AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಧಾವಿಯಂತೆ ವರ್ತಿಸುವ ಪ್ರಿಯಾಂಕ್ ಖರ್ಗೆ ತಾನೊಂದು ನ್ಯಾಯಾಲಯ ಅಂದುಕೊಂಡಂತಿದೆ: ವಿಜಯೇಂದ್ರ

ಮೇಧಾವಿಯಂತೆ ವರ್ತಿಸುವ ಪ್ರಿಯಾಂಕ್ ಖರ್ಗೆ ತಾನೊಂದು ನ್ಯಾಯಾಲಯ ಅಂದುಕೊಂಡಂತಿದೆ: ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 30, 2024 | 12:32 PM

Share

ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ದೆಹಲಿಯಲ್ಲಿ ಕರೆದಿದ್ದ ಮಹತ್ವದ ಸಭೆಯಲ್ಲಿ ಭಾಗವಹಿಸುವುದನ್ನು ಬಿಟ್ಟು ತಾನು ಭಾಲ್ಕಿಗೆ ತೆರಳಿ ಸಚಿನ್ ಅವರ ಅತ್ಯಂತ ಬಡ ಕುಟುಂಬವನ್ನು ಭೇಟಿಯಾಗಿದ್ದಾಗಿ ಹೇಳಿದ ವಿಜಯೇಂದ್ರ, ಸಚಿವ ಖರ್ಗೆಯವರ ಅತ್ಯಂತ ಆಪ್ತ ರಾಜು ಕಪನೂರ್ ಹೆಸರಿನ ವ್ಯಕ್ತಿಯ ಕುಮ್ಮಕ್ಕಿನಿಂದ ಗುತ್ತಿಗೆದಾರ ಸಾವಿಗೆ ಶರಣಾಗಿದ್ದಾನೆ, ಅವರ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು ಎಂದರು.

ಬೆಂಗಳೂರು: ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ನಿವಾಸಿಯಾಗಿದ್ದ ಗುತ್ತಿಗೆದಾರ ಸಚಿನ್ ಪಾಂಚಾಳ್ ಸಾವಿಗೆ ಶರಣಾಗುವ ಮೊದಲು ಬರೆದಿರುವ ಡೆತ್​ನೋಟ್ ನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಉಲ್ಲೇಖವಾಗಿದ್ದು ಅವರು ರಾಜೀನಾಮೆ ಸಲ್ಲಿಬೇಕೆಂದು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ನಗರದಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಖುದ್ದು ಪ್ರಿಯಾಂಕ್ ಅವರೇ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ, ಪೋಕ್ಸೋ ಪ್ರಕರಣದ ಆರೋಪ ಎದುರಿಸುತ್ತಿರುವ ಬಿಎಸ್ ಯಡಿಯೂರಪ್ಪರನ್ನು ಅಪರಾಧಿ ಎನ್ನಲು ಸಚಿವರೇನು ಸರ್ವೋಚ್ಛ ನ್ಯಾಯಾಲಯವೇ ಅಥವಾ ತನಿಖಾಧಿಕಾರಿಯೇ ಎಂದು ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್, ಗ್ಯಾಂಗ್‌ ವಿರುದ್ಧ ಕಬುರಗಿಯಲ್ಲಿ ಕೊನೆಗೂ ಎಫ್​ಐಆರ್ ದಾಖಲು