AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala Lottery: ಅಪ್ಪನ ಅಂಗಡಿಯಿಂದ ಮಗಳು ಖರೀದಿಸಿದ ಲಾಟರಿಗೆ ಒಲಿದು ಬಂತು ಮೊದಲ ಬಹುಮಾನ ₹75 ಲಕ್ಷ

ಮಗಳು ಆಶ್ಲೀ ಲಾಟರಿಯಲ್ಲಿ ಬಹುಮಾನ ಹಣ ಪಡೆದರೆ ಲಾಟರಿ ಮಾರಿದ ಅಪ್ಪನಿಗೆ ಬಹುಮಾನ ಪಡೆದ ಟಿಕೆಟ್​​ನಲ್ಲಿ ಕಮಿಷನ್ ಸಿಗಲಿದೆ. ಅಗಸ್ಟಿನ್ ಹತ್ತು ವರ್ಷಗಳಿಂದ ಆರೂರು ದೇವಸ್ಥಾನದ ಅಡ್ಡರಸ್ತೆ ಬಳಿಯ ಹೆದ್ದಾರಿಯಲ್ಲಿ ಲಾಟರಿ ಅಂಗಡಿ ನಡೆಸುತ್ತಿದ್ದಾರೆ.

Kerala Lottery: ಅಪ್ಪನ ಅಂಗಡಿಯಿಂದ ಮಗಳು ಖರೀದಿಸಿದ ಲಾಟರಿಗೆ ಒಲಿದು ಬಂತು ಮೊದಲ ಬಹುಮಾನ ₹75 ಲಕ್ಷ
ಸ್ತ್ರೀಶಕ್ತಿ ಲಾಟರಿ
ರಶ್ಮಿ ಕಲ್ಲಕಟ್ಟ
|

Updated on: Jun 28, 2023 | 2:59 PM

Share

ಆರೂರು: ಲಾಟರಿ(lottery) ಮಾರುವ ಅಪ್ಪ, ಅಪ್ಪನ ಅಂಗಡಿಯಿಂದಲೇ ಮಗಳು ಲಾಟರಿ ಖರೀದಿಸಿದ್ದು, ಆ ಲಾಟರಿಗೆ ಮೊದಲ ಬಹುಮಾನ ₹75 ಲಕ್ಷ ಒಲಿದು ಬಂದಿದೆ. ಕೇರಳದ (Kerala) ಆರೂರ್ ಎಂಬ ಊರಿನ ಎನ್.ಜೆ ಆಗಸ್ಟಿನ್ ಎಂಬ ವ್ಯಕ್ತಿಯ ಕುಟುಂಬಕ್ಕೆ ಈ ಲಾಟರಿ ಭಾಗ್ಯ ಸಿಕ್ಕಿದೆ. ಆಗಸ್ಟಿನ್ ಅವರ ಮಗಳು ಆಶ್ಲೀ ಒಮ್ಮೊಮ್ಮೆ ಅಪ್ಪನ ಅಂಗಡಿಯಿಂದಲೇ ಲಾಟರಿ ಖರೀದಿಸುತ್ತಾಳೆ. ಆದರೆ ಈ ಬಾರಿ ಆಕೆ ಖರೀದಿಸಿದ ಲಾಟರಿಗೆ ಮೊದಲ ಬಹುಮಾನ (prize winning lottery) ಸಿಕ್ಕಿದ್ದು ಈ ಕುಟುಂಬಕ್ಕೆ ಡಬಲ್ ಖುಷಿ ತಂದಿದೆ. ಮಂಗಳವಾರ ಡ್ರಾ ಮಾಡಿದ ಸ್ತ್ರೀಶಕ್ತಿ ಲಾಟರಿಯಲ್ಲಿ ಆಶ್ಲೀ ಖರೀದಿಸಿದ ಟಿಕೆಟ್ ಸಂಖ್ಯೆ 883030ಗೆ ಪ್ರಥಮ ಬಹುಮಾನ ಸಿಕ್ಕಿದೆ.

ಮಗಳು ಆಶ್ಲೀ ಲಾಟರಿಯಲ್ಲಿ ಬಹುಮಾನ ಹಣ ಪಡೆದರೆ ಲಾಟರಿ ಮಾರಿದ ಅಪ್ಪನಿಗೆ ಬಹುಮಾನ ಪಡೆದ ಟಿಕೆಟ್​​ನಲ್ಲಿ ಕಮಿಷನ್ ಸಿಗಲಿದೆ. ಅಗಸ್ಟಿನ್ ಹತ್ತು ವರ್ಷಗಳಿಂದ ಆರೂರು ದೇವಸ್ಥಾನದ ಅಡ್ಡರಸ್ತೆ ಬಳಿಯ ಹೆದ್ದಾರಿಯಲ್ಲಿ ಲಾಟರಿ ಅಂಗಡಿ ನಡೆಸುತ್ತಿದ್ದಾರೆ. ಇದರೊಂದಿಗೆ ಮಸಾಲೆ ವ್ಯಾಪಾರವನ್ನೂ ಇವರು ನಡೆಸುತ್ತಾರೆ. ಮಗಳು ಆಶ್ಲೀ ಆರೂರ್ ವೈರಾಗ್ ಭವನದಲ್ಲಿ ಅಕೌಂಟೆಂಟ್ ಆಗಿದ್ದಾರೆ. ಆಶ್ಲೀ ಕೆಲಸಕ್ಕೆ ಹೋಗುವಾಗ ಅಪ್ಪನ ಬಳಿಯಿಂದ ಟಿಕೆಟ್ ಖರೀದಿಸಿದ್ದಳು.

ಇದನ್ನೂ ಓದಿ: Kerala Summer Bumper Lottery: ಅಸ್ಸಾಂನ ವಲಸೆ ಕಾರ್ಮಿಕನಿಗೆ ಹೊಡೀತು ಕೇರಳದ ಸಮ್ಮರ್ ಬಂಪರ್ ಲಾಟರಿ, ಮೊತ್ತವೆಷ್ಟು?

ಆಶ್ಲೀ  ಮದುವೆಯಾಗಿ ತನ್ನ ಕುಟುಂಬದೊಂದಿಗೆ ಆರ್ಥಂಗಲ್​​ನಲ್ಲಿ ವಾಸಿಸುತ್ತಿದ್ದಾರೆ. ಬಹುಮಾನ ವಿಜೇತ ಟಿಕೆಟ್‌ಗಳನ್ನು ಅರೂರ್ ಎಸ್‌ಬಿಐ ಶಾಖೆಗೆ ಹಸ್ತಾಂತರಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ