ಇವಿಎಂ ಹೇಗೆ ಕೆಲಸ ಮಾಡುತ್ತೆ? ಸುಪ್ರೀಂಕೋರ್ಟ್​ಗೆ ಮಾಹಿತಿ ಕೊಟ್ಟ ಚುನಾವಣಾ ಆಯೋಗ

Working of EVM: ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್​ನಲ್ಲಿ ಬಿದ್ದ ವೋಟಿಂಗ್ ಅನ್ನು ವಿವಿಪ್ಯಾಟ್ ಮತದಿಂದ ದೃಢೀಕರಿಸುವ ವ್ಯವಸ್ಥೆ ಆಗಬೇಕು ಎಂದು ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಇವಿಎಂ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಈ ವೇಳೆ ನ್ಯಾಯಪೀಠದ ಮುಂದೆ ಚುನಾವಣಾ ಆಯೋಗದ ಪ್ರತಿನಿಧಿಗಳು ವಿವರಣೆ ನೀಡಿದ್ದಾರೆ. ಇವಿಎಂನಲ್ಲಿ ಲೋಪವಾಗುವ ಸಾಧ್ಯತೆ ಯಾಕಿರುವುದಿಲ್ಲ ಎಂದು ಸುಪ್ರೀಂಕೋರ್ಟ್​ಗೆ ಮನದಟ್ಟು ಮಾಡಿಕೊಡುವ ಪ್ರಯತ್ನವಾಗಿದೆ.

ಇವಿಎಂ ಹೇಗೆ ಕೆಲಸ ಮಾಡುತ್ತೆ? ಸುಪ್ರೀಂಕೋರ್ಟ್​ಗೆ ಮಾಹಿತಿ ಕೊಟ್ಟ ಚುನಾವಣಾ ಆಯೋಗ
ಇವಿಎಂ ಮೆಷೀನ್
Follow us
|

Updated on: Apr 18, 2024 | 5:19 PM

ನವದೆಹಲಿ, ಏಪ್ರಿಲ್ 18: ಎಲ್ಲಾ ಇವಿಎಂ ಮೆಷೀನ್​ಗಳನ್ನು (EVM machine) ಪ್ರತಿಯೊಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಅಣಕು ಮತದಾನದ ಮೂಲಕ ಪರಿಶೀಲನೆ ನಡೆಸಲಾಗುತ್ತದೆ ಎಂದು ಚುನಾವಣಾ ಆಯೋಗವು (Election Commission) ಇವಿಎಂ ಮತದಾನ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಸುಪ್ರೀಂಕೋರ್ಟ್​ಗೆ (Supreme Court) ಮಾಹಿತಿ ನೀಡಿದೆ. ಎಲ್ಲಾ ವಿವಿಪ್ಯಾಟ್ ದಾಖಲೆಗಳನ್ನು ಇವಿಎಂನೊಂದಿಗೆ ಪೂರ್ಣವಾಗಿ ತಾಳೆಯಾಗಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ. ಈ ವೇಳೆ ಚುನಾವಣಾ ಆಯೋಗವು ಇವಿಎಂ ಮತದಾನ ವ್ಯವಸ್ಥೆ ಬಗ್ಗೆ ಕೋರ್ಟ್​ಗೆ ವಿವರಣೆ ಕೊಟ್ಟಿದೆ.

ಇವಿಎಂ ಮೆಷೀನ್​ನಲ್ಲಿ ಯಾವ ಬಟನ್ ಯಾವ ಅಭ್ಯರ್ಥಿಗೆ ಹೋಗುತ್ತದೆ ಎಂಬುದು ಇವಿಎಂ ತಯಾರಕರಿಗೆ ಗೊತ್ತಿರುವುದಿಲ್ಲ. ಯಾವ ಇವಿಎಂ ಯಾವ ರಾಜ್ಯಕ್ಕೆ ಹೋಗುತ್ತದೆ, ಯಾವ ಕ್ಷೇತ್ರಕ್ಕೆ ಹೋಗುತ್ತದೆ ಎಂಬ ಮಾಹಿತಿಯೂ ತಿಳಿದಿರುವುದಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇವಿಎಂ ವೋಟಿಂಗ್ ಯೂನಿಟ್​ನಲ್ಲಿ ಬ್ಯಾಲಟ್ ಯೂನಿಟ್, ಕಂಟ್ರೋಲ್ ಯೂನಿಟ್ ಮತ್ತು ವಿವಿಪ್ಯಾಟ್ ಯೂನಿಟ್ ಎಂಬ ಮೂರು ವಿಭಾಗಗಳಿರುತ್ತವೆ. ಇದರಲ್ಲಿ ವಿವಿಪ್ಯಾಟ್ ಒಂದು ರೀತಿಯಲ್ಲಿ ಪ್ರಿಂಟರ್ ರೀತಿ. ಮತದಾನ ನಡೆಯಲು ಏಳು ಮುಂಚೆ ವಿವಿಪ್ಯಾಟ್ ಮೆಷೀನ್​ನ ಫ್ಲ್ಯಾಷ್ ಮೆಮೋರಿಯಲ್ಲಿ ಅಭ್ಯರ್ಥಿಗಳಿಗೆ ಅಲಾಟ್ ಆದ ಚಿಹ್ನೆಗಳನ್ನು ಅಪ್​ಲೋಡ್ ಮಾಡಲಾಗುತ್ತದೆ. ಇದು ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲೇ ನಡೆಯುತ್ತದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಸುಪ್ರೀಂ ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಬೇಕಂತಲೇ ಮಾವಿನ ಹಣ್ಣು ತಿನ್ನುತ್ತಿದ್ದಾರೆ: ಇಡಿ ದೂರು

ಬ್ಯಾಲಟ್ ಯೂನಿಟ್​ನಲ್ಲಿ ಮೂಲದಲ್ಲಿ ಕೇವಲ ಬಟನ್​ಗಳು ಇರುತ್ತವೆ. ಇವುಗಳಿಗೆ ಅಭ್ಯರ್ಥಿಗಳ ಚಿಹ್ನೆ ನಂತರದಲ್ಲಿ ನಮೂದಿಸಲಾಗುತ್ತದೆ. ಬಟನ್ ಒತ್ತಿದಾಗ ಬ್ಯಾಲಟ್ ಯೂನಿಟ್​ನಿಂದ ಕಂಟ್ರೋಲ್ ಯೂನಿಟ್​ಗೆ ಸಂದೇಶ ಹೋಗುತ್ತದೆ. ಇದು ವಿವಿಪ್ಯಾಟ್ ಯೂನಿಟ್​ಗೆ ಅಲರ್ಟ್ ಹೊರಡಿಸುತ್ತದೆ. ಒತ್ತಲಾಗಿರುವ ಬಟನ್​ಗೆ ಜೋಡಿತವಾದ ಚಿಹ್ನೆಯನ್ನು ವಿವಿಪ್ಯಾಟ್ ಯೂನಿಟ್ ಪ್ರಿಂಟ್ ಮಾಡುತ್ತದೆ ಎಂದು ಎಲೆಕ್ಷನ್ ಕಮಿಷನ್ ಪ್ರತಿನಿಧಿಗಳು ಕೋರ್ಟ್​ನಲ್ಲಿ ವಿವರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ