Lok Sabha Election 2024: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಅಂತ್ಯ, ಯಾವ ರಾಜ್ಯದಲ್ಲಿ ಎಷ್ಟಾಯ್ತು ಮತದಾನ?

| Updated By: ರಮೇಶ್ ಬಿ. ಜವಳಗೇರಾ

Updated on:Apr 19, 2024 | 6:57 PM

Lok Sabha Poll 2024 Phase 1 Voting News and Updates in Kannada: ದೇಶದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಇಂದು (ಏಪ್ರಿಲ್ 19) ಮೊದಲನೇ ಹಂತದಲ್ಲಿ ಮತದಾರ ಅಭ್ಯರ್ಥಿಗಳ ಭವಿಷ್ಯವನ್ನೇ ಬರೆದಿದ್ದಾನೆ. ಕೇಂದ್ರಾಡಳಿತ ಪ್ರದೇಶಗಳು ಸೇರಿ 21 ರಾಜ್ಯಗಳ 102 ಕ್ಷೇತ್ರಗಳ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಅಂತ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ತಮಿಳುನಾಡಿನ 39 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನವಾಗಿದ್ದು, ರಾಜಕೀಯ ನಾಯಕರು, ಗಣ್ಯರಿಂದ ಹಿಡಿದು ಸಿನಿಮಾ ನಟ, ನಟಿಯರು ಮತಚಲಾಯಿಸಿದ್ದಾರೆ. ಇನ್ನು ಕೆಲ ಕಡೆಗಳಲ್ಲಿ ಅಹಿತಕರ ಘಟನೆ ಹೊರತುಪಡಿಸಿ ಉಳಿದೆಡೆ ಶಾಂತಿಯುತವಾಗಿ ಮತದಾನ ನಡೆದಿದೆ. ಹಾಗಾದ್ರೆ, ಯಾವೆಲ್ಲಾ ರಾಜ್ಯಗಳಲ್ಲಿ ಎಷ್ಟು ಪರ್ಸೆಂಟ್ ಮತದಾನವಾಗಿದೆ ಎನ್ನುವ ವಿವರ ಇಲ್ಲಿದೆ.

Lok Sabha Election 2024: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಅಂತ್ಯ, ಯಾವ ರಾಜ್ಯದಲ್ಲಿ ಎಷ್ಟಾಯ್ತು ಮತದಾನ?

Lok Sabha Election 2024 Voting News Updates in Kannada: 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಕ್ಷೇತ್ರಗಳಿಗೆ ಇಂದು ನಡೆದಿದ್ದ ಲೋಕಸಭಾ ಚುನಾವಣೆಯ (Lok Sabha Elections 2024) ಮೊದಲ ಹಂತದ ಮತದಾನ ಮತದಾನ (Voting) ಅಂತ್ಯವಾಗಿದೆ. ಇದರೊಂದಿಗೆ 102 ಕ್ಷೇತ್ರಗಳ ಒಟ್ಟು 1625 ಅಭ್ಯರ್ಥಿಗಳ ಭವಿಷ್ಯ ಇವಿಎಂ ಸೇರಿದೆ. 9 ಲೋಕಸಭಾ ಸ್ಥಾನಗಳನ್ನು (Lok Sabha Constituencies) ಹೊಂದಿರುವ ಈಶಾನ್ಯದ ಆರು ರಾಜ್ಯಗಳು, ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳು, ಲಕ್ಷದ್ವೀಪದ 1 ಕ್ಷೇತ್ರ, ಅರುಣಾಚಲ ಪ್ರದೇಶದ 2, ಬಿಹಾರದ 4, ಅಸ್ಸಾಂನ 4, ಛತ್ತೀಸ್‌ಗದ 1, ಮಧ್ಯಪ್ರದೇಶದ 6, ಮಹಾರಾಷ್ಟ್ರದ 5, ಮಣಿಪುರದ 2, ಮೇಘಾಲಯದ 2, ಮಿಜೋರಾಂದ 1, ನಾಗಾಲ್ಯಾಂಡ್‌ನ 1, ರಾಜಸ್ಥಾನದ 12, ಸಿಕ್ಕಿಂನ 1, ತ್ರಿಪುರಾದ 1, ಉತ್ತರ ಪ್ರದೇಶದ 8, ಉತ್ತರಾಖಂಡದ 5, ಪಶ್ಚಿಮ ಬಂಗಾಳದ 3, ತಮಿಳುನಾಡಿನ 39, ಅಂಡಮಾನ್ ಮತ್ತು ನಿಕೋಬಾರ್‌ನ 1, ಜಮ್ಮು ಮತ್ತು ಕಾಶ್ಮೀರದ 1, ಲಕ್ಷದ್ವೀಪದ 1 ಮತ್ತು ಪುದುಚೇರಿಯ 1 ಲೋಕಸಭಾ ಕ್ಷೇತ್ರಕ್ಕೆ ನಡೆದ  ಮತದಾನ ಮುಕ್ತಾಯವಾಗಿದ್ದು, ಎಲ್ಲಿ ಎಷ್ಟು ಮತದಾನವಾಗಿದೆ ಎನ್ನುವ ಹೈಲೇಟ್ಸ್​ ಇಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

LIVE NEWS & UPDATES

The liveblog has ended.
  • 19 Apr 2024 06:50 PM (IST)

    ಯಾವ ರಾಜ್ಯದಲ್ಲಿ ಎಷ್ಟಾಯ್ತು ಮತದಾನ?

    ಇಂದು(ಏಪ್ರಿಲ್ 19) ಬೆಳಗ್ಗೆ 7 ಗಂಟೆ ನಡೆದಿದ್ದ ಮತದಾನ ಪ್ರಕ್ರಿಯೆ ಇದೀಗ ಮುಗಿದಿದೆ. ಇದರೊಂದಿಗೆ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಯಶಸ್ವಿಯಾಗಿ ಅಂತ್ಯವಾದಂತಾಗಿದೆ. ಇನ್ನು ಮೊದಲ ಹಂತದಲ್ಲಿ ಯಾವ ರಾಜ್ಯದಲ್ಲಿ ಎಷ್ಟು ಪರ್ಸೆಂಟ್ ಮತದಾನವಾಗಿದೆ ಎನ್ನುವುದು ಇನ್ನೂ ಚುನಾವಣೆ ಆಯೊಗ ಅಧಿಕೃತವಾಗಿ ತಿಳಿಸಿಲ್ಲ. ಬದಲಿಗೆ 5 ಗಂಟೆ ವರೆಗಿನ ಅಂಕಿ-ಅಂಶ ಸಿಕ್ಕಿದೆ. ಐದು ಗಂಟೆವರೆಗೆ ಎಷ್ಟು ಮತದಾನವಾಗಿತ್ತು ಎನ್ನುವುದು ಚಾಟ್​​ನಲ್ಲಿದೆ ನೋಡಿ.

  • 19 Apr 2024 06:41 PM (IST)

    ಮೊದಲ ಹಂತದ ಮತದಾನ ಅಂತ್ಯ

    ಇಂದು (ಏಪ್ರಿಲ್ 19) ದೇಶದಲ್ಲಿ ಲೋಕಸಭಾ ಚುನಾವಣೆಯ ಮೊದಲನೇ ಹಂತ ಮತದಾನ ಮುಕ್ತಾಯವಾಗಿದೆ. ಕೇಂದ್ರಾಡಳಿತ ಪ್ರದೇಶಗಳು ಸೇರಿ 21 ರಾಜ್ಯಗಳ 102 ಕ್ಷೇತ್ರಗಳ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಅಂತ್ಯವಾಗಿದ್ದು, ಕೆಲ ಕಡೆಗಳಲ್ಲಿ ಅಹಿತಕರ ಘಟನೆ ಹೊರತುಪಡಿಸಿ ಉಳಿದೆಡೆ ಶಾಂತಿಯುತವಾಗಿ ಮತದಾನ ನಡೆದಿದೆ.

  • 19 Apr 2024 03:00 PM (IST)

    Lok Sabha Election 2024 LIVE Updates: ಲೋಕಸಭೆ ಚುನಾವಣೆ; ಯಾವ ರಾಜ್ಯದಲ್ಲಿ ಎಷ್ಟಾಯ್ತು ಮತದಾನ?

    ಉತ್ತರ ಪ್ರದೇಶದ 8 ಲೋಕಸಭಾ ಕ್ಷೇತ್ರಗಳ ಪೈಕಿ ಮಧ್ಯಾಹ್ನ 1 ಗಂಟೆಯವರೆಗೆ ಸಹರಾನ್‌ಪುರದಲ್ಲಿ ಶೇ 42.32, ಕೈರಾನಾದಲ್ಲಿ ಶೇ 37.92, ಮುಜಾಫರ್‌ನಗರದಲ್ಲಿ ಶೇ 34.51, ಬಿಜ್ನೋರ್‌ನಲ್ಲಿ ಶೇ 36.08, ನಗೀನಾದಲ್ಲಿ ಶೇ 38.28, ಮೊರಾದಾಬಾದ್‌ನಲ್ಲಿ ಶೇ 35.25 ಮತದಾನವಾಗಿದೆ. ಉತ್ತರ ಪ್ರದೇಶದಲ್ಲಿ ಸರಾಸರಿ 36.96 ರಷ್ಟು ಮತದಾನವಾಗಿದೆ. ಉಳಿದ ರಾಜ್ಯಗಳ ಮಧ್ಯಾಹ್ನ 1 ಗಂಟೆಯವರೆಗಿನ ಮತದಾನದ ವಿವರ ಇಲ್ಲಿದೆ.

  • 19 Apr 2024 01:49 PM (IST)

    Lok Sabha Election 2024 LIVE Updates: ಲೋಕಸಭೆ ಚುನಾವಣೆ; ಬಂಗಾಳದಲ್ಲಿ ಬಂಪರ್ ಮತದಾನ

    ಪಶ್ಚಿಮ ಬಂಗಾಳದಲ್ಲಿ ಬಂಪರ್ ಮತದಾನ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆವರೆಗೆ ರಾಜ್ಯದಲ್ಲಿ ಶೇ 50ಕ್ಕೂ ಹೆಚ್ಚು ಮತದಾನ ನಡೆದಿದೆ. ಅದೇ ವೇಳೆ ತ್ರಿಪುರಾದಲ್ಲೂ ಉತ್ತಮ ಪ್ರಮಾಣದ ಮತದಾನ ನಡೆಯುತ್ತಿದೆ. ಶೇ 53.04 ರಷ್ಟು ಮತದಾನ ಇಲ್ಲಿ ನಡೆದಿದೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಬೆಳಿಗ್ಗೆಗೆ ಹೋಲಿಸಿದರೆ ಮತದಾನ ವೇಗ ಪಡೆದುಕೊಂಡಿದೆ. ಮಧ್ಯಾಹ್ನ 1 ಗಂಟೆವರೆಗೆ ಉತ್ತರ ಪ್ರದೇಶದಲ್ಲಿ ಶೇ 37ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಶೇ 32.41ರಷ್ಟು ಮತದಾನವಾಗಿದೆ.

  • 19 Apr 2024 12:58 PM (IST)

    Lok Sabha Election 2024 LIVE Updates: ಬಂಗಾಳದ ಕೂಚ್ ಬೆಹಾರ್‌ನಲ್ಲಿ ಹಿಂಸಾಚಾರ, ಬಿಜೆಪಿ ಬೆಂಬಲಿಗರ ಮನೆಗಳ ಧ್ವಂಸ

    ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ನಲ್ಲಿ ಮತದಾನದ ವೇಳೆ ಹಿಂಸಾಚಾರ ನಡೆದಿದೆ. ಇಲ್ಲಿ ಬಿಜೆಪಿ ಬೆಂಬಲಿಗರ ಮನೆಗಳನ್ನು ಧ್ವಂಸಗೊಳಿಸಲಾಗಿದೆ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಆದರೆ, ದಾಳಿಯ ಆರೋಪವನ್ನು ತೃಣಮೂಲ ಕಾಂಗ್ರೆಸ್ ತಳ್ಳಿಹಾಕಿದೆ.

  • 19 Apr 2024 12:03 PM (IST)

    Lok Sabha Elections 2024: ಮತದಾನ ಮಾಡಿದ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ

    ತಮಿಳುನಾಡಿನಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದೆ.  ರಾಜ್ಯಪಾಲ ಆರ್ ಎನ್ ರವಿ ಮತ್ತು ಅವರ ಪತ್ನಿ ಲಕ್ಷ್ಮಿ ಚೆನ್ನೈನ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಸರ್ಕಾರ ಮತ್ತು ರಾಜ್ಯಪಾಲ ಆರ್ ಎನ್ ರವಿ ನಡುವೆ ಒಂದಲ್ಲ ಒಂದು ವಿವಾದಗಳು ನಡೆಯುತ್ತಿರುತ್ತದೆ. ಈ ಕಾರಣದಿಂದ ಆರ್ ಎನ್ ರವಿ ಸುದ್ದಿಯಲ್ಲಿ ಇರುತ್ತಿದ್ದರು.

  • 19 Apr 2024 10:48 AM (IST)

    Lok Sabha Election 2024 LIVE Updates: ನೂತನ ವಧೂವರರಿಂದ ಮತದಾನ

    ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ನೂತನ ವಧೂವರರು ಮತದಾನ ಮಾಡಿದರು. ಬಳಿಕ ಮಾತನಾಡಿದ ವಧು ರಾಧಿಕಾ ಶರ್ಮಾ, ನಿನ್ನೆ ನಮ್ಮ ಮದುವೆ ಸಮಾರಂಭ ನಡೆದಿದ್ದು, ಇಂದು ನಮ್ಮ ಮತವನ್ನು ಕಡ್ಡಾಯವಾಗಿ ಚಲಾಯಿಸುವಂತೆ ತಿಳಿಸಿ ಮತಗಟ್ಟೆಗೆ ಬಂದೆವು. ಯಾರೂ ಸಹ ಮತಗಳನ್ನು ವ್ಯರ್ಥ ಮಾಡಬಾರದು ಎಂದು ಎಲ್ಲರಲ್ಲಿಯೂ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

  • 19 Apr 2024 10:42 AM (IST)

    Lok Sabha Election 2024 LIVE Updates: ಸದ್ಗುರು ಜಗ್ಗಿ ವಾಸುದೇವ್ ಮತದಾನ

    ಆಧ್ಯಾತ್ಮಿಕ ಗುರು ಮತ್ತು ಇಶಾ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ತಮಿಳುನಾಡಿನ ಕೊಯಮತ್ತೂರಿನಲ್ಲಿ ಮತದಾನ ಮಾಡಿದರು.

  • 19 Apr 2024 09:45 AM (IST)

    Lok Sabha Election 2024 LIVE Updates: ಬಂಗಾಳದಲ್ಲಿ ಭರದಿಂದ ಸಾಗಿದ ವೋಟಿಂಗ್, 9 ಗಂಟೆ ವೇಳೆಗೆ ಶೇ 15 ರಷ್ಟು ಮತದಾನ

    ಪಶ್ಚಿಮ ಬಂಗಾಳದ 3 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಮತದಾನ ಭರದಿಂದ ಸಾಗುತ್ತಿದೆ. ಬೆಳಗ್ಗೆ 9 ಗಂಟೆ ವೇಳೆಗೆ ಶೇ 15ರಷ್ಟು ಮತದಾನವಾಗಿದೆ.

  • 19 Apr 2024 09:37 AM (IST)

    Lok Sabha Election 2024 LIVE Updates: ಕೈರಾನಾದಲ್ಲಿ ಉದ್ದೇಶಪೂರ್ವಕ ನಿಧಾನ ಮತದಾನ: ಎಸ್​​ಪಿ ಆರೋಪ

    ಉತ್ತರ ಪ್ರದೇಶದ ಕೈರಾನಾ ಲೋಕಸಭೆಯ ಕೈರಾನಾ ನಗರ ಇಸ್ಲಾಮಿಯಾ ಇಂಟರ್ ಕಾಲೇಜಿನಲ್ಲಿ ಮತದಾನ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಮತದಾನ ನಿಧಾನವಾಗುವಂತೆ ಆಡಳಿತ ಬಲವಂತವಾಗಿ ಪ್ರಭಾವ ಬೀರುತ್ತಿದೆ. ಚುನಾವಣಾ ಆಯೋಗ ಗಮನಹರಿಸಬೇಕು. ನ್ಯಾಯಸಮ್ಮತ ಮತದಾನವಾಗುವಂತೆ ನೋಡಿಕೊಳ್ಳಬೇಕು ಎಂದು ಸಮಾಜವಾದಿ ಪಕ್ಷ ಆಗ್ರಹಿಸಿದೆ.

  • 19 Apr 2024 09:09 AM (IST)

    Lok Sabha Election 2024 LIVE Updates: ಕೈಕೊಟ್ಟ ಮತಗಟ್ಟೆ ಸಿಬ್ಬಂದಿ ಆರೋಗ್ಯ, ಕೆಲವೆಡೆ ಕೆಟ್ಟು ಹೋದ ಇವಿಎಂ

    ಉತ್ತರಾಖಂಡದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ, ಇದರಲ್ಲಿ ಪೌರಿ-ಗಢವಾಲ್, ತಿಹ್ರಿ, ಅಲ್ಮೋರಾ, ಹರಿದ್ವಾರ ಮತ್ತು ನೈನಿತಾಲ್ ಸ್ಥಾನಗಳು ಸೇರಿವೆ. ಆದರೆ, ಮತದಾನ ಆರಂಭವಾಗುತ್ತಿದ್ದಂತೆಯೇ ವಿವಿಧ ಬೂತ್‌ಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡವು. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

  • 19 Apr 2024 08:40 AM (IST)

    Lok Sabha Election 2024 LIVE Updates: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ; ಪ್ರಧಾನಿ ಮೋದಿ ಮನವಿ

    2024ರ ಲೋಕಸಭೆ ಚುನಾವಣೆ ಇಂದಿನಿಂದ ಆರಂಭವಾಗಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 102 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿರುವುದರಿಂದ, ಈ ಕ್ಷೇತ್ರಗಳಿಗೆ ಮತ ಚಲಾಯಿಸುವ ಎಲ್ಲರಿಗೂ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ಯುವ ಮತ್ತು ಮೊದಲ ಬಾರಿಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ವಿಶೇಷವಾಗಿ ಮನವಿ ಮಾಡುತ್ತೇನೆ. ಪ್ರತಿ ಮತವು ಎಣಿಕೆಯಾಗಲಿದೆ ಮತ್ತು ಪ್ರತಿಯೊಬ್ಬರ ಧ್ವನಿಯು ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್​ ಮೂಲಕ ಮನವಿ ಮಾಡಿದ್ದಾರೆ.

  • 19 Apr 2024 08:37 AM (IST)

    Lok Sabha Election 2024 LIVE Updates: ನಟ ರಜನಿಕಾಂತ್ ಮತದಾನ

    ತಮಿಳುನಾಡಿನಲ್ಲಿ ನಟ ರಜನಿಕಾಂತ್ ಮತದಾನ ಮಾಡಿದರು.

  • 19 Apr 2024 08:36 AM (IST)

    Lok Sabha Election 2024 LIVE Updates: ಮತ ಚಲಾಯಿಸಿದ ಕಮಲ್ ನಾಥ್

    ಕಾಂಗ್ರೆಸ್ ಮುಖಂಡರಾದ ಕಮಲ್ ನಾಥ್, ನಕುಲ್ ನಾಥ್ ಹಾಗೂ ಅವರ ಕುಟುಂಬಸ್ಥರು ಮತದಾನ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಸತ್ಯಕ್ಕೆ ಜಯ ಸಿಗಲಿದೆ ಎಂದರು.

  • 19 Apr 2024 08:06 AM (IST)

    Lok Sabha Election 2024 LIVE Updates: ಗರಿಷ್ಠ ಸಂಖ್ಯೆಯಲ್ಲಿ ಮತದಾನಕ್ಕೆ ಅಮಿತ್ ಶಾ ಕರೆ

    ಇಂದು ದೇಶದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿರುವ ಪ್ರಮುಖ ದಿನವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಹಂತದ ಎಲ್ಲಾ ಮತದಾರರು ಗರಿಷ್ಠ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡುತ್ತೇನೆ. ಏಕೆಂದರೆ ನಿಮ್ಮ ಒಂದು ಮತವು ಸುರಕ್ಷಿತ, ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತವನ್ನು ಮಾಡುವ ಶಕ್ತಿಯನ್ನು ಹೊಂದಿದೆ. ನಿಮ್ಮ ಒಂದು ಮತವು ಕೇವಲ ಒಬ್ಬ ಲೋಕಸಭೆ ಅಥವಾ ಅಭ್ಯರ್ಥಿಯ ಫಲಿತಾಂಶವನ್ನು ನಿರ್ಧರಿಸುವುದಲ್ಲ. ಭಾರತದ ಉಜ್ವಲ ಭವಿಷ್ಯಕ್ಕಾಗಿ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದಿಂದ ದೇಶವನ್ನು ಮುಕ್ತಗೊಳಿಸುವುದರೊಂದಿಗೆ ಭರವಸೆಗಳನ್ನು ಈಡೇರಿಸುವ ಪ್ರಬಲ ಮತ್ತು ನಿರ್ಣಾಯಕ ನಾಯಕತ್ವವನ್ನು ಆಯ್ಕೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

  • 19 Apr 2024 08:05 AM (IST)

    Lok Sabha Election 2024 LIVE Updates: ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನ ಆರಂಭ

    ಲೋಕಸಭೆಯ 102 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. 21 ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ.

  • 19 Apr 2024 07:00 AM (IST)

    Lok Sabha Election 2024 LIVE Updates: 8 ಮಂದಿ ಕೇಂದ್ರ ಸಚಿವರ ಭವಿಷ್ಯ ನಿರ್ಧಾರ

    ನಿತಿನ್ ಗಡ್ಕರಿ ಸೇರಿದಂತೆ ಎಂಟು ಮಂದಿ ಕೇಂದ್ರ ಸಚಿವರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಇದೆ.

  • 19 Apr 2024 06:57 AM (IST)

    Lok Sabha Election 2024 LIVE Updates: 2019ರ ಫಲಿತಾಂಶ ಹೀಗಿತ್ತು

    2019 ರ ಲೋಕಸಭೆ ಚುನಾವಣೆಯಲ್ಲಿ, ಈ 102 ಕ್ಷೇತ್ರಗಳಲ್ಲಿ ಬಿಜೆಪಿ 60 ಕ್ಷೇತ್ರ ಮತ್ತು ಕಾಂಗ್ರೆಸ್ 65 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಇದಲ್ಲದೇ 24 ಕ್ಷೇತ್ರಗಳಲ್ಲಿ ಡಿಎಂಕೆ ಸ್ಪರ್ಧಿಸಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿ 40, ಕಾಂಗ್ರೆಸ್ 15 ಮತ್ತು ಡಿಎಂಕೆ 24 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಇದಲ್ಲದೇ ಬಿಎಸ್‌ಪಿ 3 ಮತ್ತು ಎಸ್‌ಪಿ 2 ಸ್ಥಾನಗಳನ್ನು ಗೆದ್ದುಕೊಂಡಿದ್ದವು. 18 ಸ್ಥಾನಗಳನ್ನು ಇತರೆ ಪಕ್ಷಗಳು ಗೆದ್ದಿದ್ದವು. ಈ ಮೂಲಕ 102 ಕ್ಷೇತ್ರಗಳ ಪೈಕಿ ಯುಪಿಎ 45 ಮತ್ತು ಎನ್ ಡಿಎ 41 ಸ್ಥಾನಗಳನ್ನು ಗೆದ್ದುಕೊಂಡಿದ್ದವು.

  • 19 Apr 2024 06:54 AM (IST)

    Lok Sabha Election 2024 LIVE Updates: ಯಾವ ಪಕ್ಷದಿಂದ ಎಷ್ಟು ಮಂದಿ ಅಭ್ಯರ್ಥಿಗಳು?

    ಬಿಎಸ್‌ಪಿಯಿಂದ 86, ಬಿಜೆಪಿಯಿಂದ 77, ಕಾಂಗ್ರೆಸ್‌ನಿಂದ 56, ಎಐಎಡಿಎಂಕೆಯಿಂದ 36, ಡಿಎಂಕೆಯಿಂದ 5, ಆರ್‌ಜೆಡಿಯಿಂದ 4, ಎಸ್‌ಪಿಯಿಂದ 7, ಆರ್‌ಎಲ್‌ಡಿಯಿಂದ 1, ಎಲ್‌ಜೆಪಿ (ಆರ್) ಮತ್ತು ಜಿತನ್ ರಾಮ್ ಮಾಂಝಿ ಅವರ ಪಕ್ಷದ 1 ಅಭ್ಯರ್ಥಿಯು ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ.

  • 19 Apr 2024 06:53 AM (IST)

    Lok Sabha Election 2024 LIVE Updates: 1625 ಅಭ್ಯರ್ಥಿಗಳು ಕಣದಲ್ಲಿ

    ಮೊದಲ ಹಂತದ ಮತದಾನದಲ್ಲಿ 102 ಸ್ಥಾನಗಳಲ್ಲಿ 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲಿ 134 ಮಹಿಳಾ ಅಭ್ಯರ್ಥಿಗಳು ಮತ್ತು 1491 ಪುರುಷ ಅಭ್ಯರ್ಥಿಗಳಾಗಿದ್ದಾರೆ.

  • Published On - Apr 19,2024 6:52 AM

    Follow us
    ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಶಿವಕುಮಾರ್ ಬರಲಿದ್ದಾರೆ: ಯೋಗೇಶ್ವರ್
    ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಶಿವಕುಮಾರ್ ಬರಲಿದ್ದಾರೆ: ಯೋಗೇಶ್ವರ್
    ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
    ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
    ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
    ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
    ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
    ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
    ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
    ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
    ಯೋಗೇಶ್ವರ್​ನನ್ನು ಸೇರಿಸಿಕೊಂಡು ಸಿದ್ದರಾಮಯ್ಯ ಪಕ್ಷ ಹಾಳುಮಾಡಿತ್ತಿದ್ದಾರೆ:
    ಯೋಗೇಶ್ವರ್​ನನ್ನು ಸೇರಿಸಿಕೊಂಡು ಸಿದ್ದರಾಮಯ್ಯ ಪಕ್ಷ ಹಾಳುಮಾಡಿತ್ತಿದ್ದಾರೆ:
    ಇವತ್ತು ಸಾಯಂಕಾಲ ಎನ್​ಡಿಎ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ: ನಿಖಿಲ್
    ಇವತ್ತು ಸಾಯಂಕಾಲ ಎನ್​ಡಿಎ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ: ನಿಖಿಲ್
    ಕಂಜನ್​ ಮತ್ತು ಧನಂಜಯ ಆನೆಗಳ ನಡುವೆ ಮತ್ತೆ ಗಲಾಟೆ: ತಪ್ಪಿದ ಭಾರೀ ಅನಾಹುತ
    ಕಂಜನ್​ ಮತ್ತು ಧನಂಜಯ ಆನೆಗಳ ನಡುವೆ ಮತ್ತೆ ಗಲಾಟೆ: ತಪ್ಪಿದ ಭಾರೀ ಅನಾಹುತ
    ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?
    ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?
    ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಹೈಕಮಾಂಡ್ ಹೇಳಿದೆ: ಸುರೇಶ್
    ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಹೈಕಮಾಂಡ್ ಹೇಳಿದೆ: ಸುರೇಶ್