ಆಕೆ 45 ವಯಸ್ಸಿನ ಟೀಚರ್​​, ಇವನೋ 25ರ ಚಿಗುರು ಮೀಸೆಯ ಯುವಕ, ಒಂದು ಮಿಸ್ಡ್​​ ಕಾಲ್​​ ಅವರ ಪ್ರೇಮದ ಹೆಬ್ಬಾಗಿಲನ್ನು ತೆರೆಯಿತು, ಕೊನೆಗೆ ಇಬ್ಬರ ಬರ್ಬರ ಅಂತ್ಯ!

Hayathnagar police: ಹೈದರಾಬಾದ್ - ಆಕೆಗೆ 45 ರ ಮಧ್ಯ ವಯಸ್ಸು, ಇವನಿಗೋ 25ರ ಪ್ರಪಂಚ ಕಾಣದ ಚಿಗುರು ಮೀಸೆಯ ವಯಸ್ಸು, ಆ ಒಂದು ಮಿಸ್ಡ್​​ ಕಾಲ್​​ ಸಂಪರ್ಕದಿಂದ ಅವರಿಬ್ಬರೂ ಪ್ರೀತಿಯಲ್ಲಿ ಮುಳುಗಿದರು! ಕೊನೆಗೆ ಬರ್ಬರ ಅಂತ್ಯ ಕಂಡರು!

ಆಕೆ 45 ವಯಸ್ಸಿನ ಟೀಚರ್​​, ಇವನೋ 25ರ ಚಿಗುರು ಮೀಸೆಯ ಯುವಕ, ಒಂದು ಮಿಸ್ಡ್​​ ಕಾಲ್​​ ಅವರ ಪ್ರೇಮದ ಹೆಬ್ಬಾಗಿಲನ್ನು ತೆರೆಯಿತು, ಕೊನೆಗೆ ಇಬ್ಬರ ಬರ್ಬರ ಅಂತ್ಯ!
ಒಂದು ಮಿಸ್ಡ್​​ ಕಾಲ್​​ ಅವರ ಪ್ರೇಮದ ಹೆಬ್ಬಾಗಿಲನ್ನು ತೆರೆಯಿತು, ಕೊನೆಗೆ
Follow us
ಸಾಧು ಶ್ರೀನಾಥ್​
|

Updated on: May 31, 2023 | 3:50 PM

ಆಕೆಗೆ 45 ರ ಮಧ್ಯ ವಯಸ್ಸು, ಇವನಿಗೋ 25ರ ಚಿಗುರು ವಯಸ್ಸು, ಆ ಒಂದು ಮಿಸ್ಡ್​​ ಕಾಲ್​​ ಅವರ ಪರಿಚಯಕ್ಕೆ ನಾಂದಿ ಹಾಡಿತ್ತು. ಆ ಫೋನ್ ಕರೆ ಅವರ ನಡುವಿನ ಬಾಂಧವ್ಯದ ಹೆಬ್ಬಾಗಿಲು ತೆರೆಯಿತು. ಆ ಸಂಬಂಧವು ವಿವಾಹೇತರ ಸಂಬಂಧಕ್ಕೆ ಕಾರಣವಾಯಿತು ಮತ್ತು ಅಂತಿಮವಾಗಿ ಅವಳನ್ನು ಆತ್ಮಹತ್ಯೆಯತ್ತ ತಳ್ಳಿತು. ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುವಷ್ಟರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೊಬ್ಬರು ಭಯದಿಂದ ಸಾವನ್ನಪ್ಪಿದ್ದಾರೆ. ಹೈದರಾಬಾದ್​ ಹೊರವಲಯದ ಆರ್​ ಆರ್​ ಜಿಲ್ಲೆಗೆ ಹೊಂದಿಕೊಂಡಿರುವ ಹಯಾತ್ ನಗರದ (Hayathnagar Police) ರಾಜೇಶ್ ಸಾವಿನ ಪ್ರಕರಣದಲ್ಲಿ ಇಂತಹ ಹಲವು ಟ್ವಿಸ್ಟ್‌ಗಳಿವೆ. ಕೊಲೆಯ ಆಯಾಮದಿಂದ, ಈ ಪ್ರಕರಣವು ಅಂತಿಮವಾಗಿ ಆತ್ಮಹತ್ಯೆ ಎಂದು ಇತ್ಯರ್ಥಗೊಂಡಿದೆ. ಟೀಚರ್ ನನ್ನು ಪ್ರೀತಿಸಿ.. ಫೇಲ್ ಆಗಿ ರಾಜೇಶ್ ಕೂಡ ಸಾವನ್ನಪ್ಪಿದ್ದಾನೆ (Love Tragedy). ಜೊತೆಗೇ ಇವರ ಪ್ರೇಮ ಪಾಠ (Love Story) ಇದೀಗ ಹಾಟ್ ಟಾಪಿಕ್ ಆಗಿದೆ.

ಹೈದರಾಬಾದ್ ನಗರದ ಉಪನಗರ ಪೆದ್ದ ಅಂಬರ್ ಪೇಟ್ ನಲ್ಲಿ ಯುವಕನ ಶವ ಪತ್ತೆಯಾದ ಪ್ರಕರಣದಲ್ಲಿ ಪೊಲೀಸ್ ತನಿಖೆ ಅಂತಿಮ ಘಟ್ಟ ತಲುಪಿರುವಂತಿದೆ. ದೊಡ್ಡ ಅಂಬರ್ ಪೇಟ್ ಡಾಕ್ಟರ್ಸ್ ಕಾಲೋನಿ ಬಳಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವವನ್ನು ಸ್ಥಳೀಯರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪ್ರಕರಣದ ತನಿಖೆ ನಡೆಸಿದ ಪೊಲೀಸರು ವಿಸ್ಮಯ ಮೂಡಿಸುವ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸರ್ಕಾರಿ ಶಿಕ್ಷಕಿ ಸುಜಾತಾ ಜತೆಗಿನ ವಿವಾಹೇತರ ಸಂಬಂಧದಿಂದ ಆಕೆಯ ಪತಿ ನಾಗೇಶ್ವರ ರಾವ್ ಎಂಬಾತ ರಾಜೇಶನನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಆರಂಭದಲ್ಲಿ ಭಾವಿಸಿದ್ದರೂ, ನಂತರ ಸಂಚಲನದ ವಿಷಯ ಬೆಳಕಿಗೆ ಬಂದಿದೆ.

ಶಿಕ್ಷಕಿ ಸುಜಾತಾ ಮತ್ತು ಹಯಾತ್​​​ ನಗರದ ರಾಜೇಶ್ ಅವರ ಪರಿಚಯವೂ ಕುತೂಹಲಕಾರಿಯಾಗಿ ಆರಂಬವಾಗಿತ್ತು. ಸುಜಾತಾ ನೀಡಿದ ಮಿಸ್ಡ್ ಕಾಲ್ ಮೂಲಕ ಇಬ್ಬರೂ ಭೇಟಿಯಾಗಿದ್ದರು. ಆ ನಂತರ ಇಬ್ಬರೂ ಆಗಾಗ ವಾಟ್ಸಾಪ್ ಮೆಸೇಜ್ ಕಳುಹಿಸತೊಡಗಿದ್ದರು, ಫೋನ್ ನಲ್ಲಿ ಮಾತನಾಡಲು ಆರಂಭಿಸಿದ್ದರು. ಸುಜಾತಾ ಟೀಚರ್​​ ವಾಟ್ಸಪ್​​ ಡಿ.ಪಿ.ಯನ್ನು ನೋಡಿದ ರಾಜೇಶ, ಆಕೆಯಿನ್ನೂ ಮದುವೆಯಾಗಿಲ್ಲ ಎಂದು ಭಾವಿಸುತ್ತಾನೆ. ಅವಳನ್ನು ಮನಸಾರೆ ಪ್ರೀತಿಸತೊಡಗುತ್ತಾನೆ. ಮುಂದೆ ಅವನು ಮದುವೆಯಾಗಲೂ ನಿರ್ಧರಿಸಿಬಿಡುತ್ತಾನೆ. ಕೆಲವು ತಿಂಗಳ ಪರಿಚಯದ ನಂತರ, ಸುಜಾತಾಳ ಮದುವೆಯ ವಿಷಯ ಅವನಿಗೆ ತಿಳಿಯುತ್ತದೆ. ತನಗೆ ಮೋಸ ಮಾಡಿದ್ದಕ್ಕೆ ಸುಜಾತಾಳ ಮೇಲೆ ರಾಜೇಶ ಆಕ್ರೋಶ ವ್ಯಕ್ತಪಡಿಸುತ್ತಾನೆ. ತದನಂತರ ಅವನು ಅವಳಿಂದ ದೂರವಾಗುತ್ತಾನೆ.

ಆದರೆ, ರಾಜೇಶ್ ದೂರವಾದ ಕಾರಣಕ್ಕೆ ಮನನೊಂದ ಆಕೆ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆ ನಂತರ ಆಕೆ ಆಸ್ಪತ್ರೆಯಲ್ಲಿರುವುದು ತಿಳಿಯದೆ ರಾಜೇಶ್ ಆಕೆಯ ಸೆಲ್ ಫೋನ್ ಗೆ ವಾಟ್ಸಾಪ್ ಸಂದೇಶ, ಕರೆಗಳನ್ನು ಕಳುಹಿಸಿದ್ದಾನೆ. ರಾಜೇಶ್ ಪದೇ ಪದೇ ಕರೆ ಮಾಡಿದ ನಂತರ ಕುಟುಂಬಸ್ಥರು ಫೋನ್ ಎತ್ತಿಕೊಂಡು ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ರಾಜೇಶ ಸ್ಥಮೀಪದ ಟೀ ಅಂಗಡಿ ಬಳಿ ಇದ್ದಾನೆ ಎಂದು ತಿಳಿದ ಸುಜಾತಾ ಕುಟುಂಬಸ್ಥರು ಅವನನ್ನು ಕರೆದು ಛೀಮಾರಿ ಹಾಕಿ, ಗದರಿದ್ದಾರೆ. ಮಾರನೆಯ ದಿನ ರಾಜೇಶ್‌ಗೆ ಕರೆ ಮಾಡಿ ಸುಜಾತಾಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಸುಜಾತಾ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಹೆದರಿದ ರಾಜೇಶ ಕ್ರಿಮಿನಾಶಕ ಕುಡಿದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಟ್ಟಿನಲ್ಲಿ ಆ ಒಂದು ಮಿಸ್ಡ್ ಕಾಲ್.. ಎರಡು ಜೀವಗಳನ್ನು ಬಲಿಪಡೆದವು ಅಷ್ಟೇ… ಜೊತೆಗೆ ಸಮಾಜಕ್ಕೆ ಒಂದು ಪಾಠವನ್ನೂ ಬಿಟ್ಟು ಹೋದರು. ಆದರೂ ಪ್ರೇಮಿಗಳಿಗೆ ಈ ಕಹಿ ಪಠ್ಯ ಅಪಥ್ಯವಾಗುತ್ತದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ