ತಿರುವನಂತಪುರಂ: ತಿರುವನಂತಪುರದಿಂದ (Thiruvananthapuram) ಮಸ್ಕತ್‌ಗೆ ( Muscat) ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ತಿರುವನಂತಪುರಕ್ಕೆ ಮತ್ತೆ ಮರಳಿದೆ. 105 ಪ್ರಯಾಣಿಕರೊಂದಿಗೆ ಮಸ್ಕತ್‌ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ತಾಂತ್ರಿಕ ದೋಷದಿಂದಾಗಿ ತಿರುವನಂತಪುರಕ್ಕೆ ಮರಳಿದೆ. ತಿರುವನಂತಪುರಂನಿಂದ ಓಮನ್‌ನ ಮಸ್ಕತ್‌ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಅದರ ಆನ್-ಬೋರ್ಡ್ ಕಂಪ್ಯೂಟರ್ ಸಿಸ್ಟಮ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಟೇಕ್-ಆಫ್ ಆದ ಸ್ವಲ್ಪ ಸಮಯದ ನಂತರ ಹಿಂತಿರುಗಿತು.
ಇದನ್ನು ಓದಿ: Air India Discount Offers: ಕೇವಲ 1,705 ರೂ.ಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕೇ? ಇಂದೇ ಟಿಕೆಟ್ ಕಾಯ್ದಿರಿಸಿ
ಐಎಕ್ಸ್ 549 ವಿಮಾನವು ಕೇರಳದ ರಾಜಧಾನಿಯಿಂದ ಬೆಳಿಗ್ಗೆ 8.30 ಕ್ಕೆ ಟೇಕ್ ಆಫ್ ಆಗಿದ್ದು, ಪೈಲಟ್‌ಗಳಲ್ಲಿ ಒಬ್ಬರು ತಾಂತ್ರಿಕ ದೋಷವನ್ನು ಗಮನಿಸಿದ ನಂತರ 9.17 ಕ್ಕೆ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದರು. ಎಲ್ಲಾ 105 ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದೆ ಮತ್ತು ಮಧ್ಯಾಹ್ನ 1 ಗಂಟೆಗೆ ಇಲ್ಲಿಂದ ಟೇಕ್ ಆಫ್ ಆಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ