Nadda in Vijayapura: ದೇಶಕ್ಕೆ ಸೇವೆ ಸಲ್ಲಿಸಿದವರನ್ನು ನಾವು ಜೊತೆಗಿಟ್ಟುಕೊಂಡರೆ ರಾಹುಲ್ ಗಾಂಧಿ ದೇಶ ಒಡೆಯುವವರ ಜೊತೆ ಯಾತ್ರೆ ಮಾಡುತ್ತಾರೆ: ಜೆಪಿ ನಡ್ಡಾ

Arun Belly

Arun Belly |

Updated on: Jan 21, 2023 | 6:16 PM

ಬಿಜೆಪಿ ದೇಶದ ಅಭಿವೃದ್ಧಿಗೆ ಶ್ರಮಿಸಿದವರನ್ನು ನೆನೆಯುತ್ತಾ ಯಾತ್ರೆ ನಡೆಸಿದರೆ, ರಾಹುಲ್ ಗಾಂಧಿ ದೇಶ ಒಡೆದವರನ್ನು ಜೊತೆಗಿಟ್ಟುಕೊಂಡು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ನಡ್ಡಾ ಹೇಳಿದರು.

ವಿಜಯಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಶನಿವಾರ ಅವರು ವಿಜಯಪುರದಲ್ಲಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ್ದು ರಾಜ್ಯದಲ್ಲಿ ಪಕ್ಷಆರಂಭಿಸಿರುವ ಜನಸಂಕಲ್ಪ ಯಾತ್ರೆಯ ಮುಂದುವರಿದ ಭಾಗದಂತಿದೆ. ತಮ್ಮ ಮಾತಿನಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕರ್ನಾಟಕಕ್ಕೆ ಆಗಮಿಸಿದಾಗೆಲ್ಲ, ಇಲ್ಲಿನ ಇತಿಹಾಸ, ಸಂಸ್ಕೃತಿ-ಪರಂಪರೆ, ಜಲ, ನೆಲ ಮತ್ತು ವಿದ್ವಾಂಸರನ್ನು ಅಪಾರವಾಗಿ ಗೌರವಿಸಿ ಮಾತಾಡುತ್ತಾರೆ ಎಂದು ನಡ್ಡಾ ಹೇಳಿದರು. ಬಿಜೆಪಿ ದೇಶದ ಕಟ್ಟಿದವರನ್ನು, ಅದರ ಅಭಿವೃದ್ಧಿಗೆ ಶ್ರಮಿಸಿದವರನ್ನು ನೆನೆಯುತ್ತಾ ಯಾತ್ರೆ ನಡೆಸಿದರೆ, ರಾಹುಲ್ ಗಾಂಧಿ (Rahul Gandhi) ದೇಶ ಒಡೆದವರನ್ನು ಜೊತೆಗಿಟ್ಟುಕೊಂಡು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ನಡ್ಡಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Follow us on

Click on your DTH Provider to Add TV9 Kannada