Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಚಲ ಪ್ರದೇಶದ ಈ ಗ್ರಾಮ ಸಿಕ್ತು ಮೊಬೈಲ್​ ನೆಟ್​ವರ್ಕ್​, ದೂರವಾಣಿ ಮೂಲಕ ಗ್ರಾಮಸ್ಥರ ಮಾತು ಆಲಿಸಿದ ಮೋದಿ

ಹಿಮಾಚಲ ಪ್ರದೇಶದ ಗಿಯು ಗ್ರಾಮಕ್ಕೆ ಇಂದು(ಏಪ್ರಿಲ್ 18) ಮೊದಲ ಬಾರಿಗೆ ಮೊಬೈಲ್ ನೆಟ್‌ವರ್ಕ್ ದೊರೆತಿದ್ದು, ಗ್ರಾಮಸ್ಥರ ಸಂತಸ ಇಮ್ಮಡಿಗೊಂಡಿದೆ. ಇನ್ನು ಇದೇ ಮೊದಲ ಬಾರಿ ಮೊಬೈಲ್​ ನೆಟ್​ವರ್ಕ್​ ಸಿಕ್ಕ ಬೆನ್ನಲ್ಲೇ ಗಿಯು ಗ್ರಾಮಸ್ಥರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಮಾತುಕತೆ ನಡೆಸಿದರು.

ಹಿಮಾಚಲ ಪ್ರದೇಶದ ಈ ಗ್ರಾಮ ಸಿಕ್ತು ಮೊಬೈಲ್​ ನೆಟ್​ವರ್ಕ್​, ದೂರವಾಣಿ ಮೂಲಕ ಗ್ರಾಮಸ್ಥರ ಮಾತು ಆಲಿಸಿದ ಮೋದಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Apr 18, 2024 | 11:14 PM

ನವದೆಹಲಿ (ಏಪ್ರಿಲ್ 18): ಮೊಬೈಲ್ ನೆಟ್​ವರ್ಕ್ ಇಲ್ಲದೆ ಪರದಾಡುತ್ತಿದ್ದ ಹಿಮಾಚಲ ಪ್ರದೇಶದ ಗಿಯು ಗ್ರಾಮಕ್ಕೆ ಮೋದಿ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗಿಯು ಗ್ರಾಮಕ್ಕೆ ಇಂದು(ಏಪ್ರಿಲ್ 18) ಮೊದಲ ಬಾರಿಗೆ ಮೊಬೈಲ್ ನೆಟ್‌ವರ್ಕ್ ಸಂಪರ್ಕ ದೊರೆತಿದೆ. ಇಷ್ಟು ವರ್ಷಗಳ ಕಾಲ ಮೊಬೈಲ್ ನೆಟ್​ವರ್ಕ್​ ಇಲ್ಲದೇ ವಾಸಿಸುತ್ತಿದ್ದರು. ಒಂದು ವೇಳೆ ದೂರುವಾಣಿ ಕರೆ ಮಾಡಬೇಕಾದರೆ ಸುಮಾರು 8 ಕಿ.ಮೀ ಹೋಗಬೇಕಿತ್ತು. ಇದೀಗ ಮೋದಿ ಸರ್ಕಾರ, ಗಿಯು ಗ್ರಾಮಕ್ಕೆ ನೆಟ್​ವರ್ಕ್​ ಸಂಪರ್ಕ ಕಲ್ಪಿಸಿದ್ದು, ಗ್ರಾಮಸ್ಥರು ಸಂತೋಷಗೊಂಡಿದ್ದಾರೆ. ಇನ್ನು ಮೊಬೈಲ್​ ನೆಟ್​ವರ್ಕ್​ ದೊರೆಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮಸ್ಥರಿಗೆ ದೂರವಾಣಿ ಕರೆ ಮಾಡಿ ಅವರ ಸಂತೋಷದಲ್ಲಿ ಭಾಗಿಯಾಗಿದ್ದಾರೆ.

ಇನ್ನು ಗ್ರಾಮಸ್ಥರೊಂದಿಗೆ 13 ನಿಮಿಷಗಳ ಕಾಲ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ದೀಪಾವಳಿ ಹಬ್ಬದಂದು ಆ ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದ ಕುರಿತು ಚರ್ಚಿಸಿದರು. ಇನ್ನು ಗ್ರಾಮಗಳಿಗೆ ಮೊಬೈಲ್ ನೆಟ್‌ವರ್ಕ್‌ ಕಲ್ಪಿಸುವುದು ‘ಡಿಜಿಟಲ್ ಇಂಡಿಯಾ’ ಅಭಿಯಾನದ ಬಗ್ಗೆ ತಿಳಿಸಿದರು.  ಸರ್ಕಾರವು ಈಗ ಎಲ್ಲಾ ಪ್ರದೇಶಗಳನ್ನು ತಂತ್ರಜ್ಞಾನದೊಂದಿಗೆ ಸಂಪರ್ಕಿಸಲು ಗಮನಹರಿಸುತ್ತಿದೆ. ಅಧಿಕಾರ ವಹಿಸಿಕೊಂಡಾಗ 18,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಇನ್ನಷ್ಟು ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್‌ ಕಲ್ಪಿಸಿಕೊಡಲಾಗುವುದು ಎಂದರು.

ಇದನ್ನೂ ಓದಿ: ಭಾರತದ ಮೊದಲ ಹಳ್ಳಿ ಕೌರಿಕ್, ಗುಯೇಗೆ ಮೊದಲ ಬಾರಿಗೆ ತಲುಪಿದೆ ಟೆಲಿಕಾಂ ಕನೆಕ್ಟಿವಿಟಿ

ಈ ಮೊದಲು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಬೇಕಿದ್ದರೆ ಸುಮಾರು ಎಂಟು ಕಿಲೋಮೀಟರ್‌ಗಳಷ್ಟು ಪ್ರಯಾಣಿಸಬೇಕಾಗಿತ್ತು ಎಂದು ಗ್ರಾಮಸ್ಥರು ಮೋದಿಗೆ ತಿಳಿಸಿದರು.  ಗ್ರಾಮಸ್ಥರ ಈ ಮಾತು ಕೇಳಿ ಮೋದಿ ಶಾಕ್ ಆದರು.

‘ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ (ವಿವಿಪಿ)’ ಮೂಲಕ ಗಡಿ ಪ್ರದೇಶಗಳಲ್ಲಿ ಅಭಿವೃದ್ಧಿಯನ್ನು ಹೆಚ್ಚಿಸುವ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತದೆ. ಹಿಂದಿನ ಸರ್ಕಾರಗಳು, ಈ ಪ್ರದೇಶಗಳನ್ನು ನಿರ್ಲಕ್ಷಿಸಿ, ತಮ್ಮನ್ನು ತಾವು ರಕ್ಷಿಸಿಕೊಂಡಿವೆ ಎಂದು ಪರೋಕ್ಷವಾಗಿ ಯುಪಿಎಗೆ ಟಾಂಗ್ ಕೊಟ್ಟರು.

ಈ ಬದಲಾವಣೆಯು ದೂರದ ಪ್ರದೇಶಗಳಿಗೆ ಮತ್ತು ಸಮಾಜದ ಬಡ ಮತ್ತು ಮಧ್ಯಮ ವರ್ಗದ ವರ್ಗಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದರು.

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ