ಮದುವೆಯಾಗಿದ್ದರೂ 2 ಗರ್ಲ್ ಫ್ರೆಂಡ್ಸ್ಗಾಗಿ ಕಳ್ಳತನಕ್ಕೆ ಇಳಿದಿದ್ದ ಆರೋಪಿ ಬಂಧನ
ಹಲಸೂರು ಗೇಟ್ ಪೊಲೀಸರು ಕಳ್ಳತನ ಪ್ರಕರಣವನ್ನು ಬೇಧಿಸಿದ್ದಾರೆ. ಆಸಿಫ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಆಸಿಫ್ ತನ್ನ ಪ್ರಿಯತಮೆಯರಿಗಾಗಿ ಬೈಕ್ ಕಳ್ಳತನ, ದರೋಡೆ ಮತ್ತು ಕೊಲೆಯ ಯತ್ನದಂತಹ ಅಪರಾಧಗಳನ್ನು ಎಸಗಿದ್ದನು. ಅವನ ವಿರುದ್ಧ ಏಳು ಪ್ರಕರಣಗಳು ದಾಖಲಾಗಿವೆ. ಇನ್ನೊಂದು ಪ್ರಕರಣದಲ್ಲಿ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 08: ಪ್ರಿಯತಮೆಯರಿಗಾಗಿ ಕಳ್ಳತನಕ್ಕೆ ಇಳಿದಿದ್ದ ಆರೋಪಿಯನ್ನು 14 ವರ್ಷದ ಬಳಿಕ ಹಲಸೂರು ಗೇಟ್ ಪೊಲೀಸರು (Police) ಬಂಧಿಸಿದ್ದಾರೆ. ಆಸಿಫ್ ಬಂಧಿತ ಆರೋಪಿ. ಮದುವೆಯಾಗಿದ್ದ ಆಸಿಫ್ಗೆ ಇಬ್ಬರು ಗರ್ಲ್ ಫ್ರೆಂಡ್ಸ್ ಇದ್ದರು. ಗರ್ಲ್ ಫ್ರೆಂಡ್ಸ್ಗಾಗಿ ಬೈಕ್ ಕಳ್ಳತನ, ದರೋಡೆ, ಕೊಲೆಯತ್ನ ಕೂಡ ಮಾಡಿದ್ದನು. ಕದ್ದ ಬೈಕ್ನಲ್ಲಿ ಪ್ರಿಯತಮೆಯರನ್ನು ಜಾಲಿ ರೈಡ್ಗೆ ಕರೆದೊಯ್ಯುತ್ತಿದ್ದನು. ಬಳಿಕ, ಪ್ರಿಯತಮೆಯನ್ನು ಡ್ರಾಪ್ ಮಾಡಿ ಅಲ್ಲಿಯೇ ಬೈಕ್ ಬಿಟ್ಟು ಬರುತ್ತಿದ್ದನು.
ಆರೋಪಿ ಆಸಿಫ್ ವಿರುದ್ಧ ವಿವಿಧ ಠಾಣೆಗಳಲ್ಲಿ ಏಳು ಪ್ರಕರಣ ದಾಖಲಾಗಿವೆ. ಆರೋಪಿ ಆಸಿಫ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದನು. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 2014ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದನು. ಹೀಗಾಗಿ, ಹಲಸೂರು ಗೇಟ್ ಪೊಲೀಸರು ಆರೋಪಿ ಆಸಿಫ್ಗಾಗಿ ಹುಡುಕಾಟ ನಡೆಸಿದ್ದರು.
ಆರೋಪಿ ಆಸಿಫ್ನ ದಿನಚರಿ ತಿಳಿದು ಪೊಲೀಸರು ಬೆನ್ನುಹತ್ತಿದ್ದರು. ಕೊನೆಗೂ ಹಲಸೂರು ಗೇಟ್ ಪೊಲೀಸರು ಆರೋಪಿ ಆಸಿಫ್ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಗಂಡನಿದ್ದರೂ ಬೇರೊಬ್ಬನೊಂದಿಗೆ ಲವ್ವಿಡವ್ವಿ: ಪ್ರಿಯಕರನಿಂದ ಗೃಹಿಣಿಯ ಬರ್ಬರ ಹತ್ಯೆ
ಮೂವರು ಅಂತಾರಾಜ್ಯ ಕಳ್ಳರನ್ನು ಬಂಧನ
ಮೂವರು ಅಂತಾರಾಜ್ಯ ಕಳ್ಳರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೈಯದ್ ರಿಯಾನ್ (19), ಶಿವಕುಮಾರ (25), ಅಪ್ಪು (20) ಬಂಧಿತ ಆರೋಪಿಗಳು. ಗ್ಯಾಂಗ್ 33 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿತ್ತು. ಆರೋಪಿಗಳು ಆಂಧ್ರದಲ್ಲಿ ಕಳ್ಳತನದ ವೇಳೆ ಓರ್ವ ಮಹಿಳೆಯನ್ನು ಕೊಲೆ ಮಾಡಿದ್ದರು. ಪೊಲೀಸರ ಕಣ್ತತಪ್ಪಿಸಿ ಆಂಧ್ರಕ್ಕೆ ತೆರಳುವಾಗ ಆರೋಪಿಗಳು ದೊಡ್ಡಬಳ್ಳಾಪುರದ ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಗ್ರಾಮದ ಬಳಿ ಮೂರು ಕಡೆ ಸರಗಳ್ಳತನ ಮಾಡಿದ್ದರು.
ಮೈಸೂರಿನಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ ಮಾಡಿದ್ದರು. ಸರಗಳ್ಳತನ ಪ್ರಕರಣ ಬೆನ್ನತ್ತಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪಿಐ ಸಾದಿಕ್ ಪಾಷಾ ಆ್ಯಂಡ್ ಟೀಮ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಳವು ಮಾಲು ಜಪ್ತಿಯಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ