KMF: ಕೇರಳದಲ್ಲಿ ನಂದಿನಿ ಹಾಲಿನ ಡೈರಿಗಳ ವಿಸ್ತರಣೆ ಸ್ಥಗಿತ

ಕೇರಳ ಸರ್ಕಾರ ರಾಜ್ಯದಲ್ಲಿ ನಂದಿನಿ ಹಾಲಿನ ಡೈರಿಗಳನ್ನು ವಿಸ್ತರಣೆ ಮಾಡದಂತೆ, KMF ಸಿಇಒ ಜತೆಗೆ ಮಾತುಕತೆ ನಡೆಸಿದ್ದಾರೆ.

KMF: ಕೇರಳದಲ್ಲಿ ನಂದಿನಿ ಹಾಲಿನ ಡೈರಿಗಳ ವಿಸ್ತರಣೆ ಸ್ಥಗಿತ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jun 28, 2023 | 11:26 AM

ಬೆಂಗಳೂರು: ಹಾಲಿನ ಕೇರಳದಲ್ಲಿ ನಂದಿನಿ (Nandini Milk) ಹಾಲಿನ ಡೈರಿಯ ವಿಸ್ತರಣೆ ಮಾಡದಂತೆ ಕೇರಳ ಸರ್ಕಾರ ಈ ಹಿಂದೆಯೇ ಒಂದು ಆದೇಶವನ್ನು ನೀಡಿತ್ತು. ಇದು ಕರ್ನಾಟಕದ ಮತ್ತು ಕೇರಳದ ನಡುವೆ ದೊಡ್ಡ ಮಟ್ಟ ಗದ್ದಲಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಕೇರಳ ಸರ್ಕಾರ ರಾಜ್ಯದಲ್ಲಿ ನಂದಿನಿ ಹಾಲಿನ ಡೈರಿಗಳನ್ನು ವಿಸ್ತರಣೆ ಮಾಡದಂತೆ, KMF ಸಿಇಒ ಜತೆಗೆ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಕೇರಳದ ಪಶುಸಂಗೋಪನೆ, ಡೈರಿ ಅಭಿವೃದ್ಧಿ ಮತ್ತು ಹಾಲು ಸಹಕಾರಿಗಳ ಸಚಿವ ಜೆ ಚಿಂಚುರಾಣಿ ಅವರು ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ಸಿಇಒ ಅವರಿಂದ ಕೇರಳದ ಹಾಲಿನ ಡೈರಿಗಳಲ್ಲಿ ನಂದಿನಿ ಬ್ರಾಂಡ್​​ನ ಹಾಲುಗಳನ್ನು ಮಾರಾಟದ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದರು.

ನಂದಿನಿ ಹಾಲಿನ  ಜತೆಗೆ ಎರಡು ರಾಜ್ಯಗಳು ಯುದ್ಧಕ್ಕೆ ನಿಂತಂತಾಗಿದೆ. ಅಂದು ಗುಜರಾತಿನ ಅಮುಲ್​​ ಬ್ರಾಂಡಿನ ಹಾಲು ಬೇಡ ಎಂದು ಕರ್ನಾಟಕ​​, ಇಂದು ಕರ್ನಾಟಕದ ನಂದಿನಿ ಹಾಲು ಬೇಡ ಎಂದು ಕೇರಳ ಅಪಸ್ವರ ತೆಗೆದಿದೆ. ಗುಜರಾತಿನ​​ ಅಮುಲ್​​ನ್ನು​​ ಕರ್ನಾಟಕದಲ್ಲಿ ಮಾರಾಟ ಮಾಡುವುದು ಬೇಡ ಎಂದಿತ್ತು. ಇದೀಗ ಕೇರಳ ತನ್ನ ರಾಜ್ಯದಲ್ಲಿ ನಂದಿನಿ ಬೇಡ ಎಂದು ಹೇಳುತ್ತಿದೆ. ರಾಜ್ಯದಲ್ಲಿ ನಂದಿನಿ ಹಾಲಿನ ಡೈರಿಗಳನ್ನು ವಿಸ್ತರಣೆ ಮಾಡದಂತೆ ಕೇರಳ ಸರ್ಕಾರ ಆದೇಶವನ್ನು ನೀಡಿದೆ. ಕೇರಳದ ಅನೇಕ ಭಾಗಗಳಲ್ಲಿ ನಂದಿನಿ ಹಾಲನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ.  ಕರ್ನಾಟಕದ ಮತ್ತು ಕೇರಳದ ಗಡಿ ಭಾಗಗಳಲ್ಲೂ ಕೂಡ ನಂದಿನಿ ಹಾಲನ್ನು ಖರೀದಿ ಮಾಡುವ ಕಾರಣ, ನಂದಿನಿ ಹಾಲುಗಳ ಡೈರಿಗಳನ್ನು ವಿಸ್ತರಣೆ ಮಾಡದಂತೆ ಹೇಳಿರುವುದು, ಅಲ್ಲಿನ ಗಡಿನಾಡಿನ ಕನ್ನಡಿಗರಿಗೂ ಕೂಡ ಬೇಸರವನ್ನು ತಂದಿದೆ.

ರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹೊಸ ಮಳಿಗೆಗಳನ್ನು ತೆರೆಯುವುದಿಲ್ಲ ಎಂಬ ಮಾಹಿತಿಯನ್ನು KMFನ ಸಿಇಒ ಹೇಳಿದ್ದಾರೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಕೆಎಂಎಫ್ ನಿರ್ಧಾರವನ್ನು ಸಚಿವರಾದ ಚಿಂಚುರಾಣಿ ಸ್ವಾಗತಿಸಿದ್ದು, ಕರ್ನಾಟಕದಲ್ಲಿ ಸರ್ಕಾರ ಬದಲಾವಣೆಯಾದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.

ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟದ (ಕೆಸಿಎಂಎಂಎಫ್) ಮಿಲ್ಮಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾತ್ರ ನಮ್ಮ ರಾಜ್ಯದ ಜನರು ಬಯಸುತ್ತಾರೆ ಎಂದು ಅವರು ಹೇಳಿದರು. ಕೇರಳದಲ್ಲಿ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಸರ್ಕಾರವು ಕರ್ನಾಟಕದ ನಂದಿನಿ ಹಾಲು ಮತ್ತು ಡೈರಿ ಉತ್ಪನ್ನಗಳ ರಾಜ್ಯಕ್ಕೆ ಪ್ರವೇಶಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

ಈ ಸಮಸ್ಯೆಯನ್ನು ಬಗೆಹರಿಸುವಂತೆ ಕೇರಳ ಸರ್ಕಾರ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ (ಎನ್‌ಡಿಡಿಬಿ) ದೂರು ಸಲ್ಲಿಸಿತ್ತು. ನಂದಿನಿ ಮತ್ತು ಮಿಲ್ಮಾ ಎರಡೂ ಸರ್ಕಾರಿ ಬೆಂಬಲಿತ ಸಂಸ್ಥೆಗಳಾಗಿದ್ದು, ಒಂದು ಉತ್ಪನ್ನ ಬೇರೆ ರಾಜ್ಯಕ್ಕೆ ಹೋಗುವಾಗ ಆ ರಾಜ್ಯದ ಅನುಮತಿ ಪಡೆಯಬೇಕಿತ್ತು ಎಂದು ಚಿಂಚುರಾಣಿ ಈ ಹಿಂದೆ ಹೇಳಿದ್ದರು. ಆದರೆ ಕರ್ನಾಟಕಯ ಕ್ರಮವನ್ನು ಅನುಸರಿಸಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:KMF VIMUL Recruitment 2023: 40 ಕಿರಿಯ ತಂತ್ರಜ್ಞ, ವಿಸ್ತರಣಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

KCMMF ಕೆಲವು ತನ್ನ ರಾಜ್ಯ ಹಾಲು ಮಾರಾಟ ಒಕ್ಕೂಟಗಳನ್ನು ಮಾತ್ರ ಹೊಂದಿದೆ. ಆದರೆ ಕೇರಳಕ್ಕೆ ರಾಜ್ಯಗಳ ಹೊರಗಿನ ಮಾರುಕಟ್ಟೆಗಳನ್ನು ಆಕ್ರಮಣಕಾರಿಯಾಗಿ ಪ್ರವೇಶಿಸುವ ಪ್ರವೃತ್ತಿಯನ್ನು ತೋರುತ್ತಿದೆ, ಇದು ಅನೈತಿಕ ಎಂದು ಬಣ್ಣಿಸಿದೆ. ಕೆಎಂಎಫ್ ನಂದಿನಿ ಹಾಲು ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡಲು ಕೇರಳದ ಕೆಲವು ಭಾಗಗಳಲ್ಲಿ ತನ್ನ ಮಳಿಗೆಗಳನ್ನು ತೆರೆಯುವ ಕ್ರಮವನ್ನು ಕೇರಳ ಸರ್ಕಾರ ವಿರೋಧಿಸಿದೆ. ಕೇರಳದ ರೈತರು ಡೈರಿಗೆ ನೀಡುವ ಹಾಲುಗಳನ್ನು ಏನು ಮಾಡಬೇಕು. ರೈತರ ಅನುಕೂಲಕ್ಕಾಗಿ ದೇಶದ ಡೈರಿ ಕ್ಷೇತ್ರವನ್ನು ಆಯೋಜಿಸಿರುವ ಸಹಕಾರಿ ಮನೋಭಾವದ ಸಂಪೂರ್ಣ ಉಲ್ಲಂಘನೆ ಮಾಡಿದೆ ಎಂದು ಮಿಲ್ಮಾ ಒಕ್ಕೂಟ ಹೇಳಿದೆ.

Published On - 10:26 am, Wed, 28 June 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್