Rahul Gandhi: ‘ಕರ್ಲಿ ಟೇಲ್ಸ್’ ಜತೆ ಚಿಟ್​​ಚಾಟ್; ಪ್ರೀತಿಸುವ, ಜಾಣೆ ಸಿಕ್ಕರೆ ಮದುವೆ ಆಗ್ತೀನಿ ಎಂದ ರಾಹುಲ್ ಗಾಂಧಿ

TV9kannada Web Team

TV9kannada Web Team | Edited By: Rashmi Kallakatta

Updated on: Jan 23, 2023 | 1:48 PM

ಕಾಮಿಯಾ ಅವರು ರಾಹುಲ್‌ ಅವರಲ್ಲಿ ನಿಮ್ಮಿಷ್ಟದ ಆಹಾರ ಯಾವುದು ಎಂದು ಕೇಳಿದಾಗ ಹಾಗೇನಿಲ್ಲ. ಏನು ಸಿಕ್ಕಿದರೂ ತಿನ್ನುವೆ. ಹಾಂ... ಬಟಾಣಿ ಕಡಲೆ ಮತ್ತು ಹಲಸಿನ ಹಣ್ಣು ನನಗಿಷ್ಟವಿಲ್ಲ. ಮನೆಯಲ್ಲಿ ನನ್ನ ಆಹಾರದ ಬಗ್ಗೆ ತುಂಬಾ ಪಕ್ಕಾ ಆಗಿರುತ್ತೇನೆ. ಆದರೆ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಹೀಗೆಲ್ಲ ಆಯ್ಕೆಗಳಿಲ್ಲ

Rahul Gandhi: 'ಕರ್ಲಿ ಟೇಲ್ಸ್' ಜತೆ ಚಿಟ್​​ಚಾಟ್; ಪ್ರೀತಿಸುವ, ಜಾಣೆ ಸಿಕ್ಕರೆ ಮದುವೆ ಆಗ್ತೀನಿ ಎಂದ ರಾಹುಲ್ ಗಾಂಧಿ
ಕಾಮಿಯಾ ಜಾನಿ ಜತೆ ರಾಹುಲ್ ಗಾಂಧಿ ಡಿನ್ನರ್
Image Credit source: Curly Tales


ದೆಹಲಿ: ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ (Rahul Gandhi) ಜತೆ ‘ಕರ್ಲಿ ಟೇಲ್ಸ್’ (Curly Tales)ಎಂಬ ಫುಡ್ ಆಂಡ್ ಟ್ರಾವೆಲ್ ಚಾನೆಲ್​​ನ ಕಾಮಿಯಾ ಜಾನಿ (Kamiya Jani) ಚಿಟ್ ಚಾಟ್ ನಡೆಸಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಜತೆ ಸಂಡೇ ಬ್ರಂಚ್ ಮಾಡುವ ಕಾಮಿಯಾ ಈ ಬಾರಿ ರಾಹುಲ್ ಗಾಂಧಿ ಜತೆ ಡಿನ್ನರ್ ಮಾಡಿದ್ದಾರೆ. ರಾಜಸ್ಥಾನದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಬೇಕಾದರೆ ಸುಮಾರು ಎರಡೂವರೆ ಗಂಟೆ ಕಾರಲ್ಲಿ ಪ್ರಯಾಣಿಸಿ, ಅಲ್ಲಿಂದ ಪೊಲೀಸ್ ಬೆಂಗಾವಲಿನೊಂದಿಗೆ ಅವರಿರುವ ಜಾಗಕ್ಕೆ ಬಂದು ತಲುಪಿದೆ ಎಂದು ಕಾಮಿಯಾ ವಿಡಿಯೊದಲ್ಲಿ ಹೇಳಿದ್ದಾರೆ. ರಾಹುಲ್ ಗಾಂಧಿಯವರು ರಾತ್ರಿ ವೇಳೆ ತಂಗುವ ಕಂಟೇನರ್ ಒಳಗಿನ ದೃಶ್ಯವನ್ನೂ ಕಾಮಿಯಾ ಜನರಿಗೆ ತೋರಿಸಿದ್ದಾರೆ. ರಾಜಕೀಯ ಸಂಗತಿಗಳನ್ನು ಬಿಟ್ಟು ರಾಹುಲ್ ಗಾಂಧಿ ಹೇಗಿರುವ ಮನುಷ್ಯ ಎಂದು ಅರಿಯಲು ನಾನು ಇಷ್ಟಪಡುತ್ತೇನೆ. ನಿಮ್ಮ ಬಗ್ಗೆ ಅರಿಯಲು ನಾನು ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತೇನೆ. ಇವು ನಿಮ್ಮ ಬದುಕಿನ ಬಗ್ಗೆ, ಆಹಾರ, ಪ್ರಯಾಣದ ಬಗ್ಗೆ ಇರುವಂತದ್ದು, ಇದೊಂದು ಆಸಕ್ತಿದಾಯಕ ಮಾತುಕತೆಯಷ್ಟೇ..ಎಂದು ಕಾಮಿಯಾ ರಾಹುಲ್ ಗಾಂಧಿ ಜತೆ ಚಿಟ್ ಚಾಟ್ ಆರಂಭಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಹಿಂದಿನ ಉದ್ದೇಶವೇನು? ಒಬ್ಬ ವ್ಯಕ್ತಿಯಾಗಿ ಇದು ನಿಮ್ಮನ್ನು  ಹೇಗೆ ಬದಲಾಯಿಸಿತು ಎಂದು ಕಾಮಿಯಾ ಕೇಳಿದಾಗ ನಾನು  ಭಾರತದ ಬಹುತೇಕ ಭಾಗವನ್ನು ನೋಡಿದ್ದೇನೆ, ಆದರೆ ಜಿಲ್ಲೆಯಿಂದ ಜಿಲ್ಲೆಗಳಲ್ಲಿ ನಡೆದುಕೊಂಡು ಅನೇಕ ಜನರನ್ನು ಭೇಟಿ ಮಾಡಿದ್ದು ಬೇರೆಯೇ ಅನುಭವ.

ತಾಜಾ ಸುದ್ದಿ

“ಭಾರತದಲ್ಲಿ ಹರಡುತ್ತಿರುವ ದ್ವೇಷ, ಕೋಪ ಮತ್ತು ಹಿಂಸಾಚಾರವನ್ನು ಎದುರಿಸುವುದು ಇದರ ಉದ್ದೇಶವಾಗಿತ್ತು. ನಮ್ಮನ್ನು ಮತ್ತು ಇತರರನ್ನು ಅರ್ಥಮಾಡಿಕೊಳ್ಳಲು ‘ತಪಸ್ಸು’ ನಮ್ಮ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಅದು ಈ ಯಾತ್ರೆಯ ಹಿಂದಿರುವ ಇನ್ನೊಂದು ವಿಚಾರ. ನನ್ನೊಂದಿಗೆ ಈ ತಪಸ್ಸನ್ನು ಮಾಡುತ್ತಿರುವ ಬಹಳಷ್ಟು ಮಂದಿ ಇದ್ದಾರೆ, ನಾನು ಒಬ್ಬಂಟಿಯಾಗಿಲ್ಲ. ಇಲ್ಲಿ ಸಾಕಷ್ಟು ತಪಸ್ವಿಗಳು ಇದ್ದಾರೆ, ಬೇರೆ ರಾಜ್ಯಗಳಿಂದ ಜನರು ಸೇರುತ್ತಾರೆ , ಅವರು ನನ್ನ ಜತೆ ನಡೆಯುತ್ತಾರೆ. ನಾನು ತುಂಬಾ ಜನರೊಂದಿಗೆ ಮಾತನಾಡುತ್ತೇನೆ ಮತ್ತು ಭೇಟಿಯಾಗುತ್ತಿದ್ದೇನೆ. ಅವರ ಜೀವನ ವಿಧಾನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವೆ. ಅವರು ಯಾವ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಅರಿಯಲು ಪ್ರಯತ್ನಿಸುತ್ತಿದ್ದೇನೆ.

ಪ್ರತಿನಿತ್ಯ ನಡೆದುಕೊಂಡು ಅನೇಕರನ್ನು ಭೇಟಿಯಾಗಬೇಕಾಗಿರುವುದರಿಂದ ನನ್ನ ತಾಳ್ಮೆ ಮತ್ತು ಸ್ವಯಂ ನಿಯಂತ್ರಣ ಹೆಚ್ಚಿದೆ. ನಾನು ಸಾಕಷ್ಟು ಸುಧಾರಿಸಿದ್ದೇನೆ. ನೀವು ಜನರನ್ನು ಭೇಟಿಯಾದರೆ, ನೀವು ಬಹಳಷ್ಟು ಕಲಿಯುತ್ತೀರಿ ಎಂಬುದು ಹಿಂದೂಸ್ತಾನದ ಸಂಸ್ಕೃತಿ ಎಂದಿದ್ದಾರೆ ರಾಹುಲ್.

ಚಿಕನ್, ಮಟನ್  ಮತ್ತು ಮೀನು ಇಷ್ಟ

ಕಾಮಿಯಾ ಅವರು ರಾಹುಲ್‌ ಅವರಲ್ಲಿ ನಿಮ್ಮಿಷ್ಟದ ಆಹಾರ ಯಾವುದು ಎಂದು ಕೇಳಿದಾಗ ಹಾಗೇನಿಲ್ಲ. ಏನು ಸಿಕ್ಕಿದರೂ ತಿನ್ನುವೆ. ಹಾಂ… ಬಟಾಣಿ ಕಡಲೆ ಮತ್ತು ಹಲಸಿನ ಹಣ್ಣು ನನಗಿಷ್ಟವಿಲ್ಲ. ಮನೆಯಲ್ಲಿ ನನ್ನ ಆಹಾರದ ಬಗ್ಗೆ ತುಂಬಾ ಪಕ್ಕಾ ಆಗಿರುತ್ತೇನೆ. ಆದರೆ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಹೀಗೆಲ್ಲ ಆಯ್ಕೆಗಳಿಲ್ಲ. ಯಾತ್ರೆಯುದ್ದಕ್ಕೂ ವಿವಿಧ ರಾಜ್ಯಗಳ ಆಹಾರಗಳನ್ನು ಸವಿಯುವುದನ್ನು ನೋಡಿದ್ದೇನೆ. ಈ ಬಗ್ಗೆ ಏನಂತೀರಿ ಎಂದು ಕೇಳಿದಾಗ ಭಾರತದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ಆಹಾರ ಪದ್ಧತಿಗಳಿವೆ. ನಾನು ಅಲ್ಲಿನ ಆಹಾರಗಳನ್ನು ತಿಂದಿದ್ದೇನೆ. ಹಾಗೆ ಹೇಳುವುದಾದರೆ ತೆಲಂಗಾಣದಲ್ಲಿ ಖಾರ!, ನಾನು ಅಷ್ಟು ಖಾರ ತಿನ್ನುವುದಿಲ್ಲ.

ನಾನು ಚಿಕನ್, ಮಟನ್, ಮೀನು ಇಷ್ಟಪಡುತ್ತೇನೆ. ತಂದೂರಿ ಆಹಾರ ಇಷ್ಟ.  ಚಿಕನ್ ಟಿಕ್ಕಾ, ಆಮ್ಲೆಟ್  ನನಗಿಷ್ಟ. ದೆಹಲಿಯಲ್ಲಿನ  ಮೋತಿ ಮಹಲ್ , ಸಾಗರ್ ಮತ್ತು ಸರವಣ ಭವನಕ್ಕೆ ಹೋಗಿ ಊಟ ಮಾಡುತ್ತೇನೆ. ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುವುದಿಲ್ಲ. ಆದರೆ ಅನ್ನ ಮತ್ತು ರೋಟಿಯಲ್ಲಿ ರೋಟಿ ಆಯ್ಕೆ ಮಾಡುವೆ. ಟೀ ಅಥವಾ ಕಾಫಿ? ಎಂದು ಕೇಳಿದಾಗ ಬೆಳಿಗ್ಗೆ ಒಂದು ಕಪ್ ಕಾಫಿ ಮತ್ತು ಸಂಜೆ ಒಂದು ಕಪ್ ಚಹಾ ಸೇವಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮನೆಯಲ್ಲಿ ಊಟ ಹೇಗೆ ಎಂದು ಕೇಳಿದಾಗ ಮಧ್ಯಾಹ್ನದ ಊಟ ‘ದೇಸಿ’ ಆಹಾರ ರೀತಿ ಮತ್ತು ರಾತ್ರಿಯ ಊಟ ಕಾಂಟಿನೆಂಟಲ್ ಆಗಿರುತ್ತದೆ. ಆದರೆ ನಾನು ನಿಯಂತ್ರಿತ ಆಹಾರ ತೆಗೆದು ಕೊಳ್ಳುತ್ತೇನೆ, ಅದು ತುಂಬಾ ಬೋರಿಂಗ್. ಓಹೋ ಹಾಗಾಗಿ ಅಲ್ವಾ Abs ಎಂದು ಕಾಮಿಯಾ ನಕ್ಕಿದ್ದಾರೆ. ನಮ್ಮ ಮೂಲಗಳ ಪ್ರಕಾರ ನೀವು ಕೂತಲ್ಲೇ 8-10 ಐಸ್ ಕ್ರೀಮ್‌ ಗಳನ್ನು ತಿನ್ನಬಲ್ಲಿರಿ ಅಂತೆ ಎಂದು ಕಾಮಿಯಾ ಹೇಳಿದಾಗ ಇಲ್ಲಪ್ಪಾ ಒಂದು ಅಥವಾ ಎರಡು ತಿನ್ನಬಲ್ಲೆ ಎಂದಿದ್ದಾರೆ ರಾಹುಲ್.

ಬಾಲ್ಯ ಮತ್ತು ಶಾಲಾ ಶಿಕ್ಷಣದ ಬಗ್ಗೆ ಕೇಳಿದಾಗ, ಅಜ್ಜಿಯ ಹತ್ಯೆ ಶಾಕಿಂಗ್ ಆಗಿತ್ತು. ಆ ಹೊತ್ತಲ್ಲಿ ಕೆಲ ಕಾಲ ಮನೆಯಲ್ಲಿಯೇ ಓದಬೇಕಾಯಿತು. ಶಾಲೆಯಲ್ಲಿ ಕೆಲವು ಶಿಕ್ಷಕರು ತುಂಬಾ ಒಳ್ಳೆಯವರಾಗಿದ್ದರು, ಇನ್ನು ಕೆಲವರು ಕಿರಿಕಿರಿ ಮಾಡುತ್ತಿದ್ದರು. ನಮ್ಮ ಕುಟುಂಬ ಬಡವರ ಪರ ಆಗಿದ್ದಕ್ಕೆ ಕೆಲವರು ಹೆಚ್ಚಿನ ಪ್ರೀತಿ ತೋರಿಸುತ್ತಿದ್ದರೆ ಇನ್ನು ಕೆಲವರಿಗೆ ಅದೇ ಕಿರಿಕಿರಿ. ಹಾಗಾಗಿ ನನ್ನಶಾಲಾ ದಿನಗಳಲ್ಲಿ ಎರಡೂ ರೀತಿಯ ಅನುಭವ ನನಗೆ ಸಿಕ್ಕಿತ್ತು.

ಇದನ್ನೂ ಓದಿ: Parakram Diwas: ಅಂಡಮಾನ್, ನಿಕೋಬಾರ್​ನ 21 ದ್ವೀಪಗಳಿಗೆ ಪರಮವೀರ ಚಕ್ರ ಪುರಸ್ಕೃತರ ಹೆಸರಿಟ್ಟ ಪ್ರಧಾನಿ ಮೋದಿ

ರಾಹುಲ್ ಗಾಂಧಿ  ತರಬೇತಿ ಪಡೆದ ಸ್ಕೂಬಾ ಡೈವರ್

ನೀವು ಸ್ಕೂಬಾ ಡೈವಿಂಗ್  ಕಲಿತಿದ್ದೀರಾ ಎಂದು ಕೇಳಿದಾಗ “ನಾನು ಫ್ಲೋರಿಡಾದಲ್ಲಿದ್ದಾಗ, ನಾನು ಅದನ್ನು ಹವ್ಯಾಸವಾಗಿ ಕಲಿಸುತ್ತಿದ್ದೆ.” ಅವನು ಡೈವಿಂಗ್ ಮಾಡುತ್ತೇನೆ,ಫ್ರೀ ಡೈವಿಂಗ್ ಕೂಡಾ ಮಾಡುತ್ತೇನೆ. ಫ್ರೀ ಡೈವಿಂಗ್ ಎಂದರೆ ಸ್ಕೂಬಾ ಗೇರ್ ಇಲ್ಲದೆ ಡೈವಿಂಗ್ ಮತ್ತು ಉಸಿರನ್ನು ಹಿಡಿದಿಟ್ಟುಕೊಳ್ಳುವುದು ಎಂದಿದ್ದಾರೆ ರಾಹುಲ್.

ನೀರಿನ ಅಡಿಯಲ್ಲಿ ತನ್ನ ಹೊತ್ತು ಉಸಿರು  ಹಿಡಿದುಕೊಳ್ಳುತ್ತೀರಿ ಎಂದು ಕೇಳಿದಾಗ, ಟ್ರೈನ್ಡ್  ಅಥವಾ ಇಲ್ಲವೇ ಎಂಬುದನ್ನು ಇದು ಅವಲಂಬಿಸಿರುತ್ತದೆ.  ತರಬೇತಿ ಪಡೆದಿದ್ದರೆ, ಉಸಿರನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳಬಹುದು.

ನಿಮ್ಮ ಮೊದಲ ಕೆಲಸ ಬಗ್ಗೆ ಹೇಳಿ ಎಂದಾಗ ನಾನು ಲಂಡನ್‌ನಲ್ಲಿ ಮಾನಿಟರ್ ಕಂಪನಿಯಲ್ಲಿ ಮೊದಲ ಕೆಲಸ ಮಾಡಿದ್ದೆ, ನನ್ನ ಮೊದಲ ಸಂಬಳ 2500-3000 ಪೌಂಡ್‌ಗಳು ಆಗಿತ್ತು ಎಂದಿದ್ದಾರೆ.

ಇದನ್ನೂ ಓದಿ: Vande Bharat Express: ಮುಂದಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪುರಿ ಮತ್ತು ಹೌರಾ ನಡುವೆ ಸಂಚರಿಸುವ ಸಾಧ್ಯತೆ

ಜಪಾನೀಸ್ ಮಾರ್ಷಲ್ ಆರ್ಟ್ ಐಕಿಡೊದಲ್ಲಿ ಬ್ಲಾಕ್ ಬೆಲ್ಟ್

ರಾಹುಲ್ ಗಾಂಧಿ  ಸಮರ ಕಲೆ-ರೂಪವಾದ ಐಕಿಡೊದಲ್ಲಿ ಬ್ಲಾಕ್ ಬೆಲ್ಟ್ ಹೊಂದಿದ್ದಾರೆ. ಇದು ಆಧುನಿಕ ಜಪಾನೀ ಸಮರ ಕಲೆಯಾಗಿದ್ದು, ಇದು 140 ದೇಶಗಳಲ್ಲಿ ಕಲಿಸಲಾಗುತ್ತದೆ. ಕಾಲೇಜಿನಲ್ಲಿ ಬಾಕ್ಸಿಂಗ್ ಮಾಡುತ್ತಿದೆ. ಮಾರ್ಷಲ್ ಆರ್ಟ್ಸ್ ವಿಷಯಕ್ಕೆ ಬಂದರೆ, ಅನೇಕ ಜನರಿಗೆ ಮಾರ್ಷಲ್ ಆರ್ಟ್ಸ್ ಅರ್ಥವಾಗುವುದಿಲ್ಲ. ವಾಸ್ತವವಾಗಿ ಇದು ಹಿಂಸೆಗೆ ಇರುವುದಲ್ಲ. ಅದರ ವಿರುದ್ಧವಾಗಿವೆ. ಜನರನ್ನು ಆಕ್ರಮಣ ಮಾಡಲು ಮತ್ತು ಹಾನಿ ಮಾಡಲು ಸಮರ ಕಲೆಗಳನ್ನು ಬಳಸಲು ಜನರಿಗೆ ಕಲಿಸಲಾಗುತ್ತದೆ ಆದರೆ ಸರಿಯಾಗಿ ಕಲಿಸಿದರೆ, ಅದು ಚಂದದ ಕಲೆ ಎಂದು ರಾಹುಲ್ ಹೇಳಿದ್ದಾರೆ.

ರಾಪಿಡ್-ಫೈರ್ ರೌಂಡ್​​ನಲ್ಲಿ ಕಾಮಿಯಾ, ನೀವು ಭಾರತದ ಪ್ರಧಾನಿಯಾದರೆ ಮಾಡುವ ಮೂರು ಕಾರ್ಯಗಳೇನು ಎಂದು ಕೇಳಿದಾಗ ನಾನು ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸುತ್ತೇನೆ. ಉತ್ಪಾದನೆಯಲ್ಲಿ ಜನರಿಗೆ ಸಹಾಯ ಮಾಡುವುದಾಗಿ ಮತ್ತು ಕಷ್ಟದಲ್ಲಿರುವ ಜನರನ್ನು ರಕ್ಷಿಸುವುದಾಗಿ ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಮದುವೆ ಆಗ್ತೀನಿ, ಸೂಕ್ತ ಹುಡುಗಿ ಸಿಕ್ಕರೆ…

ಮದುವೆ ಬಗ್ಗೆ ಕೇಳಿದಾಗ, ಮದುವೆಯಾಗುತ್ತೇನೆ ಸೂಕ್ತ ಹುಡುಗಿ ಸಿಕ್ಕರೆ ಖಂಡಿತಾ ಮದುವೆಯಾಗುತ್ತೇನೆ ಎಂದಿದ್ದಾರೆ. ಯಾವ ರೀತಿಯ ಹುಡುಗಿಯನ್ನು ಮದುವೆಯಾಗುತ್ತೀರಿ ಎಂದು ಕೇಳಿದಾಗ ಆಕೆ ಪ್ರೀತಿಸುವ,ಜಾಣೆ ಹುಡುಗಿ ಆಗಿರಬೇಕು. ನನ್ನ ಅಪ್ಪ -ಅಮ್ಮನ ನಡುವಿನ ಪ್ರೀತಿಯನ್ನು ನೋಡಿದ್ದೇನೆ. ಹಾಗಾಗಿ ಈ ಬಗ್ಗೆ ನನ್ನ ನಿರೀಕ್ಷೆಗಳು ಸ್ವಲ್ಪ ಜಾಸ್ತಿಯೇ ಇದೆ ಎಂದು ರಾಹುಲ್ ಮುಗುಳ್ನಕ್ಕಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada