Mysuru: ಕಾಡಿಗೆ ಎಳೆದೊಯ್ಯತ್ತಿದ್ದ ಚಿರತೆ ಹಿಮ್ಮೆಟ್ಟಿಸಿ 6 ವರ್ಷದ ಬಾಲಕಿಯನ್ನು ರಕ್ಷಿಸಿದ ತಂದೆ, ಗ್ರಾಮಸ್ಥರು

ಕಾಡಿಗೆ ಎಳೆದೊಯ್ಯತ್ತಿದ್ದ ಚಿರತೆ ಹಿಮ್ಮೆಟ್ಟಿಸಿ 6 ವರ್ಷದ ಬಾಲಕಿಯನ್ನು ತಂದೆ ರಕ್ಷಿಸಿದ ಘಟನೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವನ್ಯಜೀವಿ ವಿಭಾಗದ ಕಗ್ಗಲಿಗುಂಡಿ ಪೋಡು ಎಂಬಲ್ಲಿ ನಡೆದಿದೆ.

Mysuru: ಕಾಡಿಗೆ ಎಳೆದೊಯ್ಯತ್ತಿದ್ದ ಚಿರತೆ ಹಿಮ್ಮೆಟ್ಟಿಸಿ 6 ವರ್ಷದ ಬಾಲಕಿಯನ್ನು ರಕ್ಷಿಸಿದ ತಂದೆ, ಗ್ರಾಮಸ್ಥರು
ಕಾಡಿಗೆ ಎಳೆದೊಯ್ಯತ್ತಿದ್ದ ಚಿರತೆ ಹಿಮ್ಮೆಟ್ಟಿಸಿ 6 ವರ್ಷದ ಬಾಲಕಿಯನ್ನು ರಕ್ಷಿಸಿದ ತಂದೆ, ಗ್ರಾಮಸ್ಥರು
Follow us
|

Updated on: Jun 28, 2023 | 11:15 AM

ಮೈಸೂರು: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವನ್ಯಜೀವಿ ವಿಭಾಗದ ಕಗ್ಗಲಿಗುಂಡಿ ಪೋಡು ಎಂಬಲ್ಲಿ ಸೋಮವಾರ(ಜೂನ್ 26) ಚಿರತೆರೊಂದು ಆರು ವರ್ಷದ ಬಾಲಕಿಯನ್ನು ತನ್ನ ಬಾಯಿಯಲ್ಲಿ ಹಿಡಿದು ಕಾಡಿಗೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದೆ. ಈ ವೇಳೆ ಎಚ್ಚೆತ್ತ ಬಾಲಕಿ ತಂದೆ ಹಾಗೂ ಗ್ರಾಮಸ್ಥರು ಚಿರತೆಯ ದವಡೆಯಿಂದ ಬಾಲಕಿಯನ್ನು ರಕ್ಷಿಸಿದ್ದಾರೆ.

ಸೋಮವಾರ ರಾತ್ರಿ ಸುಮಾರು 7.30ರ ಸುಮಾರಿಗೆ ರಾಮು ಅವರ 6 ವರ್ಷದ ಮಗಳು ಸುಶೀಲಾ ಮನೆಯ ಮುಂಭಾಗ ಕುಳಿತಿದ್ದಳು. ಈ ವೇಳೆ ಮನೆ ಬಳಿ ಬಂದ ಚಿರತೆಯೊಂದು ಬಾಲಕಿ ಮೇಲೆ ದಾಳಿ ಮಾಡಿ ಆಕೆಯನ್ನು ಕಾಡಿಗೆ ಎಳೆದೊಯ್ಯಲು ಯತ್ನಿಸಿದೆ. ಇದನ್ನು ಕಂಡ ಸ್ವಲ್ಪ ದೂರದಲ್ಲೇ ಇದ್ದ ರಾಮು ತನ್ನ ಮಗಳನ್ನು ಚಿರತೆ ಬಾಯಲ್ಲಿ ಕಂಡು ಶಾಕ್ ಆಗಿದ್ದಾರೆ. ತಕ್ಷಣ ಜೋರಾಗಿ ಕಿರುಚಾಡಿದ್ದಾರೆ. ಕಿರುಚಾಟದ ಸದ್ದು ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದು ಎಲ್ಲರೂ ಸೇರಿ ಚಿರತೆ ಬಾಯಿಂದ‌ ಬಾಲಕಿಯನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: Lokayukta Raid: ಲೋಕಾಯುಕ್ತ ಅಧಿಕಾರಿಗಳು ಬಾಗಲಕೋಟೆಯಲ್ಲಿ ಕೃಷಿ ಇಲಾಖೆ ನೌಕರರ ಮನೆಗಳನ್ನೇ ದಾಳಿಗೆ ಆರಿಸಿಕೊಂಡಿದ್ದು ಯಾಕೋ?

ರಾಮು ಹಾಗೂ ಗ್ರಾಮಸ್ಥರ ಓಡಾಟದಿಂದ ಬೆಚ್ಚಿಬಿದ್ದ ಚಿರತೆ ಬಾಲಕಿಯನ್ನು ಮನೆ ಸಮೀಪದ 10 ಅಡಿ ಆಳದ ಕಂದಕಕ್ಕೆ ಬಿಸಾಕಿ ಕಾಡಿನತ್ತ ಮರೆಯಾಗಿದೆ. ಆ ಪ್ರದೇಶದಲ್ಲಿ ವಾಸಿಸುವ 45 ಕುಟುಂಬಗಳು ತಮ್ಮ ಮೇಲೆ ಕಾಡು ಪ್ರಾಣಿಗಳು, ಹೆಚ್ಚಾಗಿ ಆನೆಗಳು ಮತ್ತು ಚಿರತೆಗಳು ದಾಳಿ ಮಾಡದಂತೆ ಹಾಗೂ ಒಳನುಗ್ಗದಂತೆ ತಡೆಯಲು ಕಂದಕವನ್ನು ಅಗೆದಿದ್ದಾರೆ.

ಬಾಲಕಿಯನ್ನು ರಕ್ಷಿಸಲಾಯಿತಾದರೂ ರಾಮು, ಆತನ ಪತ್ನಿ ಲಲಿತಾ ಮತ್ತು ಇತರ ಗ್ರಾಮಸ್ಥರು ಇನ್ನೂ ಶಾಕ್​ನಲ್ಲೇ ಇದ್ದಾರೆ. ಚಿರತೆ ದಾಳಿ ವೇಳೆ ಬಾಲಕಿಯ ಬಾಯಿ ಹಾಗೂ ಗಂಟಲಿನ ಭಾಗಕ್ಕೆ ಕಚ್ಚಿದ್ದು, ತೀವ್ರ ರಕ್ತಸ್ರಾವವಾಗಿದೆ. ಸಮೀಪದ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ