Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೌಡಿಶೀಟರ್​ನೊಬ್ಬ ತಲೆಮೇಲೆ ಕ್ಯಾಪ್ ಧರಿಸಿದ್ದನ್ನು ಕಂಡು ಕೋಪಗೊಂಡ ಹು-ಧಾ ಪೊಲೀಸ್ ಕಮೀಶನರ್ ಶಶಿಕುಮಾರ್

ರೌಡಿಶೀಟರ್​ನೊಬ್ಬ ತಲೆಮೇಲೆ ಕ್ಯಾಪ್ ಧರಿಸಿದ್ದನ್ನು ಕಂಡು ಕೋಪಗೊಂಡ ಹು-ಧಾ ಪೊಲೀಸ್ ಕಮೀಶನರ್ ಶಶಿಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 30, 2024 | 1:25 PM

ಹತ್ಯೆ ಆರೋಪದ ರೌಡಿಶೀಟರ್​ನೊಬ್ಬ ತಲೆಯ ಮೇಲೆ ಕ್ಯಾಪ್ ಧರಿಸಿ ಮುಂದಿನ ಸಾಲಿನಲ್ಲಿ ನಿಂತಿದ್ದ. ಅವನು ಕ್ಯಾಪ್ ಧರಿಸಿರುವುದನ್ನು ನೋಡಿ ಕೆಂಡಾಮಂಡಲರಾದ ಪೊಲೀಸ್ ಕಮೀಶನರ್ ಶಶಿಕುಮಾರ್ ಅದನ್ನು ತೆಗೆಯುವಂತೆ ಗದರಿದರು. ಕೊಲೆಯಂಥ ಹೀನ ಅಪರಾಧ ಎಸಗುವವನಿಗೆ ಎರಡು ನಿಮಿಷಗಳ ಕಾಲ ಬಿಸಿಲಲ್ಲಿ ನಿಂತುಕೊಳ್ಳಲಾಗದೆ ಎಂದ ಅವರು ಕ್ಯಾಪ್ ಧರಿಸಿದ್ದರೆ ತೆಗೆಯುವಂತೆ ಎಲ್ಲರಿಗೂ ಸೂಚಿಸಿದರು.

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ ದಕ್ಷ ಅಧಿಕಾರಿಗಳಲ್ಲೊಬ್ಬರು ಎಂದು ಹೆಸರು ಮಾಡಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅವರು ಅವಳಿ ನಗರಗಳ ರೌಡಿಶೀಟರ್ ಗಳನ್ನು ಹುಬ್ಬಳ್ಳಿಯ ಸಿಎಅರ್ ಮೈದಾನಕ್ಕೆ ಕರೆಸಿ ಎಚ್ಚರಿಕೆ ನೀಡಿದರು. ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಗಳಾಗಿ ಹಿಸ್ಟರಿ ಶೀಟರ್ ಎನಿಸಿಕೊಂಡಿರುವ ಸುಮಾರು 500 ಕ್ಕೂ ಹೆಚ್ಚು ಜನರನ್ನು ಇಂದು ಕರೆಸಲಾಗಿತ್ತು. ಒಬ್ಬ ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ ಮುಂದಿನ ಸಾಲಿನಲ್ಲಿ ಕೊಲೆ ಮಾಡಿದ ಅಪರಾಧಿ ಇಲ್ಲವೇ ಹತ್ಯೆ ಆರೋಪ ಎದುರಿಸುತ್ತಿರುವವರನ್ನು ನಿಲ್ಲಿಸಲಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ವ್ಯಾಪ್ತಿ ರೌಡಿ ಶೀಟರ್​ಗಳ ಪರೇಡ್ ನಡೆಸಿ ಎಚ್ಚರಿಕೆ ನೀಡಿದ ಕಮೀಷನರ್ ಶಶಿಕುಮಾರ್