ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡಬೇಕೆಂದಿದ್ದ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆಯನ್ನು ಯಾಕೆ ಮಾಡಿಲ್ಲ? ಸಿಟಿ ರವಿ

ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡಬೇಕೆಂದಿದ್ದ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆಯನ್ನು ಯಾಕೆ ಮಾಡಿಲ್ಲ? ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 30, 2024 | 3:02 PM

ಮಾಜಿ ಸಚಿವ ಈಶ್ವರಪ್ಪ ಹೆಸರು ಉಲ್ಲೇಖಿಸಿ ಬೆಳಗಾವಿಯ ಗುತ್ತಿಗೆದಾರ ಸಾವಿಗೆ ಶರಣಾದಾಗ ಸಿದ್ದರಾಮಯ್ಯನವರು ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಹೇಳಿದ್ದರು, ಭಾಲ್ಕಿಯ ಒಬ್ಬ ಗುತ್ತಿಗೆದಾರ ಸಾಯುವ ಮುನ್ನ ತನ್ನ ಡೆತ್ ನೋಟಲ್ಲಿ, ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಬರೆದಿದ್ದಾನೆ, ಈಗ್ಯಾಕೆ ಮುಖ್ಯಮಂತ್ರಿಯವರು ಮೌನಕ್ಕೆ ಶರಣಾಗಿದ್ದಾರೆ, ಖರ್ಗೆಯನ್ನು ಯಾಕೆ ವಜಾ ಮಾಡುತ್ತಿಲ್ಲ ಎಂದು ರವಿ ಪ್ರಶ್ನಿಸಿದರು

ಬೆಂಗಳೂರು: ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಹತ್ಯೆ ಮತ್ತು ಆತ್ಮಹತ್ಯೆಗಳ ರಾಜ್ಯವನ್ನಾಗಿ ಪರಿವರ್ತಿಸಿದೆ ಮತ್ತು ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದರು. ತನ್ನ ವಿರುದ್ಧ ದೂರು ದಾಖಲಾದ ಕೂಡಲೇ ಬಂಧಿಸಲಾಯಿತು ಮತ್ತು ನಿರ್ಜನ ಪ್ರದೇಶದಲ್ಲಿ ಎನ್ಕೌಂಟರ್ ಮಾಡಿ ಮುಗಿಸುವ ದುರುದ್ದೇಶವೂ ಸರ್ಕಾರಕ್ಕಿತ್ತು ಆದರೆ ಪೊಲೀಸ್ ವ್ಯಾನ್ ಗಳನ್ನು ಮಾಧ್ಯಮದ ವಾಹನಗಳು ಹಿಂಬಾಲಿಸುತ್ತಿದ್ದರಿಂದ ಅದು ಸಫಲವಾಗಲಿಲ್ಲ ಎಂದು ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಂವಿಧಾನವನ್ನು ಕೈಯಲ್ಲಿ ಹಿಡಿಯುವ ಅಧಿಕಾರ ಕಾಂಗ್ರೆಸ್ ನಾಯಕರಿಗಿಲ್ಲ: ಸಿಟಿ ರವಿ, ಪರಿಷತ್ ಸದಸ್ಯ