Kupwara: ಕುಪ್ವಾರದಲ್ಲಿ ಒಂದೇ ಕುಟುಂಬದ 5 ಮಂದಿ ಅನುಮಾನಾಸ್ಪದವಾಗಿ ಸಾವು
ಒಂದೇ ಕುಟುಂಬದ 5 ಮಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕ್ರಾಲ್ಪೋರಾದಲ್ಲಿ ನಡೆದಿದೆ.
ಒಂದೇ ಕುಟುಂಬದ 5 ಮಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕ್ರಾಲ್ಪೋರಾದಲ್ಲಿ ನಡೆದಿದೆ. ಮೃತರು ಮೂಲತಃ ಉತ್ತರಪ್ರದೇಶದವರಾಗಿದ್ದಾರೆ, ರಾತ್ರಿ ತಮ್ಮ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮಾಹಿತಿ ಪ್ರಕಾರ, ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ಮಜಿದ್ ಅನ್ಸಾರಿ ಎಂಬಾತ ತನ್ನ ಕುಟುಂಬದೊಂದಿಗೆ ಕ್ರಾಲ್ಪೋರಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು..
ಐವರು ಕುಟುಂಬ ಸದಸ್ಯರು ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಕ್ಕಪಕ್ಕದ ಜನರು ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಮೇಲ್ನೋಟಕ್ಕೆ ಉಸಿರುಗಟ್ಟುವಿಕೆ ಪ್ರಕರಣವೆಂದು ತೋರುತ್ತದೆ, ಅಧಿಕೃತ ಮೂಲಗಳ ಪ್ರಕಾರ ಮೃತರನ್ನು ಮಜೀದ್ ಅನ್ಸಾರಿ (35), ಅವರ ಪತ್ನಿ ಸೋಹಾನಾ ಖಾತೂನ್ (30), ಮಗ ಫೈಜಾನ್ ಅನ್ಸಾರಿ (4), ಅಬು ಜರ್ (3) ಮತ್ತು ನವಜಾತ ಶಿಶು ಕೂಡ ಮೃತಪಟ್ಟಿದೆ.
ಮತ್ತಷ್ಟು ಓದಿ: ಹದಿಹರೆಯದ ಮನೆಕೆಲಸದ ಹುಡುಗಿಗೆ ಇಕ್ಕಳದಲ್ಲಿ ಸುಟ್ಟು, ಹೊಡೆದು ಕಿರುಕುಳ ನೀಡುತ್ತಿದ್ದ ಗುರುಗ್ರಾಮದ ದಂಪತಿ ಬಂಧನ
ಕುಟುಂಬ ಸದಸ್ಯರಿಗೆ ಸಾವನ್ನು ದೃಢಪಡಿಸಿದ ಬ್ಲಾಕ್ ಮೆಡಿಕಲ್ ಆಫೀಸರ್ (ಬಿಎಂಒ) ಕ್ರಾಲ್ಪೋರಾ, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದರು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅದೇ ಸಮಯದಲ್ಲಿ, ಘಟನೆಯ ಬಗ್ಗೆ ಬಿಜ್ನೋರ್‌ನಲ್ಲಿರುವ ಅವರ ಮನೆಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಪ್ವಾರದಿಂದ 12 ಕಿ.ಮೀ ದೂರದಲ್ಲಿರುವ ಕ್ರಾಲ್ಪೋರಾದಲ್ಲಿ ಅನ್ಸಾರಿ ಸಲೂನ್ ನಡೆಸುತ್ತಿದ್ದರು. ಅನ್ಸಾರಿ ಕರೆಯನ್ನು ಸ್ವೀಕರಿಸದ ಕಾರಣ ಅವರ ಮನೆಗೆ ಬಂದು ನೋಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:42 am, Thu, 9 February 23