ಲಡಾಖ್​​ನಲ್ಲಿ ಎಲ್ಲವೂ ಸರಿಯಿಲ್ಲ, ಹಿಮಗಡ್ಡೆಗಳ ರಕ್ಷಣೆಗೆ ಕ್ರಮ ಕೈಗೊಳ್ಳಿ; 3 ಈಡಿಯಟ್ಸ್ ಸಿನಿಮಾಗೆ ಪ್ರೇರಣೆಯಾಗಿದ್ದ ವಾಂಗ್‌ಚುಕ್ ಮನವಿ

ವಾಂಗ್‌ಚುಕ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ 13 ನಿಮಿಷಗಳ ಸುದೀರ್ಘ ವಿಡಿಯೊದಲ್ಲಿ, ಅವರು 'ತುರ್ತಾಗಿ' ಲಡಾಖ್‌ನ "ಪರಿಸರ ಸೂಕ್ಷ್ಮ" ಪ್ರದೇಶವನ್ನು ರಕ್ಷಿಸಲು ಸಹಾಯ ಮಾಡಲು ದೇಶದ ಮತ್ತು ಪ್ರಪಂಚದ ಜನರಿಗೆ ಮನವಿ ಮಾಡಿದರು.

ಲಡಾಖ್​​ನಲ್ಲಿ ಎಲ್ಲವೂ ಸರಿಯಿಲ್ಲ, ಹಿಮಗಡ್ಡೆಗಳ ರಕ್ಷಣೆಗೆ ಕ್ರಮ ಕೈಗೊಳ್ಳಿ; 3 ಈಡಿಯಟ್ಸ್ ಸಿನಿಮಾಗೆ ಪ್ರೇರಣೆಯಾಗಿದ್ದ ವಾಂಗ್‌ಚುಕ್ ಮನವಿ
ಸೋನಮ್ ವಾಂಗ್‌ಚುಕ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 23, 2023 | 4:37 PM

ಲೇಹ್: ಬಾಲಿವುಡ್ ಸಿನಿಮಾ ‘3 ಈಡಿಯಟ್ಸ್’ ಗೆ(3 Idiots) ಸ್ಫೂರ್ತಿಯಾಗಿದ್ದ  ಲಡಾಖ್‌ನ ಸಾಮಾಜಿಕ ಸುಧಾರಣಾವಾದಿ ಸೋನಮ್ ವಾಂಗ್‌ಚುಕ್ (Sonam Wangchuk) ಸುಮಾರು 2/3 ರಷ್ಟು ಹಿಮಗಡ್ಡೆಗಳು ಅಳಿವಿನಂಚಿನಲ್ಲಿದ್ದು ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಒತ್ತಾಯಿಸಿದ್ದಾರೆ. ಭಾನುವಾರ ಎಎನ್‌ಐ ಜೊತೆ ಮಾತನಾಡಿದ ಸೋನಮ್ ವಾಂಗ್‌ಚುಕ್, ಅಜಾಗರೂಕತೆ ಮುಂದುವರಿದರೆ ಮತ್ತು ಲಡಾಖ್‌ಗೆ ಕೈಗಾರಿಕೆಗಳಿಂದ ರಕ್ಷಣೆ ನೀಡುವುದನ್ನು ತಡೆದರೆ, ಇಲ್ಲಿನ ಹಿಮಗಡ್ಡೆಗಳು ನಶಿಸಿ ಹೋಗುತ್ತವೆ, ಹೀಗಾಗಿ ಭಾರತ ಮತ್ತು ಅದರ ನೆರೆಹೊರೆಯಲ್ಲಿ ನೀರಿನ ಕೊರತೆಯುಂಟಾಗುತ್ತದೆ. ಇದು ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಒತ್ತಿ ಹೇಳಿದರು.

ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಕೈಗಾರಿಕೆಗಳು, ಪ್ರವಾಸೋದ್ಯಮ ಮತ್ತು ವಾಣಿಜ್ಯವು ಲಡಾಖ್‌ನಲ್ಲಿ ಕುಸಿಯುತ್ತಾ ಹೋಗಿ ಆಮೇಲೆ ಇಲ್ಲವಾಗುತ್ತದೆ. ಕಾಶ್ಮೀರ ವಿಶ್ವವಿದ್ಯಾಲಯ ಮತ್ತು ಇತರ ಸಂಶೋಧನಾ ಸಂಸ್ಥೆಗಳ ಇತ್ತೀಚಿನ ಅಧ್ಯಯನಗಳ ಪ್ರಕಾರ ಲೇಹ್-ಲಡಾಖ್‌ನಲ್ಲಿನ ಹಿಮಗಡ್ಡೆಗಳನ್ನು ಸರಿಯಾಗಿ ನೋಡಿಕೊಳ್ಳದೇ ಇದ್ದರೆ ಅವುಗಳ 3ನೇ 2ರಷ್ಟು ನಶಿಸಿಹೋಗುತ್ತದೆ. ಕಾಶ್ಮೀರ ವಿಶ್ವವಿದ್ಯಾಲಯದ ಅಧ್ಯಯನವು ಹೆದ್ದಾರಿಗಳು ಮತ್ತು ಮಾನವ ಚಟುವಟಿಕೆಗಳಿಂದಾದಿ ಈ ಹಿಮಗಡ್ಡೆಗಳು ವೇಗವಾಗಿ ಕರಗುತ್ತಿವೆ ಎಂದು ಕಂಡುಹಿಡಿದಿದೆ ಎಂದಿದ್ದಾರೆ ವಾಂಗ್‌ಚುಕ್.

ಈ ಹವಾಮಾನ ಬದಲಾವಣೆಗೆ ಅಮೆರಿಕ ಮತ್ತು ಯುರೋಪ್‌ನ ಜಾಗತಿಕ ತಾಪಮಾನ ಮಾತ್ರ ಕಾರಣವಲ್ಲ, ಆದರೆ ಸ್ಥಳೀಯ ಮಾಲಿನ್ಯ ಮತ್ತು ಹೊರಸೂಸುವಿಕೆ ಕೂಡಾ ಕಾರಣವಾಗಿದೆ. ಲಡಾಖ್‌ನಂತಹ ಪ್ರದೇಶಗಳಲ್ಲಿ, ಇಲ್ಲಿ ಮತ್ತು ದೇಶದಾದ್ಯಂತ ಇರುವ ಸ್ಥಳೀಯರಿಗೆ ಹಿಮಗಡ್ಡೆಗಳು ಹಾಗೇ ಉಳಿಯಲು ಮಾನವ ಚಟುವಟಿಕೆಗಳು ಕಡಿಮೆಯಾಗಬೇಕು.

ಇದನ್ನೂ ಓದಿ: Rahul Gandhi: ಕರ್ಲಿ ಟೇಲ್ಸ್ ಜತೆ ಚಿಟ್​​ಚಾಟ್; ಪ್ರೀತಿಸುವ, ಜಾಣೆ ಸಿಕ್ಕರೆ ಮದುವೆ ಆಗ್ತೀನಿ ಎಂದ ರಾಹುಲ್ ಗಾಂಧಿ

ಇದಲ್ಲದೆ, ಸುಸ್ಥಿರ ಅಭಿವೃದ್ಧಿಯನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದ ಅವರು, ಲಡಾಖ್ ಮತ್ತು ಇತರ ಹಿಮಾಲಯ ಪ್ರದೇಶಗಳನ್ನು “ಕೈಗಾರಿಕಾ ಶೋಷಣೆ” ಯಿಂದ ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದರು. ಇದು ಜನರ ಜೀವನ ಮತ್ತು ಉದ್ಯೋಗವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ ವಾಂಗ್‌ಚುಕ್.

ಈ ಕೈಗಾರಿಕಾ ಶೋಷಣೆಯಿಂದ ಲಡಾಖ್ ಮತ್ತು ಇತರ ಹಿಮಾಲಯ ಪ್ರದೇಶಗಳಿಗೆ ರಕ್ಷಣೆ ನೀಡುವಂತೆ ಪ್ರಧಾನಿ ಮೋದಿಯವರಿಗೆ ಮನವಿ ಮಾಡುತ್ತೇನೆ. ಯಾಕೆಂದರೆ ಇದು ಜನರ ಜೀವನ ಮತ್ತು ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಸರ್ಕಾರದ ಜೊತೆಗೆ, ಜನರು ಸಹ ಹವಾಮಾನ ಬದಲಾವಣೆಯ ಬಗ್ಗೆ ಸಮಾನವಾಗಿ ಕಾಳಜಿ ವಹಿಸಬೇಕು ಮತ್ತು ಅದನ್ನು ತಗ್ಗಿಸುವ ಕ್ರಮಗಳನ್ನು ನೋಡಿಕೊಳ್ಳಬೇಕು ಎಂದು ನಾನು ನಂಬುತ್ತೇನೆ. ಮುಂದಿನ ಪೀಳಿಗೆಗೆ ಅವುಗಳನ್ನು ಸಂರಕ್ಷಿಸುವಾಗ ಗುರಿಗಳನ್ನು ಇಡುವುದು, ಇದರಿಂದ ಪ್ರಕೃತಿಯು ತನ್ನ ಸಂಪನ್ಮೂಲಗಳು ಮತ್ತು ಸೇವೆಗಳನ್ನು ಮಾನವರಿಗೆ ಒದಗಿಸುವುದನ್ನು ಮುಂದುವರಿಸಬಹುದು. ಇದರಿಂದ ತಾಂತ್ರಿಕವಾಗಿ ಪರಿಸರಕ್ಕೆ ಹಾನಿಯಾಗುವುದರಿಂದ ಆಹಾರ ಮತ್ತು ಬಟ್ಟೆ ಕಸಗಳನ್ನು ತಪ್ಪಿಸಬೇಕು ಎಂದು ಮಕ್ಕಳಿಗೆ ಮನವಿ ಮಾಡಿದರು.

ವಾಂಗ್‌ಚುಕ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ 13 ನಿಮಿಷಗಳ ಸುದೀರ್ಘ ವಿಡಿಯೊದಲ್ಲಿ, ಅವರು ‘ತುರ್ತಾಗಿ’ ಲಡಾಖ್‌ನ “ಪರಿಸರ ಸೂಕ್ಷ್ಮ” ಪ್ರದೇಶವನ್ನು ರಕ್ಷಿಸಲು ಸಹಾಯ ಮಾಡಲು ದೇಶದ ಮತ್ತು ಪ್ರಪಂಚದ ಜನರಿಗೆ ಮನವಿ ಮಾಡಿದರು. ಭಾರತೀಯ ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ಪರಿಸರ ವ್ಯವಸ್ಥೆಯನ್ನು ಮಧ್ಯಸ್ಥಿಕೆ ವಹಿಸಲು ಮತ್ತು ರಕ್ಷಿಸಲು ಅವರು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಇದು ಲಡಾಖ್‌ನ (ಭಾರತೀಯ ಹಿಮಾಲಯದಲ್ಲಿ) ಸೋನಮ್ ವಾಂಗ್‌ಚುಕ್‌ನಿಂದ ಭಾರತ ಮತ್ತು ಪ್ರಪಂಚದ ಜನರಿಗೆ ಲಡಾಖ್‌ನ ಪರಿಸರ ಸೂಕ್ಷ್ಮ ಪ್ರದೇಶವನ್ನು ರಕ್ಷಿಸಲು ಸಹಾಯ ಮಾಡಲು ತುರ್ತು ಮನವಿ. ಭಾರತೀಯ ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ಈ ದುರ್ಬಲವಾದ ಪರಿಸರ ವ್ಯವಸ್ಥೆಯನ್ನು ಮಧ್ಯಸ್ಥಿಕೆ ವಹಿಸಲು ಮತ್ತು ರಕ್ಷಿಸಲು ಅವರು ಭಾರತದ ಪ್ರಧಾನಿಗೆ ಮನವಿ ಮಾಡುತ್ತಿದ್ದೇನೆ ಎಂದು ಅವರ ಯುಟ್ಯೂಬ್ ನಲ್ಲಿ ಹೇಳಿದ್ದಾರೆ.

ALL IS NOT WELL in Ladakh! ಈ ವಿಡಿಯೊದಲ್ಲಿ ನಾನು ನರೇಂದ್ರ ಮೋದಿಜೀ ಅವರಲ್ಲಿ ಮಧ್ಯಪ್ರವೇಶಿಸಲು ಮತ್ತು ಪರಿಸರ ದುರ್ಬಲವಾದ ಲಡಾಖ್‌ಗೆ ಸುರಕ್ಷತೆಯನ್ನು ನೀಡುವಂತೆ ಮನವಿ ಮಾಡುತ್ತೇನೆ. ಸರ್ಕಾರ ಮತ್ತು ಪ್ರಪಂಚದ ಗಮನ ಸೆಳೆಯಲು ನಾನು ಜನವರಿ 26 ರಿಂದ 18000 ಅಡಿ -40 ಡಿಗ್ರಿ ಸೆಲ್ಸಿಯಸ್‌ನಲ್ಲಿ ಖಾರ್ದುಂಗ್ಲಾ ಪಾಸ್‌ನಲ್ಲಿ 5 ದಿನಗಳ ಕ್ಲೈಮೇಟ್‌ಫಾಸ್ಟ್‌ (ಉಪವಾಸ) ಮಾಡುತ್ತೇನೆ ಎಂದು ವಾಂಗ್‌ಚುಕ್‌ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಮತ್ತು ಜನರಿಗೆ ಗಣರಾಜ್ಯೋತ್ಸವದಂದು ತಮ್ಮ ಸಂದೇಶವನ್ನು ತಲುಪಬೇಕು. ಅದಕ್ಕಾಗಿ ನಾನು ಖರ್ಡೊಂಗ್ಲಾ ಪಾಸ್‌ನಲ್ಲಿ ಐದು ದಿನಗಳ ಉಪವಾಸ ಕುಳಿತುಕೊಳ್ಳುತ್ತೇನೆ ಎಂದಿದ್ದಾರೆ ವಾಂಗ್‌ಚುಕ್‌.

ನಾವು ಭೂಮಿಗೆ ಇಂತಹ ಅಪಾಯಗಳನ್ನು ಮಾಡುವುದನ್ನು ಮುಂದುವರಿಸಿದರೆ ಈ ಹಿಮಗಡ್ಡೆಗಳು ಇನ್ನು ಮುಂದೆ ಇರುವುದಿಲ್ಲ ಎಂಬ ನನ್ನ ಸಂದೇಶವನ್ನು ನೀಡಲು ನಾನು ಮೈನಸ್ 40 ಡಿಗ್ರಿ ತಾಪಮಾನದಲ್ಲಿ ಖಾರ್ಡೊಂಗ್ಲಾ ಪಾಸ್‌ನಲ್ಲಿ ಈ 5 ದಿನಗಳ ದೀರ್ಘ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

1966 ರಲ್ಲಿ ಜನಿಸಿದ ವಾಂಗ್‌ಚುಕ್‌, ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್, ಲಡಾಖ್ (HIAL) ನ ನಿರ್ದೇಶಕರಾಗಿದ್ದು, 2018 ರಲ್ಲಿ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದರು. 2009 ರಲ್ಲಿ ತೆರೆಕಂಡ ತ್ರೀ ಈಡಿಯಟ್ಸ್ ಚಲನಚಿತ್ರದಲ್ಲಿ ಅಮೀರ್ ಖಾನ್, ವಾಂಗ್‌ಚುಕ್‌ ಅವರ ವ್ಯಕ್ತಿತ್ವವನ್ನು ತೋರಿಸುವ ಫುನ್ಸುಖ್ ವಾಂಗ್ಡು ಎಂಬ ಪಾತ್ರದಲ್ಲಿ ನಿರ್ವಹಿಸಿದ್ದರು.

ಲಡಾಖ್ ಮೂಲದ ಇಂಜಿನಿಯರ್ ತನ್ನ ನವೀನ ಶಾಲೆಯನ್ನು ಸ್ಥಾಪಿಸಲು ಹೆಸರುವಾಸಿಯಾಗಿದ್ದಾರೆ, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಂದೋಲನ ಲಡಾಖ್ (SECMOL) ಎಂಬ ಶಾಲೆಯ ಕ್ಯಾಂಪಸ್ ಸೌರಶಕ್ತಿಯಿಂದ ನಡೆಯುತ್ತದೆ. ಇಲ್ಲಿ ಅಡುಗೆ, ಬೆಳಕು ಅಥವಾ ಬಿಸಿಮಾಡಲು ಯಾವುದೇ ಪಳೆಯುಳಿಕೆ ಇಂಧನಗಳನ್ನು ಬಳಸುವುದಿಲ್ಲ. ಲಡಾಕಿ ಮಕ್ಕಳು ಮತ್ತು ಯುವಕರನ್ನು ಬೆಂಬಲಿಸುವ ಉದ್ದೇಶದಿಂದ ಅವರು 1988 ರಲ್ಲಿ SECMOL ಅನ್ನು ಸ್ಥಾಪಿಸಿದ್ದರು.1994 ರಲ್ಲಿ, ಸರ್ಕಾರಿ ಶಾಲಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ವಾಂಗ್‌ಚುಕ್‌ ಆಪರೇಷನ್ ನ್ಯೂ ಹೋಪ್ ಅನ್ನು ಪ್ರಾರಂಭಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ