Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಜಿ ಕರ್ ಹತ್ಯೆ; ತಿಲೋತ್ತಮ ಎದೆ ಮೇಲೆ ಕಚ್ಚಿದ ಗುರುತು, ಗುಪ್ತಾಂಗದಲ್ಲಿ ಇನ್ನೊಂದು ಮಹಿಳೆಯ ಡಿಎನ್​ಎ ಪತ್ತೆ

ಕೊಲ್ಕತ್ತಾದ ಆರ್​ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ತಿಲೋತ್ತಮ ಎಂದು ಹೆಸರು ನೀಡಲಾಗಿರುವ ಆ ವೈದ್ಯೆಯ ಸಾವಿನ ಬಳಿಕ ದೇಶಾದ್ಯಂತ ವೈದ್ಯೆಯ ಸಾವಿಗೆ ನ್ಯಾಯ ಕೊಡಿಸಬೇಕೆಂದು ಪ್ರತಿಭಟನೆಗಳು ನಡೆದವು. ಈ ಪ್ರಕರಣದ ಬಗ್ಗೆ ವಿಧಿವಿಜ್ಞಾನ ತಜ್ಞ ಅಜಯ್ ಗುಪ್ತಾ ಮಾತನಾಡಿದ್ದು, ಶವಪರೀಕ್ಷೆ ವರದಿ ಪ್ರಕಾರ ಮೃತ ಮಹಿಳೆಯ ಯೋನಿಯಲ್ಲಿ ದಪ್ಪ ಬಿಳಿ ಜಿಗುಟಾದ ದ್ರವ ಪತ್ತೆಯಾಗಿದೆ. ಇನ್ನೋರ್ವ ಮಹಿಳೆಯ ಡಿಎನ್​ಎ ಕೂಡ ಪತ್ತೆಯಾಗಿದೆ. ಆಕೆಯ ಮೊಲೆತೊಟ್ಟುಗಳ ಮೇಲಿನ ಕಚ್ಚಿದ ಗುರುತುಗಳು ಉಂಟಾಗಿದೆ ಎಂದು ಹೇಳಿದ್ದಾರೆ.

ಆರ್​ಜಿ ಕರ್ ಹತ್ಯೆ; ತಿಲೋತ್ತಮ ಎದೆ ಮೇಲೆ ಕಚ್ಚಿದ ಗುರುತು, ಗುಪ್ತಾಂಗದಲ್ಲಿ ಇನ್ನೊಂದು ಮಹಿಳೆಯ ಡಿಎನ್​ಎ ಪತ್ತೆ
Rg Kar
Follow us
ಸುಷ್ಮಾ ಚಕ್ರೆ
|

Updated on: Dec 30, 2024 | 3:37 PM

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಕೊಲ್ಕತ್ತಾದ ಆರ್​ಜಿ ಕರ್ ಆಸ್ಪತ್ರೆಯ ಟ್ರೈನಿ ವೈದ್ಯೆ ತಿಲೋತ್ತಮ ಪ್ರಕರಣದಲ್ಲಿ ಕೇಂದ್ರ ವಿಧಿವಿಜ್ಞಾನ ವರದಿಯಲ್ಲಿ ಅಚ್ಚರಿಯ ವಿಷಯ ಹೊರಬಿದ್ದಿದೆ. ವಿಧಿವಿಜ್ಞಾನ ತಜ್ಞ ಅಜಯ್ ಗುಪ್ತಾ ಅವರ ಪ್ರಕಾರ, ಶವಪರೀಕ್ಷೆ ವರದಿ ಆ ಮಹಿಳೆಯ ಯೋನಿಯಲ್ಲಿ ಬಿಳಿ, ದಪ್ಪ, ಜಿಗುಟಾದ ದ್ರವ ಕಂಡುಬಂದಿದೆ ಎಂದು ಉಲ್ಲೇಖಿಸಿದೆ. ಹಾಗಾದರೆ, ಅದೇನು? ತಿಲೋತ್ತಮ ಅವರ ಮೊಲೆತೊಟ್ಟುಗಳ ಮೇಲೆ ಕಚ್ಚಿದ ಗುರುತುಗಳು ಕಂಡುಬಂದಿದೆ. ಹಾಗೇ, ವೈ ಕ್ರೋಮೋಸೋಮ್ಸ್ ಕೂಡ ಪತ್ತೆಯಾಗಿದೆ. ಅಂದು ಕೊಲೆ ನಡೆದ ದಿನ ಆ ಜಾಗದಲ್ಲಿ ಇನ್ನೋರ್ವ ಮಹಿಳೆಯೂ ಇದ್ದರು ಎಂಬುದು ಕೂಡ ದೃಢಪಟ್ಟಿದೆ. ಈ ಮೂಲಕ ತಿಲೋತ್ತಮ ಅವರ ಮೇಲೆ ಸಂಜಯ್ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪದ ಬೆನ್ನಲ್ಲೇ ಇನ್ನೋರ್ವ ಮಹಿಳೆಯ ಸಂಚು ಕೂಡ ಇರುವುದು ದೃಢಪಟ್ಟಿದೆ.

ಈ ಬಗ್ಗೆ ಫೋರೆನ್ಸಿಕ್ ತಜ್ಞ ಅಜಯ್ ಗುಪ್ತಾ ಮಾತನಾಡಿ, ಶವಪರೀಕ್ಷೆ ವರದಿಯ ಪ್ರಕಾರ ಮೃತ ಮಹಿಳೆಯ ಯೋನಿಯಲ್ಲಿ ಬಿಳಿ, ದಪ್ಪ, ಜಿಗುಟಾದ ದ್ರವ ಪತ್ತೆಯಾಗಿದೆ, ಅದು ಜನನಾಂಗದ ದ್ರವವೇ? ಎಂದು ಹೇಳಿದ್ದರೆ ಉತ್ತಮ. ಸ್ತನದ ಮೇಲೆ ಕಚ್ಚಿದ ಗುರುತುಗಳು ಇವೆ. ವೈ ಕ್ರೋಮೋಸೋಮ್ ಕೂಡ ಪತ್ತೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಆರ್​ಜಿ ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರ ನಡೆದಿಲ್ವಾ? ಸಿಎಫ್​ಎಸ್​ಎಲ್​ ವರದಿ ಹೇಳೋದೇನು?

ಡಿಎನ್‌ಎ ತಜ್ಞ ಪಾರ್ಥ ಪ್ರತಿಮ್ ಮಜುಂದಾರ್, ಸ್ತನದ ಮೇಲಿನ ಗಾಯ ಬಂಧಿತ ಸಂಜಯ್​ನ ಡಿಎನ್‌ಎಗೆ ಹೊಂದಿಕೆಯಾಗಿದೆ. ಆದರೆ, 4 ಆಟೋಸೋಮಲ್ ಮಾರ್ಕರ್‌ಗಳು ಇನ್ನೊಬ್ಬ ವ್ಯಕ್ತಿಯ ಡಿಎನ್‌ಎ ಕೂಡ ಇದೆ ಎಂದು ಹೇಳುತ್ತದೆ. ಬಂಧಿತ ವ್ಯಕ್ತಿಯ ವೈ ಕ್ರೋಮೋಸೋಮ್ ಜೊತೆಗೆ ಮತ್ತೊಂದು ಮಹಿಳೆಯ ಡಿಎನ್​ಎ ಮೃತ ಮಹಿಳೆಯ ಯೋನಿ ಮಾದರಿಯಲ್ಲಿ ಕಂಡುಬಂದಿದೆ ಎಂಬ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಏನಿದು ಘಟನೆ?:

ಆಗಸ್ಟ್ 9ರಂದು ಆರ್‌ಜಿ ಕರ್ ತುರ್ತು ವಿಭಾಗದ 4ನೇ ಮಹಡಿಯ ಸೆಮಿನಾರ್ ಹಾಲ್‌ನಿಂದ ತಿಲೋತ್ತಮ ಅವರ ಮೃತದೇಹ ಪತ್ತೆಯಾಗಿದೆ. ಸಿಬಿಐ ತನಿಖೆಯನ್ನು ವಹಿಸಿಕೊಂಡಿದೆ ಮತ್ತು ಸಿಎಫ್‌ಎಸ್‌ಎಲ್‌ನ ಸಹಾಯವನ್ನು ಕೋರಿದೆ. ಆಗಸ್ಟ್ 14ರಂದು ಮೃತ ಮಹಿಳೆಯ CFSL ಮಾದರಿಗಳನ್ನು ಸಂಗ್ರಹಿಸಲು ಆಸ್ಪತ್ರೆಗೆ ಹೋಗಿದ್ದರು. ಡಿಎನ್ಎ ಮಾದರಿಗಳ ವಿಶ್ಲೇಷಣೆಯಿಂದ ಹೆಚ್ಚು ಸಂವೇದನಾಶೀಲ ಮಾಹಿತಿಯು ಹೊರಹೊಮ್ಮಿದೆ. ಯೋನಿ ಸ್ವ್ಯಾಬ್ ಮಾದರಿಯಲ್ಲಿ ಇನ್ನೊಬ್ಬ ಮಹಿಳೆಯ ಉಪಸ್ಥಿತಿಯೂ ಕಂಡುಬಂದಿದೆ. D12S391 ಮಾರ್ಕರ್ ಇನ್ನೊಬ್ಬ ಮಹಿಳೆಯೊಂದಿಗೆ ತಿಲೋತ್ತಮ ಅವರ ಮಾದರಿಯ ಮಿಶ್ರಣವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಹಾಗಾದರೆ, ಅಪರಾಧ ನಡೆದ ಸ್ಥಳದಲ್ಲಿ ಇತರ ಪುರುಷರು ಮತ್ತು ಮಹಿಳೆಯರು ಇದ್ದರು ಎಂಬುದಾದರೆ ಅವರು ಯಾರು? ಎಂಬುದು ಪ್ರತಿಭಟನಾನಿರತ ವೈದ್ಯರು ಎತ್ತಿರುವ ಪ್ರಶ್ನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ