ತಿರುವನಂತಪುರಂ: ತಿರುವನಂತಪುರಂ ನಗರ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಕೇರಳ ಸಿಪಿಎಂ ಶಾಸಕ ಕೆ.ಎಂ.ಸಚಿಂದೇವ್ ಭಾನುವಾರ ಸಿಪಿಎಂ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆರ್ಯ ದೇಶದ ಅತ್ಯಂತ ಕಿರಿಯ ಮೇಯರ್ ಆಗಿದ್ದರೆ, ಸಚಿಂದೇವ್ ಕೇರಳದ ಅತ್ಯಂತ ಕಿರಿಯ ಶಾಸಕರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಬ್ಬರೂ ಪಕ್ಷದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಅವರ ಕುಟುಂಬಗಳು ಫೆಬ್ರವರಿಯಲ್ಲಿ ಅವರ ಮದುವೆಯನ್ನು ನಿಶ್ಚಯಿಸಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇತರ ಸಿಪಿಎಂ ನಾಯಕರು ಮತ್ತು ಆರ್ಯ ಮತ್ತು ಸಚಿಂದೇವ್ ಅವರ ನಿಕಟ ಸಂಬಂಧಿಗಳು ಸಮಾರಂಭದಲ್ಲಿ ಉಪಸ್ಥಿತಿದ್ದರು. ಉಡುಗೊರೆಗಳನ್ನು ನೀಡಲು ಬಯಸಿವ ಯಾರೂದರೂ ಯಾವುದೇ ಅನಾಥ ಶ್ರಮಕ್ಕೆ ಕೊಡುಗೆ ನೀಡಬಹುದು ಎಂದು ದಂಪತಿಗಳು ಹೇಳಿದ್ದಾರೆ.
ರಾಕೇಂದ್ರನ್ ತಿರುವನಂತಪುರಂ ಮೂಲದವರಾಗಿದ್ದು ಸಚಿನ್ ದೇವ್ ಕೋಯಿಕ್ಕೋಡ್ ಮೂಲದವರು. ರಾಜೇಂದ್ರನ್ ಅವರು 2020ರಲ್ಲಿ 21ನೇ ವಯಸ್ಸಿನಲ್ಲಿ ಮೇಯರ್ ಆಗುವಾಗಲು ತಮ್ಮ ಪದವಿ ಕೋರ್ಸ್ ಮಾಡುತ್ತಿದ್ದರು. 28 ಹರೆಯದ ಸಚಿನ್ ದೇವ್ ಅವರು ಇಂಗ್ಲಿಷ್ ಸಾಹಿತ್ಯ ಪದವೀಧರರಾಗಿದ್ದಾರೆ ಮತ್ತು ಅವರು ಎಲ್ಎಲ್ಬಿಯನ್ನು ಪೂರ್ಣಗೊಳಿಸಿದ್ದಾರೆ. ಇದೀಗ ಈ ಸುದ್ದಿ ಎಲ್ಲ ಕಡೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯು ನಡೆಯುತ್ತಿದೆ. ದೇಶದ ಅತ್ಯಂತ ಕಿರಿಯ ಮೇಯರ್ ಮತ್ತು ಕೇರಳದ ಅತ್ಯಂತ ಕಿರಿಯ ಶಾಸಕ ಮದುವೆಗೆ ಕೇರಳ ಸಿಎಂ ಸಾಕ್ಷಿಯಾಗಿದ್ದಾರೆ.