿ ವಿಜಯದಶಮಿಯನ್ನು ಆಚರಣೆ ಮಾಡಲಾಗುತ್ತಿದೆ. ಆದರೆ ಕೇರಳ ಅಕ್ಷರಾಭ್ಯಾಸ ಮಾಡಿಸುವ ಮೂಲಕ ವಿಜಯದಶಮಿಯನ್ನು ಆಚರಣೆ ಮಾಡುತ್ತಿದೆ ಎಂದು ಹೇಳಿದ್ದರು.

ಈ ವಿಡಿಯೋ ಇಲ್ಲಿದೆ:

ಈ ವಿಜಯದಶಮಿಯಂದು ಮಕ್ಕಳಿಗೆ ಹಿರಿಯರು ಅಕ್ಷರಾಭ್ಯಾಸವನ್ನು ಮಾಡಿಸುವ ಮೂಲಕ ಅವರಿಗೆ ಒಂದು ಒಳ್ಳೆಯ ದಾರಿಯನ್ನು ತೋರಿಸಲಾಗುವುದು ಎಂದು ಹೇಳಿದ್ದಾರೆ. ನಾನು ಮಕ್ಕಳಿಗೆ ಮೂರು ಭಾಷೆಗಳಲ್ಲಿ ಅಕ್ಷರಾಭ್ಯಾಸ ಮಾಡಿಸಿದ್ದೇನೆ. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಅದರಲ್ಲಿ ಮಕ್ಕಳ ಕೈ ಹಿಡಿದುಕೊಂಡು ಅಕ್ಷರಾಭ್ಯಾಸವನ್ನು ಮಾಡಿಸಲಾಯಿತು. ಸಂಸ್ಕೃತ, ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿ ‘ಓಂ ಹರಿ ಶ್ರೀ’ ಎಂದು ಬರೆಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಜಯದಶಮಿಯ ಪೌರಾಣಿಕ ಹಿನ್ನಲೆಯೇನು? ಪೂಜಾ ಮಹತ್ವವೇನು?

ಇದರ ಜತೆಗೆ ಕೇರಳದ ರಾಜ್ಯಪಾಲ ರಾಜ್ಯಪಾಲ ಆರಿಫ್ ರಾಜ್ಯಭವನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ. ಇದು ಹಿಂದೂಗಳ ಸಂಪ್ರದಾಯವಾಗಿದ್ದರು. ವಿದ್ಯಾರಂಭಂ ಆಚರಣೆಯು ಹಲವಾರು ವರ್ಷಗಳಿಂದ ಕೇರಳದಲ್ಲಿ ಜಾತ್ಯತೀತ ಸ್ವರೂಪವನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ