ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಕದ್ದ ಕಳ್ಳನಿಗೆ ಶಾಕ್; ದಾರಿಯಲ್ಲಿ ಆಗಿದ್ದೇನು?
ಗುಜರಾತ್‌ನ ಮೆಹ್ಸಾನಾದಲ್ಲಿ ಆಂಬುಲೆನ್ಸ್ ಕಳ್ಳತನ ಮಾಡಿದ ಕಳ್ಳನ ಅದೃಷ್ಟ ಕೈಕೊಟ್ಟಿತ್ತು. ಅರ್ಧದಾರಿಯಲ್ಲೇ ಆ ಆ್ಯಂಬುಲೆನ್ಸ್ ಪಲ್ಟಿ ಹೊಡೆದಿದೆ. ಮೆಹ್ಸಾನಾದಲ್ಲಿ ಕಳ್ಳರು ಆಂಬ್ಯುಲೆನ್ಸ್ ಅನ್ನು ಕದ್ದಿದ್ದರು. ಆದರೆ, ಆ ಕಳ್ಳನ ಪ್ರಯತ್ನ ವಿಫಲವಾಗಿದ್ದು, ಮಾರ್ಗಮಧ್ಯೆ ಆಂಬುಲೆನ್ಸ್ ಪಲ್ಟಿಯಾಗಿದೆ. ಆ ಜಾಗದಿಂದ ಕಳ್ಳ ಪರಾರಿಯಾಗಿದ್ದು, ಆಂಬ್ಯುಲೆನ್ಸ್ ಕದ್ದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಅಹಮದಾಬಾದ್: ಗುಜರಾತ್‌ನ ಮೆಹ್ಸಾನಾದಲ್ಲಿ ಕಳ್ಳತನದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮೊದಲು ಬೆಲೆ ಬಾಳುವ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ಆಂಬುಲೆನ್ಸ್ ಕದಿಯಲು ಹಿಂದೇಟು ಹಾಕುತ್ತಿಲ್ಲ. ಮೆಹ್ಸಾನಾದ ಅಗ್ನಿಶಾಮಕ ಠಾಣೆಗೆ ತಂದಿದ್ದ ಹೊಸ ಆಂಬುಲೆನ್ಸ್ ಕಳ್ಳತನವಾಗಿದೆ. ಆದರೆ, ಕಡಿಯ ವಿಶಾಲಪುರ ಕಾಲುವೆ ಬಳಿ ಆ ಆಂಬುಲೆನ್ಸ್ ಪಲ್ಟಿಯಾದ ಕಾರಣದಿಂದ ಕಳ್ಳ ಕಳ್ಳತನಕ್ಕೆ ಯತ್ನಿಸಿ ವಿಫಲನಾಗಿದ್ದಾನೆ. ಈ ಘಟನೆಯ ನಂತರ ಪೊಲೀಸರು ಆಂಬ್ಯುಲೆನ್ಸ್ ಕದ್ದವರ ಸುಳಿವನ್ನು ಹುಡುಕುತ್ತಿದ್ದಾರೆ.
ಗುಜರಾತ್‌ನಲ್ಲಿ ಅಪರಾಧಗಳು ಹೆಚ್ಚುತ್ತಿವೆ. ಕಳ್ಳತನ, ದರೋಡೆ, ಕೊಲೆ, ಥಳಿತ ಮುಂತಾದ ಹಲವು ಘಟನೆಗಳು ನಡೆಯುತ್ತಿವೆ. ಆದರೆ, ಮೆಹ್ಸಾನಾದಲ್ಲಿ ಕಳ್ಳತನದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಕಳ್ಳರು ಆಂಬುಲೆನ್ಸ್ ಹೊರತುಪಡಿಸಿ ಏನನ್ನೂ ಕದ್ದೊಯ್ದಿಲ್ಲ. ಆದರೆ, ಕಳ್ಳರ ಈ ಕಳ್ಳತನದ ಯತ್ನ ವಿಫಲವಾಗಿದ್ದು, ಆಂಬುಲೆನ್ಸ್ ಅರ್ಧದಾರಿಯಲ್ಲೇ ಪಲ್ಟಿಯಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ 12 ಅಂತರಾಜ್ಯ ಕಳ್ಳರ ಬಂಧನ: 61 ಬೈಕ್ಗಳು ವಶಕ್ಕೆ
ಇತ್ತೀಚೆಗಷ್ಟೇ ಗುಜರಾತ್‌ನ ಮಚಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪೆಟ್ರೋಲ್ ಪಂಪ್‌ನಲ್ಲಿ ಕಳ್ಳತನ ನಡೆದಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಗುಜರಾತ್‌ನ ವಡೋದರಾ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಪೆಟ್ರೋಲ್ ಪಂಪ್ ನೌಕರ ದರೋಡೆಗೆ ಯೋಜನೆ ರೂಪಿಸಿದ್ದ. ನೌಕರ ಇತರ 5 ಜನರೊಂದಿಗೆ ಕಳ್ಳತನ ನಡೆಸಿದ್ದಾನೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಉದ್ಯೋಗಿ ಮತ್ತು ರಾಜ್‌ಗಢ ಜಿಲ್ಲೆಯ ಇತರ 5 ಜನರನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಮದುವೆಯಾಗಿದ್ದರೂ 2 ಗರ್ಲ್ ಫ್ರೆಂಡ್ಸ್ಗಾಗಿ ಕಳ್ಳತನಕ್ಕೆ ಇಳಿದಿದ್ದ ಆರೋಪಿ ಬಂಧನ
ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಪೆಟ್ರೋಲ್ ಪಂಪ್ ನಲ್ಲಿ ಒಂದೂವರೆ ಲಕ್ಷ ರೂಪಾಯಿಗೂ ಹೆಚ್ಚು ಕಳ್ಳತನ ನಡೆದಿದ್ದು, ತನಿಖೆ ನಂತರ ಪೆಟ್ರೋಲ್ ಪಂಪ್ ನೌಕರರಾದ ರಾಜೇಂದ್ರ ಮತ್ತು ಲಖನ್ ಕಳ್ಳತನಕ್ಕೆ ಯೋಜನೆ ರೂಪಿಸಿರುವುದು ಬೆಳಕಿಗೆ ಬಂದಿದೆ. ಈ ಪರಿಸ್ಥಿತಿಯಲ್ಲಿ ಲಖನ್ ಮತ್ತು ಇತರ 4 ಸ್ನೇಹಿತರು ಕಳ್ಳತನದ ಯೋಜನೆಗೆ ಸೇರಿಕೊಂಡರು. 6 ಆರೋಪಿಗಳು ಸೇರಿ ಒಂದೂವರೆ ಲಕ್ಷ ರೂಪಾಯಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಇದಾದ ಬಳಿಕ ಪೊಲೀಸರು ರಾಜೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ದಾಳಿ ನಡೆಸಿ ಗುಜರಾತ್‌ನ ವಡೋದರಾ ಮೂಲದ ಲಖನ್‌ನನ್ನು ಬಂಧಿಸಿದ್ದಾರೆ. ಇದಲ್ಲದೇ ಕಳ್ಳತನಕ್ಕೆ ಬಳಸಿದ್ದ 1 ಲಕ್ಷ 57 ಸಾವಿರ ರೂಪಾಯಿ ಹಾಗೂ 2 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಪೊಲೀಸರು ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:43 pm, Mon, 30 December 24