ಭಾರತದ ಮೊದಲ ಹಳ್ಳಿ ಕೌರಿಕ್, ಗುಯೇಗೆ ಮೊದಲ ಬಾರಿಗೆ ತಲುಪಿದೆ ಟೆಲಿಕಾಂ ಕನೆಕ್ಟಿವಿಟಿ
Telecom connectivity reaches India's first villages: ಹಿಮಾಚಲಪ್ರದೇಶದ ಲಾಹೋಲ್ ಮತ್ತು ಸ್ಪೀತಿ ಜಿಲ್ಲೆಯಲ್ಲಿರುವ ಕೌರಿಕ್ ಮತ್ತು ಗುಯೇ ಗ್ರಾಮಗಳಿಗೆ ಇದೇ ಮೊದಲ ಬಾರಿಗೆ ದೂರಸಂಪರ್ಕ ಜಾಲ ಸಿಕ್ಕಿದೆ. ಟೆಬೆಟ್ ಗಡಿ ಸಮೀಪದಲ್ಲಿರುವ ಈ ಎರಡು ಹಳ್ಳಿಗಳು ಐಟಿಬಿಪಿ ಪಡೆಗಳ ಸುಪರ್ದಿಯಲ್ಲಿವೆ. ಐವತ್ತು ವರ್ಷದ ಹಿಂದೆ ಭೂಕಂಪದಿಂದ ಪತ್ತೆಯಾಗಿದ್ದ ಬೌದ್ಧ ಲಾಮಾ ಅವರ ಕಳೇಬರವನ್ನು ಗುಯೇ ಗ್ರಾಮದಲ್ಲಿ ಕಾಣಬಹುದು. ಗುಯೇ ಮತ್ತು ಕೌರಿಕ್ ಜಿಲ್ಲೆಗಳು ಪ್ರವಾಸಿ ತಾಣಗಳಾಗಿವೆ.
ನವದೆಹಲಿ, ಏಪ್ರಿಲ್ 18: ಭಾರತದ ಮೊದಲ ಹಳ್ಳಿ ಎಂದು ಗುರುತಿಸಲಾಗಿರುವ ಕೌರಿಕ್ ಮತ್ತು ಗುಯೆಗೆ (Kaurik and Guea) ಈಗ ದೂರಸಂಪರ್ಕ ಜಾಲ (telecom connectivity) ತಲುಪಿದೆ. ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪೀತಿ ಜಿಲ್ಲೆಯಲ್ಲಿ (Lahaul and Spiti district) ಸಮುದ್ರ ಮಟ್ಟದಿಂದ 14,931 ಅಡಿ ಎತ್ತರದಲ್ಲಿ ಈ ಹಳ್ಳಿಗಳಿವೆ. ಲಾಹೋಲ್ ಸ್ಪೀತಿ ಜಿಲ್ಲೆಯಲ್ಲಿನ ಭಾರತದ ಮೊದಲ ಹಳ್ಳಿಗಳಾದ ಕೌರಿಕ್ ಮತ್ತು ಗುಯೇಗೆ ಟೆಲಿಕಾಂ ಕನೆಕ್ಟಿವಿಟಿ ಸಿಕ್ಕಿರುವ ಸಂಗತಿಯಲ್ಲಿ ಕೇಂದ್ರ ದೂರಸಂಪರ್ಕ ಇಲಾಖೆ ತನ್ನ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
ಕೌರಿಕ್ ಎಂಬ ಹಳ್ಳಿಯು ಟಿಬೆಟ್ ಗಡಿ ಭಾಗದ ಸಮೀಪ ಇದೆ. ಸ್ಪೀತಿ ನದಿಯನ್ನು ತಲುಪುವ ಪರಂಗ್ ಅರ್ಥಾತ್ ಪರೆ ಚು ನದಿಯ ಕಣಿವೆಯಲ್ಲಿ ಈ ಹಳ್ಳಿ ಇದೆ.
ಇನ್ನು, ಗುಯೆ ಗ್ರಾಮವು ಸ್ಪೀತಿ ನದಿ ಕಣಿವೆಯಲ್ಲಿರುವ ಒಂದು ಹಳ್ಳಿಯಾಗಿದೆ. ಚೀನಾದ ಗಡಿಭಾಗದಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ಗುಯೇ ಗ್ರಾಮ ಇದೆ. ಪ್ರಖ್ಯಾತ ಟಾಬೋ ಮಾನಸ್ಟರಿಯಿಂದ 40 ಕಿಮೀ ದೂರದಲ್ಲಿ ಇದು ಇರುವುದು.
ಇದನ್ನೂ ಓದಿ: ಇಲಾನ್ ಮಸ್ಕ್ ನರೇಂದ್ರ ಮೋದಿ ಭೇಟಿ; ಭಾರತಕ್ಕೆ ಆಗುವ ಅನುಕೂಲಗಳೇನು, ಇಲ್ಲಿದೆ ಡೀಟೇಲ್ಸ್
ಕೆಲ ವರದಿಗಳ ಪ್ರಕಾರ 1975ರಲ್ಲಿ ಸ್ಪೀತಿಯಲ್ಲಿ ಭೂಕಂಪ ಸಂಭವಿಸಿತ್ತು. ಆಗ ಸಂಘಾ ತೆನ್ಜಿನ್ ಹೆಸರಿನ ಬೌದ್ಧ ಬಿಕ್ಷುವೊಬ್ಬರ ಸಂರಕ್ಷಿತ ದೇಹ ಪತ್ತೆಯಾಗಿತ್ತು. ಆಗ ಜನರಿಗೆ ಇಂಥದ್ದೊಂದು ಗ್ರಾಮ ಅಸ್ತಿತ್ವದಲ್ಲಿತ್ತು ಎಂಬುದು ಗೊತ್ತಾಗಿತ್ತು. ಸುಮಾರು 25 ವರ್ಷ ಕಾಲ ಸ್ಥಳೀಯರು ಮತ್ತು ಐಟಿಬಿಪಿ ಅರೆಸೇನಾ ಪೊಲೀಸ್ ಪಡೆ ಈ ಗ್ರಾಮದ ಬಗ್ಗೆ ರಹಸ್ಯ ಪಾಲನೆ ಮಾಡಿದ್ದರು. 2000ರ ಇಸವಿ ಬಳಿಕ ಗುಯೇ ಗ್ರಾಮ ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳಗಳಲ್ಲೊಂದೆನಿಸಿದೆ.
ದೂರಸಂಪರ್ಕ ಇಲಾಖೆ ಮಾಡಿದ ಟ್ವೀಟ್
Telecom connectivity reaches 14,931 Ft above sea level at India’s first village, Kaurik and Guea, in Lahaul & Spiti District, HP.
🛜 Connecting the unconnected. pic.twitter.com/tD3CwsAUj9
— DoT India (@DoT_India) April 16, 2024
ಇವತ್ತು ಗುಯೇ ಗ್ರಾಮದ ಪರ್ವತದ ಮೇಲೆ 10X10 ಅಡಿಯ ಸಣ್ಣ ಕೋಣೆಯ ಗಾಜಿನ ಪೆಟ್ಟಿಗೆಯೊಳಗೆ ಇರಿಸಲಾಗಿದೆ. ಈಗಲೂ ಕೂಡ ಗುಯೇ ಗ್ರಾಮದಲ್ಲಿ ಐಟಿಬಿಪಿ ಪಡೆಗಳು ಭದ್ರತೆ ನೀಡುತ್ತಿವೆ.
ಇದನ್ನೂ ಓದಿ: ಚೈನ್ ಸ್ಮೋಕರ್ಸ್ 30 ವರ್ಷ ಬದುಕಬಲ್ಲುರು, ಈ ಎಫ್ ಅಂಡ್ ಒ ಟ್ರೇಡರ್ಸ್ ಬೇಗ ‘ಹೊಗೆ’ನೇ: ವಿಜಯ್ ಕೇದಿಯಾ
ಗುಯೇ ರೀತಿಯಲ್ಲಿ ಕೌರಿಕ್ ಗ್ರಾಮ 25 ವರ್ಷದ ಹಿಂದೆ ಭೂಕಂಪ ಮತ್ತು ಪ್ರವಾಹದ ಕಾರಣ ನಿರ್ಜನ ಪ್ರದೇಶವಾಗಿ ಹೋಗಿತ್ತು. ಎಲ್ಲಾ ಜನರು ಬೇರೆಡೆಗೆ ವಲಸೆ ಹೋಗಿದ್ದರು. ಇವತ್ತು ಹಿಂದಿನ ಹಳ್ಳಿಯನ್ನು ನೆನಪಿಸುವ ಹಾಳಾದ ಮನೆ, ರಸ್ತೆ ಇತ್ಯಾದಿ ಕುರುಹುಗಳನ್ನು ಮಾತ್ರ ಕಾಣಬಹುದು. ಈ ಪ್ರದೇಶವೂ ಕೂಡ ಇಂಡೋ ಟೆಬೇಟನ್ ಬಾರ್ಡರ್ ಪೊಲೀಸ್ ಪಡೆಗಳ ಸುಪರ್ದಿಯಲ್ಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ