Karnataka Breaking Kannada News Highlights: ಬೆಂಗಳೂರಿನಲ್ಲಿ ಮತ್ತೆ ಮಳೆ, ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿದ್ದರಿಂದ ಟ್ರಾಫಿಕ್‌ಜಾಮ್‌

ಆಯೇಷಾ ಬಾನು
| Updated By: ಗಂಗಾಧರ​ ಬ. ಸಾಬೋಜಿ

Updated on:May 23, 2023 | 11:01 PM

ವಿಧಾನಸಭಾ ಅಧಿವೇಶನ 2023 ಲೈವ್: ಬೆಂಗಳೂರಿನ ಮಳೆ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ಪಡೆಯಿರಿ.

Karnataka Breaking Kannada News Highlights: ಬೆಂಗಳೂರಿನಲ್ಲಿ ಮತ್ತೆ ಮಳೆ, ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿದ್ದರಿಂದ ಟ್ರಾಫಿಕ್‌ಜಾಮ್‌
ಮಳೆ

16ನೇ ಸಾಲಿನ ಕರ್ನಾಟಕ ವಿಧಾನಸಭೆ ಅಧಿವೇಶನ(karnataka assembly session) ಶುರುವಾಗಿದ್ದು ಇಂದು ಎರಡನೇ ದಿನದ ಅಧಿವೇಶನ ನಡೆಯಲಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ(Siddaramaiah), ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಸೇರಿದಂತೆ 181 ವಿಧಾನಸಭಾ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದರು. ಇಂದು ಉಳಿದ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರ ನಡುವೆ ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ (Speaker Karnataka assembly) ಆಗಿ ಮಾಜಿ ಸಚಿವ ಯುಟಿ ಖಾದರ್(UT Khader) ಅವರನ್ನು ನೇಮಿಸಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗುತ್ತಿದ್ದು ಪರ-ವಿರೋಧ ವ್ಯಕ್ತವಾಗಿದೆ. ನಾಳೆ ಅಧಿವೇಶನ ಕೊನೆಗೊಳ್ಳಲಿದ್ದು ರಾಜ್ಯ ಕಾಂಗ್ರೆಸ್​ನಲ್ಲಿ ಸಂಪುಟ ವಿಸ್ತರಣೆಗೆ ಮತ್ತೊಂದು ಸುತ್ತಿನ ಕಸರತ್ತು ಶುರುವಾಗಲಿದೆ. ರಾಜಕೀಯ ಬೆಳವಣಿಗೆ ಒಂದು ಕಡೆಯಾದ್ರೆ ಮತ್ತೊಂದೆಡೆ ಬೆಂಗಳೂರಿನಲ್ಲಿ ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆ ಭಾರೀ ಅವಾಂತರಗಳನ್ನು ಸೃಷ್ಟಿಸಿದೆ(Bengaluru Rain). ಇಬ್ಬರು ಬಲಿಯಾಗಿದ್ದಾರೆ. ಸಿಎಂ ಸಿದ್ದರಾಮ್ಯಯ ಅಧಿಕಾರಿಗಳ ಸಭೆ ಕರೆದಿದ್ದು ಬಿಬಿಎಂಪಿ ಕ್ರಮಕ್ಕೆ ಮುಂದಾಗಿದೆ. ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.

LIVE NEWS & UPDATES

The liveblog has ended.
  • 23 May 2023 10:43 PM (IST)

    Karnataka Breaking Kannada News Live: ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿದ್ದರಿಂದ ಟ್ರಾಫಿಕ್‌ಜಾಮ್‌

    ಬೆಂಗಳೂರು ನಗರದಲ್ಲಿ ಇಂದೂ ಧಾರಾಕಾರ ಮಳೆ ಹಿನ್ನೆಲೆ ಆನಂದರಾವ್ ಸರ್ಕಲ್‌ ಅಂಡರ್‌ಪಾಸ್‌ನಲ್ಲಿ ನೀರು ನಿಂತ್ತಿವೆ. ಹಾಗಾಗಿ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿದ್ದರಿಂದ ಟ್ರಾಫಿಕ್‌ಜಾಮ್‌ ಉಂಟಾಗಿದ್ದು, ವಾಹನ ಸವಾರರು ತೀವ್ರ ಪರದಾಡಿದ್ದಾರೆ.

  • 23 May 2023 10:07 PM (IST)

    Karnataka Breaking Kannada News Live: ಅಂಡರ್ ಪಾಸ್ ಮೂಲಕ ಯಾರೂ ಹೋಗ್ಬೇಡಿ

    ಬೆಂಗಳೂರಿನಲ್ಲಿ ಮತ್ತೆ ಮಳೆ ಹಿನ್ನೆಲೆ ನಗರದ ಅಂಡರ್ ಪಾಸ್​ಗಳಲ್ಲಿ ಮಳೆ ನೀರು ತುಂಬಿದೆ. ಶಿವಾನಂದ ಸರ್ಕಲ್ ಬಳಿಯ ರೈಲ್ವೇ ಅಂಡರ್ ಪಾಸ್​ನಲ್ಲಿ ಮಳೆ ನೀರು ಆವರಿಸಿದ್ದು, ಅಂಡರ್ ಪಾಸ್ ಬಳಿ ನಿಂತು ವಾಹನಗಳನ್ನ ಬೇರೆ ಕಡೆ ಹೋಗಲು ಸೂಚನೆ ನೀಡುವ ಮೂಲಕ ಯುವಕ ಮಳೆಯಲ್ಲಿ ನಿಂತು ಮಾನವೀಯತೆ ತೋರಿದ್ದಾನೆ. ಪ್ರತಿ ವಾಹನಗಳನ್ನೂ ಬೇರೆ ದಾರಿಗೆ ಹೋಗಿ ಎಂದು ಯುವಕ ಹೇಳುತ್ತಿದ್ದಾನೆ. ಅಂಡರ್ ಪಾಸ್ ಮೂಲಕ ಯಾರೂ ಹೋಗ್ಬೇಡಿ ಎಂದು ಮನವಿ ಮಾಡಿದ್ದಾನೆ.

  • 23 May 2023 09:18 PM (IST)

    Karnataka Breaking Kannada News Live: ಹುಬ್ಬಳ್ಳಿಯಲ್ಲಿ ಆಲಿಕಲ್ಲು ಮಳೆ

    ಹುಬ್ಬಳ್ಳಿ: ಕಳೆದ ಅರ್ಧ ಗಂಟೆಯಿಂದಲೂ ನಗರದಲ್ಲಿ ಆಲಿಕಲ್ಲು ಮಳೆ ಸುರಿಯುತ್ತಿದೆ. ಮಳೆರಾಯನ‌ ಆರ್ಭಟಕ್ಕೆ ಅಲ್ಲಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು, ಆಲಿಕಲ್ಲು ಮಿಶ್ರಿತ ಮಳೆಯಿಂದ ಜನರು ಪರದಾಡಿದ್ದಾರೆ

  • 23 May 2023 09:06 PM (IST)

    Karnataka Breaking Kannada News Live: ಬೆಂಗಳೂರಿಲ್ಲಿ ಮತ್ತೆ ಮಳೆ ಆರಂಭ

    ಬೆಂಗಳೂರು: ಮಹಾನಗರದ ಹಲವೆಡೆ ಮತ್ತೆ ಮಳೆ ಆರಂಭವಾಗಿದ್ದು, ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಶಾಂತಿನಗರ, ಜಯನಗರ, ವಿಜಯನಗರ, ಬನಶಂಕರಿ, ಹೆಬ್ಬಾಳ, ರಾಜಾಜಿನಗರ, ಮತ್ತಿಕೆರೆ, ಚಂದ್ರಾ ಲೇಔಟ್, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್​, ಜಾಲಹಳ್ಳಿ, ಯಶವಂತಪುರ ಸೇರಿದಂತೆ ಹಲವೆಡೆ ವರ್ಷಧಾರೆ ಉಂಟಾಗಿದೆ.

  • 23 May 2023 08:08 PM (IST)

    Karnataka Breaking Kannada News Live: ಗಾಳಿ ಸಹಿತ ಭಾರಿ ಮಳೆ, ಸಿಡಿಲು ಬಡಿದು ಕುರಿಗಾಹಿ ಸಾವು

    ಹಾವೇರಿ: ಜಿಲ್ಲೆಯ ಹಲವೆಡೆ ಗುಡುಗು, ಗಾಳಿ ಸಹಿತ ಭಾರಿ ಮಳೆ ಹಿನ್ನೆಲೆ ಸಿಡಿಲು ಬಡಿದು ಕುರಿಗಾಹಿ ನಾಗರಾಜ ಮುತ್ನಾಳ(22) ಸಾವನ್ನಪ್ಪಿರುವಂತಹ ಘಟನೆ ಹಾನಗಲ್​ ತಾಲೂಕಿನ ಮಹಾರಾಜಪೇಟೆ ಗ್ರಾಮದ ಬಳಿ ನಡೆದಿದೆ. ಹೊಲದಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಸಾವಪ್ಪಿದ್ದು, ಸಿಡಿಲು ಬಡಿದು ಸುರೇಶ್ ಮುತ್ನಾಳ(25) ಸ್ಥಿತಿ ಗಂಭೀರವಾಗಿದೆ.

  • 23 May 2023 08:00 PM (IST)

    Karnataka Breaking Kannada News Live: ಹಾವೇರಿ ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಕಂಗಾಲಾದ ಜನ

    ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಹಲವು ಗ್ರಾಮಗಳಲ್ಲಿ ಗಾಳಿ ಸಹಿತ ಮಳೆಯಾಗಿದ್ದು, ಮಳೆಯ ಆರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ. ಗಾಳಿ, ಮಳೆ ಆರ್ಭಟಕ್ಕೆ ತೆಂಗಿನ ಮರಗಳು ಉರುಳಿ ಬೀಳುತ್ತಿವೆ. ಮನೆಗಳ ಮೇಲೆ ಮರ ಬೀಳುವುದನ್ನು ಕಂಡು ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಹಲವು ಮನೆಗಳ ಮೇಲ್ಚಾವಣಿ ಹಾರಿಹೋಗಿ ಬೀದಿಗೆ ಬಿದಿವೆ.

  • 23 May 2023 07:18 PM (IST)

    Karnataka Breaking Kannada News Live: ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದಿಷ್ಟು

    ಬೆಂಗಳೂರು: ಬಿಜೆಪಿ ಆಡಳಿತದಲ್ಲಿ ಆಗಿರುವ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ ಕ್ಯಾಬಿನೆಟ್​ನಲ್ಲಿ ತೀರ್ಮಾನ ಮಾಡ್ತೇವೆ ಎಂದಿದ್ದಾರೆ. ಆಡಳಿತದಲ್ಲಿ ಸುಧಾರಣೆ, ಪಾರದರ್ಶಕ ಆಡಳಿತ ನೀಡಲು ಅಧಿಕಾರಿಗಳ ಸಹಕಾರ ಕೋರಿದ್ದೇವೆ. ಉತ್ತಮ ಆಡಳಿತ ನೀಡಲು ತ್ವರಿತವಾಗಿ ಕಡತ ವಿಲೇವಾರಿ ಮಾಡಿ. ಟೈಂ ಬಾಂಡ್‌ನೊಳಗೆ ಕಡತ ವಿಲೇವಾರಿ ಮಾಡಿ. ಜನರಿಗೆ ಸರ್ಕಾರಿ ಯೋಜನೆಗಳನ್ನ ತಲುಪಿಸಲು ಕ್ರಮವಹಿಸಿ. ಸರ್ಕಾರದ ಯೋಜನೆಗಳನ್ನ ನಿಗಧಿತ ಕಾಲಾವಧಿಯೊಳಗೆ ಅನುಷ್ಠಾನಗೊಳಿಸಿ.

  • 23 May 2023 06:39 PM (IST)

    Karnataka Breaking Kannada News Live: ಮುಂಜಾಗ್ರತಾ ಕ್ರಮವಾಗಿ ಅಂಡರ್​ಪಾಸ್​ನಲ್ಲಿ ಸಂಚಾರ ಬಂದ್

    ಬೆಂಗಳೂರಿನಲ್ಲಿ ಮಳೆಯಾದಾಗ ಮುಂಜಾಗ್ರತಾ ಕ್ರಮವಾಗಿ ಅಂಡರ್​ಪಾಸ್​ ಬಂದ್ ಮಾಡಿ. ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ. ವೈಜ್ಞಾನಿಕವಾಗಿ ಅಂಡರ್​ಪಾಸ್​ ಸರಿಮಾಡಲು ಸೂಚನೆ ನೀಡಿದ್ದೇವೆ ಎಂದು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

  • 23 May 2023 06:32 PM (IST)

    Karnataka Breaking Kannada News Live: ಜನಸ್ನೇಹಿ ಆಡಳಿತ ನೀಡುವಂತೆ ಪೊಲೀಸರಿಗೆ ಸೂಚನೆ

    ಬೆಂಗಳೂರು: ಜನಸ್ನೇಹಿ ಆಡಳಿತ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದೇವೆ ಎಂದು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಹೇಳಿದರು. ದೂರು ನೀಡಲು ಬರುವವರ ಜತೆ ಸ್ನೇಹದಿಂದ ವರ್ತಿಸಬೇಕು. ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆದರೆ ಸಂಬಂಧಪಟ್ಟ ಡಿಸಿಪಿ, ಎಸ್​ಪಿ ಹೊಣೆಗಾರರು ಎಂದು ಎಚ್ಚರಿಕೆ ನೀಡಿದ್ದಾರೆ. ಕಾನೂನು ಕ್ರಮಕೈಗೊಳ್ಳುವಾಗ ಆ ಧರ್ಮ ಈ ಧರ್ಮ ಎನ್ನಬಾರದು. ಸರ್ವರನ್ನು ಸಮಾನರಾಗಿ ಕಾಣುವಂತೆ ಪೊಲೀಸರಿಗೆ ಸೂಚಿಸಿದ್ದೇವೆ. ರಾಜ್ಯದಲ್ಲಿ ಇನ್ಮುಂದೆ ನೈತಿಕ ಪೊಲೀಸ್​ಗಿರಿಗೆ ಅವಕಾಶವಿಲ್ಲ. ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕಟ್ಟುನಿಟ್ಟಾಗಿ ಸೂಚಿಸಿದ್ದೇವೆ ಎಂದರು.

  • 23 May 2023 05:50 PM (IST)

    Karnataka Breaking Kannada News Live: ಮನೆ ಹಾನಿ ಬಗ್ಗೆ ಪರಿಶೀಲಿಸಿ ಪರಿಹಾರ ನೀಡುವಂತೆ ಸೂಚನೆ

    ಬೆಂಗಳೂರು: ಏಪ್ರಿಲ್, ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತೆ. ಈ ಬಾರಿ ವಾಡಿಕೆಗಿಂತ ಶೇಕಡಾ 10ರಷ್ಟು ಹೆಚ್ಚು ಮಳೆಯಾಗಿದೆ. ಮುಂಗಾರು ಪೂರ್ವ ಮಳೆಯಿಂದ 52 ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. 332 ಜಾನುವಾರು ಮೃತಪಟ್ಟಿವೆ, 814 ಮನೆಗಳಿಗೆ ಹಾನಿಯಾಗಿದೆ. ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು.

  • 23 May 2023 05:13 PM (IST)

    Karnataka Breaking Kannada News Live: ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್​ ಎಚ್ಚರಿಕೆ

    ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ಕೆಲಸ ವೈಖರಿ ಸರಿ ಇರಲಿಲ್ಲ. ರಾಜ್ಯದಲ್ಲಿ ಮಳೆ, ಪ್ರವಾಹದಿಂದ ಸಾಕಷ್ಟು ಬೆಳೆ ಹಾನಿಯಾಗಿದೆ. ಹಲವರು ಪ್ರಾಣ ಕಳೆದುಕೊಂಡರು, ಮನೆ ಇಲ್ಲದೇ ನಿರ್ಗತಿಕರಾದರು. ಸಾಕಷ್ಟು ಜನರು ಅನಾಹುತ ಸಂದರ್ಭದಲ್ಲಿ ಸರಿಯಾಗಿ ಸ್ಪಂದಿಸಲಿಲ್ಲ. ಸರ್ಕಾರಕ್ಕೆ ಉತ್ತಮ ಹೆಸರು ತರುವುದು, ಬಿಡುವುದು ನಿಮ್ಮ ಕೈಯಲ್ಲಿದೆ. ನೀವು ಸರಿಯಾಗಿ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೇ ಹೆಸರು ಬರುತ್ತೆ. ನಮ್ಮ ಸರ್ಕಾರ ನಿಮ್ಮಿಂದ ಉತ್ತಮ ಕೆಲಸ ಬಯಸುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಹೇಳಿದರು.

  • 23 May 2023 04:38 PM (IST)

    Karnataka Breaking Kannada News Live: ಕಾನೂನು ಸುವ್ಯವಸ್ಥೆ ಸರಿಯಾಗಿರುವಂತೆ ಸೂಚನೆ

    ಬೆಂಗಳೂರು: ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಇರಬೇಕು ಎಂದು ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಸಿಎಂ ಸಿದ್ಧರಾಮಯ್ಯ ,ಮತ್ತು ಡಿಸಿಎಂ ಡಿ.ಕೆ ಶವಕುಮಾರ್​ ಖಡಕ್ ಸೂಚನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಪೊಲೀಸ್​ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಸೂಚನೆ ನೀಡಿದ್ದು, ಕಾನೂ‌ನು ಎಲ್ಲರಿಗೂ ಒಂದೇ, ಕಾನೂನನ್ನು ಪಾಲನೆ ಮಾಡಬೇಕು. ಎಷ್ಟೇ ದೊಡ್ಡವರಾದರೂ ಕಾನೂನು ಎಲ್ಲರಿಗೂ ಒಂದೇ ಇರಬೇಕು. ರೌಡಿಸಂ ಚಟುವಟಿಕೆ ಮೇಲೆ ಹೆಚ್ಚು ನಿಗಾ ಇಡಬೇಕು ಎಂದಿದ್ದಾರೆ.

  • 23 May 2023 04:02 PM (IST)

    Karnataka Breaking Kannada News Live: ಮಳೆಗೆ ಮನೆ ಗೋಡೆ ಕುಸಿದುಬಿದ್ದು ವ್ಯಕ್ತಿ ಸಾವು

    ಬಳ್ಳಾರಿ: ಮಳೆಗೆ ಮನೆ ಗೋಡೆ ಕುಸಿದುಬಿದ್ದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಸಿರಗುಪ್ಪ ತಾಲೂಕಿನ ನಾಡಂಗ ಗ್ರಾಮದಲ್ಲಿ ನಡೆದಿದೆ. ಗಾದಿಲಿಂಗಪ್ಪ (26) ಮೃತ ವ್ಯಕ್ತಿ. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆ ಮುಂಭಾಗದಲ್ಲಿ ಮಲಗಿದ ವೇಳೆ ಗೋಡೆ ಕುಸಿದು ಬಿದ್ದು ಅನಾಹುತ ಸಂಭವಿಸಿದೆ.

  • 23 May 2023 03:23 PM (IST)

    Karnataka Breaking Kannada News Live: ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಭಾರಿ ಗಾಳಿ ಮಳೆ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಗಾಳಿ ಮಳೆ ಹಿನ್ನೆಲೆ ರಾಜ್ಯ ಹೆದ್ದಾರಿಯಲ್ಲಿ ಕಾರಿನ ಮೇಲೆ ಬೃಹತ್ ಗಾತ್ರದ ಮರ ಬಿದಿರುವಂತಹ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಕುಂಚೆಬೈಲು ಗ್ರಾಮದ ಬಳಿ ನಡೆದಿದೆ. ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿದೆ. ಓಮ್ನಿ ಕಾರು ಸಂಪೂರ್ಣ ಜಖಂ ಆಗಿದ್ದು, ಅದೃಷ್ಟವಶಾತ್​ ಬಾರಿ ಅನಾಹುತ ತಪ್ಪಿದೆ.

  • 23 May 2023 03:02 PM (IST)

    Karnataka Breaking Kannada News Live: ಗುಟ್ಟು ಹೆಚ್ಚು ದಿನ ಮುಚ್ಚಿಡಲು ಆಗಲ್ಲ

    ಬೆಂಗಳೂರು: ನಮ್ಮ ನಾಯಕರು ಯಾರು ಅಂತಾ ಕಾಂಗ್ರೆಸ್ಸಿಗರಿಗೆ ಗೊಂದಲವಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ ವ್ಯಂಗ್ಯವಾಡಿದ್ದಾರೆ. ಒಬ್ಬರಾ, ಇಬ್ಬರಾ, ಮೂವರು ನಾಯಕರು ಅಂತಾ ಗೊಂದಲ ಇದೆ. ಗುಟ್ಟು ಹೆಚ್ಚು ದಿನ ಮುಚ್ಚಿಡಲು ಆಗಲ್ಲ, ಆದಷ್ಟು ಬೇಗ ಹೊರಬರುತ್ತೆ ಎಂದು ಹೇಳಿದರು.

  • 23 May 2023 02:01 PM (IST)

    Karnataka Breaking Kannada News Live: ನಮ್ಮ ನಾಯಕರು ಯಾರು ಅಂತಾ ಕಾಂಗ್ರೆಸ್ಸಿಗರಿಗೆ ಗೊಂದಲವಿದೆ -ಅಶ್ವತ್ಥ್ ನಾರಾಯಣ ವ್ಯಂಗ್ಯ

    ಕಾಂಗ್ರೆಸ್​ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ನಮ್ಮ ನಾಯಕರು ಯಾರು ಅಂತಾ ಕಾಂಗ್ರೆಸ್ಸಿಗರಿಗೆ ಗೊಂದಲವಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ ವ್ಯಂಗ್ಯವಾಡಿದ್ದಾರೆ. ಒಬ್ಬರಾ, ಇಬ್ಬರಾ, ಮೂವರು ನಾಯಕರು ಅಂತಾ ಗೊಂದಲ ಇದೆ. ಗುಟ್ಟು ಹೆಚ್ಚು ದಿನ ಮುಚ್ಚಿಡಲು ಆಗಲ್ಲ, ಆದಷ್ಟು ಬೇಗ ಹೊರಬರುತ್ತೆ ಎಂದರು.

  • 23 May 2023 01:57 PM (IST)

    Karnataka Breaking Kannada News Live: ಅನಗತ್ಯ ಹೇಳಿಕೆ ನೀಡದಿರಲು ರಣದೀಪ್ ಸಿಂಗ್ ಸುರ್ಜೇವಾಲ ಸೂಚನೆ

    5 ವರ್ಷ ಸಿದ್ದರಾಮಯ್ಯ ಸಿಎಂ ಎಂದು ಎಂ.ಬಿ.ಪಾಟೀಲ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಯಾರೂ ಅನಗತ್ಯ ಹೇಳಿಕೆ ನೀಡಬಾರದು ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೂಚನೆ ನೀಡಿದ್ದಾರೆ. ಸಿದ್ದರಾಮಯ್ಯ, ಡಿಕೆ ಬಣದ ಸಚಿವರು, ಶಾಸಕರಿಗೆ ಸುರ್ಜೇವಾಲ ಸೂಚನೆ ನೀಡಿದ್ದಾರೆ. ಸಿಎಂ, ಡಿಸಿಎಂ ಬಗ್ಗೆ 4 ಗೋಡೆಯ ಮಧ್ಯೆ ಮಾತುಕತೆ ನಡೆದಿರುವುದು ಯಾರೂ ಕೂಡ ಗೊಂದಲ ಮೂಡಿಸುವ ಹೇಳಿಕೆಯನ್ನು ನೀಡಬೇಡಿ. ಯಾವುದೇ ತೀರ್ಮಾನಗಳಿದ್ದರೂ ಎಐಸಿಸಿ ನಾಯಕರೇ ನಿರ್ಧರಿಸುತ್ತಾರೆ ಎಂದಿದ್ದಾರೆ.

  • 23 May 2023 01:17 PM (IST)

    Karnataka Breaking Kannada News Live: ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಸಿಎಂ, ಡಿಸಿಎಂ ಸಭೆ

    ಬೆಂಗಳೂರಿನ ವಸಂತನಗರದ ಹಣಕಾಸು ನಿಗಮದ ಕಚೇರಿಯಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದ್ದಾರೆ. ರಾಜ್ಯದ ಹಣಕಾಸು ಸ್ಥಿತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಕಾಂಗ್ರೆಸ್​ನ 5 ಗ್ಯಾರಂಟಿ ಅನುಷ್ಠಾನಕ್ಕೆ ತರಬೇಕಾಗಿರುವ ಹಿನ್ನೆಲೆ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಚರ್ಚೆ ನಡೆಸುತ್ತಿದ್ದಾರೆ.

  • 23 May 2023 01:15 PM (IST)

    Karnataka Breaking Kannada News Live: ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಸಾಲು ಮರದ ತಿಮ್ಮಕ್ಕ

    ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯರನ್ನ ಸಾಲು ಮರದ ತಿಮ್ಮಕ್ಕ ಭೇಟಿ ಮಾಡಿದ್ದಾರೆ. ಹಾಗೂ ಸಿಎಂ ಆಗಿದ್ದಕ್ಕೆ ಶುಭ ಕೋರಿದ್ದಾರೆ.

  • 23 May 2023 01:13 PM (IST)

    Karnataka Breaking Kannada News Live: ಜನ ಮತ ಹಾಕಿ ಕೆಟ್ಟೆವು, ಮೋಸ ಹೋದೆವು ಎಂದು ಮಾತನಾಡ್ತಾರೆ -ಸಿ.ಟಿ.ರವಿ

    ಬಿಜೆಪಿ ಸರ್ಕಾರ ಅವಧಿಯ ಹಗರಣ ಬಗ್ಗೆ ತನಿಖೆ ನಡೆಸುವ ವಿಚಾರಕ್ಕೆ ಸಂಬಂಧಿಸಿ ಸರ್ಕಾರಕ್ಕೆ ತನಿಖೆ ನಡೆಸುವ ಪರಮಾಧಿಕಾರ ಇದೆ ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. ಅಭಿವೃದ್ಧಿ ಯೋಜನೆಯಲ್ಲಿ ಅವ್ಯವಹಾರವಾಗಿದ್ದರೆ ತನಿಖೆ ಮಾಡಿಸಲಿ. ಅಭಿವೃದ್ಧಿ ಕಾರ್ಯಕ್ಕೆ ಕಾಂಗ್ರೆಸ್ ಸರ್ಕಾರ ಅನುದಾನ ತಡೆಹಿಡಿದಿದೆ. ಅಭಿವೃದ್ಧಿ ಯೋಜನೆಗಳಿಗೆ ತಡೆ ಹಿಡಿದಿರುವುದು ಸರಿಯಲ್ಲ. ಬಿಜೆಪಿ ಸರ್ಕಾರದ ಯೋಜನೆಗಳಿಗೆ ತಡೆ ಹಿಡಿದಿರುವುದು ಸರಿಯಲ್ಲ. ಜನ ಮತ ಹಾಕಿ ಕೆಟ್ಟೆವು, ಮೋಸ ಹೋದೆವು ಎಂದು ಮಾತನಾಡ್ತಾರೆ. ಆದಷ್ಟು ಬೇಗ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಲಾಗುತ್ತದೆ. ಶಾಸಕಾಂಗ ಸಭೆಯಲ್ಲಿ ವಿಪಕ್ಷ ನಾಯಕರ ಬಗ್ಗೆ ನಿರ್ಧಾರ ಆಗಲಿದೆ ಎಂದರು.

  • 23 May 2023 01:10 PM (IST)

    Karnataka Breaking Kannada News Live: ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್​ಗೆ 4 ಕೊಠಡಿ ಹಂಚಿಕೆ

    ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​ಗೆ 4 ಕೊಠಡಿ ಹಂಚಿಕೆ ಮಾಡಲಾಗಿದೆ. ವಿಧಾನಸೌಧದಲ್ಲಿ ಕೊಠಡಿ ಸಂಖ್ಯೆ 335, 336, 337, 337ಎ ಹಂಚಲಾಗಿದೆ. ಸಚಿವ ಡಾ.ಜಿ.ಪರಮೇಶ್ವರ್​ಗೆ ಕೊಠಡಿ ಸಂಖ್ಯೆ 327, 327ಎ ನೀಡಲಾಗಿದ್ದು ಸಚಿವ ರಾಮಲಿಂಗಾರೆಡ್ಡಿಗೆ ಕೊಠಡಿ ಸಂಖ್ಯೆ 329, 329ಎ ನೀಡಲಾಗಿದೆ.

  • 23 May 2023 01:00 PM (IST)

    Karnataka Breaking Kannada News Live: ಎಂ.ಬಿ.ಪಾಟೀಲ್​ಗೆ ನೇರವಾಗಿ ಎಚ್ಚರಿಕೆ ನೀಡಿದ ಡಿ.ಕೆ.ಸುರೇಶ್​

    ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರುತ್ತಾರೆಂದು ಹೇಳಿಕೆ ನೀಡಿದ ಸಚಿವ ಎಂ.ಬಿ.ಪಾಟೀಲ್​ಗೆ ಡಿ.ಕೆ.ಸುರೇಶ್​ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಸಚಿವ ಎಂ.ಬಿ.ಪಾಟೀಲ್​ಗೆ ಹೇಳಿ, ಇದೆಲ್ಲ ಬೇಡ ಅಂತಾ’ ಎಂ.ಬಿ.ಪಾಟೀಲ್​ಗೆ ಹೇಳಿಕೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬಳಿ ಮಾತನಾಡಿ. ಎಂ.ಬಿ.ಪಾಟೀಲ್​ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರ ನೀಡಲು ಬರುತ್ತೆ. ಆದರೆ ಈಗಲೇ ಅದೆಲ್ಲ ಬೇಡ ಎಂದರು.

  • 23 May 2023 12:56 PM (IST)

    Karnataka Breaking Kannada News Live: ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿದೆ, ಅವರ ಹೇಳಿಕೆಯಿಂದ ಗೊತ್ತಾಗುತ್ತೆ -ಆರಗ ಜ್ಞಾನೇಂದ್ರ

    ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರುತ್ತಾರೆಂದು ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪಕ್ಷದಲ್ಲಿ ಗೊಂದಲವಿದೆ, ಇದು ಅವರ ಹೇಳಿಕೆಯಿಂದ ಗೊತ್ತಾಗುತ್ತೆ. ಮುಖ್ಯಮಂತ್ರಿ ವಿಚಾರದಲ್ಲಿ ಸಾಕಷ್ಟು ಗೊಂದಲ ಇದೆ. ಪೂರ್ಣಪ್ರಮಾಣದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಿಲ್ಲ ಎಂದರು.

  • 23 May 2023 12:28 PM (IST)

    Karnataka Breaking Kannada News Live: ನಾನು ವರಿಷ್ಠರ ತೀರ್ಮಾನದ ಬಗ್ಗೆ ಮಾತನಾಡುವಷ್ಟು ಸ್ಟ್ರಾಂಗ್ ಅಲ್ಲ-ಶಾಸಕ ಶಿವಲಿಂಗೇಗೌಡ

    ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುವಷ್ಟು ನಾನು ಸ್ಟ್ರಾಂಗ್ ಅಲ್ಲ ಎಂದು ಬೆಂಗಳೂರಿನಲ್ಲಿ ಅರಸೀಕೆರೆ ‘ಕೈ’ ಶಾಸಕ ಶಿವಲಿಂಗೇಗೌಡ ಹೇಳಿದರು. ನಾನು ವರಿಷ್ಠರ ತೀರ್ಮಾನದ ಬಗ್ಗೆ ಮಾತನಾಡುವಷ್ಟು ಸ್ಟ್ರಾಂಗ್ ಅಲ್ಲ. ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದಿರುವುದು ಒಂದೇ ಒಂದು ಸ್ಥಾನ. ಮುಂದಿನ ಚುನಾವಣೆ ದೃಷ್ಟಿಯಿಂದ ಸಚಿವಸ್ಥಾನ ನೀಡ್ತಾರೆ ಅನ್ನಿಸುತ್ತೆ. ಎಲ್ಲವೂ ಹೈಕಮಾಂಡ್ ಹಾಗೂ ಸಿಎಂ, ಡಿಸಿಎಂ ಗಮನದಲ್ಲಿದೆ ಎಂದರು.

  • 23 May 2023 12:26 PM (IST)

    Karnataka Breaking Kannada News Live: ಸಚಿವ ಸ್ಥಾನದ ಬಗ್ಗೆ ಮಧು ಬಂಗಾರಪ್ಪ ಮಾತು

    ಸಚಿವ ಸ್ಥಾನ ನೀಡೋದು ಅದೆಲ್ಲ ವರಿಷ್ಠರಿಗೆ ಬಿಟ್ಟ ವಿಚಾರ. ಸಚಿವ ಸ್ಥಾನ ನಾನು ಕೇಳಿಯೂ ಇಲ್ಲ, ಅವರು ಹೇಳಲೂ ಇಲ್ಲ. ನಾನು ಪ್ರಣಾಳಿಕೆ ಸಮಿತಿಯಲ್ಲಿ ಉಪಾಧ್ಯಕ್ಷನಾಗಿದ್ದೆ, ನಾವು ಕೊಟ್ಟ ಗ್ಯಾರಂಟಿಯನ್ನ ಈಡೇರಿಸುವುದು ಈಗ ನಮ್ಮ ಕರ್ತವ್ಯ ಅದನ್ನ ಮಾಡುವ ನಿಟ್ಟಿನಲ್ಲಿ ನಾವು ಮುಂದುವರೆಯುತ್ತೇವೆ ಎಂದು ವಿಧಾನಸೌಧದಲ್ಲಿ ಶಾಸಕ ಮಧು ಬಂಗಾರಪ್ಪ ತಿಳಿಸಿದರು.

  • 23 May 2023 12:06 PM (IST)

    Karnataka Breaking Kannada News Live: ಸಚಿವ ಸ್ಥಾನ ಎಲ್ಲರಿಗೂ ಸಿಗುತ್ತದೆ, ಸ್ಪೀಕರ್ ಎಲ್ಲರಿಗೂ ಸಿಗುವುದಿಲ್ಲ -ಯುಟಿ ಖಾದರ್

    ಸಚಿವ ಸ್ಥಾನ ಎಲ್ಲರಿಗೂ ಸಿಗುತ್ತದೆ, ಆದ್ರೆ ಸ್ಪೀಕರ್ ಎಲ್ಲರಿಗೂ ಸಿಗುವುದಿಲ್ಲ ಎಂದು ಸ್ಪೀಕರ್​ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಯು.ಟಿ.ಖಾದರ್ ಹೇಳಿಕೆ ನೀಡಿದರು. ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ, ಈಗ ಸ್ಪೀಕರ್ ಆಗಲು ಸೂಚನೆ ನೀಡಿದ್ದಾರೆ. ಹೈಕಮಾಂಡ್ ನಾಯಕರು ಸ್ಪೀಕರ್ ಆಗಲು ಹೇಳಿದ್ದಕ್ಕೆ ಒಪ್ಪಿದ್ದೇನೆ. ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಚರ್ಚೆ ಮಾಡಿದ್ದಾರೆ. ಪಾರದರ್ಶಕವಾಗಿ ನಾನು ಕಲಾಪವನ್ನು ನಡೆಸಿಕೊಂಡು ಹೋಗುತ್ತೇನೆ ಎಂದರು.

  • 23 May 2023 12:02 PM (IST)

    Karnataka Breaking Kannada News Live: ಡಿಕೆ ಶಿವಕುಮಾರ್​ಗೆ ಸಿಎಂ ಸ್ಥಾನ ನೀಡಿ ಎಂದು ಡಿಮ್ಯಾಂಡ್ ಮಾಡಿದ ಶಾಸಕ ರಂಗನಾಥ್

    ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೋಡೆತ್ತುಗಳಂತೆ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಕಾಂಗ್ರೆಸ್ ಇಷ್ಟು ಬಹುಮತ ಬರಲು ಡಿಕೆ ಶಿವಕುಮಾರ್ ಅವರ ಪಾತ್ರ ಕೂಡ ದೊಡ್ಡದಿದೆ. ಹೀಗಾಗಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಅವಕಾಶವನ್ನ ಕೊಡಿ ಎಂದು ಹಿಂದೆಯೂ ಹೇಳಿದ್ದೆ ಈಗಲೂ ಹೇಳುತ್ತಿದ್ದೇನೆ. ಕಾಂಗ್ರೆಸ್ ಒಂದು ಸಮುದ್ರ ಇದ್ದಂತೆ. ಡಿಕೆ ಶಿವಕುಮಾರ್​ಗೆ ಹೈಕಮಾಂಡ್ ಸಿಎಂ ಆಗಲು ಅವಕಾಶ ಮಾಡಿಕೊಡುತ್ತದೆ ಅನ್ನೋ ವಿಶ್ವಾಸ ಇದೆ ಎಂದು ಶಾಸಕ ರಂಗನಾಥ್ ಡಿಕೆ ಶಿವಕುಮಾರ್​ಗೆ ಸಿಎಂ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.

  • 23 May 2023 11:58 AM (IST)

    Karnataka Breaking Kannada News Live: ಎರಡನೇ ದಿನದ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರು

    ಬೆಳಗಾವಿ ಗ್ರಾಮೀಣ ಶಾಸಕಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಮಾಣವಚನ ಹು-ಧಾ ಸೆಂಟ್ರಲ್ ಶಾಸಕರಾಗಿ ಮಹೇಶ್​ ಟೆಂಗಿನಕಾಯಿ ಪ್ರಮಾಣವಚನ ಮಹದೇವಪುರ ಕ್ಷೇತ್ರದ ಶಾಸಕಿಯಾಗಿ ಮಂಜುಳಾ ಪ್ರತಿಜ್ಞಾವಿಧಿ ಸ್ವೀಕಾರ ಅಫಜಲಪುರ ಶಾಸಕರಾಗಿ ಎಂ.ವೈ.ಪಾಟೀಲ್ ಪ್ರಮಾಣವಚನ ಸ್ವೀಕಾರ ಸಿ.ವಿ.ರಾಮನ್​ ನಗರ ಶಾಸಕರಾಗಿ ಎಸ್​.ರಘು ಪ್ರಮಾಣವಚನ ಸ್ವೀಕಾರ ಮಂಡ್ಯ ಕ್ಷೇತ್ರದ ಶಾಸಕರಾಗಿ ರವಿಕುಮಾರ್ ಗಣಿಗ ಪ್ರಮಾಣವಚನ ಶಿವಾಜಿನಗರ ಕ್ಷೇತ್ರದ ಶಾಸಕರಾಗಿ ರಿಜ್ವಾನ್ ಅರ್ಷದ್ ಪ್ರಮಾಣವಚನ ಕಲಘಟಗಿ ಕ್ಷೇತ್ರದ ಶಾಸಕರಾಗಿ ಸಂತೋಷ್​ ಲಾಡ್​ ಪ್ರಮಾಣವಚನ ಹೊನ್ನಾಳಿ ಕ್ಷೇತ್ರದ ಶಾಸಕರಾಗಿ ಶಾಂತನಗೌಡ ಪ್ರಮಾಣವಚನ ಸ್ವೀಕಾರ ನವಲಗುಂದ ಕ್ಷೇತ್ರದ ಶಾಸಕರಾಗಿ ಎನ್​.ಹೆಚ್​.ಕೋನರೆಡ್ಡಿ ಪ್ರಮಾಣವಚನ ಬಸವಕಲ್ಯಾಣ ಕ್ಷೇತ್ರದ ಶಾಸಕರಾಗಿ ಶರಣು ಸಲಗರ ಪ್ರತಿಜ್ಞಾವಿಧಿ ಸ್ವೀಕಾರ ಗುಬ್ಬಿ ಕ್ಷೇತ್ರದ ಶಾಸಕರಾಗಿ ಎಸ್​.ಆರ್.ಶ್ರೀನಿವಾಸ ಪ್ರಮಾಣವಚನ ಸ್ವೀಕಾರ ಹಿರಿಯೂರು ಕ್ಷೇತ್ರದ ಶಾಸಕರಾಗಿ ಡಿ.ಸುಧಾಕರ್ ಪ್ರಮಾಣವಚನ ಸ್ವೀಕಾರ ಕಾರ್ಕಳ ಕ್ಷೇತ್ರದ ಶಾಸಕರಾಗಿ ಸುನೀಲ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದರು.

  • 23 May 2023 11:52 AM (IST)

    Karnataka Breaking Kannada News Live: ಒಳ್ಳೆ ಸಮಯಕ್ಕಾಗಿ ಕಾದು ಕುಳಿತ ಕೋನರೆಡ್ಡಿ, ಸದನದಲ್ಲಿದ್ದರೂ ಪ್ರಮಾಣ ವಚನ ಸ್ವೀಕರಿಸಿಲ್ಲ

    ಪ್ರಮಾಣ ವಚನ ಸ್ವೀಕಾರಕ್ಕೆ ಹೆಸರು ಕರೆದಾಗ ಸದನದಲ್ಲೇ ಇದ್ದರೂ ಪ್ರಮಾಣ ವಚನ ತೆಗೆದುಕೊಳ್ಳದೆ ನವಲಗುಂದ ಶಾಸಕ ಎನ್.ಹೆಚ್. ಕೋನರೆಡ್ಡಿ ವಿಳಂಬ ಮಾಡಿದ್ದಾರೆ. ಹೆಸರು ಕೂಗಿದಾಗ ಎದ್ದು ನಿಂತ ಕೋನರೆಡ್ಡಿ ಹತ್ತು ನಿಮಿಷ ಆದ ಮೇಲೆ ಪ್ರಮಾಣವಚನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಏನೂ ಟೈಮ್ ನೋಡ್ತಿದಿಯಾ? ಎಲ್ರೂ ತಕತವರೆ, ಒಳ್ಳೆ ಟೈಮಿದೆ ತಕೋ ಎಂದ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ನಿನ್ನೆಯಿಂದ ಸದನದಲ್ಲಿ ಇದ್ದರೂ ಇನ್ನೂ ಕೋನರೆಡ್ಡಿ ಪ್ರಮಾಣ ವಚನ ಸ್ವೀಕರಿಸಿಲ್ಲ.

  • 23 May 2023 11:48 AM (IST)

    Karnataka Breaking Kannada News Live: ವಿಜಯಪುರದಲ್ಲಿ ಹೆಚ್ಚಾಗುತ್ತಿದೆ ಬಿಸಿಲು

    ವಿಜಯಪುರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಬಿಸಿಲಿನ ತಾಪಮಾನ ಹೆಚ್ಚಳ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ. ಚಿಕ್ಕಮಕ್ಕಳು, ನವಜಾತ ಶಿಶುಗಳು ವಯೋವೃದ್ದರು ಹಾಗೂ ವಿವಿಧ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಸಮಸ್ಯೆಯಾಗುತ್ತಿದೆ. ಪುಟ್ಟ ಮಕ್ಕಳಲ್ಲಿ ಜ್ವರ ಹಾಗೂ ನಿರ್ಜಲೀಕರಣದಿಂದ ಬಳಲುತ್ತಿರೋ ಸಂಖ್ಯೆ ಹೆಚ್ಚುತ್ತಿದೆ. ನವಜಾತ ಶಿಶುಗಳು ಹಾಗೂ ಮಕ್ಕಳು ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

  • 23 May 2023 11:45 AM (IST)

    Karnataka Breaking Kannada News Live: ವಿಧಾನಸೌಧದ ಒಳಕ್ಕೆ ಹೂವಿನ ಹಾರ, ಬೊಕ್ಕೆ, ಶಾಲು ಸಂಪೂರ್ಣ ನಿರ್ಬಂಧ

    ಸಿಎಂ ಸಿದ್ದರಾಮಯ್ಯ ಆದೇಶ ಹಿನ್ನೆಲೆ ವಿಧಾನಸೌಧದ ಒಳಕ್ಕೆ ಹೂವಿನ ಹಾರ, ಬೊಕ್ಕೆ, ಶಾಲು ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಹಾರ, ಶಾಲು ತಂದವರಿಗೆ ಒಳಗಡೆ ಬಿಡದೆ ಪೊಲೀಸರು ಎಚ್ಚರ ವಹಿಸುತ್ತಿದ್ದಾರೆ. ಸಚಿವರು, ಶಾಸಕರು ಯಾರೆ ಹಾರ ಶಾಲು ತಂದರು ಅವಕಾಶ ಇಲ್ಲ. ಹಾರ, ಶಾಲು ಕಾರಿನಲ್ಲಿ ಇಟ್ಟು ಒಳಗಡೆ ಬರುವಂತೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ.

  • 23 May 2023 11:42 AM (IST)

    Karnataka Breaking Kannada News Live: ಟ್ವೀಟ್​ ಮೂಲಕ ಕಾಂಗ್ರೆಸ್​ಗೆ ಟಾಂಗ್ ಕೊಟ್ಟ ರಾಜ್ಯ ಬಿಜೆಪಿ

    5 ವರ್ಷ ಸಿದ್ದರಾಮಯ್ಯ ಸಿಎಂ ಎಂದು ಎಂ.ಬಿ.ಪಾಟೀಲ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಟ್ವೀಟ್​ ಮೂಲಕ ರಾಜ್ಯ ಬಿಜೆಪಿ ಪಕ್ಷ ಕಾಂಗ್ರೆಸ್​ಗೆ ಟಾಂಗ್ ಕೊಟ್ಟಿದೆ. ಡಿ.ಕೆ.ಶಿವಕುಮಾರ್ ಸಿಎಂ ಆಗಲು ಸಿದ್ದರಾಮಯ್ಯ ಬಿಡುವುದಿಲ್ಲ. ಎಂ.ಬಿ.ಪಾಟೀಲ್ ಈ ಹೇಳಿಕೆ ಮೂಲಕ ಎಚ್ಚರಿಕೆ ರವಾನಿಸಿದ್ದಾರೆ ಅಷ್ಟೇ. ಬಹುಮತ ದೊರಕಿದ ನಂತರದ ಎಲ್ಲ ಬೆಳವಣಿಗೆ ಗಮನಿಸಿದಾಗ ಈ ಸರ್ಕಾರ ಸುಸ್ಥಿರವಾಗಿರಲಿದೆ ಎಂಬ ಯಾವ ಲಕ್ಷಣವೂ ಕಾಣುತ್ತಿಲ್ಲ. ಹೈಕಮಾಂಡ್​ಗೆ ಕಪ್ಪ ಪೂರೈಸಬೇಕಾದ ಮಾನದಂಡದಲ್ಲಿ ಈ ಸರ್ಕಾರ ರಚನೆಯಾಗಿದೆ ಎಂದು ಟ್ವೀಟ್​ ಮೂಲಕ ಬಿಜೆಪಿ, ಕಾಂಗ್ರೆಸ್​ಗೆ ಟಾಂಗ್ ಕೊಟ್ಟಿದೆ.

  • 23 May 2023 11:23 AM (IST)

    Karnataka Breaking Kannada News Live: ಪವರ್ ಶೇರಿಂಗ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

    5 ವರ್ಷ ಸಿದ್ದರಾಮಯ್ಯ ಸಿಎಂ ಎಂದು ಎಂ.ಬಿ.ಪಾಟೀಲ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ನೂತನ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಮಯದಲ್ಲಿ ಪವರ್ ಶೇರಿಂಗ್ ಚರ್ಚೆ ಅಪ್ರಸ್ತುತ. ಸಚಿವ ಎಂ.ಬಿ.ಪಾಟೀಲ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪವರ್ ಶೇರಿಂಗ್ ಬಗ್ಗೆ ಹೈಕಮಾಂಡ್, ಸಿಎಂ​ ನಿರ್ಧಾರ ಮಾಡುತ್ತಾರೆ. ಬೇರೆ ಯಾರೂ ಈ ಬಗ್ಗೆ ನಿರ್ಧಾರ ಮಾಡಲು ಆಗಲ್ಲ ಎಂದರು.

  • 23 May 2023 11:21 AM (IST)

    Karnataka Breaking Kannada News Live: ಬಿಟಿಎಂ ಲೇಔಟ್​ನಲ್ಲಿ ರಸ್ತೆ ಕುಸಿತ

    ಬಿಟಿಎಂ ಲೇಔಟ್​ನ ಜನರಲ್ಲಿ ಆತಂಕ ಶುರುವಾಗಿದೆ. ಏಕೆಂದರೆ ನಿನ್ನೆ ಸುರಿದ ಮಳೆಗೆ ಏಕಾಏಕಿ ರಸ್ತೆ ಕುಸಿದಿದೆ. ಸುಮಾರು 4-5 ಅಡಿಯಷ್ಟು ರಸ್ತೆ ಕುಸಿದಿದೆ. ರಸ್ತೆ ಮೇಲೆ ಓಡಾಡಲು ಜನ ಆತಂಕ ಪಡುವಂತಾಗಿದೆ.

  • 23 May 2023 11:16 AM (IST)

    Karnataka Breaking Kannada News Live: ಸ್ಪೀಕರ್ ಸ್ಥಾನಕ್ಕೆ ಶಾಸಕ ಯು.ಟಿ.ಖಾದರ್ ನಾಮಪತ್ರ ಸಲ್ಲಿಕೆ

    ವಿಧಾನಸಭೆ ಕಾರ್ಯದರ್ಶಿ ಕಚೇರಿಯಲ್ಲಿ ಸ್ಪೀಕರ್ ಸ್ಥಾನಕ್ಕೆ ಶಾಸಕ ಯು.ಟಿ.ಖಾದರ್ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹ್ಮದ್, ಶಾಸಕ ಅಜಯ್ ಸಿಂಗ್ ಉಪಸ್ಥಿತರಿದ್ದರು.

  • 23 May 2023 11:14 AM (IST)

    Karnataka Breaking Kannada News Live: ವಿಧಾನಸಭೆ ಮೊಗಸಾಲೆಯಲ್ಲಿ ಸಿಎಂ ಭೇಟಿಯಾದ ವಿಜಯೇಂದ್ರ

    ವಿಧಾನಸಭೆ ಮೊಗಸಾಲೆಯಲ್ಲಿ ಸಿಎಂ ಸಿದ್ದರಾಮಯ್ಯರನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಭೇಟಿ ಮಾಡಿದರು. ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಕಾಂಗ್ರೆಸ್ ಶಾಸಕರ ಜತೆ ಚರ್ಚೆ ನಡೆಸಿದರು.

  • 23 May 2023 10:53 AM (IST)

    Karnataka Breaking Kannada News Live: ಪಾವಗಡದಲ್ಲಿ ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ

    ತುಮಕೂರು ಜಿಲ್ಲೆಯ ಹಲವೆಡೆ ತಡರಾತ್ರಿ ಭಾರೀ ಮಳೆಯಾಗಿದ್ದು ಗುಡುಗು, ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಸಿಡಿಲಿನ ಅಬ್ಬರಕ್ಕೆ ತೆಂಗಿನ ಮರ ಹೊತ್ತಿ ಉರಿದಿದೆ. ಪಾವಗಡ ತಾಲೂಕಿನ ಗಂಗಸಾರದಲ್ಲಿ ತೆಂಗಿನ ಮರ ಧಗಧಗನೆ ಹೊತ್ತಿ ಉರಿದಿದೆ.

  • 23 May 2023 10:43 AM (IST)

    Karnataka Breaking Kannada News Live: ಬಿರುಗಾಳಿ ಸಹಿತ ಮಳೆಗೆ ರಾಮನಗರದಲ್ಲಿ ಮಾವು ನಾಶ

    ರಾಮನಗರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ನಾಶವಾಗಿದೆ. ಹತ್ತು ದಿನಗಳಲ್ಲಿ ಕಟಾವು ಮಾಡಬೇಕಾದ ಮಾವಿನ ಕಾಯಿಗಳು ನೆಲಕ್ಕೆ ಬೀಳುತ್ತಿವೆ. ಜಿಲ್ಲೆಯ ‌ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಶೇ 70 ರಷ್ಟು ಮಾವು ಕಟಾವು ಆಗಿದೆ. ಉಳಿದ ಶೇ 30 ರಷ್ಟು ಮಾವು ಇನ್ನು 10 ರಿಂದ 15 ದಿನದಲ್ಲಿ ಕಟಾವು ಆಗುತ್ತಿತ್ತು. ಆದ್ರೆ ಮಳೆರಾಯ ಆದಕ್ಕೆ ಬಿಡುವು ಕೊಟ್ತಿಲ್ಲ. ನೆಲಕ್ಕೆ ಉದುರಿದ ಮಾವನ್ನ ಮಾರಾಟ ಮಾಡಲು ಸಾಧ್ಯವಾಗದೇ ರೈತರು ಪರದಾಡುತ್ತಿದ್ದಾರೆ.

  • 23 May 2023 10:39 AM (IST)

    Karnataka Breaking Kannada News Live: ಕೊಡಿಗೇಹಳ್ಳಿ ಅಂಡರ್​ಪಾಸ್​ನಲ್ಲಿ ಹೇಗಿದೆ ದುಸ್ಥಿತಿ ನೋಡಿ

    ವಿದ್ಯಾರಣ್ಯಪುರಕ್ಕೆ ಸಂಪರ್ಕ ಕಲ್ಪಿಸುವ ಕೊಡಿಗೇಹಳ್ಳಿ ಅಂಡರ್​ಪಾಸ್​ನಲ್ಲಿ ಸದ್ಯ ಯಾವ ರೀತಿಯ ಸ್ಥಿತಿ ಇದೆ ಎಂಬುದನ್ನು ಟಿವಿ9 ಗೌಂಡ್ ರಿಪೋರ್ಟ್​ ಮೂಲಕ ತಿಳಿಯಿರಿ.

  • 23 May 2023 10:37 AM (IST)

    Karnataka Breaking Kannada News Live: ಸಿದ್ದರಾಮಯ್ಯ ಭೇಟಿಯಾದ ಖಾದರ್

    ವಿಧಾನಸಭಾ ಸಭಾಧ್ಯಕ್ಷರಾಗಿ ಯು.ಟಿ.ಖಾದರ್ ಆಯ್ಕೆ ಸಾಧ್ಯತೆ ಹಿನ್ನೆಲೆ ಯುಟಿ ಖಾದರ್ ಅವರು ಸಿಎಂ ಸಿದ್ದರಾಮಯ್ಯನವರನ್ನು ಭೆಟಿ ಮಾಡಿದ್ದಾರೆ. ಕುಮಾರಕೃಪಾ ರಸ್ತೆಯ ನಿವಾಸದಲ್ಲಿ ಸಿಎಂ ಭೇಟಿಯಾಗಿದ್ದಾರೆ.

  • 23 May 2023 10:33 AM (IST)

    Karnataka Breaking Kannada News Live: ಚಿಕ್ಕಮಗಳೂರಿನಲ್ಲಿ ಮಳೆಗೆ ಲಕ್ಷಾಂತರ ಮೌಲ್ಯದ ಬೆಳೆ ನಾಶ

    ಚಿಕ್ಕಮಗಳೂರಿನ ಕಡೂರು ತಾಲೂಕಿನ ಲಿಂಗ್ಲಪುರ ಗ್ರಾಮದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಿಂದ 10ಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗುರುಳಿವೆ. ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ. ಮಳೆ ನಿಂತ್ರು ಬಿರುಗಾಳಿ ನಿಲ್ಲುತ್ತಿಲ್ಲ. ರಭಸವಾಗಿ ಬೀಸುತ್ತಿರೋ ಗಾಳಿಯಿಂದ ಬಯಲು ಸೀಮೆ ಭಾಗದ ಜನ ಕಂಗಾಲಾಗಿದ್ದಾರೆ.

  • 23 May 2023 10:29 AM (IST)

    Karnataka Breaking Kannada News Live: ಖಾತೆ ಹಂಚಿಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ -ಎಂ.ಬಿ.ಪಾಟೀಲ್

    ಖಾತೆ ಹಂಚಿಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ನಮ್ಮ ಪ್ರಯಾರಿಟಿಗಳ ಬಗ್ಗೆ ನಾವು ಕೂಡ ಹೇಳಿದ್ದೇವೆ. ಅಂತಿಮವಾಗಿ ಅವ್ರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡಬೇಕು ಎಂದು ಬೆಂಗಳೂರಿನಲ್ಲಿ ನೂತನ ಸಚಿವ ಎಂ.ಬಿ.ಪಾಟೀಲ್ ಖಾತೆ ಹಂಚಿಕೆ ಸಂಬಂಧ ಪ್ರತಿಕ್ರಿಯೆ ನೀಡಿದರು.

  • 23 May 2023 10:26 AM (IST)

    Karnataka Breaking Kannada News Live: ವರಿಷ್ಠರು ಹೇಳಿದ್ದನ್ನೇ ನಾನು ಹೇಳಿದ್ದೇನೆ -ಎಂ.ಬಿ.ಪಾಟೀಲ್

    5 ವರ್ಷ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ವರಿಷ್ಠರು ಹೇಳಿದ್ದನ್ನೇ ನಾನು ಹೇಳಿದ್ದೇನೆ ಎಂದು ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ವೇಣುಗೋಪಾಲ್ ಏನು ಹೇಳಿದ್ದಾರೋ ಅದನ್ನೇ ನಾನು ಹೇಳಿದ್ದೆ. ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ನನಗೆ ಗೊತ್ತಿಲ್ಲ. ಪವರ್ ಶೇರಿಂಗ್ ಇದ್ದರೆ ಜನರ ಜತೆ ಮಾತ್ರ ಅಂತಾ ಹೇಳಿದ್ದಾರೆ. ನಾನು ವೈಯಕ್ತಿಕವಾಗಿ ಮಾತನಾಡಿಲ್ಲ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದಿದ್ದರು ಎಂದು ಬೆಂಗಳೂರಿನಲ್ಲಿ ನೂತನ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

  • 23 May 2023 09:57 AM (IST)

    Karnataka Breaking Kannada News Live: ನಟ ಶಿವರಾಜ್​ಕುಮಾರ್ ನಿವಾಸಕ್ಕೆ ಸುರ್ಜೇವಾಲ ಭೇಟಿ

    ಬೆಂಗಳೂರಿನ ನಾಗವಾರದಲ್ಲಿರುವ ನಟ ಶಿವರಾಜ್​ಕುಮಾರ್ ನಿವಾಸಕ್ಕೆ ಸುರ್ಜೇವಾಲ ಭೇಟಿ ನೀಡಿದ್ದಾರೆ. ಮಧು ಬಂಗಾರಪ್ಪಗೆ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ದಂಪತಿ ಬೇಸರ ವ್ಯಕ್ತಪಡಿಸಿದ್ದರು. ಬೇಸರಗೊಂಡಿದ್ದ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಭೇಟಿ ಮಾಡಿ ಸುರ್ಜೇವಾಲ ಮಾತುಕತೆ ನಡೆಸಿದ್ದಾರೆ. ಪಕ್ಷಕ್ಕೆ ಪ್ರಚಾರ ಸಮಯದಲ್ಲಿ ಕೈಗೂಡಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

  • 23 May 2023 09:55 AM (IST)

    Karnataka Breaking Kannada News Live: ಅಂಡರ್ ಪಾಸ್ ಗಳ ಅಧ್ಯಯನಕ್ಕೆ IISC ತಜ್ಷರ ಮೊರೆ ಹೋದ BBMP

    ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ರಣ ಮಳೆ ಸಿಲಿಕಾನ್ ಸಿಟಿಯಲ್ಲಿ ಭಾರೀ ಅವಾಂತರಗಳನ್ನು ಸೃಷ್ಟಿಸಿದೆ(Bengaluru Rain). ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಇನ್ನು 2 ಸಾವಿನ ಬಳಿಕ ಬುದ್ದಿ ಕಲಿತ ಬಿಬಿಎಂಪಿ(BBMP) IISC ತಜ್ಞರ ಮೊರೆ ಹೋಗಿದೆ. ಬಿಬಿಎಂಪಿಯ 18 ಅಂಡರ್​ ಪಾಸ್​ಗಳ ಕಾರ್ಯಕ್ಷಮತೆ ಬಗ್ಗೆ ವರದಿ ನೀಡಲು ತಜ್ಞರಿಗೆ ಸೂಚಿಸಿದೆ. ಹಾಗೂ ಅಂಡರ್‌ಪಾಸ್‌ಗಳಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

  • 23 May 2023 09:53 AM (IST)

    Karnataka Breaking Kannada News Live: ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ರಣದೀಪ್​​ ಸುರ್ಜೇವಾಲ ಭೇಟಿ

    ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್​​ ಸಿಂಗ್ ಸುರ್ಜೇವಾಲ ಭೇಟಿ ನೀಡಿದ್ದಾರೆ. ಭೇಟಿ ವೇಳೆ ಜಿ.ಎಸ್.ಪಾಟೀಲ್ ಬೆಂಬಲಿಗರು ಸುರ್ಜೇವಾಲ ಕಾರಿಗೆ ಮುತ್ತಿಗೆ ಹಾಕಿದರು. ಬಿ.ಎಸ್.ಪಾಟೀಲ್​ಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

  • 23 May 2023 09:51 AM (IST)

    Karnataka Breaking Kannada News Live: ಜಿ.ಎಸ್​.ಪಾಟೀಲ್​ಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ

    ಜಿ.ಎಸ್​.ಪಾಟೀಲ್​ಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಸಿದ್ದರಾಮಯ್ಯ ನಿವಾಸದ ಬಳಿ ಜಿ.ಎಸ್​.ಪಾಟೀಲ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಸಿಎಂ ಸಿದ್ದರಾಮಯ್ಯ ನಿವಾಸದ ಬಳಿ ಗದಗ ಜಿಲ್ಲೆ ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಸ್​.ಪಾಟೀಲ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಿ.ಎಸ್​​.ಪಾಟೀಲ್ ಫೋಟೋ ಹಿಡಿದು ಪ್ರತಿಭಟನೆ ನಡೆಸಲಾಗುತ್ತಿದೆ.

  • 23 May 2023 09:48 AM (IST)

    Karnataka Breaking Kannada News Live: ಸ್ಪೀಕರ್​ ಸ್ಥಾನಕ್ಕೆ ಯುಟಿ ಖಾದರ್ ಬಹುತೇಕ ಫೈನಲ್​

    ಕೊನೆಗೂ ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ (Speaker Karnataka assembly) ಯಾರು ಎನ್ನುವುದಕ್ಕೆ ತೆರೆ ಬಿದ್ದಿದೆ. ಅಚ್ಚರಿ ಆಯ್ಕೆಯಾಗಿ ಮಾಜಿ ಸಚಿವ ಯುಟಿ ಖಾದರ್(UT Khader) ಅವರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ. ಸ್ಪೀಕರ್ ಸ್ಥಾನಕ್ಕೆ ಹಿರಿಯ ಶಾಸಕಾರದ ಆರ್.ವಿ.ದೇಶಪಾಂಡೆ, ಟಿಬಿ ಜಯಚಂದ್ರ ಹಾಗೂ ಹೆಚ್​ಕೆ ಪಾಟೀಲ್ ಇವರಲ್ಲಿ ಒಬ್ಬರನ್ನು ಸ್ಪೀಕರ್ ಮಾಡಲು ಕಾಂಗ್ರೆಸ್​ ಹೈಕಮಾಂಡ್ ಚರ್ಚೆ ನಡೆಸಿತ್ತು. ಆದ್ರೆ, ಇವರ ಪೈಕಿ ಯಾರೂ ಸ್ಫೀಕರ್ ಆಗಲು ಒಪ್ಪದಿದ್ದಾಗ ಅಂತಿಮವಾಗಿ ಯುಟಿ ಖಾದರ್ ಅವರನ್ನು ಮನವೊಲಿಸುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ.

  • Published On - May 23,2023 9:44 AM

    Follow us
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
    ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
    ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್