ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಆದೇಶದ ಪ್ರಕಾರ ಇನ್ನು ಮುಂದೆ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಒಂಟಿಯಾಗಿ ಕುಳಿತುಕೊಳ್ಳುವಂತಿಲ್ಲ. ಯಾರೊಬ್ಬರ ಜಜೆಗೂ ಕುಳಿತುಕೊಳ್ಳುವಂತಿಲ್ಲ ಅಲ್ಲದೆ ಪರಸ್ಪರ ಕೈ ಹಿಡಿದುಕೊಂಡು ನಡೆಯುವಂತಿಲ್ಲ. ಈ ನಿರ್ಧಾರವನ್ನು ವಿರೋಧಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಈಗ ಪ್ರತಿಭಟನೆಯ ಮೇಲೂ ಕಾಲೇಜಿಗೆ ನಿಷೇಧ ಹೇರಲಾಗಿದೆ.
ಕಾಲೇಜು ಆಡಳಿತ ಮಂಡಳಿ ಹೊರಡಿಸಿರುವ ನೀತಿ ಸಂಹಿತೆಯ ರೂಪದಲ್ಲಿ ಇಂತಹ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಇದರಿಂದಾಗಿ ಯಾವುದೇ ವಿದ್ಯಾರ್ಥಿಯು ಧರಣಿಯಂತಹ ಯಾವುದೇ ರೀತಿಯ ಚಳವಳಿಯನ್ನು ಮಾಡಲು ಸಾಧ್ಯವಿಲ್ಲ.
ಕಾಲೇಜಿನ ಈ ನಿರ್ಧಾರವನ್ನು ವಿರೋಧಿಸಿ ವಿದ್ಯಾರ್ಥಿ ಸಂಘ, ಇತರೆ ವಿದ್ಯಾರ್ಥಿ ಸಂಘಟನೆಗಳು ಸೇರಿ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದ್ದು, ಇದು ಸ್ವಾತಂತ್ರ್ಯದ ಉಲ್ಲಂಘನೆ ಎಂದು ಹೇಳಿವೆ.
ಮತ್ತಷ್ಟು ಓದಿ: Davanagere News: ಕಾಲೇಜು ಸೇರಿದ ನಾಲ್ಕೇ ದಿನಕ್ಕೆ ಕಾಂಪೌಂಡ್ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು
ಸಿಪಿಎಂನ ವಿದ್ಯಾರ್ಥಿ ಘಟಕ ಎಸ್‌ಎಫ್‌ಐ ಶುಕ್ರವಾರ (ಜೂನ್ 23) ನೀತಿ ಸಂಹಿತೆಯನ್ನು ವಿರೋಧಿಸಿ ವಿದ್ಯಾರ್ಥಿಗಳ ಡೀನ್‌ಗೆ ಮನವಿ ಸಲ್ಲಿಸಿತು. ಇದರೊಂದಿಗೆ ಸೋಮವಾರ (ಜೂನ್ 26) ಕ್ಯಾಂಪಸ್‌ನಲ್ಲಿ ಪ್ರತಿಭಟನೆಯನ್ನೂ ನಡೆಸಿದರು.
ಕಳೆದ ವಾರ ಪ್ರೆಸಿಡೆನ್ಸಿ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಕುಳಿತು ಮಾತನಾಡುತ್ತಿರುವುದನ್ನು ಅಥವಾ ಕ್ಯಾಂಪಸ್‌ನಲ್ಲಿ ಕೈ ಕೈ ಹಿಡಿದುಕೊಂಡು ಹೋಗುತ್ತಿರುವುದನ್ನು ನೋಡಿದ ಬಳಿಕ ಕಚೇರಿಗೆ ಕರೆಸಿಕೊಂಡಿದ್ದರು. ಇದರೊಂದಿಗೆ ಅವರಿಗೆ ಈ ಕುರಿತು ನೋಟಿಸ್ ನೀಡಲಾಗಿತ್ತು. ಇದಲ್ಲದೇ ಕೆಲ ಪೋಷಕರಿಂದಲೂ ದೂರುಗಳು ಬಂದಿದ್ದವು.
ಶಿಸ್ತಿನ ನೆಪದಲ್ಲಿ ವಿದ್ಯಾರ್ಥಿಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ಆಡಳಿತದ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿ ಎಂದು ಎಸ್‌ಎಫ್‌ಐ ಪ್ರೆಸಿಡೆನ್ಸಿ ಶಾಖೆಯ ಕಾರ್ಯದರ್ಶಿ ರಿಷಬ್ ಸಹಾ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ