ದೀಪಾವಳಿ ಬಂದ್ರೆ ಸಾಕು.. ಈ ಊರಿನ ಶ್ವಾನಗಳಿಗೆ ಅದೇನು ಮರ್ಯಾದೆ, ಅದೇನು ಸನ್ಮಾನ.. ವಾಹ್​!

|

Updated on: Nov 14, 2020 | 6:32 PM

ದೀಪಾವಳಿ ಬಂದರೆ ಸಾಕು ಮಕ್ಕಳಿಗೆ ಸಿಕ್ಕಾಪಟ್ಟೆ ಖುಷಿ. ಮೊದಲು ಹಿರಿಯರೊಟ್ಟಿಗೆ ಬೆಳ್ಳಂಬೆಳ್ಳಗೆ ಎಣ್ಣೆ ಸ್ನಾನ ಮಾಡೋದು. ಆಮೇಲೆ ಎಲ್ಲರೊಂದಿಗೆ ಸೇರಿ ಪೂಜೆಯಲ್ಲಿ ಭಾಗಿಯಾಗೋದು. ನಂತರ ಬಗೆಬಗೆಯ ರುಚಿರುಚಿಯಾದ ಖಾದ್ಯ ಮತ್ತು ಸ್ವೀಟ್​ಗಳನ್ನು ಸವಿಯುವುದು. ಆದರೆ, ಇದೆಲ್ಲದಕ್ಕಿಂತ ಮಕ್ಕಳಿಗೆ ತುಂಬಾನೇ ಇಷ್ಟವಾಗೋದು ಅಂದರೆ ಗೊತ್ತಲ್ಲ.. ಯೆಸ್​ ಸಾಯಂಕಾಲ ಏರಿಯಾದಲ್ಲಿರುವ ಸ್ನೇಹಿತರೊಡೆನೆ ಸೇರಿ ಪಟಾಕಿ ಹೊಡೆಯೋದು! ಆದರೆ, ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ದೀಪಾವಳಿ ಎಂದರೆ ಸಾಕು ಕೇವಲ ಮಕ್ಕಳಿಗೆ ಮಾತ್ರವಲ್ಲ ಇಲ್ಲಿನ ಶ್ವಾನಗಳಿಗೂ ಒಂದು ರೀತಿಯ ಸಂಭ್ರಮ, ಸಡಗರ. ಹೌದು, […]

ದೀಪಾವಳಿ ಬಂದ್ರೆ ಸಾಕು.. ಈ ಊರಿನ ಶ್ವಾನಗಳಿಗೆ ಅದೇನು ಮರ್ಯಾದೆ, ಅದೇನು ಸನ್ಮಾನ.. ವಾಹ್​!
Follow us on

ದೀಪಾವಳಿ ಬಂದರೆ ಸಾಕು ಮಕ್ಕಳಿಗೆ ಸಿಕ್ಕಾಪಟ್ಟೆ ಖುಷಿ. ಮೊದಲು ಹಿರಿಯರೊಟ್ಟಿಗೆ ಬೆಳ್ಳಂಬೆಳ್ಳಗೆ ಎಣ್ಣೆ ಸ್ನಾನ ಮಾಡೋದು. ಆಮೇಲೆ ಎಲ್ಲರೊಂದಿಗೆ ಸೇರಿ ಪೂಜೆಯಲ್ಲಿ ಭಾಗಿಯಾಗೋದು. ನಂತರ ಬಗೆಬಗೆಯ ರುಚಿರುಚಿಯಾದ ಖಾದ್ಯ ಮತ್ತು ಸ್ವೀಟ್​ಗಳನ್ನು ಸವಿಯುವುದು. ಆದರೆ, ಇದೆಲ್ಲದಕ್ಕಿಂತ ಮಕ್ಕಳಿಗೆ ತುಂಬಾನೇ ಇಷ್ಟವಾಗೋದು ಅಂದರೆ ಗೊತ್ತಲ್ಲ.. ಯೆಸ್​ ಸಾಯಂಕಾಲ ಏರಿಯಾದಲ್ಲಿರುವ ಸ್ನೇಹಿತರೊಡೆನೆ ಸೇರಿ ಪಟಾಕಿ ಹೊಡೆಯೋದು!
ಆದರೆ, ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ದೀಪಾವಳಿ ಎಂದರೆ ಸಾಕು ಕೇವಲ ಮಕ್ಕಳಿಗೆ ಮಾತ್ರವಲ್ಲ ಇಲ್ಲಿನ ಶ್ವಾನಗಳಿಗೂ ಒಂದು ರೀತಿಯ ಸಂಭ್ರಮ, ಸಡಗರ. ಹೌದು, ನೇಪಾಳದಲ್ಲಿ ದೀಪಾವಳಿ ಹಬ್ಬವನ್ನು 5 ದಿನಗಳ ಕಾಲ ಆಚರಿಸಿಲಾಗುತ್ತದೆ. ಹಬ್ಬದ ಎರಡನೇ ದಿನವನ್ನು ಕುಕ್ಕುರ್​ ತಿಹಾರ್ ಎಂದು ಆಚರಸಿಲಾಗುತ್ತದೆ. ಇದರ ಭಾಗವಾಗಿ, ಶ್ವಾನಗಳಿಗೆ ಅಂದು ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ, ಅವುಗಳಿಗೆ ರುಚಿರುಚಿಯಾದ ಭಕ್ಷ್ಯ ಭೋಜ್ಯಗಳನ್ನು ನೀಡಲಾಗುತ್ತದೆ.

ಅಂತೆಯೇ, ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಇಂದು ಕುಕ್ಕುರ್​ ತಿಹಾರ್ ಅಂಗವಾಗಿ ನಗರದ ಪ್ರಾಣಿ ದಯಾ ಸಂಘವೊಂದರಲ್ಲಿರುವ ಶ್ವಾನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅವುಗಳಿಗೆ ಹಲವು ಖಾದ್ಯಗಳನ್ನು ಸಹ ನೀಡಲಾಯಿತು. ಮನುಷ್ಯರ ಹಾಗೂ ಶ್ವಾನಗಳ ನಡುವಿನ ಸಹಸ್ರಾರು ವರ್ಷಗಳ ಬಾಂಧವ್ಯದ ಪ್ರತೀಕವಾಗಿ ಈ ಕುಕ್ಕುರ್​ ತಿಹಾರ್ ಹಬ್ಬವನ್ನು ಆಚರಿಸಲಾಗುತ್ತದೆ.