ಇಸ್ರೇಲ್ ಯುದ್ಧಭೀತಿ: ಅದಾನಿ ಪೋರ್ಟ್ಸ್ ಕಂಪನಿಯತ್ತ ಷೇರುದಾರರ ಚಿತ್ತ ಯಾಕೆ? ಇಲ್ಲಿದೆ ಅದಾನಿ ಇಸ್ರೇಲ್ ನಂಟು
Israel and Adani Group link: ಇಸ್ರೇಲ್ನಲ್ಲಿ ಯುದ್ಧ ವಾತಾವರಣ ನೆಲಸಿರುವ ಮಧ್ಯೆಯೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಪೋರ್ಟ್ಸ್ ಷೇರಿನ ಮೇಲೆ ಬಹಳಷ್ಟು ಜನರ ಚಿತ್ತ ನೆಟ್ಟಿದೆ. ಇಸ್ರೇಲ್ನ ಹೈಫಾ ಬಂದರನ್ನು ಅದಾನಿ ಪೋರ್ಟ್ಸ್ ನಿರ್ವಹಿಸುತ್ತಿದೆ. ಈಗ ಇಸ್ರೇಲ್ನಲ್ಲಿ ಯುದ್ಧಭೀತಿ ಹೆಚ್ಚಾದರೆ ಈ ಪೋರ್ಟ್ ಕಾರ್ಯಸ್ಥಗಿತಗೊಳ್ಳಬಹುದು. ಈ ಕಾರಣಕ್ಕೆ ಅದಾನಿ ಪೋರ್ಟ್ಸ್ ಷೇರುದಾರರಿಗೆ ಗೊಂದಲವಾಗಿದೆ. ತಜ್ಞರ ಪ್ರಕಾರ ಅದಾನಿ ಪೋರ್ಟ್ಸ್ನ ಒಟ್ಟು ಬಿಸಿನೆಸ್ನಲ್ಲಿ ಹೈಫಾ ಪೋರ್ಟ್ ವಹಿವಾಟಿನ ಪಾಲು ಬಹಳ ಕಡಿಮೆ. ದೂರ ದೃಷ್ಟಿಯಲ್ಲಿ ಇಸ್ರೇಲ್ ಯುದ್ಧದಿಂದ ಅದಾನಿ ಪೋರ್ಟ್ಸ್ಗೆ ಹೆಚ್ಚೇನೂ ಹಾನಿಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ನವದೆಹಲಿ, ಏಪ್ರಿಲ್ 18: ಇಸ್ರೇಲ್ ಇರಾನ್ ಮಧ್ಯೆ ಯುದ್ಧ ಭೀತಿ ನೆಲಸಿರುವ ನಡುವೆಯೇ ಲೆಬನಾನ್ನ ಹಿಜ್ಬೋಲ್ಲಾ ಉಗ್ರ ಪಡೆಗಳು (Hezbolla militants) ಇಸ್ರೇಲ್ ಮೇಲೆ ಮಿಸೈಲ್ ಮತ್ತು ಡ್ರೋನ್ಗಳಿಂದ ದಾಳಿ ಮಾಡಿವೆ. ಉತ್ತರ ಇಸ್ರೇಲ್ನಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ಸಂಭವಿಸಿದ ಈ ಘಟನೆಯಲ್ಲಿ 14 ಮಂದಿ ಯೋಧರಿಗೆ ಗಾಯವಾಗಿರುವುದು ತಿಳಿದುಬಂದಿದೆ. ಇಸ್ರೇಲ್ ಬಿಕ್ಕಟ್ಟಿನ (Israel war crisis) ಪರಿಣಾಮವಾಗಿ ಸೋಮವಾರ ಮತ್ತು ಮಂಗಳವಾರ ಷೇರು ಮಾರುಕಟ್ಟೆ ಕುಸಿದಿತ್ತು. ಇವತ್ತು ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು (stock market) ಹಸಿರು ಬಣ್ಣದಲ್ಲಿವೆ. ಈ ಮಧ್ಯೆ ಬಹಳ ಜನರ ಚಿತ್ತ ಅದಾನಿ ಪೋರ್ಟ್ಸ್ ಕಂಪನಿಯತ್ತ ನೆಟ್ಟಿದೆ. ಇದಕ್ಕೆ ಕಾರಣ ಇಸ್ರೆಲ್ನ ಹೈಫಾ ಪೋರ್ಟ್.
ಹಿಜ್ಬೊಲ್ಲಾ ಉಗ್ರರು ದಾಳಿ ನಡೆಸಿದ ಉತ್ತರ ಇಸ್ರೇಲ್ನಲ್ಲಿ ಹೈಫಾ ಬಂದರು ಇರುವುದು. ಈ ಪೋರ್ಟ್ನಲ್ಲಿ ಅದಾನಿ ಕಂಪನಿಯ ಪಾಲು ಸಾಕಷ್ಟು ಇದೆ. ಈಗ ಇಸ್ರೇಲ್ನಲ್ಲಿ ಯುದ್ಧ ಮುಂದುವರಿದರೆ ಅದಾನಿ ಪೋರ್ಟ್ಸ್ನ ಕಾರ್ಯಾಚರಣೆಗೆ ಧಕ್ಕೆ ಆಗುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಅದಾನಿ ಪೋರ್ಟ್ಸ್ನ ಷೇರಿನ ಮೇಲೆ ಅನೇಕರ ಚಿತ್ತ ನೆಟ್ಟಿರುವುದು.
ಇದನ್ನೂ ಓದಿ: ಕ್ಷಿಪಣಿ ದಾಳಿಗೂ ಮುನ್ನ ಇರಾನ್ ವಾಯು ಪ್ರದೇಶದಲ್ಲಿ ಹಾರಾಟ ನಡೆಸಿದ್ದ ಏರ್ ಇಂಡಿಯಾ ವಿಮಾನಗಳು
ಇವತ್ತು ಬೆಳಗಿನ ವಹಿವಾಟಿನಲ್ಲಿ ಅದಾನಿ ಪೋರ್ಟ್ಸ್ ಷೇರು ಅಚ್ಚರಿ ರೀತಿಯಲ್ಲಿ ಪಾಸಿಟಿವ್ ಆಗಿದೆ. ಶೇ. 2.40ರಷ್ಟು ಷೇರುಬೆಲೆ ಹೆಚ್ಚಳವಾಗಿ 1,336 ರೂ ಮಟ್ಟಕ್ಕೆ ಏರಿದೆ. ಆದರೆ, ಕೆಲ ಷೇರುಪೇಟೆ ತಜ್ಞರು ಅದಾನಿ ಪೋರ್ಟ್ಸ್ ಷೇರು ಕುಸಿತ ಕಾಣಬಹುದು ಎಂದು ನಿರೀಕ್ಷಿಸಿದ್ದಾರೆ. ಅವರ ಪ್ರಕಾರ ಸ್ಟಾಪ್ ಲಾಸ್ ಆಗಿ 1,280 ರೂ ಅನ್ನು ನಿಗದಿ ಮಾಡಿದ್ದಾರೆ. ಅಂದರೆ, ಅದಾನಿ ಪೋರ್ಟ್ಸ್ ಷೇರು ಬೆಲೆ 1,280 ರೂಗಿಂತ ಕೆಳಗೆ ಕುಸಿಯಲು ಆರಂಭಿಸಿದರೆ ಅದನ್ನು ಮಾರಿಬಿಡುವಂತೆ ಸಲಹೆ ನೀಡಿದ್ದಾರೆ.
ಹೈಫಾ ಪೋರ್ಟ್ನ ಬಿಸಿನೆಸ್ ಅದಾನಿ ಕಂಪನಿಗೆ ಬಿಗ್ ಡೀಲ್ ಅಲ್ಲ
ಅದಾನಿ ಗ್ರೂಪ್ ಕಂಪನಿ ವಿಶ್ವಾದ್ಯಂತ ಹಲವೆಡೆ ಬಂದರುಗಳನ್ನು ನಿರ್ವಹಿಸುತ್ತಿದೆ. ಹೈಫಾ ಪೋರ್ಟ್ನಿಂದ ಬರುವ ಆದಾಯ ಅದಾನಿ ಪೋರ್ಟ್ಸ್ನ ಒಟ್ಟು ಆದಾಯದ ಶೇ. 3 ಮಾತ್ರ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಇಸ್ರೇಲ್ನಲ್ಲಿ ಯುದ್ಧ ಮುಂದುವರಿದು ಹೈಫಾದಲ್ಲಿನ ಸರಕು ಸಾಗಣೆ ವಹಿವಾಟು ನಿಂತು ಹೋದರೂ ಅದಾನಿ ಪೋರ್ಟ್ಸ್ನ ಬಿಸಿನೆಸ್ಗೆ ದೊಡ್ಡ ಪೆಟ್ಟೇನೂ ಬೀಳುವುದಿಲ್ಲ.
ಇದನ್ನೂ ಓದಿ: ಭಾರತಕ್ಕೆ ರಾಜತಾಂತ್ರಿಕ ಜಯ: ಭಾರತೀಯರನ್ನು ಬಂಧಿಸಿಲ್ಲ, ಯಾವಾಗಬೇಕಾದರೂ ಭಾರತಕ್ಕೆ ಹೋಗಬಹುದು
ಈ ಕಾರಣಕ್ಕೆ ಒಂದು ವೇಳೆ ಅದಾನಿ ಪೋರ್ಟ್ಸ್ನ ಷೇರುಬೆಲೆ ಕುಸಿತ ಕಂಡಿದ್ದೇ ಆದಲ್ಲಿ ಅದನ್ನು ಖರೀದಿಸುವುದು ಜಾಣತನ ಎಂದು ಕೆಲ ತಜ್ಞರು ಸಲಹೆ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ