ಸಿಜೆಐ ಚಂದ್ರಚೂಡ್ ಹೆಸರಲ್ಲಿ ಸೈಬರ್ ವಂಚನೆ, ಕ್ಯಾಬ್ಗಾಗಿ 500 ರೂ. ಕೇಳಿದ ವಂಚಕ
ಇಂದಿನ ಡಿಜಿಟಲ್ ಜಗತ್ತಿನಲ್ಲಿ ವಂಚನೆಗಳು ಹೆಚ್ಚಾಗುತ್ತಿದ್ದು, ಜನರನ್ನು ವಂಚಿಸಲು ವಂಚಕರು ಹಲವಾರು ತಂತ್ರಗಳನ್ನು ಬಳಸುತ್ತಿದ್ದಾರೆ. ಇತ್ತೀಚಿನ ಹಗರಣಗಳಲ್ಲಿ ಒಂದು ಕ್ಯಾಬ್ ರೈಡ್‌ಗಾಗಿ ಹಣವನ್ನು ಕೇಳಲು ಭಾರತದ ಮುಖ್ಯ ನ್ಯಾಯಮೂರ್ತಿ (CJI) DY ಚಂದ್ರಚೂಡ್ ಹೆಸರನ್ನು ವಂಚಕ ಬಳಸಿದ್ದಾನೆ. ಸ್ಕ್ರ್ಯಾಚ್ ಕಾರ್ಡ್‌ಗಳ ಮೂಲಕ ಜನರನ್ನು ಗುರಿಯಾಗಿಸಿಕೊಂಡು ಹೊಸ ರೀತಿಯ ಸೈಬರ್ ವಂಚನೆ ಇತ್ತೀಚೆಗೆ ಕಾಣಿಸಿಕೊಂಡಿದೆ. ಇಲ್ಲಿಂದಲೇ ಹಗರಣ ಪ್ರಾರಂಭವಾಗುತ್ತದೆ. ವ್ಯಕ್ತಿಯು ಸಂಖ್ಯೆಗೆ ಕರೆ ಮಾಡಿದಾಗ, ಬಹುಮಾನದ ಹಣವನ್ನು ಸ್ವೀಕರಿಸಲು, ಅವರು ಮೊದಲು ಸಂಸ್ಕರಣಾ ಶುಲ್ಕ ಮತ್ತು ತೆರಿಗೆಗಳನ್ನು ಪಾವತಿಸಬೇಕು ಎಂದು ಅವರಿಗೆ ತಿಳಿಸಲಾಗುತ್ತದೆ. ಬಳಿಕ ಬ್ಯಾಂಕ್ನಿಂದ ಹಣವನ್ನು ಲಪಟಾಯಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಫೇಸ್ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಹಲವೆಡೆ ಫೇಕ್ ಖಾತೆಗಳು ಕ್ರಿಯೇಟ್ ಮಾಡಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಬಳಿಕ ಹಣ ದೋಚುವ ಪ್ರಯತ್ನಗಳು ನಡೆಯುತ್ತಿವೆ.
ಆದರೆ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನೂ ಕೂಡ ಇದು ಬಿಟ್ಟಿಲ್ಲ. ವ್ಯಕ್ತಿಯೊಬ್ಬ ತಾನು ಸಿಜೆಐ ಚಂದ್ರಚೂಡ್ ಎಂದು ಹೇಳಿಕೊಂಡು ವಂಚನೆ ಮಾಡಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ನಾನು ಸಿಜೆಐ ಚಂದ್ರಚೂಡ್ ಇಂದು ಪ್ರಮುಖ ಮೀಟಿಂಗ್ವೊಂದಕ್ಕೆ ಅರ್ಜೆಂಟ್ ಆಗಿ ಹೋಗಬೇಕಿದೆ, ಕ್ಯಾಬ್ಗಾಗಿ 500 ರೂ. ಕೊಡುವಿರಾ, ನಾನು ನ್ಯಾಯಾಲಯಕ್ಕೆ ಹೋದ ತಕ್ಷಣ ಹಿಂದಿರುಗಿಸುತ್ತೇನೆ ಎಂದು ಕೇಳಿರುವಂತೆ ಸಂದೇಶ ಬಂದಿತ್ತು.
ವೈರಲ್ ಆಗುತ್ತಿರುವ ಸ್ಕ್ರೀನ್ಶಾಟ್ ಪ್ರಕಾರ, ವಂಚಕ ತನ್ನನ್ನು ತಾನು ಸಿಜೆಐ ಚಂದ್ರಚೂಡ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬನಿಗೆ 500 ರೂ. ಬೇಕೆಂದು ಸಂದೇಶ ಕಳುಹಿಸಿದ್ದಾನೆ. ಈ ಸಂಬಂಧ ಸಿಜೆಐ ಚಂದ್ರಚೂಡ್ ಅವರ ಸೂಚನೆ ಮೇರೆಗೆ ಆಗಸ್ಟ್ 27ರಂದು ಸೈಬರ್ ಕ್ರೈಂ ಸೆಲ್ನಲ್ಲಿ ಸೂರು ದಾಖಲಿಸಲಾಗಿದೆ.
ಮತ್ತಷ್ಟು ಓದಿ: ಸೈಬರ್ ವಂಚನೆಗೆ ಹೊಸ ದಾರಿ: ಮನೆಗೆ ಬರುತ್ತೆ ಕೂಪನ್, ಸ್ಕ್ಯಾನ್ ಮಾಡಿದರೆ ನಿಮ್ಮ ಖಾತೆಯಲ್ಲಿನ ಹಣ ಮಾಯ
ಆನ್ಲೈನ್ ವಂಚನೆಯನ್ನು ತಪ್ಪಿಸುವುದು ಹೇಗೆ? ವಾಟ್ಸಾಪ್ಗೆ ಬರುವ ಲಿಂಕ್ಗಳನ್ನೆಲ್ಲಾ ಕ್ಲಿಕ್ ಮಾಡಬೇಡಿ, ವಾಟ್ಸಾಪ್ನಲ್ಲಿ ಅಪರಿಚಿತ ಅಥವಾ ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ. ಈ ಲಿಂಕ್ಗಳು ನಿಮ್ಮ ಮೊಬೈಲ್ಗೆ ವೈರಸ್ಗಳು ಅಥವಾ ಮಾಲ್ವೇರ್ಗಳನ್ನು ತಗುಲಿಸಬಹುದು.
ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ: ನಿಮ್ಮ ಬ್ಯಾಂಕ್ ಖಾತೆ, ಒಟಿಪಿ ಪಾಸ್ವರ್ಡ್ ಅಥೌಆ ಯಾವುದೇ ಅಪರಿಚಿತ ವ್ಯಕ್ತಿ ಅಥವಾ ಪರಿಶೀಲಿಸದ ಮೂಲಗಳಿಂದ ಬಂದ ಸಂದೇಶಗಳಲ್ಲಿ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.
ಪರಿಶೀಲಿಸಿ: ಯಾವುದೇ ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶಗಳ ದೃಢೀಕರಣವನ್ನು ಪರಿಶೀಲಿಸಿ, ವಂಚಕರು ಸಾಮಾನ್ಯವಾಗಿ ಅಧಿಕೃತ ಬ್ರ್ಯಾಂಡ್ಗಳು ಅಥವಾ ವ್ಯಕ್ತಿಗಳ ಹೆಸರನ್ನು ಬಳಸುತ್ತಾರೆ, ಈ ಪ್ರಕರಣದಲ್ಲಿ ಅವರು ಸಿಜೆಐ ಚಂದ್ರಚೂಡ್ ಅವರ ಹೆಸರನ್ನು ಬಳಕೆ ಮಾಡಿದ್ದಾರೆ.
ವಂಚನೆ ಬಗ್ಗೆ ರಿಪೋರ್ಟ್ ಮಾಡಿ: ನೀವು ಅನುಮಾನಾಸ್ಪರ ಸಂದೇಶ ಅಥವಾ ಕರೆಯನ್ನು ಸ್ವೀಕರಿಸಿದರೆ ತಕ್ಷಣವೇ ಅದನ್ನು ವಾಟ್ಸಾಪ್ಗೆ ರಿಪೋರ್ಟ್ ಮಾಡಿ.
ಎಚ್ಚರಿಕೆಯಿಂದ ಓದಿ ಅರ್ಥಮಾಡಿಕೊಳ್ಳಿ: ಯಾವುದೇ ಆಫರ್ ಅಥವಾ ಮನವಿ ಸಂದೇಶಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅರ್ಥಮಾಡಿಕೊಳ್ಳಿ.
ಅಪರಿಚಿತ ಕರೆಗಳು ಹಾಗೂ ಸಂದೇಶಗಳನ್ನು ಬ್ಲಾಕ್ ಮಾಡಿ: ಯಾರಾದರೂ ನಿಮಗೆ ಅಪರಿಚಿತ ಸಂಖ್ಯೆಯಿಂದ ನಿರಂತರ ಕರೆ ಅಥವಾ ಸಂದೇಶ ಮಾಡಿ ತೊಂದರೆ ಕೊಡುತ್ತಿದ್ದರೆ ಆ ನಂಬರ್ ಬ್ಲಾಕ್ ಮಾಡಿ, ವಾಟ್ಸಾಪ್ನಲ್ಲಿ ರಿಪೋರ್ಟ್ ಮಾಡಿ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ