ಭಾರೀ ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಮರ, ಕಾರುಗಳು

ಭಾರೀ ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಮರ, ಕಾರುಗಳು

ಸುಷ್ಮಾ ಚಕ್ರೆ
|

Updated on: Dec 30, 2024 | 5:09 PM

ಹೆಚ್ಚುತ್ತಿರುವ ಹಿಮಪಾತದಿಂದಾಗಿ ಮನಾಲಿ-ಸೋಲಾಂಗ್‌ಗೆ ಭೇಟಿ ನೀಡದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ ಹಿಮಪಾತದ ಎಚ್ಚರಿಕೆ ನೀಡಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಸೋಲಾಂಗ್ ಕಣಿವೆ ಮತ್ತು ಅಟಲ್ ಸುರಂಗದ ನಡುವೆ 2,000ಕ್ಕೂ ಹೆಚ್ಚು ವಾಹನಗಳು ಮುಂದೆ ಸಾಗಲಾರದೆ ನಿಂತಿವೆ. ಸುಮಾರು 1,800 ವಾಹನಗಳನ್ನು ಸುರಕ್ಷಿತವಾಗಿ ಹಿಮದಿಂದ ಹೊರತೆಗೆಯಲಾಗಿದೆ, ಸರಿಸುಮಾರು 200 ವಾಹನಗಳು ಇನ್ನೂ ಸಿಕ್ಕಿಹಾಕಿಕೊಂಡಿದೆ. ಶಿಮ್ಲಾ ಮತ್ತು ಹಿಮಾಚಲ ಪ್ರದೇಶದ ಮೇಲಿನ ಜಿಲ್ಲೆಗಳು ಕಳೆದ ಎರಡು ದಿನಗಳಿಂದ ಎಡೆಬಿಡದೆ ಭಾರೀ ಮಳೆ ಮತ್ತು ಹಿಮಪಾತವನ್ನು ಎದುರಿಸುತ್ತಿವೆ.

ಮನಾಲಿ: ಹಿಮಾಚಲ ಪ್ರದೇಶದ ಮನಾಲಿ ಮತ್ತು ಸೋಲಾಂಗ್ ಕಣಿವೆ ಪ್ರದೇಶಗಳಲ್ಲಿ ತೀವ್ರವಾದ ಹಿಮಪಾತದಿಂದಾಗಿ 2,000ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿವೆ. ಸುಮಾರು 1,800 ವಾಹನಗಳನ್ನು ಸುರಕ್ಷಿತವಾಗಿ ಹಿಮದಿಂದ ಹೊರತೆಗೆಯಲಾಗಿದೆ, ಸರಿಸುಮಾರು 200 ವಾಹನಗಳು ಇನ್ನೂ ಸಿಕ್ಕಿಹಾಕಿಕೊಂಡಿದೆ. ಟ್ರಾಫಿಕ್‌ನಲ್ಲಿ ಸಿಲುಕಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಸಮಯದಲ್ಲಿ ಮನಾಲಿಗೆ ಭೇಟಿ ನೀಡದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಭಾರೀ ಹಿಮಪಾತದ ಎಚ್ಚರಿಕೆಯಿಂದಾಗಿ ರಸ್ತೆಯಲ್ಲಿ ಸಿಲುಕಿದ್ದ ಹಲವಾರು ವಾಹನಗಳು ಮತ್ತು ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಹಿಮಾಚಲ ಪ್ರದೇಶದ ಪೊಲೀಸರು ಹೇಳಿದ್ದಾರೆ. ಹೊಸ ವರ್ಷಾಚರಣೆಯ ಸಂಭ್ರಮಾಚರಣೆಗೆ ಮನಾಲಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ