ಉಪವಾಸ ಮಾಡಿದ್ದಕ್ಕೆ ಆಡಳಿತ ಬಂಧಿಸಿದೆ ಎಂದು ಆರೋಪಿಸಿದ ವಾಂಗ್ಚುಕ್; ಆರೋಪ ನಿರಾಕರಿಸಿದ ಲಡಾಖ್

| Updated By: ರಶ್ಮಿ ಕಲ್ಲಕಟ್ಟ

Updated on: Jan 30, 2023 | 5:56 PM

ನಾನು ಗೃಹಬಂಧನದಲ್ಲಿದ್ದೇನೆ. ವಾಸ್ತವವಾಗಿ ಅದಕ್ಕಿಂತ ಕೆಟ್ಟದು. ನೀವು ಗೃಹಬಂಧನದಲ್ಲಿದ್ದರೆ, ನಿಮಗೆ ನಿಯಮಗಳನ್ನು ಸ್ಪಷ್ಟವಾಗಿ ತಿಳಿದಿದೆ. ಅದನ್ನು ಎದುರಿಸಲು ಕಾನೂನು ಮಾರ್ಗಗಳನ್ನು ಸಹ ನೀವು ಅನ್ವೇಷಿಸಬಹುದು. ಆದರೆ ಇದೀಗ ನನ್ನನ್ನು ನಮ್ಮ ಸಂಸ್ಥೆಯಲ್ಲಿ ಇರಿಸಲಾಗಿದೆ....

ಉಪವಾಸ ಮಾಡಿದ್ದಕ್ಕೆ ಆಡಳಿತ ಬಂಧಿಸಿದೆ ಎಂದು ಆರೋಪಿಸಿದ ವಾಂಗ್ಚುಕ್; ಆರೋಪ ನಿರಾಕರಿಸಿದ ಲಡಾಖ್
ಸೋನಮ್ ವಾಂಗ್‌ಚುಕ್
Follow us on

ದೆಹಲಿ: ಲೇಹ್‌ಗೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ (Fasting) ನಂತರ ತಮ್ಮನ್ನು ಕೇಂದ್ರಾಡಳಿತ ಪ್ರದೇಶದ ಆಡಳಿತವು ಬಂಧಿಸಿದೆ ಎಂದು ಪರಿಸರವಾದಿ ಸೋನಮ್ ವಾಂಗ್ಚುಕ್ (Sonam Wangchuk) ಆರೋಪಿಸಿದ್ದಾರೆ. ಆದಾಗ್ಯೂ, ಅಧಿಕಾರಿಗಳು ಈ ರೀತಿಯ ಯಾವುದೇ ಬಂಧನ ನಡೆದಿಲ್ಲ ಎಂದು ಆರೋಪ ನಿರಾಕರಿಸಿದ್ದಾರೆ. ಪ್ರದೇಶದ ಪರಿಸರ ನಾಶ ಮತ್ತು ಸಮರ್ಥನೀಯವಲ್ಲದ ಅಭಿವೃದ್ಧಿಯ ವಿರುದ್ಧದ ಪ್ರತಿಭಟನೆಗೆ ಆಡಳಿತವು ತಮ್ಮನ್ನು ಮೌನಗೊಳಿಸಲು ಬಯಸುತ್ತದೆ ಎಂದು ವಾಂಗ್ಚುಕ್ ಭಾನುವಾರ ಹೇಳಿದ್ದಾರೆ. ಖರ್ದುಂಗ್ ಲಾದಲ್ಲಿ ಅವರು ಪ್ರತಿಭಟನೆ ನಡೆಸಲು ಬಯಸಿದ್ದು,ಕೇಂದ್ರಾಡಳಿತ ಅದಕ್ಕೆ ಅನುಮತಿ ನಿರಾಕರಿಸಿದೆ ಎಂದು ಅವರು ಹೇಳಿದ್ದಾರೆ. ಲೇಹ್‌ನಲ್ಲಿನ ಇತ್ತೀಚಿನ ಘಟನೆಗಳ ಬಗ್ಗೆ ಒಂದು ತಿಂಗಳವರೆಗೆ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಭರವಸೆ ನೀಡುವ ಬಾಂಡ್‌ಗೆ ವಾಂಗ್‌ಚುಕ್ ಸಹಿ ಹಾಕಬೇಕೆಂದು ಲಡಾಖ್ ಆಡಳಿತ ಬಯಸಿದೆ. ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ಮೂಲಕ ಇದೀಗ ಲೇಹ್‌ನಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕುರಿತು ಅವರು ಒಂದು ತಿಂಗಳ ಕಾಲ ಯಾವುದೇ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಕೂಡಾ ಬಾಂಡ್ ನಲ್ಲಿದೆ.

56ರ ಹರೆಯದ ವಾಂಗ್ಚುಕ್ ಅವರು ಗುರುವಾರ ಲೇಹ್‌ನ ಫಿಯಾಂಗ್‌ನಲ್ಲಿ ತಮ್ಮ ಐದು ದಿನಗಳ ಉಪವಾಸವನ್ನು ಪ್ರಾರಂಭಿಸಿದ್ದು, ಅಲ್ಲಿ ರಾತ್ರಿ ತಾಪಮಾನವು ಮೈನಸ್ 20 ಡಿಗ್ರಿ ಸೆಲ್ಸಿಯಸ್ ಆಗಿದೆ. ಈ ಹಿಂದೆ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು ಎಂದು ವಾಂಗ್ಚುಕ್ ಆರೋಪಿಸಿದ್ದಾರೆ.

ಅವರು ಒಂದು ತಿಂಗಳ ಕಾಲ ಯಾವುದೇ ಹೇಳಿಕೆ ನೀಡುವುದಿಲ್ಲ ಅಥವಾ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಹಿ ಹಾಕಲು ಕೇಳಲಾದ ಬಾಂಡ್ ಎಂದು ದಾಖಲೆಯ ಪ್ರತಿಯೊಂದನ್ನು ಅವರು ಟ್ವೀಟ್ ಮಾಡಿದ್ದಾರೆ.


ನಾನು ಗೃಹಬಂಧನದಲ್ಲಿದ್ದೇನೆ. ವಾಸ್ತವವಾಗಿ ಅದಕ್ಕಿಂತ ಕೆಟ್ಟದು. ನೀವು ಗೃಹಬಂಧನದಲ್ಲಿದ್ದರೆ, ನಿಮಗೆ ನಿಯಮಗಳನ್ನು ಸ್ಪಷ್ಟವಾಗಿ ತಿಳಿದಿದೆ. ಅದನ್ನು ಎದುರಿಸಲು ಕಾನೂನು ಮಾರ್ಗಗಳನ್ನು ಸಹ ನೀವು ಅನ್ವೇಷಿಸಬಹುದು. ಆದರೆ ಇದೀಗ ನನ್ನನ್ನು ನಮ್ಮ ಸಂಸ್ಥೆಯಲ್ಲಿ ಇರಿಸಲಾಗಿದೆ. ನನ್ನ ಚಲನೆಯನ್ನು ನಿರ್ಬಂಧಿಸಲಾಗಿದೆ” ಎಂದು ಹಿಮದಿಂದ ಆವೃತವಾದ ಪರ್ವತಗಳ ನಡುವೆ ವಿಡಿಯೊ ಹೇಳಿಕೆ ನೀಡಿದ್ದಾರೆ ವಾಂಗ್ಚುಕ್ ಎಂದು ಎನ್ ಡಿಟಿವಿ ವರದಿ ಮಾಡಿದೆ.

ಅವರು ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಲಡಾಖ್ ಅಥವಾ HIAL ಸ್ಥಾಪಕ ವಾಂಗ್ಚುಕ್ ಇದೀಗ ಉಪವಾಸ ಮಾಡುತ್ತಿದ್ದಾರೆ. ವಾಂಗ್ಚುಕ್ ಅವರು ಖರ್ದುಂಗ್ ಲಾ ಪಾಸ್‌ನಲ್ಲಿ ತಮ್ಮ ಉಪವಾಸವನ್ನು ಯೋಜಿಸಿದ್ದರು, ಅಲ್ಲಿ ತಾಪಮಾನವು ಮೈನಸ್ 40 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು. ಖರ್ದುಂಗ್ ಲಾ ಪಾಸ್ ತಲುಪುವುದನ್ನು ತಡೆಯಲು ಆಡಳಿತವು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ತಡೆಗಟ್ಟುವ ಕ್ರಮಗಳಿಗೆ ಕರೆ ನೀಡಿದ ಅವರು, ಸಮರ್ಥನೀಯವಲ್ಲದ ಕೈಗಾರಿಕೆಗಳು, ಪ್ರವಾಸೋದ್ಯಮ ಮತ್ತು ವಾಣಿಜ್ಯವು ಲಡಾಖ್‌ನಲ್ಲಿ ಅಣಬೆಗಳಂತೆ ಮುಂದುವರಿಯುತ್ತದೆ ಮತ್ತು ಅಂತಿಮವಾಗಿ ಈ ಪ್ರದೇಶವನ್ನು ನಾಶ ಮಾಡುತ್ತವೆ ಎಂದಿದ್ದರು. ಕೆಲವು ಬುಡಕಟ್ಟು ಪ್ರದೇಶಗಳನ್ನು ಸ್ವಾಯತ್ತ ಘಟಕಗಳಾಗಿ ಆಡಳಿತಕ್ಕೆ ಅನುಮತಿಸುವ ಸಂವಿಧಾನದ 6 ನೇ ಶೆಡ್ಯೂಲ್‌ನಲ್ಲಿ ಪ್ರದೇಶವನ್ನು ಸೇರಿಸಲು ಅವರು ಸರ್ಕಾರವನ್ನು ಕೇಳಿದ್ದಾರೆ.

ಸೋನಮ್ ವಾಂಗ್ಚುಕ್ ಅವರ ಜೀವನ ಆಧಾರಿತ ಕತೆಯಾಗಿಗೆ 2009 ರಲ್ಲಿ ತೆರೆಕಂಡ ಚಲನಚಿತ್ರ 3 ಈ ಡಿಯಟ್ಸ್ ಚಿತ್ರ. ಪ್ರಸ್ತುತ ಸಿನಿಮಾದಲ್ಲಿಬಾಲಿವುಡ್ ನಟ ಅಮೀರ್ ಖಾನ್ ವಾಂಗ್ಚುಕ್ ಪಾತ್ರಕ್ಕೆ ಜೀವ ತುಂಬಿದ್ದರು. 2018 ರಲ್ಲಿ ವಾಂಗ್ಚುಕ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ