ನವದೆಹಲಿ, (ಏಪ್ರಿಲ್.18) ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಹಲವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇರಾನ್ ಸತತವಾಗಿ ದಾಳಿ ನಡೆಸುತ್ತಿದೆ. ಈ ದಾಳಿಗೂ ಮೊದಲು ಇಸ್ರೇಲ್ ಮೂಲದ ಹಡಗಿನ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿತ್ತು. ಈ ಹಡಗಿನಲ್ಲಿ 17 ಭಾರತೀಯ ಸಿಬ್ಬಂದಿಗಳು ಸಿಲುಕಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಭಾರತ, ರಾಜತಾಂತ್ರಿಕ ಮಾತುಕತೆ ನಡೆಸಿ ಇದೀಗ ಈ ಹಡಗಿನಲ್ಲಿದ್ದ ಭಾರತೀಯ ಮಹಿಳಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ತವರಿಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ಕೇರಳದ ತ್ರಿಶೂರು ಮೂಲದ ಆ್ಯನ್ ತೀಸಾ ಜೊಸೆಫ್ (ann tessa joseph) ಮನೆಗೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಆ್ಯನ್ ತೀಸಾ ಜೊಸೆಫ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಇನ್ನುಳಿದ 16 ಸಿಬ್ಬಂದಿಗಳನ್ನು ಶೀಘ್ರದಲ್ಲೇ ಸುರಕ್ಷಿತವಾಗಿ ಭಾರತಕ್ಕೆ ಕರೆದುಕೊಂಡು ಬರಲಾವುವುದು ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಈ ಕುರಿತು ಮಾಹಿತಿ ಹಂಚಿಕೊಂಡ ಭಾರತೀಯ ವಿದೇಶಾಂಗ ಇಲಾಖೆ, ಇರಾನ್ ವಶಪಡಿಸಿದ ಸರಕು ಹಡಗಿನಲ್ಲಿದ್ದ ಮಹಿಳಾ ಸಿಬ್ಬಂದಿ ಆ್ಯನ್ ತೀಸಾ ಜೊಸೆಫ್ ಸುರಕ್ಷಿತವಾಗಿ ಮನಗೆ ಮರಳಿದ್ದಾರೆ. ಇರಾನ್ ಆಧಿಕಾರಿಗಳಿಗೆ ಧನ್ಯವಾದ. ಇನ್ನುಳಿದ ಭಾರತೀಯರ ಬಿಡುಗಡೆಗೆ ಇರಾನ್ ಅಧಿಕಾರಿಗಳ ಜೊತೆ ನಿರಂತರ ಮಾತುಕತೆ ನಡೆಯುತ್ತಿದೆ ಎಂದು ಟ್ವೀಟ್ ಮಾಡಿದೆ.
ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು, ಇರಾನ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಭಾರತ ವಿದೇಶಾಂಗ ಇಲಾಖೆ ಭಾರತೀಯರ ಸುರಕ್ಷಿತ ಬಿಡುಗಡೆ ಒತ್ತಾಯಿಸಿತ್ತು. ಖುದ್ದು ಕೇಂದ್ರ ಸಚಿವ ಜೈಶಂಕರ್ ಸಹ ಇರಾನ್ ಜತೆ ಮಾತುಕತೆ ನಡೆಸಿ ಭಾರತೀಯರನ್ನು ಬಿಟ್ಟು ಕಳುಹಿಸುವಂತೆ ಮನವಿ ಮಾಡಿದ್ದು, ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿತ್ತು. ಇದರ ಪರಿಣಾಮ ಇರಾನ್, ಭಾರತೀಯ ಮಹಿಳಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದೆ.
Indian deck cadet Ms. Ann Tessa Joseph from Thrissur, Kerala, a member of the crew on vessel MSC Aries returned home today. @India_in_Iran, with the support of Iranian authorities, facilitated her return. Mission is in touch with Iranian side to ensure the well being of the… pic.twitter.com/iE932Y4F4y
— Randhir Jaiswal (@MEAIndia) April 18, 2024
ಇರಾನ್ ವಶಪಡಿಸಿದ ಹಡಗಿನಲ್ಲಿದ್ದ ಸಿಬ್ಬಂದಿಗಳ ಪೈಕಿ 17 ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಪೈಕಿ ಮಹಿಳಾ ಸಿಬ್ಬಂದಿ ಆ್ಯನ್ ತೀಸಾ ಜೊಸೆಫ್ ಭಾರತಕ್ಕೆ ಮರಳಿದ್ದಾರೆ. ಆದ್ರೆ, ಇನ್ನುಳಿದ 16 ಸಿಬ್ಬಂದಿಗಳನ್ನು ಶೀಘ್ರದಲ್ಲೇ ಸುರಕ್ಷಿತವಾಗಿ ಭಾರತಕ್ಕೆ ಕರೆದುಕೊಂಡು ಬರಲಾವುವುದು ಎಂದು ವಿದೇಶಾಂಗ ಇಲಾಖೆ ಹೇಳಿದೆ. ಭಾರತೀಯ ಸಿಬ್ಬಂದಿಗಳ ಭೇಟಿಗ ಇತ್ತೀಚೆಗೆ ಇರಾನ್ ಅವಕಾಶ ನೀಡಿತ್ತು. ಎಲ್ಲರನ್ನು ಭಾರತೀಯ ಅಧಿಕಾರಿಗಳು ಬೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಎಲ್ಲರು ಉತ್ತಮವಾಗಿದ್ದಾರೆ. ಶೀಘ್ರವೇ ತವರಿಗೆ ಮರಳಲಿದ್ದಾರೆ ಎಂದು ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಸ್ಥರಿಗೆ ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ