ಬೆಂಗಳೂರು: ರಾತ್ರಿ ಇಬ್ಬರು ರೌಡಿಶೀಟರ್ಗಳು ಒಟ್ಟಿಗೆ ಕುಳಿತು ಪಾರ್ಟಿ, ಬಳಿಕ ನಡೆದ ಜಗಳ ಕೊಲೆಯಲ್ಲಿ ಅಂತ್ಯ
ಇತ್ತೀಚೆಗೆ ರೌಡಿಶೀಟರ್ಗಳ ಹತ್ಯೆ ಹೆಚ್ಚಾಗಿದೆ. ಕಳೆದ ತಿಂಗಳಿನಿಂದ 3 ರಿಂದ 4 ರೌಡಿಶೀಟರ್ಗಳು ಹತ್ಯೆಯಾಗಿದ್ದಾರೆ. ಅದರಂತೆ ಇದೀಗ ಕೆ.ಪಿ ಅಗ್ರಹಾರದ ರೌಡಿ ಶೀಟರ್ ಸಾಗರ್ ಎಂಬಾತನನ್ನ ವಿಜಯನಗರ ಠಾಣೆಯ ರೌಡಿಶೀಟರ್ ನವೀನ್ ಅಲಿಯಾಸ್ ಕೆ ಎನ್ನುವವನು ಕೊಲೆ ಮಾಡಿರುವ ಘಟನೆ ಮಹದೇಶ್ವರ ದೇವಾಲಯದ ಬಳಿ ನಡೆದಿದೆ.
ಬೆಂಗಳೂರು: ಇತ್ತೀಚೆಗೆ ರೌಡಿಶೀಟರ್(Rowdy Sheeter)ಗಳ ಹತ್ಯೆ ಹೆಚ್ಚಾಗಿದೆ. ಕಳೆದ ತಿಂಗಳಿನಿಂದ 3 ರಿಂದ 4 ರೌಡಿಶೀಟರ್ಗಳು ಹತ್ಯೆಯಾಗಿದ್ದಾರೆ. ಅದರಂತೆ ಇದೀಗ ಕೆ.ಪಿ ಅಗ್ರಹಾರದ ರೌಡಿ ಶೀಟರ್ ಸಾಗರ್ ಎಂಬಾತನನ್ನ ವಿಜಯನಗರ ಠಾಣೆಯ ರೌಡಿಶೀಟರ್ ನವೀನ್ ಅಲಿಯಾಸ್ ಕೆ ಎನ್ನುವವನು ಕೊಲೆ ಮಾಡಿರುವ ಘಟನೆ ಮಹದೇಶ್ವರ ದೇವಾಲಯದ ಬಳಿ ನಡೆದಿದೆ. ರಾತ್ರಿ ಒಟ್ಟಿಗೆ ಕುಳಿತು ಪಾರ್ಟಿ ಮಾಡಿದ್ದ ಸಾಗರ್ ಹಾಗೂ ನವೀನ್. ಬಳಿಕ ಮಾತಿಗೆ ಮಾತು ಬೆಳೆದು ಸಾಗರ್, ನವೀನ್ ನಡುವೆ ಜಗಳ ಶುರುವಾಗಿದೆ. ಈ ವೇಳೆ ಲಾಂಗ್ನಿಂದ ಹಲ್ಲೆ ಮಾಡಿದ್ದ ನವೀನ್ ಸಾಗರ್ನನ್ನ ಕೊಲೆಗೈದಿದ್ದಾನೆ. ಈ ಕುರಿತು ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರೌಡಿಶೀಟರ್ ನವೀನ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಶೂ ಲೇಸ್ನಿಂದ ನೇಣು ಬಿಗಿದುಕೊಂಡು ರೌಡಿ ಶೀಟರ್ ಸಾವು
ಬೆಂಗಳೂರು: ಜೈಲಿನ ಶೌಚಾಲಯದಲ್ಲಿ ಶೂ ಲೇಸ್ನಿಂದ ನೇಣು ಬಿಗಿದುಕೊಂಡು ರೌಡಿ ಶೀಟರ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಸುನೀಲ್ ಮೃತ ರೌಡಿ ಶೀಟರ್. ಇತನ ಸಾವು ಇದೀಗ ಹಲವಾರು ಮೂಡಿಸಿದೆ. ಹೌದು ಶೂ ಲೇಸ್ನಿಂದ ನೇಣು ಬಿಗಿದುಕೊಂಡು ಸಾವನಪ್ಪಿದ ರೀತಿಯಲ್ಲಿ ಆತನ ಶವ ಪತ್ತೆಯಾಗಿದೆ. ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದ ಆತ. ಇನ್ನು ಹತ್ತು ದಿನಗಳಲ್ಲಿ ಅಂದರೆ ಜೂನ್.2 ಕ್ಕೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಆಗಬೇಕಿದ್ದ. ಇನ್ನು ಈ ರೌಡಿಶೀಟರ್ ಸುನೀಲ್ ‘ಕಗ್ಗಲಿಪುರದಲ್ಲಿ ವಿನೋದ್ ಎಂಬಾತನನ್ನ ಕೊಲೆ ಮಾಡಿ ಜೈಲು ಸೇರಿದ್ದ.
ಇದನ್ನೂ ಓದಿ:ಹುಣಸೂರು ಡಬಲ್ ಮರ್ಡರ್ ಕೇಸ್: ಜೈಲಿಂದ ಆರೋಪ ಮುಕ್ತನಾಗಿ ಹೊರಬಂದ ರೌಡಿಶೀಟರ್ ಚಂದು ಭೀಕರ ಹತ್ಯೆ, ಹಂತಕರು ಯಾರು?
ಕೆಲ ದಿನಗಳ ಹಿಂದೆ ನನ್ನನ್ನ ಕೊಲೆ ಮಾಡಲು ಸ್ಕೆಚ್; ಬಾತ್ರೂಮ್ನಲ್ಲಿ ನನ್ನ ಶವ ಸೀಗಬಹುದು ಹೇಳಿದ್ದ ಸುನೀಲ್ ಹೌದು ಕೊಲೆ ಮಾಡಿ ಜೈಲು ಸೇರಿದ್ದ ಸುನೀಲ್ ‘ಕೆಲ ದಿನಗಳ ಹಿಂದೆ ತನ್ನನ್ನು ಕೊಲೆ ಮಾಡಲು ಸ್ಕೆಚ್ ಹಾಕಲಾಗಿದೆ ಅಥವಾ ಬಾತ್ರೂಮ್ನಲ್ಲಿ ನಾನೇ ನೇಣುಹಾಕಿಕೊಂಡ ರೀತಿ ನಿಮಗೆ ಸಿಗಬಹುದು ಎಂದು ಸಹ ಹೆಳಿಕೊಂಡಿದ್ದ. ಈ ಹಿಂದೆ ಕೊಲೆಯಾಗಿದ್ದ ವಿನೋದ್ ಮಾಜಿ ಕಾರ್ಪೊರೇಟರ್ ಓರ್ವರ ಅಣ್ಣನ ಮಗನಾಗಿದ್ದ. ಇವೆಲ್ಲವನ್ನೂ ನೋಡುತ್ತಿದ್ದರೆ. ರೌಡಿಶೀಟರ್ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇನ್ನು ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಶುರು ಮಾಡಿದ್ದಾರೆ. ಆ ಬಳಿಕವೇ ಸಾವಿಗೆ ನಿಜವಾದ ಕಾರಣ ತಿಳಿದು ಬರಬೇಕಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ