ಶ್ರೀಕೃಷ್ಣ ಧರ್ಮ ಹಾಗೂ ಸಂಸ್ಕೃತಿಯ ವಾಹಕ ಎಂದು ಬಿಎಪಿಎಸ್ ಮುಖ್ಯಸ್ಥರಾದ ಗುರು ಮಹಂತ ಸ್ವಾಮಿ ಮಹಾರಾಜ್(Mahant Swami Maharaj) ಹೇಳಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸ್ವಾಮಿನಾರಾಯಣ ಸ್ವಾಮಿನಾರಾಯಣ ಅಕ್ಷರಧಾಮ ದೇವಸ್ಥಾನದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಅನೇಕ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಮಕ್ಕಳು ಮತ್ತು ಯುವ ಸ್ವಯಂಸೇವಕರು ಶ್ರೀಕೃಷ್ಣನ ಕಥೆಗಳನ್ನು ನಾಟಕ ರೂಪದಲ್ಲಿ ಪ್ರಸ್ತುತಪಡಿಸಿದರು. ಇದರೊಂದಿಗೆ ಕಾರ್ಯಕ್ರಮದಲ್ಲಿ ಎಲ್ಲ ಸಂತರು ಶ್ರೀಕೃಷ್ಣನ ಮಹಿಮೆಯನ್ನು ಕೊಂಡಾಡಿದರು.
ಕೃಷ್ಣನು ಎಲ್ಲರಿಗೂ ಸ್ಫೂರ್ತಿ, ಕೃಷ್ಣ ಹೇಳಿದಂತೆ ಆತ ಎಲ್ಲಾ ಯುಗದಲ್ಲಿಯೂ ಕಾಣಿಸಿಕೊಳ್ಳುತ್ತಾನೆ ಎಂದು ಮಹಂತ್ ಸ್ವಾಮೀಜಿ ಹೇಳಿದ್ದಾರೆ.
ಸ್ವಾಮಿನಾರಾಯಣ ಸಂಸ್ಥೆಯ ಮುಖ್ಯಸ್ಥರು ಯಾರು?
ಮಹಂತ ಸ್ವಾಮಿ ಮಹಾರಾಜ್ ಪ್ರಸ್ತುತ ಆಧ್ಯಾತ್ಮಿಕ ಗುರು ಮತ್ತು BAPS ಸ್ವಾಮಿನಾರಾಯಣ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಅವರು ಅಮೇರಿಕಾದಲ್ಲಿ ಅಕ್ಷರಧಾಮ ದೇವಾಲಯ ಮತ್ತು ಅಬುಧಾಬಿಯಲ್ಲಿ BAPS ಹಿಂದೂ ದೇವಾಲಯದ ನಿರ್ಮಾತೃ.
ಬಿಎಪಿಎಸ್ 1400 ದೇವಾಲಯಗಳು ಮತ್ತು ಅಕ್ಷರಧಾಮ ಸೇರಿದಂತೆ ಸಾಂಸ್ಕೃತಿಕ ಸಂಕೀರ್ಣಗಳ ನಿರ್ಮಾಣಕ್ಕೂ ಇದು ಪ್ರಸಿದ್ಧವಾಗಿದೆ.
ಮತ್ತಷ್ಟು ಓದಿ: Krishna Janmashtami: ಕೃಷ್ಣ ಜನ್ಮಾಷ್ಟಮಿ ಪೂಜೆ ವಿಧಾನ ಹೇಗೆ? ಜನ್ಮಾಷ್ಟಮಿ ಮಂತ್ರವೇನು?
ಅಬುಧಾಬಿಯಲ್ಲೂ ಹಿಂದೂ ದೇವಾಲಯ
ಬಿಪಿಎಸ್ ಸ್ವಾಮಿನಾರಾಯಣ ಸಂಸ್ಥಾ ಅಬುಧಾಬಿಯಲ್ಲೂ ಹಿಂದೂ ದೇವಾಲಯವನ್ನು ನಿರ್ಮಿಸಿದೆ. ಈ ದೇವಾಲಯವು ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಸ್ನೇಹಕ್ಕೆ ಸಾಕ್ಷಿಯಾಗಿದೆ.
ವಿಷ್ಣುವಿನ 8ನೇ ಅವತಾರವಾಗಿರುವ ಕೃಷ್ಣ, ಜನಿಸಿದ್ದು ಈಗಿನ ಉತ್ತರ ಪ್ರದೇಶದ ಮಥುರಾದಲ್ಲಿನ ಸೆರೆಮನೆಯಲ್ಲಿ! ಹುಟ್ಟಿನಿಂದ ಮೊದಲುಗೊಂಡು ಬಾಲ್ಯದ ದಿನಗಳಲ್ಲಿ ಕಷ್ಟಗಳ ಸರಣಿಯನ್ನೇ ಅನುಭವಿಸಿ, ಗೋಪಾಲಕನಾಗಿ ಗೋಕುಲವನ್ನು ರಂಜಿಸಿ, ಇಡೀ ಭರತ ಖಂಡದ ಪ್ರಭಾವಿಯಾಗಿ ಬೆಳೆದ ಶ್ರೀಕೃಷ್ಣನ ಬದುಕು ಅಷ್ಟೇ ವರ್ಣರಂಜಿತವಾದದ್ದು. ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡೇ ಸಂಕೀರ್ಣವಾದ ಅಂದಿನ ರಾಜಕಾರಣವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ಆತನ ರಾಜತಂತ್ರಕ್ಕೆ ತಲೆದೂಗದವರು ಯಾರಿಲ್ಲ.
ಸರ್ವಾಂತರ್ಯಾಮಿ ಎಂದು ಕರೆಸಿಕೊಳ್ಳುವ ಶ್ರೀಕೃಷ್ಣನಿಗೆ ಸನ್ಮಾರ್ಗವನ್ನು ಬೋಧಿಸುವುದೂ ಗೊತ್ತು, ಎದುರಾಳಿಯ ತಂತ್ರ ವಿಪರೀತವಾದಾಗ ಒಳಿತಿಗೆ ಆಪತ್ತು ಬರದಂತೆ ಅದನ್ನು ಕಾಪಾಡಿಕೊಳ್ಳುವುದಕ್ಕೆ ಆ ಸನ್ಮಾರ್ಗವನ್ನು ಮೀರಿ ಪ್ರತಿತಂತ್ರಗಳನ್ನು ಹೆಣೆಯುವುದೂ ತಿಳಿದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ