G Kishan Reddy: ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲಿದೆ ಬಿಜೆಪಿ: ಕಿಶನ್ ರೆಡ್ಡಿ

|

Updated on: Jul 07, 2023 | 8:35 AM

ದೇಶಾದ್ಯಂತ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸಚಿವ ಕಿಶನ್ ರೆಡ್ಡಿ ಹೇಳಿದ್ದಾರೆ. ಸಾಕಷ್ಟು ಊಹಾಪೋಹಗಳಿಗೆ ತೆರೆ ತೆಳೆದಿರುವ ಬಿಜೆಪಿಯು ಕರೀಂನಗರ ಸಂಸದ ಬಂಡಿ ಸಂಜಯ್ ಬದಲಿಗೆ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರನ್ನು ಬಿಜೆಪಿ ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದೆ.

G Kishan Reddy: ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲಿದೆ ಬಿಜೆಪಿ: ಕಿಶನ್ ರೆಡ್ಡಿ
ಕಿಶನ್ ರೆಡ್ಡಿ
Image Credit source: Deccan Chronicle
Follow us on

ದೇಶಾದ್ಯಂತ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸಚಿವ  ಕಿಶನ್ ರೆಡ್ಡಿ( Kishan Reddy) ಹೇಳಿದ್ದಾರೆ. ಸಾಕಷ್ಟು ಊಹಾಪೋಹಗಳಿಗೆ ತೆರೆ ತೆಳೆದಿರುವ ಬಿಜೆಪಿಯು ಕರೀಂನಗರ ಸಂಸದ ಬಂಡಿ ಸಂಜಯ್ ಬದಲಿಗೆ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರನ್ನು ಬಿಜೆಪಿ ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದೆ. ನವದೆಹಲಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಯ ನಡುವೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕಿಶನ್ ರೆಡ್ಡಿ ಅವರನ್ನು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. ಪ್ರತ್ಯೇಕ ನೇಮಕಾತಿ ಆದೇಶದಲ್ಲಿ, ಹುಜೂರಾಬಾದ್ ಶಾಸಕ ಈಟಾಲ ರಾಜೇಂದರ್ ಅವರನ್ನು ಚುನಾವಣೆಗಾಗಿ ಬಿಜೆಪಿ ತೆಲಂಗಾಣ ಘಟಕದ ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಜುಲೈ 8ರಂದು ಪ್ರಧಾನಿ ನರೇಂದ್ರ ಮೋದಿ ವಾರಂಗಲ್‌ಗೆ ಭೇಟಿ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ವ್ಯವಸ್ಥೆಗಳನ್ನು ಪರಿಶೀಲಿಸಿದ ಬಳಿಕ ಹೈದರಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಂಡಿ ಸಂಜಯ್ ಮತ್ತು ಕಿಶನ್ ರೆಡ್ಡಿ ಜಂಟಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಕಿಶನ್ ರೆಡ್ಡಿ ಕೆಸಿಆರ್ ವಿರುದ್ಧ ವಾಗ್ದಾಳಿ ನಡೆಸಿದರು. ತೆಲಂಗಾಣ ಸಮುದಾಯವು ಬಿಆರ್‌ಎಸ್ ಅನ್ನು ಕ್ಷಮಿಸುವುದಿಲ್ಲ.

ಮತ್ತಷ್ಟು ಓದಿ:G Kishan Reddy: ಜೀವನದ ಅಂತಿಮ ಕ್ಷಣದವರೆಗೂ ಪರಿಸರವನ್ನು ರಕ್ಷಿಸಿ: ಸಚಿವ ಕಿಶನ್ ರೆಡ್ಡಿ

ಕಾಂಗ್ರೆಸ್ ಮತ್ತು ಬಿಆರ್‌ಎಸ್ ಈ ಎರಡು ಪಕ್ಷಗಳ ಡಿಎನ್‌ಎ ಒಂದೇ ಎಂದು ಹೇಳಿದ್ದಾರೆ. ಪ್ರಸ್ತುತ, ಅವರು 2021 ರಿಂದ ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು 2019 ರಿಂದ 2021 ರವರೆಗೆ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಕೇಂದ್ರ ಘೋಷಿಸಿರುವುದರಿಂದ, ಈ ವಿಸ್ತರಣೆಗೂ ಮುನ್ನ ಕಿಶನ್ ರೆಡ್ಡಿ ತಮ್ಮ ನಿರ್ಧಾರವನ್ನು ಅಧಿಕೃತಗೊಳಿಸಬಹುದು.

ಪ್ರಧಾನಿ ಮೋದಿ ಅವರು ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವಾರಂಗಲ್‌ಗೆ ಬರುತ್ತಾರೆ. ಅವರು ಕಲಾ ಕಾಲೇಜಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕಿಶನ್ ರೆಡ್ಡಿ ಹೇಳಿದರು.

ಪ್ರಧಾನಿಯವರು 150 ಎಕರೆ ಪ್ರದೇಶದಲ್ಲಿ ರೈಲ್ವೆ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಘಟಕವು ವರ್ಷಕ್ಕೆ 2,400 ವ್ಯಾಗನ್‌ಗಳನ್ನು ತಯಾರಿಸಲಿದ್ದು, ಮೊದಲ ಹಂತಕ್ಕೆ 521 ಕೋಟಿ ಮಂಜೂರಾಗಿದೆ ಎಂದರು.

ರಾಜ್ಯದ ಮೂಲಕ ಹಾದುಹೋಗುವ ಹೆದ್ದಾರಿಗಳಿಗೆ ಕೇಂದ್ರವು ಇದುವರೆಗೆ 1,20,000 ಕೋಟಿಗೂ ಹೆಚ್ಚು ಖರ್ಚು ಮಾಡಿದೆ ಎಂದು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ