ತಿರುವನಂತಪುರ: ದಾಖಲೆಯ 11,801 ಕೇರಳ ಸರ್ಕಾರಿ ಅಧಿಕಾರಿಗಳು (ನೌಕರರೂ ಒಳಗೊಂಡಂತೆ) (Kerala Govt Employees) ಬುಧವಾರ ನಿವೃತ್ತರಾಗುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ನೌಕರರು 56 ವರ್ಷಕ್ಕೆ ನಿವೃತ್ತರಾಗುತ್ತಾರೆ. ರಾಜ್ಯ ಸರ್ಕಾರಿ ಅಧಿಕಾರಿಗಳ ಒಟ್ಟು ಸಂಖ್ಯೆ ಸುಮಾರು 5 ಲಕ್ಷದಷ್ಟಿದೆ. ಜೂನ್ನಲ್ಲಿ ಪ್ರಾರಂಭವಾಗುವ ಶೈಕ್ಷಣಿಕೆ ವರ್ಷದಲ್ಲಿ ಶಾಲಾ ದಾಖಲಾತಿ ಸಂದರ್ಭದಲ್ಲಿ ಪ್ರವೇಶ ಪಡೆಯಲು ಅನುವು ಮಾಡಿಕೊಡುವುದಕ್ಕಾಗಿ ಜನ್ಮ ದಿನಾಂಕವನ್ನು ಸರಿಹೊಂದಿಸಲಾಗಿದ್ದೇ ಇಷ್ಟೊಂದು ಸಂಖ್ಯೆಯಲ್ಲಿ ಅಧಿಕಾರಿಗಳು, ನೌಕರರು ಒಂದೇ ದಿನ ನಿವೃತ್ತರಾಗಲು ಮುಖ್ಯ ಕಾರಣ ಎನ್ನಲಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ನಿವೃತ್ತಿ ವಯಸ್ಸಿನ ವ್ಯಾಪ್ತಿಗೆ ಬರುವ ಸರ್ಕಾರಿ ಅಧಿಕಾರಿಗಳ ಒಟ್ಟು ಸಂಖ್ಯೆ 21,537 ಆಗಿದ್ದು, ಅವರಲ್ಲಿ 11,801 ಮಂದಿ ಇಂದು ಸಂಜೆ ನಿವೃತ್ತರಾಗುತ್ತಿದ್ದಾರೆ.
ನಿವೃತ್ತಿಯಾಗಲಿರುವವರಲ್ಲಿ ರಾಜ್ಯದ ಎರಡನೇ ಮಹಿಳಾ ಐಪಿಎಸ್ ಅಧಿಕಾರಿ ಡಿಜಿಪಿ ಬಿಎಸ್ ಸಂಧ್ಯಾ ಅವರೂ ಸೇರಿದ್ದಾರೆ. ಇವರು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಮುಖ್ಯಸ್ಥರ ಹುದ್ದೆಯಿಂದ ನಿವೃತ್ತರಾಗುತ್ತಿದ್ದಾರೆ.
ಇದನ್ನೂ ಓದಿ: Kerala Crime: ಕೇರಳದಲ್ಲಿ ಆಘಾತಕಾರಿ ಘಟನೆ: ಟ್ರಾಲಿ ಬ್ಯಾಗ್ನಲ್ಲಿತ್ತು ಖ್ಯಾತ ಹೋಟೆಲ್ ಮಾಲೀಕನ ಶವ
ನಟ ಮತ್ತು ಮಿಮಿಕ್ರಿ ಕಲಾವಿದರೂ ಆಗಿರುವ ಜೋಬಿ ಅವರು ಸರ್ಕಾರಿ ಸ್ವಾಮ್ಯದ ಸಂಸ್ಥೆ ಕೇರಳ ಸ್ಟೇಟ್ ಫೈನಾನ್ಶಿಯಲ್ ಎಂಟರ್ಪ್ರೈಸಸ್ನ ಹಿರಿಯ ವ್ಯವಸ್ಥಾಪಕ ಹುದ್ದೆಯಿಂದ ನಿವೃತ್ತರಾಗುತ್ತಿದ್ದಾರೆ.
ರಾಜ್ಯದ ಹಣಕಾಸಿನ ಸ್ಥಿತಿ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಇಷ್ಟೊಂದು ಜನ ಒಟ್ಟಿಗೆ ನಿವೃತ್ತರಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಸೇವಾ ನಿವೃತ್ತಿ ಪ್ರಯೋಜನಗಳನ್ನು ಪಾವತಿಸಲು 1,500 ಕೋಟಿ ರೂ.ಗಳ ಮೊತ್ತ ಅಗತ್ಯವಿದೆ ಎನ್ನಲಾಗಿದೆ. ಆದಾಗ್ಯೂ, ಹಣಕಾಸಿನ ಕೊರತೆ ಕಾರಣ ಮುಂದೊಡ್ಡಿ ಯಾವುದೇ ಪಾವತಿಯನ್ನು ತಡೆಹಿಡಿಯಲಾಗುವುದಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ