ಶಿಮ್ಲಾ: ಹಿಮಾಚಲ ಪ್ರದೇಶದ ಕಿನೌರ್ ಭೂಕುಸಿತ ಸ್ಥಳದಲ್ಲಿ ಸಾವುನೋವಿನ ಪ್ರಮಾಣ ಹೊತ್ತು ಕಳೆದಂತೆ ಏರುತ್ತಲೇ ಇದೆ. ಸಂಜೆ 7 ಗಂಟೆಯ ಹೊತ್ತಿಗೆ ಒಟ್ಟು 10 ಶವಗಳು ಪತ್ತೆಯಾಗಿದ್ದು, 14 ಮಂದಿಯನ್ನು ರಕ್ಷಿಸಲಾಗಿದೆ ಎಂದು ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ತಿಳಿಸಿದ್ದಾರೆ.
ಅವಶೇಷಗಳ ಅಡಿಯಲ್ಲಿ ಇನ್ನಷ್ಟು ಜನರು ಸಿಲುಕಿರುವ ಸಾಧ್ಯತೆಯಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಭೂಕುಸಿತ ಸಂಭವಿಸಿರುವ ಸ್ಥಳದಲ್ಲಿ ಹಲವು ವಾಹನಗಳು ಸಿಲುಕಿವೆ. 40 ಪ್ರಯಾಣಿಕರಿದ್ದ ಹಿಮಾಚಲ ರಸ್ತೆ ಸಾರಿಗೆ ನಿಗಮದ ಬಸ್ ಸೇರಿದಂತೆ ಹಲವು ವಾಹನಗಳ ಅವಶೇಷಗಳಡಿ ಇದೆ ಎಂದ ಕಿನೌರ್ ಜಿಲ್ಲೆಯ ಜಿಲ್ಲಾಧಿಕಾರಿ ಅದೀಬ್ ಹುಸೇನ್ ಸಾದಿಕ್ ಹೇಳಿದ್ದಾರೆ. ಈ ಬಸ್ ರೆಕೊಂಗ್ ಪ್ಯೊ ಗ್ರಾಮದಿಂದ ಶಿಮ್ಲಾಕ್ಕೆ ಹೋಗುತ್ತಿತ್ತು.
ಹಿಮಾಚಲ ಪ್ರದೇಶ ದುರಂತದ ಬಗ್ಗೆ ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಎಲ್ಲರ ಸುರಕ್ಷೆ ಮತ್ತು ಯಶಸ್ವಿ ರಕ್ಷಣಾ ಕಾರ್ಯಾಚರಣೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.
#WATCH | ITBP personnel rescue a man trapped in the debris of a landslide on Reckong Peo-Shimla Highway in Nugulsari area of Kinnaur, Himachal Pradesh
As per the state govt’s latest information, nine people have been rescued & one person has died. Search operation is underway pic.twitter.com/NZ46tpg1Se
— ANI (@ANI) August 11, 2021
(Kinnaur Landslide 10 Dead Bodies Found 14 People Rescued)
ಇದನ್ನೂ ಓದಿ: Uttarakhand Glacier Burst ಮಿತಿಮೀರಿದ ಮಾನವ ಚಟುವಟಿಕೆ ತಾಳಿಕೊಳ್ಳುವ ಶಕ್ತಿ ಹಿಮಾಲಯದ ಮಣ್ಣಿಗಿಲ್ಲ | ಉಷಾ ಕಟ್ಟೆಮನೆ ಬರಹ
ಇದನ್ನೂ ಓದಿ: Himachal Pradesh Landslide: ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ; ಮಣ್ಣಿನಡಿ ಸಿಲುಕಿದ 40ಕ್ಕೂ ಹೆಚ್ಚು ಜನ