AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಮಂತನಾಗುವ ಆಸೆಗೆ ಮಾಂತ್ರಿಕ ಹೇಳಿದಂತೆ ಓರ್ವನ ತಲೆ ಕಡಿದು ಪೂಜೆ ಮಾಡಿದ ವ್ಯಕ್ತಿ

ಶ್ರೀಮಂತನಾಗುವ ದುರಾಸೆಯಿಂದ ಮಾಂತ್ರಿಕ ಹೇಳಿದಂತೆ ವ್ಯಕ್ತಿಯೊಬ್ಬ ಓರ್ವನ ತಲೆ ಕಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಪೂಜೆ ಮುಗಿಸಿದರೆ ನಿನಗೆ 50-60 ಕೋಟಿ ರೂ. ಸಿಗುವುದು ನಿಶ್ಚಿತ ಎಂದು ಮಾಂತ್ರಿಕನೊಬ್ಬ ಹೇಳಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಷ್ಟೇ ಅಲ್ಲದೆ ಆತನ ತಲೆಯನ್ನು ಕಡಿದು ಪೂಜೆಗೆ ಇರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀಮಂತನಾಗುವ ಆಸೆಗೆ ಮಾಂತ್ರಿಕ ಹೇಳಿದಂತೆ ಓರ್ವನ ತಲೆ ಕಡಿದು ಪೂಜೆ  ಮಾಡಿದ ವ್ಯಕ್ತಿ
ಆರೋಪಿಗಳು
ನಯನಾ ರಾಜೀವ್
|

Updated on: Dec 08, 2024 | 2:33 PM

Share

ಶ್ರೀಮಂತನಾಗುವ ದುರಾಸೆಯಿಂದ ಮಾಂತ್ರಿಕ ಹೇಳಿದಂತೆ ವ್ಯಕ್ತಿಯೊಬ್ಬ ಓರ್ವನ ತಲೆ ಕಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಪೂಜೆ ಮುಗಿಸಿದರೆ ನಿನಗೆ 50-60 ಕೋಟಿ ರೂ. ಸಿಗುವುದು ನಿಶ್ಚಿತ ಎಂದು ಮಾಂತ್ರಿಕನೊಬ್ಬ ಹೇಳಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಷ್ಟೇ ಅಲ್ಲದೆ ಆತನ ತಲೆಯನ್ನು ಕಡಿದು ಪೂಜೆಗೆ ಇರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬಿಹಾರ ಮೂಲದವರಾಗಿದ್ದಾರೆ, ದೆಹಲಿಯಲ್ಲಿ ಇ-ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ, ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಅಪರಾಧವೆಸಗಿದ್ದಾನೆ. ಅದರಲ್ಲಿ ಒಬ್ಬ ಸ್ನೇಹಿತ ತಾನು ಯೂಟ್ಯೂಬ್ ನೋಡಿ ಬ್ಲ್ಯಾಕ್ ಮ್ಯಾಜಿಕ್ ಕಲಿತಿದ್ದೇನೆ, ತಲೆಬುರುಡೆಗೆ  ಪೂಜೆ ಮಾಡಿದರೆ ಶ್ರೀಮಂತರಾಗಬಹುದು ಎಂದು ಆತ ಹೇಳಿದ್ದ.

ಬಂಧಿತ ಆರೋಪಿಗಳನ್ನು ವಿಕಾಸ್ (28) ಅಲಿಯಾಸ್ ಪರಮಾತ್ಮ, ನರೇಂದ್ರ, ಪವನ್ ಕುಮಾರ್ ಮತ್ತು ಪಂಕಜ್ ಎಂದು ಗುರುತಿಸಲಾಗಿದೆ. ಈ ಘಟನೆ ಈ ಜೂನ್​ನಲ್ಲಿ ನಡೆದಿದೆ, ಪೊಲೀಸರು ಗಾಜಿಯಾಬಾದ್​ನ ಚರಂಡಿಯಲ್ಲಿ ತಲೆಯಿಲ್ಲದ ಶವ ವಶಪಡಿಸಿಕೊಂಡಿದ್ದರು. ತನಿಖೆ ಪ್ರಾರಂಭಿಸಲಾಯಿತು, ವಿಕಾಸ್ ಗುಪ್ತಾ (24) ಅಲಿಯಾಸ್ ಮೋಟಾ ಮತ್ತು ಧನಂಜಯ್ (25) ಅವರನ್ನು ಬಂಧಿಸಲಾಗಿತ್ತು.

ವಿಚಾರಣೆ ವೇಳೆ ವಿಕಾಸ್ (28) ಅಲಿಯಾಸ್ ಪರಮಾತ್ಮ ಎಂಬಾತ ವ್ಯಕ್ತಿಯೊಬ್ಬನನ್ನು ಕೊಂದು ಆತನ ತಲೆಬುರುಡೆಯನ್ನು ಮಾಟಮಂತ್ರಕ್ಕೆ ಬಳಸಿಕೊಳ್ಳಲು ಮುಂದಾಗಿದ್ದ ಎಂದು ತಿಳಿದು ಬಂದಿದೆ. ಪರಮಾತ್ಮನ ಸೂಚನೆ ಮೇರೆಗೆ ರಾಜು ಶಾ (29) ಎಂಬಾತನನ್ನು ಕೊಲೆ ಮಾಡಿರುವುದಾಗಿ ಮೋಟಾ ಮತ್ತು ಧನಂಜಯ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಡಿಸೆಂಬರ್ 7ರ ಶನಿವಾರದಂದು ಪರಮಾತ್ಮನನ್ನು ಬಂಧಿಸಲಾಗಿತ್ತು.

ಮತ್ತಷ್ಟು ಓದಿ: ಮದುವೆಯಾಗಿದ್ದರೂ 2 ಗರ್ಲ್ ಫ್ರೆಂಡ್ಸ್​​ಗಾಗಿ ಕಳ್ಳತನಕ್ಕೆ ಇಳಿದಿದ್ದ ಆರೋಪಿ ಬಂಧನ

ಆರೋಪಿಯ ಬಂಧನದ ನಂತರ, ಪೊಲೀಸರು ರಾಜು ಅವರ ತಲೆಬುರುಡೆಯನ್ನು ಗಾಜಿಯಾಬಾದ್‌ನ ಚರಂಡಿಯಿಂದ ವಶಪಡಿಸಿಕೊಂಡರು. ಇದಲ್ಲದೆ, ಪೊಲೀಸರು ಪ್ರಾಣಿಯ ತಲೆಬುರುಡೆ, ಹರಿತವಾದ ಆಯುಧಗಳು ಮತ್ತು ಅಪರಾಧಕ್ಕೆ ಬಳಸಿದ ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ