ಎಲ್ಲ ವಿಷಯದಲ್ಲೂ ಎ ಪ್ಲಸ್; ಮೆದುಳು ನಿಷ್ಕ್ರಿಯವಾದಾಗ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿ ಸಾರಂಗ್

|

Updated on: May 19, 2023 | 7:39 PM

Kerala SSLC results: ಆಟೋರಿಕ್ಷಾದಿಂದ ಕೆಳಗೆ ಉರುಳಿ ರಸ್ತೆಗೆ ಬಿದ್ದ ಸಾರಂಗ್ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಅವರ ಮೆದುಳು ಡೆಡ್ ಆಗಿದೆ. ಶುಕ್ರವಾರ ಫಲಿತಾಂಶ ಪ್ರಕಟಿಸುವ ಕೆಲವೇ ಗಂಟೆಗಳಿಗೆ ಮುನ್ನ ಸಾರಂಗ್ ಸಾವು ಸಂಭವಿಸಿದೆ.

ಎಲ್ಲ ವಿಷಯದಲ್ಲೂ ಎ ಪ್ಲಸ್; ಮೆದುಳು ನಿಷ್ಕ್ರಿಯವಾದಾಗ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿ ಸಾರಂಗ್
ವಿದ್ಯಾರ್ಥಿ ಸಾರಂಗ್
Follow us on

ತಿರುವನಂತಪುರಂ: ಕೇರಳದ ಎಸ್‌ಎಸ್‌ಎಲ್‌ಸಿ (Kerala SSLC Exam) ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್‌ ಪಡೆಯುವ ಪಡೆದು ಸಾರಂಗ್ ಪಾಸಾಗಿದ್ದಾನೆ.  ಶಿಕ್ಷಣ ಸಚಿವ ವಿ.ಶಿವನಕುಟ್ಟಿ(V. Sivankutty) ಅವರು ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಸಾರಂಗ್ (Sarang) ಎಂಬ ವಿದ್ಯಾರ್ಥಿಯ ಫಲಿತಾಂಶ ಬಗ್ಗೆ ಹೇಳುವಾಗ ಕಣ್ಣೀರಾಗಿದ್ದಾರೆ. ಸಾರಂಗ್ ದೊಡ್ಡ ಕೆಲಸ ಮಾಡಿ ನಮ್ಮನ್ನು ಅಗಲಿದ್ದಾರೆ. ಸಾರಂಗ್ ಅಂಗಾಂಗ ದಾನದ ಮೂಲಕ ಆರು ಮಂದಿಗೆ ಹೊಸ ಜೀವನ ನೀಡಿದರು. ದುಃಖದ ಕಡಲಲ್ಲಿಯೂ ಅಂಗಾಂಗ ದಾನಕ್ಕೆ ಮುಂದಾದ ಕುಟುಂಬಕ್ಕೆ ಅಭಿನಂದನೆ ಸಲ್ಲಿಸೋಣ ಎಂದು ಹೇಳಿ ಸಚಿವರು ಭಾವುಕರಾದರು. ಸಾರಂಗ್ ಗ್ರೇಸ್ ಮಾರ್ಕ್ಸ್ ಇಲ್ಲದೇ ಎಲ್ಲಾ ವಿಷಯಗಳಿಗೂ ಎಪ್ಲಸ್ ಪಡೆದಿರುವುದಾಗಿ ಸಚಿವರು ಹೇಳಿದ್ದಾರೆ.

ಆಸ್ಪತ್ರೆಗೆ ಹೋಗಿ ಹಿಂತಿರುಗುತ್ತಿದ್ದಾಗ ಆಟೋ ರಿಕ್ಷಾ ಪಲ್ಟಿಯಾಗಿ ಸಾರಂಗ್ ಮರಣ ಸಂಭವಿಸಿದೆ. ಬನೀಶ್ ಕುಮಾರ್ ಮತ್ತು ರಜಿನಿ ದಂಪತಿಯ ಪುತ್ರ ಸಾರಂಗ್ ತನ್ನ ತಾಯಿಯೊಂದಿಗೆ ಕಾರವಾರಂ ವಂಚಿಯೂರು ನಡಕಾಪಂರಂಬ್ ನಿಕುಂಜತ್‌ನಲ್ಲಿ 13ನೇ ತಾರೀಖು ಸಂಜೆ 3 ಗಂಟೆಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ತೊಟ್ಟಕ್ಕಾಡ್ ವಡಕ್ಕೋಟ್​​ಕಾವ್ ಕುನ್ನತ್ತ್ ಕೋಣಂ ಸೇತುವೆ ಬಳಿ ಅಪಘಾತ ಸಂಭವಿಸಿದೆ. ಬ್ರೈನ್ ಡೆಡ್ ಆಗಿದ್ದ ಸಾರಂಗ್​​ನ ಅಂಗಾಂಗ ದಾನ ಮಾಡಿದ್ದು, ಇದರಿಂದ 6 ಮಂದಿಗೆ ಹೊಸ ಬದುಕು ಸಿಕ್ಕಿದೆ. ಸಾರಂಗ್ ಆಟ್ಟಿಂಗಲ್ ಸರ್ಕಾರಿ ಬಿಎಚ್‌ಎಸ್‌ಎಸ್‌ನಲ್ಲಿ ಪರೀಕ್ಷೆ ಬರೆದಿದ್ದರು.

ಇದನ್ನೂ ಓದಿ: Kerala SSLC Result 2023: ಕೇರಳ ಎಸ್‌ಎಸ್‌ಎಲ್‌ಸಿ ತರಗತಿ ಫಲಿತಾಂಶ ಘೋಷಣೆ: ಶೇಕಡಾ 99.70 ವಿದ್ಯಾರ್ಥಿಗಳು ತೇರ್ಗಡೆ

ಇನ್ನೊಂದು ವಾಹನಕ್ಕೆ ಸೈಡ್ ನೀಡುತ್ತಿದ್ದಾಗ ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಉರುಳಿತ್ತು. ಆಟೋರಿಕ್ಷಾದಿಂದ ಕೆಳಗೆ ಉರುಳಿ ರಸ್ತೆಗೆ ಬಿದ್ದ ಸಾರಂಗ್ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಅವರ ಮೆದುಳು ಡೆಡ್ ಆಗಿದೆ. ಶುಕ್ರವಾರ ಫಲಿತಾಂಶ ಪ್ರಕಟಿಸುವ ಕೆಲವೇ ಗಂಟೆಗಳಿಗೆ ಮುನ್ನ ಸಾರಂಗ್ ಸಾವು ಸಂಭವಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ